Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ಕನ್ನಡ ರಾಜ್ಯೋತ್ಸವ: ನಮ್ಮ ಕರ್ನಾಟಕದಲ್ಲಿ ಮಾತ್ರ ಇರುವ 10 ವಿಶೇಷಗಳಿವು, ಇವುಗಳು ಕರ್ನಾಟಕದ ಹೆಮ್ಮೆ
ನಮ್ಮ ಕರ್ನಾಟಕದ ವಿಶೇಷತೆಗಳನ್ನು ಕೇಳುತ್ತಾ ಹೋದಾಗ ಈ ನಾಡಿನಲ್ಲಿ ಹುಟ್ಟಿದ ನಾವೇ ಪುಣ್ಯವಂತರು ಎಂದನಿಸದೆ ಇರಲ್ಲ, ಬೇರೆ ಯಾವ ರಾಜ್ಯಗಳಿಗೂ ಇರದ ಅಷ್ಟೊಂದು ವಿಶೇಷತೆ ನಮ್ಮ ಕರ್ನಾಟಕದಲ್ಲಿದೆ, ಆ ವಿಶೇಷತೆಗಳೇನು ಎಂದು ನೋಡೋಣ ಬನ್ನಿ:
ಭಾರತದ ಧ್ವಜ ತಯಾರಾಗುವುದು ನಮ್ಮ ಕರ್ನಾಟಕದಲ್ಲಿ
ಹುಬ್ಬಳ್ಳಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿ ಮಾತ್ರ ರಾಷ್ಟ್ರ ಧ್ವಜವನ್ನು ತಯಾರಿಸುತ್ತದೆ. ನವೆಂಬರ್ 1 , 1957ರಲ್ಲಿ ಈ ಘಟಕವನ್ನು ಸ್ಥಾಪಿಸಲಾಯಿತು.

ಅತ್ಯಂತ ಎತ್ತರ ಒಂದೇ ಕಲ್ಲಿನಿಂದ ಕೆತ್ತಲಾದ ಮೂರ್ತಿ ಇರುವುದು ಇಲ್ಲಿಯೇ
18 ಅಡಿಯ ಗೊಮೆಟೇಶ್ವರ ಮೂರ್ತಿಯನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ. ಇದು ಭಾರತದಲ್ಲಿಯೇ ಇರುವ ಅತಿ ಎತ್ತರದ ಏಕಶಿಲ್ಪದಿಂದ ಕೆತ್ತಲಾದ ಮೂರ್ತಿಯಾಗಿದ್ದು ಶ್ರವಣ ಬೆಳಗೊಳದಲ್ಲಿದೆ.
3000 ಮಿಲಿಯನ್ ವರ್ಷಕ್ಕಿಂತಲೂ ಹಿಂದಿನ ಕಲ್ಲು ಬಂಡೆ ನಮ್ಮ ಬೆಂಗಳೂರಿನಲ್ಲಿದೆ
ಬೆಂಗಳೂರಿನ ಲಾಲ್‌ಬಾಗ್ ಬೊಟೊನಿಕಲ್ ಗಾರ್ಡನ್‌ನಲ್ಲಿ 3000 ಮಿಲಿಯನ್ ವರ್ಷಕ್ಕಿಂತಲೂ ಅಧಿಕವಾದ ಕಲ್ಲುಬಂಡೆಯಿದ್ದು ಇದನ್ನು ಪರಿಸರ ಸಂರಕ್ಷಣಾ ವಲಯ ಎಂದು ಗುರುತಿಸಲಾಗಿದೆ.
ಏಷ್ಯಾದಲ್ಲಿಯೇ ಅತೀ ಹೆಚ್ಚು ರೇಷ್ಮೆ ಉತ್ಪಾದನೆಯಾಗುವುದು ಕರ್ನಾಟಕದಲ್ಲಿ
ವರ್ಷದಲ್ಲಿ ಸರಿಸುಮಾರು 8, 200 ಮೆಟ್ರಿಕ್ ಟನ್ ರೇಷ್ಮೆ ಉತ್ಪತ್ತಿಯಾಗುತ್ತದೆ. ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ನಂಬರ್ 1ನಲ್ಲಿದೆ.
ಭಾರತದ ಅತ್ಯಂತ ಪುರಾತನ ಲೈಬ್ರರಿ ಕರ್ನಾಟಕದಲ್ಲಿದೆ
ಮೈಸೂರಿನಲ್ಲಿರುವ ಓರಿಯಂಟಲ್ ಲೈಬ್ರರಿ ಅತ್ಯಂತ ಹಳೆಯ ಲೈಬ್ರರಿಯಾಗಿದ್ದು ಇದನ್ನು 1891ರಲ್ಲಿ ನಿರ್ಮಿಸಲಾಯಿತು.
