ನವರಾತ್ರಿ 2021: ದುರ್ಗೆಯ ಕೃಪಾಕಟಾಕ್ಷಕ್ಕಾಗಿ ಆಕೆಯನ್ನು ಈ ರೀತಿ ಮನೆಯಲ್ಲಿ ಪೂಜಿಸಿ

ನವರಾತ್ರಿಯು ಹಿಂದೂಗಳು ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಆಚರಣೆ ಮಾಡುವ ಅತ್ಯಂತ ಮಂಗಳಕರವಾದ ಹಬ್ಬವಾಗಿದೆ. ದೇವಿಯ ಒಂಬತ್ತು ರೂಪಗಳನ್ನು ಒಂಬತ್ತು ದಿನಗಳ ಕಾಲ ಆರಾಧಿಸಿ, ಆಕೆಯ ಕೃಪೆಗೆ ಪಾತ್ರರಾಗುತ್ತಾರೆ. ಈ ವರ್ಷ, ನವರಾತ್ರಿ ಪೂಜೆಯನ್ನು ಅಕ್ಟೋಬರ್ 7, 2021ರಂದು ಪ್ರಾರಂಭವಾಗಿ, ಅಕ್ಟೋಬರ್ 15ರಂದು ವಿಜಯದಶಮಿಯ ಮೂಲಕ ಮುಕ್ತಾಯಗೊಳ್ಳುವುದು. ಈ ಒಂಬತ್ತು ದಿನಗಳ ಕಾಲ ದುರ್ಗಾಪೂಜೆಯನ್ನು ಮನೆಯಲ್ಲಿ ಹೇಗೆ ಮಾಡುವುದು ಎಂಬುದನ್ನು ವಿವರಿಸಿದ್ದೇವೆ.

ನವರಾತ್ರಿಯ ಸಮಯದಲ್ಲಿ ಪೂಜಿಸುವ ದುರ್ಗೆಯ ಒಂಬತ್ತು ಅವತಾರಗಳು:

ನವರಾತ್ರಿಯ ಸಮಯದಲ್ಲಿ ಪೂಜಿಸುವ ದುರ್ಗೆಯ ಒಂಬತ್ತು ಅವತಾರಗಳು:

ಪ್ರಥಮ ದಿನ ಅಕ್ಟೋಬರ್‌ 7, ಗುರುವಾರ- ಮಾತೆ ಶೈಲಪುತ್ರಿ

2ನೇ ದಿನ ಅಕ್ಟೋಬರ್‌ 8, ಶುಕ್ರವಾರ - ಬ್ರಹ್ಮಚಾರಿಣಿ ದೇವಿ

3ನೇ ದಿನ ಅಕ್ಟೋಬರ್‌ 9, ಶನಿವಾರ - ಮಾತೆ ಚಂದ್ರಘಂಟೆ

4ನೇ ದಿನ ಅಕ್ಟೋಬರ್ 10, ಭಾನುವಾರ -ಸ್ಕಂದ ಮಾತೆ

5ನೇ ದಿನ, ಅಕ್ಟೋಬರ್‌ 11, ಸೋಮವಾರ -ಕಾತ್ಯಾಯಿನಿ ದೇವಿ

6ನೇ ದಿನ, ಅಕ್ಟೋಬರ್‌ 12, ಮಂಗಳವಾರ -ಕಾಳರಾತ್ರಿ ದೇವಿ

7ನೇ ದಿನ, ಅಷ್ಟಮಿ ಅಕ್ಟೋಬರ್ 13, ಬುಧವಾರ -ಮಹಾಗೌರಿ

8ನೇ ದಿನ, ನವಮಿ ಅಕ್ಟೋಬರ್‌ 14, ಗುರುವಾರ- ಮಹಾ ಸಿದ್ಧಿಧಾತ್ರಿ ದೇವಿ

9ನೇ ದಿನ, ದಶಮಿ ಅಕ್ಟೋಬರ್‌ 15, ಶುಕ್ರವಾರ- ದುರ್ಗಾ ವಿಸರ್ಜನೆ

ಮನೆಯಲ್ಲಿ ದುರ್ಗಾ ಪೂಜೆ ಮಾಡಲು ಪೂಜಾ ಸಿದ್ಧತೆಗಳು:

