Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
Maha Shivaratri 2026 Wishes : ಓಂ ನಮಃ ಶಿವಾಯ: ಇಲ್ಲಿವೆ ಮಹಾಶಿವರಾತ್ರಿಯ ಶುಭ ಸಂದೇಶಗಳು, ಶುಭಾಶಯಗಳು
Happy Maha Shivaratri 2026: Wishes, Images, Quotes in Kannada : ದೇಶಾದ್ಯಂತ ಆಚರಿಸುವ ಅತಿ ದೊಡ್ಡ ಹಬ್ಬಗಳಲ್ಲಿ ಕೈಲಾಸವಾಸ ಶಿವರಾತ್ರಿ ಹಬ್ಬ ಪ್ರಮುಖವಾದದ್ದು. ಈ ವರ್ಷ ಫೆಬ್ರವರಿ 15ಕ್ಕೆ ಮಹಾಶಿವರಾತ್ರಿ ಆಚರಿಸಲಾಗುವುದು. ಈ ಹಬ್ಬದಂದು ಶಿವನ ಆರ್ಶೀವಾದ ಪಡೆಯಲು ಸಮರ್ಪಿಸಲಾಗಿದೆ.

ಶಿವರಾತ್ರಿ ಎಂದರೆ ಪವಿತ್ರವಾದ ಕತ್ತಲು. ಭಕ್ತರು ಇಂದು ಪೂರ್ಣ ಮನಸ್ಸಿನಿಂದ ಮತ್ತು ಪ್ರಾಮಾಣಿಕತೆಯಿಂದ ಶಿವನ ನಾಮ, ಜಪಮಂತ್ರಗಳನ್ನು ಸ್ಮರಣೆ ಮಾಡುತ್ತಾ ಶಿವನ ಆಶೀರ್ವಾದಕ್ಕೆ ಪಾತ್ರರಾಗಲು ಬಯಸುತ್ತಾರೆ. ಮಹಾಶಿವರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಸಮೇತ ಭೂಲೋಕಕ್ಕೆ ಬಂದು ಸಂಚಾರ ಮಾಡಲಿದ್ದು, ಈ ದಿನದಂದು ಯಾರು ನಿಷ್ಕಲ್ಮಷ ಮನಸ್ಸಿನಿಂದ, ಶಿವನಾಮ ಸ್ಮರಣೆ ಮಾಡಿ ಪೂಜಿಸುತ್ತಾರೋ ಅವರ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.
ನಂಬಿ ಬಂದ ಭಕ್ತರನ್ನು ಎಂದಿಗೂ ನಿರಾಸೆ ಮಾಡದ ದಯಾಮಯಿ ಮಹಾದೇವ ಆರಾಧಕನ ಪವಿತ್ರ ದಿನದಂದು ದೈವೀಕ ಸಂದೇಶ ಸಾರುವ ಅತ್ಯುತ್ತಮ ಶುಭಾಶಯಗಳು ಇಲ್ಲಿವೆ ನೋಡಿ.

ತ್ರಯಂಬಕಂ
ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಠಿ ವರ್ಧನಂ
ಉರ್ವಾರುಕ ಮಿವ ಬಂಧನಾನ್
ಮೃತ್ಯೋರ್ ಮುಕ್ಷೀಯಮಾಮೃತಾತ್
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

ನಟರಾಜ
ನೃತ್ಯಕಲೆಯ ಆದಿದೈವ ನಟರಾಜ
ಪತ್ನಿ ಸತಿಯ ಅರ್ಧಾಂಗಿ ಎಂದ ಅರ್ಧನಾರೀಶ್ವರ
ಹೆಣ್ಣಿಗೆ ಅತ್ಯುತ್ತನ ಸ್ಥಾನ ನೀಡಿದ ಗಂಗಾಧರ
ದುಷ್ಟರನ್ನು ಎಲ್ಲಿದರೂ ಬಿಡದ ಸಂಹಾರಕನ ಕೃಪಾಶೀರ್ವಾದ ನಿಮ್ಮದಾಗಲಿ
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

ಸನ್ಮಂಗಳ
ಶಿವನ ಶಾಶ್ವತ ಪ್ರೀತಿ ಮತ್ತು ಶಕ್ತಿ ನಿಮಗೆ ಕರುಣಿಸಲಿ
ಸಂತೋಷ ಮತ್ತು ಶಾಂತಿ ಸಹಿತ
ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ
ಶಿವನ ಸಕಲ ಆಶೀರ್ವಾದ ಸಿಗಲಿ
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

