Latest Updates
-
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ!
ಶ್ರಾವಣ ಮಾಸದಲ್ಲಿ ಶಿವನೊಂದಿಗೆ ಹನುಮಂತನನ್ನು ಪೂಜಿಸಿ- ಎಲ್ಲವೂ ಒಳ್ಳೆಯದಾಗುವುದು
ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಇದ್ದು ಈ ಮಾಸದಲ್ಲಿ ವಿಶೇಷವಾಗಿ ಶಿವನ ಆರಾಧನೆಯನ್ನು ಮಾಡಲಾಗುತ್ತದೆ. ಸರಳ ಪೂಜೆಗೆ ಭಕ್ತರಿಗೆ ಒಲಿಯುವ ಶಂಭೋ ಎಂದವರ ಕೈ ಬಿಡುವವರಲ್ಲ. ಕೈ ಹಿಡಿದು ಪೊರೆಯುವವರಾಗಿದ್ದಾರೆ. ಓಂ ನಮಃ ಶಿವಾಯ ಎಂಬ ಮಂತ್ರವನ್ನು ಜಪಿಸಿದೊಡನೆಯೇ ಜನ್ಮ ಜನ್ಮಗಳ ಪಾಪ ಕೂಡ ವಿಮೋಚನೆಯಾಗುತ್ತದೆ ಅಂತಹ ಶಕ್ತಿ ಈ ಹೆಸರಿಗಿದೆ.
ಶ್ರಾವಣ ಮಾಸದಲ್ಲಿ ವಿಶೇಷವಾಗಿ ಶಿವನನ್ನು ಭಕ್ತಿಯಿಂದ ನೆನೆದು ಉಪವಾಸ ಮಾಡಿದರೆ ಆ ಪರಶಿವ ನಾವು ಬೇಡಿದ್ದನ್ನು ವರವಾಗಿ ಕರುಣಿಸುತ್ತಾರೆ ಎಂಬುದು ಹಿಂದಿನಿಂದಲೂ ಜನ ಜನಿತವಾಗಿರುವ ಸಿದ್ಧಾಂತವಾಗಿದೆ. ಶಿವ ಹೇಗೆ ಸರಳ ರೂಪಿಯಾಗಿ ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆಯೋ ಅಂತೆಯೇ ಶಿವನ ಪೂಜೆ ಕೂಡ ಅಷ್ಟೇ ಸುಲಭವಾದುದು. ಪುರಾಣದಲ್ಲಿ ಕೂಡ ಶಿವನನ್ನು ಭಜಿಸಿ ಅವರನ್ನು ಪೂಜಿಸಿ ಆ ತಂದೆಯನ್ನು ತಮ್ಮ ಭಕ್ತಿಯ ಪಾಶದಲ್ಲಿ ಕಟ್ಟಿ ಹಾಕಿದವರಿದ್ದಾರೆ. ಭಕ್ತ ಮಾರ್ಕಂಡೇಯ, ಮಂಜುನಾಥ ಮೊದಲಾದ ಭಕ್ತರು ಇದಕ್ಕೆ ಸಾಕ್ಷಿಯಾಗಿದ್ದಾರೆ.
ವಿಶೇಷವಾಗಿ ಶ್ರಾವಣ ಮಾಸದಲ್ಲಿ ಕನ್ಯೆಯರು ಮತ್ತು ವಿವಾಹಿತ ಸ್ತ್ರೀಯರು ಶಿವನ ಪೂಜೆಯನ್ನು ಮಾಡುತ್ತಾರೆ. ಕನ್ಯೆಯರು ಶಿವನಂತಹ ಪತಿಯನ್ನು ಪಡೆಯಲು ಮತ್ತು ವಿವಾಹಿತ ಸ್ತ್ರೀಯರು ತಮ್ಮ ಪತಿಯ ಆರೋಗ್ಯ ಮತ್ತು ಸುಖಕ್ಕಾಗಿ ಶಿವನ ಪೂಜೆಯನ್ನು ಮಾಡುತ್ತಾರೆ. 16 ಸೋಮವಾರಗಳಂದು ವಿಶೇಷ ಪೂಜೆಯನ್ನು ಮಾಡಿ ಪ್ರಸಾದವನ್ನು ದೇವರಿಗೆ ಅರ್ಪಿಸಿ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ.
ಇಂದಿನ ನಮ್ಮ ಲೇಖನದಲ್ಲಿ ಶಿವನ ಇನ್ನೊಂದು ಅವತಾರವೆಂದೇ ಕರೆಯಿಸಿಕೊಂಡಿರುವ ಹನುಮಂತನ ಆರಾಧನೆಯನ್ನು ಮಾಡುವುದರಿಂದ ಉಂಟಾಗುವ ಫಲಗಳೇನು ಎಂಬುದನ್ನು ತಿಳಿಯೋಣ. ವಿಷ್ಣುವು ರಾಮನ ಅವತಾರವನ್ನು ಎತ್ತಿದ ಸಂದರ್ಭದಲ್ಲಿ ಶಿವನು ಹನುಮನಾಗಿ ರಾಮನ ಅನುಯಾಯಿಯಾಗಿದ್ದರು ಎಂದು ಹೇಳಲಾಗಿದೆ. ಈ ಮಾಸದಲ್ಲಿ ಶಿವನ ಅನುಗ್ರಹವನ್ನು ಪಡೆದುಕೊಳ್ಳಲು ದೇವರಿಗೆ ಹೇಗೆ ಪೂಜೆಯನ್ನು ಮಾಡುತ್ತೀರೋ ಅದೇ ಸಮಯದಲ್ಲಿ ಹನುಮ ಕೂಡ ನಿಮ್ಮ ಭಕ್ತಿಗೆ ಕಿವಿಗೊಡುತ್ತಾರೆ. ಇಂದಿಲ್ಲಿ ಹನುಮನನ್ನು ಈ ಮಾಸದಲ್ಲಿ ಯಾವ ವಿಧವಾಗಿ ಪೂಜಿಸಬೇಕು ಎಂಬುದನ್ನು ಅರಿತುಕೊಳ್ಳೋಣ...

