Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ರಾಹುದೋಷವಿದೆ ಎಂದು ಸೂಚಿಸುವ ಸೂಚನೆಗಳಿವು, ಪರಿಹಾರವೇನು?
ರಾಹು ದೋಷವಿದ್ದರೆ ಅದರ ಪ್ರಭಾವ ಆ ಮನೆಯಲ್ಲಿ ಇರುತ್ತದೆ. ಮನೆಯಲ್ಲಿ ನೆಮ್ಮದಿ ಇರುವುದಿಲ್ಲ, ಹೊಂದಾಣಿಕೆ ಇರುವುದಿಲ್ಲ, ಸದಾ ಜಗಳ, ಒಡ ಹುಟ್ಟಿದವರ ಜೊತೆ ಮನಸ್ತಾಪ, ಆರೋಗ್ಯದ ಸಮಸ್ಯೆ ಇವೆಲ್ಲಾ ಆ ಮನೆಯಲ್ಲಿ ಇರುತ್ತದೆ.

ರಾಹು ದೋಷವಿದ್ದರೆ ಆ ಮನೆಯನ್ನು ನೋಡಿದಾಗ ತಿಳಿಯುತ್ತದೆ, ಯಾವುದೇ ಐಶ್ವರ್ಯ ಇರುವುದಿಲ್ಲ, ಮನೆ ಈ ರೀತಿ ಇದ್ದರೆ ಅದು ರಾಹು ದೋಷದ ಲಕ್ಷಣಗಳಾಗಿವೆ
* ಮನೆಯಲ್ಲಿ ನೀರು ಸೋರಿಕೆಯಾಗುತ್ತಿದ್ದರೆ (ನ್ಲಿ ಅಥವಾ ಪೈಪ್)
* ಮನೆಯಲ್ಲಿ ದೂಳು ದುಂಬಿಕೊಂಡಿದ್ದರೆ
* ಗಿಡ ಸರಿಯಾಗಿ ಬೆಳೆಯುವುದಿಲ್ಲ
* ಮನೆಯೊಳಗಡೆ ಸೂರ್ಯನ ಬೆಳಕು ಸರಿಯಾಗಿ ಬೀಳದಿರುವುದು
* ಕೆಲಸದವರಿಗೆ ಒಳ್ಳೆಯ ಸಂಬಳ ನೀಡಿದರೂ ಅವರು ತುಂಬಾ ಸಮಯ ನಿಲ್ಲುವುದಿಲ್ಲ
* ಆಗಾಗ ಹಾಲು ಹಾಳಾಗುವುದು, ಕೆಲವೊಂದು ವಸ್ತುಗಳು ಹಾಳಾಗುವುದು
* 38-45 ವರ್ಷದವರಿಗೆ ಆರೋಗ್ಯ, ಮತ್ತಿತರ ಸಮಸ್ಯೆಗಳು ಕಂಡು ಬರುವುದು
* ಬೇಡದ ವಿಷಯಗಳಿಗೆ ಹಣ ಖರ್ಚು ಮಾಡುವುದು
* ಯಾವುದೋ ಭಯ ಕಾಡುವುದು
* ಅಡುಗೆ ಮನೆಯ ಗೋಡೆಯಲ್ಲಿ ಬಿರುಕು
* ಮನೆಯಲ್ಲಿ ಸಂತೋಷ ಇಲ್ಲದಿರುವುದು

ರಾಹುವಿನ ಕೆಟ್ಟ ಪರಿಣಾಮ ಹೋಗಲಾಡಿಸಲು ಪರಿಹಾರ
* ಮನೆಯ ಮುಂದುಗಡೆ ಬಿಳಿ ಬಟ್ಟೆಯಲ್ಲಿ ಬಿಳಿ ಕಲ್ಲುಸಕ್ಕರೆ, ಕಪ್ಪು ಧಾನ್ಯಗಳು, ಗೋಮೇಧಿಕ ಹರಳು(gomed stone) ಮತ್ತು ಬೆಳ್ಳಿ ಇವುಗಳನ್ನು ಹಾಕಿ ನೇತು ಹಾಕಿ ಅಥವಾ ಮನೆ ಮುಂದುಗಡೆ ಸುಟ್ಟು ಹಾಕಿ.
* ಪಿತೃದೋಷ ನಿವಾರಣೆಗೆ ದಾನ ಮಾಡಿ
* ಮನೆಗೆ ಪೂರ್ವಜ್ಜರ ಹೆಸರು ಹಾಕಿ
* ಕೆಲಸಕ್ಕೆ ಕೂರುವ ಸ್ಥಳ, ತಿನ್ನುವ ಸ್ಥಳ, ಗಿಡಗಳನ್ನು ನೆಡುವುದು, ಪಕ್ಷಿಗಳಿಗೆ ತಿನ್ನಲು ಹಾಕುವುದು ಇವೆಲ್ಲಾ ಪೂರ್ವ ಭಾಗದಲ್ಇ ಇರಲಿ.

