Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಾಡಿಗೆಲ್ಲಾ ಹಬ್ಬ ನಾಗರ ಪಂಚಮಿಯ ವಿಶೇಷತೆ ಏನು?
ನಾಗರಪಂಚಮಿ ಎಂದರೆ ನಾಡಿಗೆಲ್ಲಾ ಹಬ್ಬ ಎಂಬ ಮಾತಿದೆ. ಶ್ರಾವಣ ಮಾಸದ ಶುಕ್ಲ ಪಕ್ಷ ಪಂಚಮಿಯಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ತಮ್ಮ ಕುಟುಂಬ ಮತ್ತು ಸಹೋದರನ ಒಳಿತಿಗಾಗಿ ಹೆಂಗಳೆಯರು ಈ ದಿನದಂದು ವಿಶೇಷವಾಗಿ ನಾಗನನ್ನು ಪ್ರಾರ್ಥಿಸುತ್ತಾರೆ. ನಾಗ ದೇವತೆ (ಹುತ್ತದ ಹಾವು) ಅನ್ನು ಪೂಜಿಸಿ ಅದಕ್ಕೆ ಹಾಲಿನ ಅಭಿಷೇಕವನ್ನು ಮಾಡುತ್ತಾರೆ.
ದೇವರ ಶಕ್ತಿಯ ರೂಪವಾಗಿಯೇ ನಾಗರಹಾವನ್ನು ಹಿಂದೂ ಧರ್ಮದಲ್ಲಿ ಪರಿಗಣಿಸಲಾಗಿದ್ದು ಶ್ರಾವಣ ಮಾಸದ ಐದನೆಯ ದಿನ ಅರ್ಧಚಂದ್ರನಿರುವ ರಾತ್ರಿ ಹೊತ್ತಿನಲ್ಲಿ ನಾಗದೇವತೆಗೆ ಪೂಜೆ ಸಲ್ಲಿಸುವ ನಾಗರಪಂಚಮಿಯನ್ನು ಆಚರಿಸುತ್ತಾರೆ. ನಾಗನಿಗೆ ಮಾಡುವ ಯಾವುದೇ ಪ್ರಾರ್ಥನೆ ದೇವರಿಗೆ ಕೂಡಲೇ ಅರ್ಪಣೆಯಾಗುತ್ತದೆ ಎಂಬ ಮಾತಿದೆ.

ಈ ಹಬ್ಬವನ್ನು ಇದೇ ತಿಂಗಳು ಆಚರಿಸುತ್ತಿರುವ ಮುಖ್ಯ ಕಾರಣವೆಂದರೆ ಜನರಿಗೆ ಹಾವುಗಳು ಭಯಭೀತಿಯನ್ನುಂಟು ಮಾಡುತ್ತವೆ ಎಂಬ ಕಾರಣಕ್ಕಾಗಿದೆ. ಮಳೆಗಾಲದಲ್ಲಿ ಬಿಲಗಳಲ್ಲಿ ನೀರು ತುಂಬಿಕೊಂಡು ಹಾವುಗಳು ಹೊರಬಂದು ಜನರಿಗೆ ತೊಂದರೆಯನ್ನುಂಟು ಮಾಡಬಾರದು ಎಂಬ ಕಾರಣಕ್ಕಾಗಿ ಹಾವುಗಳನ್ನು ಸಂಪ್ರೀತಿಗೊಳಿಸಲು ಈ ತಿಂಗಳಿನಂದೇ ಹಾವುಗಳನ್ನು ಪೂಜಿಸಲಾಗುತ್ತದೆ.