ಪಂಚೋಪಚಾರ್ ಪೂಜನ್
ಮಂಗಳವಾರ ಶಿವ ದೇವಸ್ಥಾನವನ್ನು ಭೇಟಿ ಮಾಡಿ ಮತ್ತು ಹನುಮಂತನ ಪಂಚೋಪಚಾರ್ ಪೂಜೆಯನ್ನು ನಿರ್ವಹಿಸಿ. ಪಂಚೋಪಚಾರ್ ಪೂಜಾನ್ ಐದು ವಿಧಗಳ ಅಥವಾ ಐದು ಹಂತಗಳ ಪೂಜೆಯನ್ನು ಸೂಚಿಸುತ್ತದೆ. ಈ ಪೂಜೆಯಲ್ಲಿ, ದೇವತೆಯ ವಿಗ್ರಹಕ್ಕೆ ಮೊದಲು ಅಭಿಷೇಕ ಮಾಡಲಾಗುತ್ತದೆ. ಸ್ನಾನವನ್ನು ಅರ್ಚಕರು ಮಾಡಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಹನುಮಾನ್ ಬ್ರಹ್ಮಚಾರಿಯಾಗಿದ್ದು ಮತ್ತು ಮಹಿಳೆಯರು ಹನುಮನ ವಿಗ್ರಹವನ್ನು ಸ್ಪರ್ಶಿಸಬಾರದು ಎಂದು ಹೇಳಲಾಗಿದೆ. ಅಭಿಷೇಕದ ನಂತರ, ವಿಗ್ರಹದ ಅಲಂಕಾರವನ್ನು ಮಾಡಿ. ನಂತರ ಹೂವುಗಳನ್ನು ದೇವರಿಗೆ ಅರ್ಪಿಸಿ. ಇದರ ನಂತರ, ಸುತ್ತಮುತ್ತಲಿನ ಋಣಾತ್ಮಕ ಶಕ್ತಿಯನ್ನು ತೆಗೆದುಹಾಕಲು ಧೂಪದ್ರವ್ಯವು ಹಾಕಿ. ನಂತರ, ದೀಪವನ್ನು ಬೆಳಗಿಸಿದ ನಂತರ, ಮಂತ್ರ ಪಠಿಸಿ ಮತ್ತು ಭೋಗ್ ಎಂದು ಕರೆಯಲ್ಪಡುವ ಪ್ರಸಾದವನ್ನು ದೇವರಿಗೆ ನೀಡಲಾಗುತ್ತದೆ.