ರಾಹುವಿನ ಪ್ರಭಾವ
ರಾಹುವಿನಿಂದ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮ ಎರಡೂ ಇರುತ್ತದೆ, ವ್ಯಕ್ತಿ ಪ್ರತಿಯೊಂದಕ್ಕೂ ಕಾರಣ ಹುಡುಕುತ್ತಿದ್ದರೆ ರಾಹುವಿನ ಋಣಾತ್ಮಕ ಪ್ರಭಾವವಿರುತ್ತದೆ, ಅದೇ ವ್ಯಕ್ತಿ ಶ್ರಮಪಟ್ಟು ದುಡಿಯಲು ಆರಂಭಿಸಿದರೆ ರಾಹು ಧನಾತ್ಮಕ ಪ್ರಭಾವ ಬೀರುತ್ತಾನೆ. ಗುರುವಿನ ಮಾರ್ಗದರ್ಶನದೊಂದಿಗೆ ಕೆಲಸ ಮಾಡಿ, ಮಕ್ಕಳು ಸ್ಪೋರ್ಟ್ಸ್‌ನಲ್ಲಿ ತೊಡಗಿಕೊಳ್ಳುವುದರಿಂದ ರಾಹುವಿನ ಪ್ರಭಾವವನ್ನು ಧನಾತ್ಮಕವಾಗಿ ಪರಿವರ್ತಿಸಬಹುದು.

ವ್ಯಕ್ತಿಯ ಮೇಲೆ ರಾಹುವಿನ ಋಣತ್ಮಕ ಪ್ರಭಾವವಿದೆ ಎಂದು ತೋರಿಸುವ ಲಕ್ಷಣಗಳು
* ನಿದ್ದೆ ಮಾಡಲು ಹಾಗೂ ಏಳಲು ತುಂಬಾ ತಡವಾಗುವುದು
* ಸಂಪ್ರದಾಯ, ಆಚಾರಗಳನ್ನು ಆಚರಿಸದಿರುವುದು
* ಕೆಟ್ಟ ಚಟಗಳಿಗೆ ದಾಸರಾಗುವುದು
* ಒಂದು ವಿಷಯದಲ್ಲಿ ಸರಿಯಾಗಿ ಗಮನ ಹರಿಸಲು ಸಾಧ್ಯವಾಗದಿರುವುದು
* ಮೊಬೈಲ್ ಮುಂತಾದ ಗ್ಯಾಡ್ಜೆಟ್‌ಗೆ ಅಡೆಕ್ಟ್ ಆಗುವುದು
* ಬೇಗನೆ ಕೋಪಗೊಳ್ಳುವುದು, ವಸ್ತುಗಳನ್ನು ಮುರಿಯುವುದು. ವಿವಾಹಿತರು ಸಂಬಂಧವನ್ನು ಕೂಡ ಮುರಿದುಕೊಳ್ಳಬಹುದು
* ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದು, ಜವಾಬ್ದಾರಿ ತೆಗೆದುಕೊಳ್ಳದಿರುವುದು.

ವ್ಯಕ್ತಿಯ ಮೇಲೆ ರಾಹುವಿನ ಋಣಾತ್ಮಕ ಪ್ರಬಾವವಿದ್ದರೆ ಪರಿಹಾರ
* ಚಿಕ್ಕ ಚಂದನದ ತುಂಡನ್ನು ನೀಲಿ ದಾರದಲ್ಲಿ ಸುತ್ತಿ ಕಟ್ಟಿಕೊಳ್ಳಿ.
* ಸ್ನಾನ ಮಾಡುವ ನೀರಿಗೆ ಅಶೋಕ ಎಲೆ, ಸ್ವಲ್ಪ ಸುಗಂಧ ದ್ರವ್ಯ ಅಥವಾ ಎಣ್ಣೆ ಹಾಕಿ ಸ್ನಾನ ಮಾಡಿ.
* * ತಡರಾತ್ರಿ ತಿನ್ನುವುದು, ತಂಗಳು ಆಹಾರ ಸೇವನೆ ಮಾಡಬೇಡಿ
* ಮೀನುಗಳಿಗೆ ಆಹಾರ ಹಾಕಿ
* ಅಮವಾಸ್ಯೆಯಂದು 4 ಎಳನೀರನ್ನು ದೇವಾಲಯಕ್ಕೆ ನೀಡಿ.
* ರಾಹು ಮಂತ್ರ 'ಉನ್ ಭ್ರು ಭ್ರೂಂ: ರಾಹುವೇ ನಮಃ:' ಪಠಿಸಿ.



Click it and Unblock the Notifications
