For Quick Alerts
ALLOW NOTIFICATIONS  
For Daily Alerts

ನಿಮ್ಮವರಿಗೆ ಈ ರೀತಿಯ ಉಡುಗೊರೆ ಅಪ್ಪಿತಪ್ಪಿಯೂ ನೀಡಬೇಡಿ!

By Divya
|

ಶುಭ ಸಮಾರಂಭಗಳಲ್ಲಿ ಉಡುಗೊರೆ ನೀಡಿ ಶುಭ ಕೋರುವುದು ಪುರಾತನ ಕಾಲದಿಂದಲೂ ರೂಢಿಯಲ್ಲಿರುವ ಒಂದು ಸಂಪ್ರದಾಯ. ಮೊದಲು ಕೇವಲ ಮದುವೆ ಹಾಗೂ ಮಗುವಿನ ನಾಮಕರಣದ ಸಂದರ್ಭದಲ್ಲಿ ಉಡುಗೊರೆ ನೀಡಲಾಗುತ್ತಿತ್ತು. ಆಧುನಿಕತೆ ಬೆಳೆದಂತೆ ಜನ್ಮದಿನಗಳು, ಗೃಹಪ್ರವೇಶ, ವಿವಾಹ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಅಂಗವಾಗಿ ಉಡುಗೊರೆ ನೀಡುವುದು ಮತ್ತು ಸ್ವೀಕರಿಸುವುದು ಸಾಮಾನ್ಯವಾಗಿದೆ.

ಹೀಗೆ ನಮಗೆ ಬೇಕೆನಿಸಿದಾಗ ನೀಡುವ ಉಡುಗೊರೆಯಿಂದ ಸ್ವೀಕರಿಸುವವರ ಮುಖದಲ್ಲಿ ಖುಷಿಯ ನಗು ಕಂಡಾಗ ನಮಗೆ ಸಾರ್ಥಕ ಭಾವ ಮೂಡುವುದು ಸಹಜ. ನಾವು ನೀಡುವ ಉಡುಗೊರೆಯು ವಾಸ್ತು ಶಾಸ್ತ್ರವನ್ನು ಅವಲಂಭಿಸಿರುತ್ತದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಯಾವ ಉಡುಗೊರೆ ನೀಡಿದರೆ ಸೂಕ್ತ ಎನ್ನುವುದರ ಕುರಿತು ಸಾಕಷ್ಟು ಯೋಚನೆಯನ್ನು ಮಾಡಿರುತ್ತೇವೆ. ಅವನು/ಅವಳಿಗೆ ಯಾವ ಬಗೆಯ ಉಡುಗೊರೆ ನೀಡಿದರೆ ಇಷ್ಟವಾಗಬಲ್ಲದು? ಎನ್ನುವುದನ್ನು ಆಧರಿಸಿ ನೀಡಿರುತ್ತೇವೆ.

ಉಡುಗೊರೆಯು ಕೇವಲ ಪ್ರೀತಿ ಮತ್ತು ಆರೈಕೆಯ ವಿನಿಮಯಕ್ಕೆ ಸೀಮಿತವಾಗಿಲ್ಲ. ಇದು ನೀಡುವವರ ಮತ್ತು ಸ್ವೀಕರಿಸುವವರ ಮನಃಸ್ಥಿತಿಯನ್ನು ಅವಲಂಬಿಸಿ, ಸಕಾರಾತ್ಮಕ ಮತ್ತು ಋಣಾತ್ಮಕ ಶಕ್ತಿಯು ವಿನಿಮಯವಾಗುತ್ತದೆ. ಹಾಗಾಗಿ ನಮ್ಮ ಪ್ರೀತಿ ಪಾತ್ರರಿಗೆ ನೀಡುವ ಉಡುಗೊರೆಯು ಹೆಚ್ಚು ಖುಷಿಯನ್ನು ನೀಡಬೇಕು ಹಾಗೂ ಒಳಿತಾಗಬೇಕೆನ್ನುವುದಾದರೆ ಈ ಕೆಳಗಿನ ಮಾಹಿತಿಯನ್ನು ಓದಿ ಉಡುಗೊರೆ ನೀಡಿ...

ಟವೆಲ್ ಮತ್ತು ಕರವಸ್ತ್ರ

ಟವೆಲ್ ಮತ್ತು ಕರವಸ್ತ್ರ

ಕೆಲವು ಪ್ರದೇಶದಲ್ಲಿ ಟವೆಲ್ ಮತ್ತು ಕರವಸ್ತ್ರವನ್ನು ಉಡುಗೊರೆಯಾಗಿ ನೀಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ಎಂದಿಗೂ ಉಡುಗೊರೆಯಾಗಿ ನೀಡಬಾರದು. ಇದರಿಂದ ನೀಡಿದ ಮತ್ತು ಸ್ವೀಕರಿಸಿದ ವ್ಯಕ್ತಿಗಳ ನಡುವೆ ಬಿರುಕು ಉಂಟಾಗುತ್ತದೆ. ಹಾಗೊಮ್ಮೆ ಯಾರಾದರೂ ನಿಮಗೆ ಈ ವಸ್ತುಗಳನ್ನು ಉಡುಗೊರೆಯಾಗಿ ನೀಡಿದರೆ ಅದಕ್ಕೆ ಪ್ರತಿಯಾಗಿ ಒಂದು ನಾಣ್ಯವನ್ನು ಅವರಿಗೆ ನೀಡಿ.