ಆಲದ ಮರದ ಎಲೆ ಬಳಸಿ ಪರಿಹಾರ
ಈ ತಿಂಗಳಲ್ಲಿ ಯಾವುದೇ ಮಂಗಳವಾರ, ಒಂದು ಆಲದ ಮರದ ಎಲೆಯನ್ನು ತೆಗೆದುಕೊಂಡು ಅದನ್ನು ಶುದ್ಧ ನೀರಿನಿಂದ ತೊಳೆಯಿರಿ. ಈಗ ಅದನ್ನು ಸ್ವಲ್ಪ ಸಮಯದವರೆಗೆ ಹನುಮಾನ್ ವಿಗ್ರಹದ ಮುಂದೆ ಇರಿಸಿ. ಇದರ ನಂತರ, ನೀವು ಕೇಸರಿ ಪುಡಿ ಬಳಸಿ 'ಶ್ರೀ ರಾಮ್' ಎಂದು ಬರೆಯಬೇಕು, ಮತ್ತು ಅದನ್ನು ತಿಲಕ ಎಂದು ಹಚ್ಚಿಕೊಳ್ಳಿ. ಈ ಎಲೆಯನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿಕೊಳ್ಳಿ ಮತ್ತು ಮುಂದಿನ ದಿನ ನೀವು ಇದನ್ನು ಪುರನಾವರ್ತಿಸುವವರೆಗೆ ನಿಮ್ಮ ಪರ್ಸ್ ಖಾಲಿಯಾಗಿರುವುದಿಲ್ಲ. ಮುಂದಿನ ವರ್ಷದಲ್ಲಿ, ಇದನ್ನು ಹೊಸ ಎಲೆಯ ಮೂಲಕ ಪುನರಾವರ್ತಿಸಿ ಮತ್ತು ಹಳೆಯ ಎಲೆಗಳನ್ನು ನೀರಿನಲ್ಲಿ ಮುಳುಗಿಸಿ.

ದೇವಾಲಯದಲ್ಲಿ ರಾಮ ರಕ್ಷಾ ಸ್ತೋತ್ರ
ತಿಂಗಳಿನಲ್ಲಿ ಮಂಗಳವಾರ ಯಾವುದೇ ಹನುಮಾನ್ ದೇವಾಲಯಕ್ಕೆ ಹೋಗಿ ಅಲ್ಲಿ ರಾಮ್ ರಕ್ಷಾ ಸ್ತೋತ್ರವನ್ನು ಪಠಿಸಿ. ನಂತರ ಹನುಮಾನ್‌ಗೆ ಬೆಲ್ಲ ಮತ್ತು ಹುರಿದ ಧಾನ್ಯಗಳನ್ನು ಕೊಡಿ. ನೀವು ಜೀವನದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅವರನ್ನು ಪ್ರಾರ್ಥಿಸಿ ಫಲ ಖಂಡಿತ.

ಶಿವ ಚಾಲೀಸ ಮತ್ತು ಹನುಮಾನ್ ಚಾಲೀಸ
ಶ್ರಾವಣ ಮಾಸದ ಯಾವುದೇ ಮಂಗಳವಾರ ಶಿವ ಮತ್ತು ಹನುಮಂತನ ವಿಗ್ರಹವನ್ನು ಹೊಂದಿರುವ ದೇವಸ್ಥಾನಕ್ಕೆ ಹೋಗಿ. ತುಪ್ಪದ ದೀಪವನ್ನು ಹಚ್ಚಿ. ನಿಮ್ಮೊಂದಿಗೆ ತಂದಿರುವ ಪೂಜಾ ವಸ್ತುಗಳನ್ನು ದೇವರಿಗೆ ಅರ್ಪಿಸಿ. ನಂತರ ದೇವರುಗಳ ಮುಂದೆ ಕುಳಿತು ಶಿವ ಚಾಲೀಸ ಮತ್ತು ಹನುಮಾನ್ ಚಾಲೀಸವನ್ನು ಪಠಿಸಿ. ಹನುಮ ಮತ್ತು ಶಿವನ ಅನುಗ್ರಹ ನಿಮ್ಮ ಮೇಲಿರುತ್ತದೆ.