ಹಾವುಗಳನ್ನು ಪೂಜಿಸಿದರೆ ಜಗದೊಡೆಯ ಪರಶಿವನನ್ನು ಮೆಚ್ಚಿಸಿದಂತೆ ಎಂಬ ಮಾತೂ ಕೂಡ ಪುರಾಣದಲ್ಲಿ ಉಲ್ಲೇಖಗೊಂಡಿದೆ. ನಾಗರ ಪಂಚಮಿಯಂದು ಪೂಜೆ ಮತ್ತು ವ್ರತವನ್ನು ಆಚರಿಸುವ ಪದ್ಧತಿ ಇದ್ದು ನಾಗ ದೇವರನ್ನು ಒಲಿಸಿಕೊಳ್ಳಲು ಇದು ಪ್ರಮುಖವಾಗಿದೆ. ಇಂದಿನ ಲೇಖನದಲ್ಲಿ ಮನೆಯಲ್ಲೇ ನಾಗರ ಪಂಚಮಿ ವ್ರತವನ್ನು ಆಚರಿಸುವವರಿಗೆ ಸಲಹೆಗಳನ್ನು ನೀಡಲಾಗಿದ್ದು ಈ ಕೆಳಗಿನಂತಿದೆ. ಹಿಂದೂ ಧರ್ಮದ ಭಾವೈಕ್ಯತೆಯ ಹಬ್ಬ: ನಾಗರಪಂಚಮಿ
ನಾಗರ ಪಂಚಮಿಯಂದು ಬ್ರಾಹ್ಮಿಮುಹೂರ್ತದಲ್ಲಿ ಏಳಬೇಕು
*ಸ್ನಾನಾದಿಗಳನ್ನು ಕೈಗೊಂಡ ನಂತರ, ಪೂಜೆ ಮಾಡುವ ಸ್ಥಳವನ್ನು ಸ್ವಚ್ಛಮಾಡಬೇಕು (ಗಂಗಾಜಲವನ್ನು ಬಳಸಿಕೊಂಡರೆ ಇನ್ನೂ ಉತ್ತಮ)
*ನಾಗ ದೇವತೆಯ ಅಥವಾ ಶಿವನ ಫೋಟೋ ಇರಿಸುವಂತಹ ಸ್ಥಳವನ್ನು ಚೊಕ್ಕಟವಾಗಿರಿಸಿಕೊಳ್ಳಿ
*ಹಿಟ್ಟಿನಿಂದ ನಾಗದೇವತೆಯ ಮೂರ್ತಿಯನ್ನು ರಚಿಸುತ್ತಾರೆ, ಸೆಗಣಿಯನ್ನು ಪೂಜಾ ಕೊಠಡಿಯ ಮುಂಭಾಗದಲ್ಲಿ ಇರಿಸಲಾಗುತ್ತದೆ. ಇದು ಶುದ್ಧತೆಯ ಪ್ರತೀಕವಾಗಿದೆ.
*ಹೂವುಗಳು, ಧ್ರುವ, ಕುಶ ಹುಲ್ಲು, ಅಕ್ಕಿ, ಸಿಹಿ, ಮತ್ತು ಹಾಲಿನಿಂದ ನಾಗದೇವರನ್ನು ಪೂಜಿಸಲಾಗುತ್ತದೆ.
*ನಾಗ ಮಂತ್ರ ಮತ್ತು ಸ್ತೋತ್ರಗಳನ್ನು ಪಠಿಸುತ್ತಿರಿ
*ನಂತರ ನಾಗ ದೇವತೆ ಅಥವಾ ಈಶ್ವರನ ದೇವಸ್ಥಾನಗಳಿಗೆ ಹೋಗಬೇಕು
*ಸಂಜೆ, ಪಾಯಸವನ್ನು ತಯಾರಿಸಿ ನಾಗ ದೇವತೆಗೆ ಅರ್ಪಿಸಬೇಕು. ನಾಗರಪಂಚಮಿಗೆ ಸ್ಪೆಷಲ್ -ಎಳ್ಳುಂಡೆ
ಪೂಜೆಯ ವಿಧಿ ವಿಧಾನಗಳು
*ನಾಗ ಪಂಚಮಿಯ ದಿನದಂದು, ಮನೆಯಲ್ಲಿರುವ ಜನರು ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸಬೇಕು. ಸೆಗಣಿಯಿಂದ ನಾಗನ ಪ್ರತಿಮೆಯನ್ನು ನಿರ್ಮಿಸಿ ಪೂಜಾ ಕೊಠಡಿಯಲ್ಲಿರಿಸಬೇಕು. ನಾಗ ದೇವತೆಯನ್ನು ಹೂವು ಮತ್ತು ಮೇಲೆ ತಿಳಿಸಿದ ಪೂಜಾ ಪರಿಕರಗಳಿಂದ ಪೂಜಿಸಬೇಕು.
