Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು!
ಡಿ. 14ಕ್ಕೆ ಗೀತಾ ಜಯಂತಿ: ಏಕಾದಶಿಯಂದು ಬಂದಿರುವ ಈ ದಿನದ ಆಚರಣೆ ಹೇಗೆ?
ಡಿಸೆಂಬರ್ 14 ಗೀತಾ ಜಯಂತಿ. ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ದಿನವನ್ನು ಗೀತಾ ಜಯಂತಿ ಎಂದು ಆಚರಿಸಲ್ಪಡುತ್ತದೆ. ಮಾರ್ಗಶಿರ ಮಾಸದ ಶುಕ್ಲ ದಶಮಿ ಮತ್ತು ಏಕಾದಶಿ ಸೇರಿದ ದಿನದಂದು ಶ್ರೀ ಕೃಷ್ಣ ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನೆಂಬ ನಂಬಿಕೆಯಿದೆ. ಆದ್ದರಿಂದ ಈ ದಿನವನ್ನು ಗೀತಾ ಜಯಂತಿಯಾಗಿ ಆಚರಣೆ ಮಾಡಲಾಗುವುದು.
ಒಂದೇ ದಿನ ಏಕಾದಶಿ ವ್ರತ ಮತ್ತು ಗೀತಾ ಜಯಂತಿಯನ್ನು ಆಚರಿಸಲಾಗುವುದು. ಈ ದಿನದಂದು ನೀವು ಭಗವಾನ್ ಸತ್ಯನಾರಾಯಣ, ಭಗವಾನ್ ಕೃಷ್ಣ, ಭಗವಾನ್ ಶ್ರೀಹರಿಯನ್ನು ಆರಾಧಿಸುವ ಮೂಲಕ ದಿನದ ಲಾಭವನ್ನು ಪಡೆಯಬಹುದು.
ಗೀತಾ ಜಯಂತಿಯ ದಿನಾಂಕ, ಸಮಯ ಮತ್ತು ಮಹತ್ವದ ಬಗ್ಗೆ ಈ ಕೆಳಗೆ ನೋಡೋಣ:

ಗೀತಾ ಜಯಂತಿಯ ದಿನಾಂಕ:
ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯು ಡಿಸೆಂಬರ್ 13 ರಂದು ರಾತ್ರಿ 9.32 ಕ್ಕೆ ಪ್ರಾರಂಭವಾಗಿ, ಮರುದಿನ ಅಂದರೆ ಡಿಸೆಂಬರ್ 14 ರಂದು ರಾತ್ರಿ 11.35 ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ ಡಿಸೆಂಬರ್ 14 ರಂದು ದಿನವಿಡೀ ಶ್ರೀಕೃಷ್ಣನನ್ನು ಪೂಜಿಸಬಹುದು.

ಗೀತಾ ಜಯಂತಿಯ ಪ್ರಾಮುಖ್ಯತೆ:
ಹಿಂದೂ ಧರ್ಮದಲ್ಲಿ ಭಗವದ್ಗೀತೆಯನ್ನು ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ. ಜೀವನದ ಸಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ಈ ಗ್ರಂಥದಲ್ಲಿ 18 ಅಧ್ಯಾಯಗಳಿದ್ದು, ವ್ಯಕ್ತಿಯ ಜೀವನದ ಸಂಪೂರ್ಣ ಸಾರಾಂಶವನ್ನು ಹೇಳಲಾಗಿದೆ. ಜೊತೆಗೆ ಧಾರ್ಮಿಕ, ಕರ್ಮ, ಸಾಂಸ್ಕೃತಿಕ ಮತ್ತು ಪ್ರಾಯೋಗಿಕ ಜ್ಞಾನವನ್ನೂ ಇದರಲ್ಲಿ ನೀಡಲಾಗಿದೆ. ಈ ಪುಸ್ತಕವನ್ನು ಅಧ್ಯಯನ ಮತ್ತು ಅನುಸರಿಸುವುದರಿಂದ, ವ್ಯಕ್ತಿಯ ಜೀವನದ ದಿಕ್ಕು ಮತ್ತು ಸ್ಥಿತಿ ಎರಡನ್ನೂ ಬದಲಾಗಬಹುದು. ಇಂತಹ ಪವಿತ್ರ ಗ್ರಂಥ ಹುಟ್ಟಿಕೊಂಡ ದಿನವೇ ಈ ಗೀತಾ ಜಯಂತಿ. ಇದನ್ನು ಆಚರಣೆ ಮಾಡುವುದರಿಂದ, ಅದರ ಸೃಷಿಕರ್ತರಿಗೂ, ಆ ಕಾವ್ಯಕ್ಕೂ ಗೌರವ ಸಲ್ಲಿಸಿದಂತಾಗುವುದು.