ಹನುಮಾನ ಚಾಲೀಸಾ ಮಂತ್ರ
ಜಯ ಹನುಮಾನ್ ಜ್ಞಾನ ಗುಣಸಾಗರ ! ಜಯ ಕಪೀಶ ತಿಹುಲೋಕ ವುಜಾಗರ
ರಾಮದೂತ ಆತುಲಿತ ಬಲಧಮಾ
ಅಂಜನೀಪ್ರತ್ರ- ಪವನಸುತ ನಾಮಾ
ಮಹಾವೀರ ವಿಕ್ರಮ ಬಜರಂಗೀ ಕುಮತಿ ನಿವಾರಾ ಸುಮತಿ ಕೇ ಸಂಗೀ
ಕಂಚನವರಣ ವಿರಾಜ ಸುವೇಶಾ ಕಾನನ ಕುಂಡಲ ಕುಂಚಿತ ಕೇಶಾ

ಹನುಮಂತನ ಮಂತ್ರ ಪಠಿಸಿ
ಮನೋಜವಂ ಮಾರುತತುಲ್ಯವೆಗಂ ಜಿತೇಂದ್ರಿಯಂ ಬುದ್ಧಿಮಾತಂ ವರಿಸ್ತಂ, ವಾತಾತಮಜಂ ವಾನರಾಯುಕ್ತಮುಖ್ಯಂ ಶ್ರೀರಾಮ ದೂತಂ ಸರನಾಮ ಪ್ರಪಾದಯೆ. ಪುರುಷರು ಈ ಮಂತ್ರವನ್ನು ಪಠಿಸಿ ಹನುಮಂತ ದೇವರನ್ನು ಪೂಜಿಸಬಹುದಾಗಿದೆ. ಸ್ನಾನ ಮಾಡಿದ ಬಳಿಕ ಅಥವಾ ರಾತ್ರಿ ವೇಳೆ ಈ ಮಂತ್ರವನ್ನು ಪಠಿಸಬಹುದು. ಮಧ್ಯರಾತ್ರಿ ವೇಳೆ ಹನುಮಂತನ ಪೂಜಿಸಿದರೆ ತುಂಬಾ ಒಳ್ಳೆಯದು, ಅಲ್ಲದೆ ಮಂಗಳವಾರದಂದು ಉಪವಾಸ ಮಾಡಿಕೊಂಡು ಹನುಮಂತ ದೇವರನ್ನು ಪ್ರಾರ್ಥಿಸಬಹುದು. ದಿನದಲ್ಲಿ ಒಂದು ಊಟವನ್ನು ಮಾಡಿ ಹನುಮಂತ ದೇವರ ಮಂತ್ರ ಅಥವಾ ಹನುಮಾನ್ ಚಾಲೀಸವನ್ನು ಪಠಿಸಬೇಕು. ಇನ್ನು ಹನುಮಂತ ದೇವರಿಗೆ ಸಿಹಿ ಇಷ್ಟವಾಗಿರುವ ಕಾರಣದಿಂದ ಕಡಲೆಹಿಟ್ಟಿನ ಲಾಡನ್ನು ಅರ್ಪಿಸಿ. ವಾನರಗಳಿಗೆ ಬಾಳೆಹಣ್ಣನ್ನು ಅರ್ಪಿಸಬಹುದು. ವಾನರಗಳು ಪತ್ತೆಯಾಗದೆ ಇದ್ದರೆ ಹನುಮಂತನ ಮೂರ್ತಿಗೆ ಬಾಳೆಹಣ್ಣನ್ನು ಅರ್ಪಿಸಿ. ಪುರುಷರು ಈ ಮೂಲಕ ಹನುಮಂತನನ್ನು ಪೂಜಿಸಬಹುದಾಗಿದೆ.



Click it and Unblock the Notifications