ಸ್ಕಂದಗುರು
ನಂದಿವಾಹನದಲ್ಲಿ ಮೂರ್ಜಗದಿ ಮೆರೆವ ಶಿವ
ಅಮೃತಘಟದಿಂದು ಉದಯಿಸಿ ವಿಷ ಸೇವಿಸಿದ ಶ್ರೀಕಂಠ
ಕ್ರೋಧದಿಂದ ಕಣ್ತೆರೆದು ಕಂದರ್ಪನನ್ನು ಕೊಂದ ಉಗ್ರ
ಸ್ಕಂದಗುರು, ಗಿರಿಜಾಪತಿ, ವಿಶ್ವೇಶ್ವರ, ತ್ರಿಲೋಕಪತಿ
ಎಂಬೆಲ್ಲಾ ಹೆಸರಿನಿಂದ ಖ್ಯಾತನಾದ ಮಹೇಶ್ವರ
ನಿಮ್ಮ ಬಾಳಲ್ಲಿ ನೆಮ್ಮದಿ, ಸೂಖ- ಶಾಂತಿ ನೀಡಲಿ
ಶಿವರಾತ್ರಿ ಹಬ್ಬದ ಶುಭಾಶಯಗಳು

ನಂದೀಶ
ಭಸ್ಮ ವಿಭೂಶಿತ ಭಕ್ತರ ಕಾಯ್ವ ರುದ್ರಾಕ್ಷ
ತ್ರಿಶೂಲಧಾರಿ, ಮುರ್ಲೋಕ ರಕ್ಷಕ
ಜಟೆಯಲ್ಲಿ ಗಂಗೆ, ಕರಗಳಲ್ಲಿ ಅಗ್ನಿ, ಢಮರು ಹಿಡಿದ ನಂದೀಶ
ಏಕಲಿಂಗ ಜಗದೀಶನ ಆಶೀರ್ವಾದ ನಿಮ್ಮದಾಗಲಿ
ಶಿವರಾತ್ರಿ ಹಬ್ಬದ ಶುಭಾಶಯಗಳು

ಸೃಷ್ಟಿ, ಸ್ಥಿತಿ, ಲಯಕಾರಕ
ಸೂರ್ಯ, ಚಂದ್ರ, ಅಗ್ನಿ ಸ್ವರೂಪ ಮುಕ್ಕಣ್ಣ
ಸೌಂದರ್ಯದ ಪ್ರತಿಬಿಂಬ ಅರ್ಧಚಂದ್ರ
ಜೀವನ ಶಾಶ್ವತೆಯ ಪತೀಕ ಗಂಗೆ
ಜ್ಞಾನದ ಸಂಕೇತ ಹಣೆಯ ಕಣ್ಣು
ಸೃಷ್ಟಿ, ಸ್ಥಿತಿ, ಸಂಹಾರ, ತಿರೋಭಾವ, ಅನುಗ್ರಹಂ
ಪ್ರತಿಪಾದಿಸುವ ನಟರಾಜ ಸರ್ವರಲ್ಲೂ ಒಳಿತು ಮಾಡಲಿ
ಶಿವರಾತ್ರಿ ಹಬ್ಬದ ಶುಭಾಶಯಗಳು

ದಿಗಂಬರಾಯ
ನಾಗೇಂದ್ರ ಹಾರಾಯ ತ್ರಿಲೋಚನಾಯ
ಭಸ್ಮಾಂಗ ರಾಗಾಯ ಮಹೇಶ್ವರಾಯ
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈನ ಕಾರಾಯ ನಮಃ ಶಿವಾಯ
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

ನಿಷ್ಕಲ್ಮಷ ಮನಸ್ಸಿನ ಪೂಜೆ
ಶೈವೋ ವಾ ವೈಷ್ಣವೋ ವಾಪಿ ಯೋ ವಾಸ್ಯಾದನ್ಯಪೂಜಕಃ
ಸರ್ವಂ ಪೂಜಾಫಲಂ ಹನ್ತಿ ಶಿವರಾತ್ರಿ ಬಹಿರ್ಮುಖಃ
ಶೈವನಾಗಲೀ, ವೈಷ್ಣವನಾಗಲಿ ಅಥವಾ ಇತರೆ ಯಾವುದೇ ದೇವತೆಯ ಉಪಾಸಕನಾಗಲಿ ಶಿವನನ್ನು ಅರಾಧಿಸುವ ಶಿವರಾತ್ರಿಯ ವಿಷಯದಲ್ಲಿ ಬಹಿರ್ಮುಖನಾಗಿದ್ದರೆ ಆತನಿಗೆ ಪೂಜಾಫಲ ಸಿಗುವುದಿಲ್ಲ. ಆದ್ದರಿಂದ ನೀವು ಸಹ ಬಹಿರ್ಮುಖಿಗಳಾಗದೇ ಅಂತರರ್ಮುಖಿಗಳಾಗಿ ನಿಷ್ಕಲ್ಮಷ ಮನಸ್ಸಿನಿಂದ ಶಿವನ ಕೃಪೆಗೆ ಪಾತ್ರರಾಗಿ.
ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು



Click it and Unblock the Notifications
