ಭಗವಾನ್ ಶ್ರೀ ರಾಮನ ಸಮಾಪ್ತಿ; ನೀವು ಕೇಳರಿಯದ ಕಥೆಗಳು

By Viswanath S

ಅಯೋಧ್ಯೆಯ ರಾಜ ಶ್ರೀ ರಾಮನ ವಿಷಯದಲ್ಲಿ ಹೇಳುವುದು, ಬರೆಯುವುದು, ಕೇಳುವುದು ಮತ್ತು ಮಾತನಾಡುವುದು ಇವುಗಳ ಬಗ್ಗೆ ಇನ್ನೇನೂ ಉಳಿದಿಲ್ಲ. ಶ್ರೀ ರಾಮನ ಶೌರ್ಯ, ಅವನ ಸಂಸ್ಕೃತಿ, ತನ್ನ ಸಹೋದರರ ಮತ್ತು ಪತ್ನಿಯ ಮೇಲೆ ಇಟ್ಟಿದ್ದ ಪ್ರೀತಿ, ಅವನ ತಂದೆ ತಾಯಿಯರು ಮತ್ತು ಹಿರಿಯರ ಬಗ್ಗೆ ಇಟ್ಟಿದ್ದ ಗೌರವಾನ್ವಿತ ಸ್ವಭಾವ ಮತ್ತು ತನ್ನ ಅವಿಭಾಜ್ಯ ಭಕ್ತ ಹನುಮಂತನ ಮೇಲಿಟ್ಟಿದ್ದ ಹೃದಯ ತುಂಬಿದ ಅನುಕಂಪ ಇವುಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ.

ಅವನು ಸೀತೆಯ ಜೊತೆ ಮದುವೆಯಾಗಿದ್ದು, ಅವನು ತನ್ನ ಪತ್ನಿ ಸೀತೆಯನ್ನು ಮರುಪಡೆಯಲು ರಾವಣನ ವಿರುದ್ಧ ಹೋರಾಟಮಾಡಿದ್ದು ಅವನು ಜೀವನದಲ್ಲಿ ನಡೆದ ಎಲ್ಲಾ ಘಟನೆಗಳ ಬಗ್ಗೆ ನಮಗೆಲ್ಲಾ ಸ್ಪಷ್ಟವಾಗಿ ತಿಳಿದಿದೆ. ಆದಾಗ್ಯೂ, ರಾಮನ ಬಗ್ಗೆ ಬಹಳಷ್ಟು ಜನರಿಗೆ ತಿಳಿಯದೇ ಇರುವ ಇನ್ನೂ ಒಂದು ವಿಷಯವಿದೆ.

ಶ್ರೀ ರಾಮನ ಸಾವು ಅನೇಕ ಜನರಿಗೂ ಮತ್ತು ರಾಮಾಯಣವನ್ನು ಗಾಢವಾಗಿ ಓದಿದವರಿಗೂ ಈಗಲೂ ಒಂದು ವಿಸ್ಮಯ. ಇಂದು ನಾವು ಶ್ರೀ ರಾಮನ ಜೀವನದಲ್ಲಿ ನಡೆದ ರಹಸ್ಯದ ಬಗ್ಗೆ ಅಂದರೆ ಅವನ ಸಾವಿನ ಬಗ್ಗೆ ನಿಮಗೆ ತಿಳಿಸಲು ಹೊರಟಿದ್ದೇವೆ. ಮುಂದೆ ಓದಿ:

How did Lord Rama attain his death?

ಸೀತಾ ಮಾತೆಯು ತನ್ನ ಐಹಿಕ ರೂಪವನ್ನು ತೊರೆದು ತೆರಳಿದ ಮೇಲೆ, ಶ್ರೀ ರಾಮನ ಸಹೋದರರು (ಲಕ್ಷ್ಮಣ - ಆದಿಶೇಷ, ಭರತ - ಶಂಖ, ಶತೃಘ್ನ - ಚಕ್ರ) ಎಲ್ಲರೂ ಸ್ವರ್ಗವಾಸಿಯಾದರು. ಅವರೆಲ್ಲರೂ ವೈಕುಂಠದಲ್ಲಿ ಶ್ರೀ ರಾಮನು ಬರುವನೆಂದು ಕಾಯುತ್ತಿದ್ದರು. ಶ್ರೀ ಹನುಮಂತನೊಬ್ಬನೇ ಭೂಮಿಯ ಮೇಲೆ ಶ್ರೀ ರಾಮನ ಸೇವೆಯನ್ನು ಮುಂದುವರಿಸಿದನು. ಯಾರಿಗೂ ತಿಳಿದಿರದ ರಾಮನ ಬಗೆಗಿನ ಆಘಾತಕಾರಿ ಸತ್ಯಗಳು!