ಚಾಣಕ್ಯನ ಅರ್ಥಶಾಸ್ತ್ರ ಕೃತಿ ಕರ್ನಾಟಕದಲ್ಲಿದೆ
ಕೌಟಿಲ್ಯಾ ಅಥವಾ ಚಾಣಕ್ಯ ಸಂಸ್ಕೃತದಲ್ಲಿ ಬರೆದ ಅರ್ಥಶಾಸ್ತ್ರ ಇಂದಿಗ ಪ್ರಸ್ತುತ. ಅದರಲ್ಲಿ ದೇಶ, ವ್ಯಕ್ತಿ, ಸೈನ್ಯ, ರಾಜನೀತಿ ಹೀಗೆ ಬದುಕಿನ ಎಲ್ಲಾ ಅಂಶಗಳ ಉಲ್ಲೇಖವಿದ್ದು ಈ ಕೃತಿಯನ್ನು ಮೈಸೂರಿನ ಓರಿಯಂಟಲ್ ರಿಸರ್ಚ್ ಇನ್ಸಿಟ್ಯೂಟ್‌ನಲ್ಲಿ ಸಂರಕ್ಷಣೆ ಮಾಡಲಾಗಿದೆ.
ಕರ್ನಾಟಕ ಸಂಗೀತ
ಸಂಗೀತ ಹಲವು ಪ್ರಕಾರಗಳಲ್ಲಿ ಒಂದು ಕರ್ನಾಟಕ ಸಂಗೀತ. ಈ ಕರ್ನಾಟಕ ಸಂಗೀತ ಹೆಸರೇ ಸೂಚಿಸುವಂತೆ ಉಗಮವಾಗಿದ್ದು ಕರ್ನಾಟಕದಲ್ಲಿಯೇ.
ವಿಜಯ ನಗರ ಸಾಮ್ರಾಜ್ಯ
ಇತಿಹಾಸದ ಸ್ವರ್ಣ ಯುಗವೆಂದು ಕರೆಯಲ್ಪಡುವ ಹಕ್ಕ-ಬುಕ್ಕರು ಸ್ಥಾಪಸಿದ ವಿಜಯನಗರ ಸಾಮ್ರಾಜ್ಯ ಕರ್ನಾಟಕ ಭವ್ಯ ಇತಿಹಾಸವಾಗಿದೆ.
ಬೆಂಗಳೂರು
ದೇಶದಲ್ಲಿಯೇ ಐಟಿ ನಗರವಾಗಿ ಬೆಳೆದಿರುವುದು ನಮ್ಮ ಬೆಂಗಳೂರು. ಆದ್ದರಿಂದ ಬೆಂಗಳೂರನ್ನು ದ ಟೆಕ್ ಸಿಟಿ, ದ ಪಾರ್ಟಿ ಕ್ಯಾಪಿಟಲ್ ಆಫ್ ಇಂಡಿಯಾ, ದಿ ಸಿಟಿ ಆಫ್ ಗಾರ್ಡನ್ ಎಂದೆಲ್ಲಾ ಕರೆಯಲ್ಪಡುವ ಬೆಂಗಳೂರು ನಮ್ಮ ಕರ್ನಾಟಕದ ರಾಜಧಾನಿ.
ಸಂಸ್ಕೃತ ಮಾತನಾಡುವ ಗ್ರಾಮ ಕರ್ನಾಟಕದಲ್ಲಿದೆ
ಇತಿಹಾಸದಲ್ಲಿ ಹಲವಾರು ಕೃತಿಗಳು ಸಂಸ್ಕೃತದಲ್ಲಿ, ಈ ಹಿಂದೆ ಸಂಸ್ಕೃತವನ್ನು ಸಂವಹನವಾಗಿ ಬಳಸಲಾಗಿತ್ತು, ಆದರೆ ಈಗ ಆ ಬಳಕೆ ಕಡಿಮೆಯಾಗಿದೆ. ಕರ್ನಾಟಕದಲ್ಲಿರುವ ಮಟ್ಟೂರು ಗ್ರಾಮದಲ್ಲಿ ಈಗಲೂ ಸಂಸ್ಕೃತವನ್ನೇ ಸಂವಹನ ಮಾಡಲಾಗುವುದು.
ಕರ್ನಾಟಕದ ಮರ: ಚಂದನ
ಕರ್ನಾಟಕದ ಲಾಂಛನ : ಗಂಡಬೇರುಂಡ
ರಾಜ್ಯ ಪಕ್ಷಿ: ನೀಲಕಂಠ
ರಾಜ್ಯ ಹೂ: ತಾವರೆ
ರಾಜ್ಯ ಪ್ರಾಣಿ: ಆನೆ



Click it and Unblock the Notifications