ಮನೆಯಲ್ಲಿ ದುರ್ಗಾ ಪೂಜೆ ಮಾಡಲು ಪೂಜಾ ಸಿದ್ಧತೆಗಳು:

ದುರ್ಗೆ ಕರುಣೆ, ಬುದ್ಧಿವಂತಿಕೆ, ವೈಭವ ಮತ್ತು ಶಕ್ತಿಯ ಸಾಕಾರವಾಗಿದ್ದು, ಅವಳು ಭಕ್ತರಿಗೆ ಸಮೃದ್ಧಿ ಮತ್ತು ಧೈರ್ಯದಿಂದ ಆಶೀರ್ವಾದ ಮಾಡುತ್ತಾಳೆ. ಪೂಜೆಯ ಮೊದಲ ದಿನ, ನವರಾತ್ರಿ ಪೂಜೆಯನ್ನು ಮಾಡುವ ಮನೆಯವರು ಕಲಶ ಸ್ಥಾಪನೆ ಅಥವಾ ಘಟಸ್ಥಾಪನ ಪ್ರತಿಷ್ಠಾಪಿಸಬೇಕು.

ಕಲಶ ಸ್ಥಾಪನೆ ಮಾಡುವ ವಿಧಾನ:

ಕಲಶ ಸ್ಥಾಪನೆ ಮಾಡುವ ವಿಧಾನ:

ಮಣ್ಣಿನ ಮಡಕೆಯನ್ನು ತೆಗೆದುಕೊಂಡು ಅದರ ಮೇಲೆ ಮಣ್ಣನ್ನು ಹಾಕಿ, ತದನಂತರ ಧಾನ್ಯ ಬೀಜಗಳನ್ನು ಹರಡಿ, ಅದರ ಮೇಲೆ ಮಣ್ಣಿನ ಎರಡನೇ ಪದರವನ್ನು ಸೇರಿಸಿ, ಅದನ್ನು ಹೊಂದಿಸಲು ಸ್ವಲ್ಪ ನೀರನ್ನು ಸಿಂಪಡಿಸಿ. ಕಲಶದ ಚೊಂಬಿನ ಕುತ್ತಿಗೆಗೆ ಪವಿತ್ರ ದಾರವನ್ನು ಕಟ್ಟಿ, ಅದಕ್ಕೆ ಪವಿತ್ರ ನೀರನ್ನು ತುಂಬಿಸಿ. ವೀಳ್ಯದೆಲೆ, ಸುಗಂಧ ದ್ರವ್ಯ, ಗರಿಕೆ ಹುಲ್ಲು, ಅಕ್ಷತೆ ಮತ್ತು ನಾಣ್ಯಗಳನ್ನು ಆ ನೀರಿಗೆ ಹಾಕಿ. ಕಲಶದ ಅಂಚಿನಲ್ಲಿ ಅಶೋಕ ಅಥವಾ ಮಾವಿನ 5 ಎಲೆಗಳನ್ನು ಹಾಕಿ ಮುಚ್ಚಳದಿಂದ ಮುಚ್ಚಿ. ಒಂದು ತೆಂಗಿನಕಾಯಿಗೆ ಕೆಂಪು ಬಟ್ಟೆಯನ್ನು ಸುತ್ತಿ, ಅದನ್ನು ದಾರದಿಂದ ಕಟ್ಟಿ, ಕಲಶದ ಮೇಲೆ ಇರಿಸಿ. ದುರ್ಗಾದೇವಿಯನ್ನು ಆವಾಹಿಸಲು ಕಲಶ ಇದೀಗ ಸಿದ್ಧವಾಗಿದ್ದು, ದುರ್ಗಾ ದೇವಿಯನ್ನು ಆಹ್ವಾನಿಸಿ, ನಿಮ್ಮ ಪ್ರಾರ್ಥನೆಯನ್ನು ಸ್ವೀಕರಿಸಿ, ನವರಾತ್ರಿಯ ಒಂಬತ್ತು ದಿನಗಳು ಕಲಶದಲ್ಲಿ ವಾಸಿಸುವಂತೆ ವಿನಂತಿಸಿ.