ಶ್ರೀ ರಾಮನ ಅವತಾರವು ಭೂಮಿಯ ಮೇಲೆ ಕೊನೆಗೊಳ್ಳುತ್ತಿರುವ ಸಮಯದಲ್ಲಿ ಯಮರಾಜನು ಒಬ್ಬ ಬ್ರಾಹ್ಮಣನ ವೇಷದಲ್ಲಿ ಶ್ರೀ ರಾಮನನ್ನು ವೈಯುಕ್ತಿಕವಾಗಿ ನೋಡಬೇಕೆಂದು ವಿನಂತಿಸಿಕೊಂಡನು. ಯಮ ರಾಜನು ಹೀಗೆ ರಾಮನನ್ನು ಕಾಣುವ ಸಮಯದಲ್ಲಿ ಯಾರಾದರೂ ಅಡ್ಡಿಪಡಿಸಲು ಹೊರಟರೆ ಅವರ ಶಿರಚ್ಛೇದ ಮಾಡಲಾಗುತ್ತದೆಯೆಂದು ಷರತ್ತನ್ನು ಒಡ್ಡಿದನು. ಶ್ರೀ ರಾಮನು ಇಷ್ಟವಿಲ್ಲದೆ ಷರತ್ತಿಗೆ ಒಪ್ಪಿ ಹನುಮಂತನನ್ನು ಯಾರೂ ಅಡಚಣೆಯುಂಟುಬಾರದೆಂದು ಬಾಗಿಲು ಕಾಯಲು ಹೇಳಿದನು.

ಬಾಗಿಲುಗಳು ಮುಚ್ಚಿದ ನಂತರ ಯಮರಾಜನು ತನ್ನ ನಿಜರೂಪವನ್ನು ಪ್ರದರ್ಶಿಸಿ ಶ್ರೀ ರಾಮನನ್ನು ತನ್ನ ಅವತಾರವನ್ನು ಕೊನೆಗೊಳಿಸಿ ವೈಕುಂಠಕ್ಕೆ ಮರಳಲು ಪ್ರಾರ್ಥಿಸಿದನು. ಆದರೆ ಆ ಸಮಯದಲ್ಲಿ ಶ್ರೀ ರಾಮನು ಶ್ರೀ ಹನುಮಂತನ ಪ್ರೇಮ ಮತ್ತು ಭಕ್ತಿಗಳಿಗೋಸ್ಕರ ಅವತಾರವನ್ನು ಉಳಿಸಿಕೊಂಡಿರುವುದು ಅನಿವಾರ್ಯವಾಗಿದೆಯೆಂದನು. ಅದಕ್ಕೆ ಯಮರಾಜನು ಹನುಮಂತನ ಬಾಂಧವ್ಯವು ಇನ್ನು ಕೆಲವೇ ಸಮಯದಲ್ಲಿ ಕೊನೆಗೊಳ್ಳಲಿದೆ ಎಂದು ಖಚಿತವಾಗಿ ನುಡಿದನು.

ಇವರಿಬ್ಬರೂ ಹೀಗೆ ಸಂಭಾಷಣೆಯಲ್ಲಿ ನಿರತರಾಗಿರುವಾಗ ದೂರ್ವಾಸ ಮುನಿಯು ಶ್ರೀ ರಾಮನ ದರ್ಶನವು ತಕ್ಷಣವೇ ಆಗಬೇಕೆಂದು ಕೋರಿದರು. ಬಾಗಿಲ ಹೊರಗೆ ಕಾಯುತ್ತಿದ್ದ ಹನುಮಂತನು ಮುನಿಗಳಿಗೆ ಶ್ರೀ ರಾಮನ ರಹಸ್ಯ ಮಾತುಕತೆಗಳು ಮುಗಿಯುವವರೆಗೆ ಹೊರಗಡೆ ಕಾಯಲು ವಿನಂತಿಸಿಕೊಂಡನು.