*ಪೂಜೆಯ ನಂತರ, ಮಲ್ಪುವಾ ಅಥವಾ ಲಾಡಿನ ಪ್ರಸಾದವನ್ನು ಮಾಡಿ ದೇವರಿಗೆ ಅರ್ಪಿಸಬೇಕು. ಪೂಜೆಯ ಸಮಯದಲ್ಲಿ ಸುಗಂಧವನ್ನು ಪಸರಿಸುವ ಹೂವು, ಶ್ರೀಗಂಧದ ಬಳಕೆಯನ್ನು ಮಾಡಬೇಕಾಗುತ್ತದೆ. ಏಕೆಂದರೆ ಸುಮಧುರ ಪರಿಮಳ ನಾಗದೇವರಿಗೆ ತುಂಬಾ ಇಷ್ಟ ಎಂಬ ಪ್ರತೀತಿ ಕೂಡ ಇದೆ.
ನಾಗರ ಪಂಚಮಿಯ ಮಹತ್ವ
*ಕಾಳ ಸರ್ಪ ಯೋಗದ ಪರಿಣಾಮವನ್ನು ಕಡಿಮೆ ಮಾಡಲು ನಾಗರ ಪಂಚಮಿಯಂದು ನಾಗನಿಗೆ ಪೂಜೆಯನ್ನು ಮಾಡಲಾಗುತ್ತದೆ. ಗದ್ದೆ ಇಲ್ಲವೇ ಭೂಮಿಯನ್ನು ಅಗೆಯುವುದನ್ನು ಮಾಡಬಾರದು.
*ಕೆಲವು ಹಿಂದೂ ಮನೆಗಳಲ್ಲಿ ತಾಜಾ ಆಹಾರವನ್ನು ಸಿದ್ಧಪಡಿಸುವುದಿಲ್ಲ. ನಾಗ ದೇವರಿಗೆ ಸಿದ್ಧಪಡಿಸಿದ ಭೋಗ್ ಅನ್ನು ಅರ್ಪಿಸಿದ ನಂತರವೇ ತಾಜಾ ಆಹರವನ್ನು ತಯಾರಿಸಿ ಸೇವಿಸಲಾಗುತ್ತದೆ. ಹಿಂದಿನ ದಿನವೇ ಕುಟುಂಬಕ್ಕಾಗಿ ಆಹಾರವನ್ನು ಸಿದ್ಧಪಡಿಸಿ ನಾಗರ ಪಂಚಮಿಯಂದು ಈ ಆಹಾರವನ್ನು ಸೇವಿಸುವ ಪದ್ಧತಿ ಕೂಡ ಇದೆ.
*ನಾಗರಪಂಚಮಿಯಂದೇ ಸರಸ್ವತಿ ದೇವಿಗೂ ಪೂಜೆ ನಡೆಯುತ್ತದೆ. ಏಕೆಂದರೆ ವಿದ್ಯೆ ಬುದ್ಧಿಯ ಅಧಿದೇವತೆಯಾದ ಶಾರದೆಯನ್ನು ಈ ದಿನದಂದು ಬೇಗನೇ ಒಲಿಸಿಕೊಳ್ಳಬಹುದು ಎಂಬುದಾಗಿ ಪ್ರತೀತಿ ಇದೆ.
*ಹಾವುಗಳ ರಾಣಿ ಮಾನಸವನ್ನು ಇದೇ ದಿನ ಪೂಜಿಸಲಾಗುತ್ತದೆ. ಮನೆಯಲ್ಲಿರುವ ಗೃಹಿಣಿಯು ಕುಟುಂಬದ ಸುಖ ಶಾಂತಿ ನೆಮ್ಮದಿಗಾಗಿ ಪೂಜೆ ಮತ್ತು ವೃತವನ್ನು ಕೈಗೊಳ್ಳುತ್ತಾರೆ. ವ್ರತವನ್ನು ಕೈಗೊಳ್ಳುವುದು ಹಾವಿನ ಕಡಿತದಿಂದ ಅಂತೆಯೇ ಸರ್ಪ ದೋಷದಿಂದ ಕುಟುಂಬವನ್ನು ರಕ್ಷಿಸುತ್ತದೆ.



Click it and Unblock the Notifications