ದುರ್ಗಾದೇವಿಯನ್ನು ಈ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿ:

ದುರ್ಗಾದೇವಿಯನ್ನು ಈ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿ:

ಪ್ರತಿ ದೇವರಿಗೂ ಪ್ರಿಯವಾದ ಒಂದೊಂದು ದಿಕ್ಕುಗಳಿರುವಂತೆ ದುರ್ಗಾ ದೇವಿಗೂ ಕೂಡ ಪ್ರಿಯವಾದ ದಿಕ್ಕಿದೆ. ದುರ್ಗಾ ದೇವಿಯ ವಿಗ್ರಹವನ್ನು ಪಶ್ಚಿಮ ದಿಕ್ಕಿನತ್ತ ಅಥವಾ ಉತ್ತರ ದಿಕ್ಕಿನತ್ತ ಮುಖ ಮಾಡಿ ಇಡಬೇಕು. ಆಗ ಭಕ್ತರು ದುರ್ಗಾ ದೇವಿಯನ್ನು ಪೂಜಿಸುವಾಗ ಅವರ ಮುಖವು ಪೂರ್ವ ದಿಕ್ಕಿನತ್ತ ಮುಖ ಮಾಡಿ ಕುಳಿತು ಪೂಜೆಯನ್ನು ಮಾಡುತ್ತಾರೆ ಅಥವಾ ದಕ್ಕಿಣ ದಿಕ್ಕಿನತ್ತ ಮುಖ ಮಾಡಿ ಕುಳಿತು ಪೂಜೆಯನ್ನು ಮಾಡುತ್ತಾರೆ. ಇದು ಭಕ್ತನನ್ನು ನೇರವಾಗಿ ದೇವರೊಂದಿಗೆ ಸಂಪರ್ಕಿಸುವಂತೆ ಮಾಡುತ್ತದೆ.

ದುರ್ಗೆಯ ದೈನಂದಿನ ಪೂಜೆ ವಿಧಾನ:

ದುರ್ಗೆಯ ದೈನಂದಿನ ಪೂಜೆ ವಿಧಾನ:

ಮೊದಲು ದುರ್ಗೆಗೆ ದೀಪ ಮತ್ತು ಧೂಪದ ಕಡ್ಡಿಗಳನ್ನು ಬೆಳಗಿಸಿ. ನಂತರ ಕೆಲವು ಹೂವುಗಳನ್ನು ಅರ್ಪಿಸಿ ಮತ್ತು ಚಿತ್ರ ಅಥವಾ ಮೂರ್ತಿಯನ್ನು , ಚಂದನ ಮತ್ತು ಅರಿಶಿನದ ಮಿಶ್ರಣದಿಂದ ಅಲಂಕರಿಸಿ. ಪ್ರತಿದಿನ ಪೂಜೆಯ ಸಮಯದಲ್ಲಿ, ನೀವು ಬಿತ್ತಿದ ಧಾನ್ಯ ಬೀಜಗಳ ಮೇಲೆ ಸ್ವಲ್ಪ ನೀರನ್ನು ಸಿಂಪಡಿಸಿ. ಜೊತೆಗೆ ಪೂಜೆಗೆ ವಿಶೇಷವಾಗಿ ತಯಾರಿಸಿದ ಕೆಲವು ಭಕ್ಷ್ಯಗಳನ್ನು ಅರ್ಪಿಸಿ. ಮಾತೆ ದುರ್ಗೆಗೆ ಆರತಿ ಮಾಡಿ. ಆಹ್ವಾನಿತರಿಗೆ ಮತ್ತು ಕುಟುಂಬದ ಸದಸ್ಯರಿಗೆ ಪ್ರಸಾದವನ್ನು ವಿತರಿಸಿ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಪ್ರತಿದಿನ ಈ ಪೂಜೆಯನ್ನು ಮಾಡಿ.