ಹೀಗೆ ಹನುಮಂತನು ದೂರ್ವಾಸ ಮುನಿಗಳಿಗೆ ಪ್ರವೇಶವನ್ನು ನಿರಾಕರಿಸಿದಕ್ಕಾಗಿ ಕೋಪಗೊಂಡು ತನ್ನ ಆವೇಶದಲ್ಲಿ ಶ್ರೀ ರಾಮನಿಗೆ ಮತ್ತು ಅವನ ಇಡೀ ರಾಜ್ಯಕ್ಕೆ ಶಾಪಕೊಡುವೆನೆಂದು ಬೆದರಿಕೆ ಹಾಕಿದರು. ಹನುಮಂತನಿಗೆ ಬೇರೆ ಯಾವ ದಾರಿಯೂ ಇಲ್ಲದೆ ಒಳಗೆ ನಡೆಯುತ್ತಿದ್ದ ಮಾತುಕತೆಯನ್ನು ತಡೆಗಟ್ಟಲು ತಾನೇ ಸ್ವತಃ ನಿರ್ಧರಿಸಿದನು. ಅವನು ಶ್ರೀ ರಾಮನ ಮತ್ತು ಅವನ ರಾಜ್ಯಕ್ಕೆ ತಗಲುವ ಶಾಪದ ಬದಲು ತನ್ನ ಶಿರಚ್ಛೇದ ಮಾಡಿಸಿಕೊಳ್ಳುವುದೇ ಒಳಿತೆಂದು ನಿಶ್ಚಯಿಸಿದನು. ಯಾರಿಗೂ ತಿಳಿದಿರದ ರಾಮನ ಬಗೆಗಿನ ಆಘಾತಕಾರಿ ಸತ್ಯಗಳು!

ಹನುಮಂತನು ಕೊಠಡಿಯೊಳಕ್ಕೆ ಪ್ರವೇಶಿದ ಕಾರಣ ಯಮರಾಜನು ತಾನು ಹಾಕಿದ್ದ ಷರತ್ತಿನಂತೆ ಹನುಮಂತನ ಶಿರಚ್ಛೇದ ಮಾಡುತ್ತೇನೆಂದು ಒತ್ತಾಯಿಸಿದನು. ಈ ಸಂದಿಗ್ಧ ಪರಿಸ್ಥಿತಿ ಶ್ರೀ ರಾಮನಿಗೆ ದುಃಖ ತಂದೊಡ್ಡಿತು. ಶ್ರೀ ರಾಮನ ಅರಮನೆಯಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಅರಿತುಕೊಂಡ ಅವನ ಗುರು ವಸಿಷ್ಠ ಮಹರ್ಷಿಯು ಅರಮನೆಯೊಳಗೆ ಬಂದರು.

ನಿಷ್ಠಾವಂತ ಸೇವಕ ಮತ್ತು ಭಕ್ತನಾದ ಹನುಮಂತನು ಶ್ರೀ ರಾಮನ ಸೇವೆಯನ್ನು ನಿಲ್ಲಿಸುವುದೇ ಶಿರಚ್ಛೇದಕ್ಕೆ ಸಮಾನವಾಗಿದೆಯೆಂದು ವಸಿಷ್ಠಮಹರ್ಷಿಯು ಯಮರಾಜನಿಗೆ ವಿವರಿಸಿದರು. ಹಾಗಾಗಿ ಹನಮಂತನು ಅಯೋಧ್ಯ ಪಟ್ಟಣವನ್ನು ಬಿಡಬೇಕಾಯಿತು ಹಾಗೂ ಶ್ರೀ ರಾಮನ ಸೇವೆಯನ್ನೂ ಬಿಡಬೇಕಾಯಿತು.

ಹನುಮಂತನು ತನ್ನನ್ನು ತೊರೆದುಹೋಗಿದ್ದರಿಂದ ಶ್ರೀ ರಾಮನಿಗೆ ಇನ್ನು ಭೂಮಿಯ ಮೇಲಿರುವುದಕ್ಕೆ ಯಾವುದೇ ಕಾರಣವಿಲ್ಲವೆಂದು ತನ್ನ ಅವತಾರದಿಂದ ಮುಕ್ತಿಗೊಳ್ಳಲು ಒಪ್ಪಿಕೊಂಡನು. ಅವನು ಅಂತಿಮವಾಗಿ ಸರಯೂ ನದಿಯನ್ನು ಪ್ರವೇಶಿಸಿ ವೈಕುಂಠಕ್ಕೆ ಹಿಂದಿರುಗುವ ಮೂಲಕ ತನ್ನ ಐಹಿಕರೂಪವನ್ನು ಕೊನೆಗೊಳಿಸಿದನು.

Story first published: Monday, November 17, 2014, 23:09 [IST]
X
Desktop Bottom Promotion