ಗೀತಾ ಜಯಂತಿಯ ಆಚರಣೆ:
ಈ ದಿನವೂ ಮೋಕ್ಷದ ಏಕಾದಶಿ. ಆದ್ದರಿಂದ ಏಕಾದಶಿ ಉಪವಾಸವನ್ನು ಮಾಡುವ ಮೂಲಕ ಗೀತಾ ಜಯಂತಿಯನ್ನು ಆಚರಿಸಬಹುದು. ಇದಕ್ಕಾಗಿ, ದಶಮಿ ಅಂದರೆ ಡಿಸೆಂಬರ್ 13 ರಿಂದ ಘನ ಆಹಾರವನ್ನು ತ್ಯಜಿಸಿ. ಬ್ರಹ್ಮಚರ್ಯದ ನಿಯಮವನ್ನು ಅನುಸರಿಸಿ.
ಗೀತಾ ಜಯಂತಿಯ ದಿನದಂದು, ಬ್ರಾಹ್ಮಿ ಮುಹೂರ್ದಲ್ಲಿ ಎದ್ದು, ಭಗವಾನ್ ಶ್ರೀ ವಿಷ್ಣುವನ್ನು ಧ್ಯಾನಿಸುವ ಮೂಲಕ ಮತ್ತು ಸ್ಮರಿಸುವ ಮೂಲಕ ದಿನವನ್ನು ಪ್ರಾರಂಭಿಸಿ.
ನಂತರ, ಗಂಗಾಜಲವಿರುವ ನೀರಿನಿಂದ ಸ್ನಾನ ಮಾಡಿ. ಶುಭ್ರವಾದ ಬಟ್ಟೆಗಳನ್ನು ಧರಿಸಿ.
ಹಳದಿ ಹಣ್ಣುಗಳು, ಹೂವುಗಳು, ಧೂಪ-ದೀಪ, ಗರಿಕೆ ಇತ್ಯಾದಿಗಳಿಂದ ಭಗವಾನ್ ಶ್ರೀ ಹರಿ ವಿಷ್ಣುವನ್ನು ಪೂಜಿಸಿ.
ಸಾಕಷ್ಟು ಸಮಯವಿದ್ದರೆ, ಭಗವದ್ಗೀತೆಯನ್ನು ಪಠಿಸಿ.
ಕೊನೆಯಲ್ಲಿ, ಆರತಿ ಮಾಡುವ ಮೂಲಕ ಪೂಜೆಯನ್ನು ಪೂರ್ಣಗೊಳಿಸಿ.
ಇಡೀ ದಿನ ಉಪವಾಸವಿರಿ. ಅಗತ್ಯವಿದ್ದರೆ, ಒಂದು ಸಮಯದಲ್ಲಿ ನೀರು ಮತ್ತು ಒಂದು ಹಣ್ಣು ತೆಗೆದುಕೊಳ್ಳಬಹುದು.
ಸಂಜೆ, ಆರತಿ ಮತ್ತು ಪ್ರಾರ್ಥನೆಯ ನಂತರ, ಹಣ್ಣುಗಳನ್ನು ತಿನ್ನಿರಿ.
ಜೀವನದಲ್ಲಿ ಗೀತಾ ಬೋಧನೆಗಳನ್ನು ಅಳವಡಿಸಿಕೊಂಡರೆ, ಒಬ್ಬ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ.
ಇನ್ನೂ ಹಲವೆಡೆ ಸಭೆ-ಸಮಾರಂಭಗಳನ್ನು ಆಯೋಜಿಸಿ, ಅಲ್ಲಿ ಭಗವದ್ಗೀತೆಯ ಸಾರಾಂಶಗಳನ್ನು ಪಾರಾಯಣ ಮಾಡುವುದೂ ಇದೆ. ಈ ಮೂಲಕ ಗೌರವ ಸಲ್ಲಿಸಲಾಗುವುದು.



Click it and Unblock the Notifications