ದುರ್ಗೆಯ ಎಂಟನೇ ದಿನದ ಪೂಜೆ:

ದುರ್ಗೆಯ ಎಂಟನೇ ದಿನದ ಪೂಜೆ:

ಮೇಲೆ ಹೇಳಿದ ರೀತಿಯಲ್ಲಿಯೇ ಒಂಬತ್ತು ದಿನಗಳು ದೈನಂದಿನ ಪೂಜೆಯನ್ನು ಮುಂದುವರಿಸಿ. ನವರಾತ್ರಿ ಪೂಜೆಯ ಎಂಟನೆಯ ದಿನ, ಒಂಬತ್ತು ಸಣ್ಣ ವಯಸ್ಸಿನ ಹುಡುಗಿಯರನ್ನು ಮನೆಗೆ ಆಹ್ವಾನಿಸಿ. ಅವರನ್ನು ದುರ್ಗೆಯ ಒಂಬತ್ತು ರೂಪಗಳೆಂದು ಪರಿಗಣಿಸಿ. ಅವರಿಗೆ ವಿಶೇಷವಾದ ಉಡುಗೊರೆ ನೀಡಿ, ಊಟವನ್ನು ಬಡಿಸಿ.

ವಿಸರ್ಜನೆಯ ಹತ್ತನೇ ದಿನ:

ವಿಸರ್ಜನೆಯ ಹತ್ತನೇ ದಿನ:

ನವರಾತ್ರಿ ಪೂಜೆಯ ಒಂಬತ್ತು ದಿನಗಳ ನಂತರ, ದುರ್ಗೆಯ ವಿಸರ್ಜನೆಯನ್ನು ಹತ್ತನೇ ದಿನ ಮಾಡಲಾಗುತ್ತದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ನೀವು ಮಾಡಿದಂತೆ ನಿತ್ಯ ಪೂಜೆಯನ್ನು ಮಾಡಿ. ಪೂಜೆಯ ನಂತರ, ಕಲಶದ ನೀರನ್ನು ಮನೆಯ ಎಲ್ಲಾ ಕೋಣೆಗಳಲ್ಲಿ ಸಿಂಪಡಿಸಿ. ಕಲಶ ಮುಚ್ಚಳದಲ್ಲಿ ಇಟ್ಟಿದ್ದ ಆಹಾರವನ್ನು ಪಕ್ಷಿಗಳಿಗೆ ನೀಡಿ. ಬುಡದಲ್ಲಿ ಹಾಕಿದ್ದ ಬೀಜಗಳು ಹತ್ತು ದಿನಗಳಲ್ಲಿ ಚೆನ್ನಾಗಿ ಬೆಳೆದಿರುತ್ತವೆ, ಅವುಗಳನ್ನು ತೋಟದ ಮರದ ಕೆಳಗೆ ಹಾಕಿ.

ದುರ್ಗಾ ಪೂಜೆಯ ಲಾಭಗಳು:

ದುರ್ಗಾ ಪೂಜೆಯ ಲಾಭಗಳು:

ನವರಾತ್ರಿ ಪೂಜೆಯು ಮನೆಯಲ್ಲಿ ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ. ದೇವಿ ದುರ್ಗಾ ಕುಟುಂಬಕ್ಕೆ ಆರೋಗ್ಯ, ಸಂಪತ್ತು, ಬುದ್ಧಿವಂತಿಕೆ ಮತ್ತು ಯಶಸ್ಸನ್ನು ನೀಡುತ್ತಾಳೆ.


English summary

How to Worship Goddess Durga at home and Benefits of Worshiping

Here we talking about How to worship Goddess Durga at home and Benefits of Worshiping, read on
Story first published: Thursday, October 7, 2021, 18:00 [IST]
X
Desktop Bottom Promotion