ನೀರಿನ ಅಕ್ವೇರಿಯಂ

ನೀರಿನ ಅಕ್ವೇರಿಯಂ

ಮೀನು ಬಟ್ಟಲು ಮತ್ತು ಕಾರಂಜಿಯ ವಸ್ತುಗಳನ್ನು ಅನೇಕರು ಉಡುಗೊರೆಯನ್ನಾಗಿ ನೀಡುತ್ತಾರೆ. ಇದನ್ನು ನೀಡುವುದರಿಂದ ನಿಮ್ಮ ಉತ್ತಮ ಅದೃಷ್ಟವು ಪಡೆಯುವವರ ಪಾಲಾಗುತ್ತದೆ. ಜೊತೆಗೆ ಹಣಕಾಸಿನ ವಿಚಾರದಲ್ಲಿ ನಷ್ಟಗಳನ್ನು ಅನುಭವಿಸಬೇಕಾಗುವುದು.

ದೇವರ ಚಿತ್ರ ಮತ್ತು ಮೂರ್ತಿಗಳು

ದೇವರ ಚಿತ್ರ ಮತ್ತು ಮೂರ್ತಿಗಳು

ಮದುವೆ, ಗೃಹಪ್ರವೇಶ ಸೇರಿದಂತೆ ಅನೇಕ ಶುಭ ಸಂದರ್ಭದಲ್ಲಿ ದೇವರ ಚಿತ್ರಪಟ ಮತ್ತು ಮೂರ್ತಿಗಳನ್ನು ಉಡುಗೊರೆಯನ್ನಾಗಿ ನೀಡುತ್ತಾರೆ. ಇದು ಮಂಗಳಕರ ಉಡುಗೊರೆಯಾದರೂ ಅಷ್ಟು ಒಳ್ಳೆಯದಲ್ಲ. ಈ ಉಡುಗೊರೆಯನ್ನು ನೀಡಿದಾಗ ಪಡೆದವರು ಅದನ್ನು ಸರಿಯಾದ ರೀತಿಯಲ್ಲಿ ಜೋಪಾನ ಮಾಡಬೇಕು. ಅವು ವಿಘ್ನವಾದರೆ ನೀಡಿದವರಿಗೆ ಹಾಗೂ ಪಡೆದವರಿಗೆ ಕೆಟ್ಟದ್ದಾಗುವುದು. ಈ ಉಡುಗೊರೆಯನ್ನು ನೀಡಿದಾಗ ಅದರ ನಿರ್ವಹಣೆಯನ್ನು ಸೂಕ್ತ ಕ್ರಮದಲ್ಲಿ ನೋಡಿಕೊಳ್ಳುವಂತೆ ಸೂಚನೆ ನೀಡಿಯೇ ಉಡುಗೊರೆ ನೀಡಿ.

ಕೆಲಸ ಸಂಬಂಧಿತ ವಸ್ತುಗಳು

ಕೆಲಸ ಸಂಬಂಧಿತ ವಸ್ತುಗಳು

ನಮ್ಮ ಕೆಲಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು. ಹೀಗೆ ಮಾಡುವುದರಿಂದ ನಮ್ಮ ಕೆಲಸದ ಅವನತಿ ಉಂಟಾಗುತ್ತದೆ. ಉದಾ: ಲೇಖಕರಾಗಿದ್ದರೆ ಪೆನ್ನು, ಪುಸ್ತಕದಂತಹ ಉಡುಗೊರೆಯನ್ನು ನೀಡಬಾರದು. ಹೀಗೆ ಇತರ ಉದ್ಯಮಗಳಿಗೂ ಇದು ಅನ್ವಯಿಸುತ್ತದೆ.

ಚೂಪಾದ ವಸ್ತುಗಳು

ಚೂಪಾದ ವಸ್ತುಗಳು

ಅಡುಗೆ ಮನೆಗೆ ಅಗತ್ಯವಿರುವ ಚಾಕೂ, ಸ್ಲೈಸರ್, ಕಟರ್‍ಗಳಂತ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು. ಇವು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತವೆ. ಜೊತೆಗೆ ಉಡುಗೊರೆ ನೀಡಿದ ನಂತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಅಲ್ಲದೆ ಸಂಬಂಧಗಳಲ್ಲಿ ಸಮಸ್ಯೆಗಳು ಉಂಟಾಗುವವು.


English summary

Gifts That Should Not Be Given According To Vastu Shastra

It is important to keep the rules of Vaastu Shastra in mind when you are out to select a gift for your friend. To help you choose the best gift for your near and dear ones, we have compiled a list of things that should never be gifted you should gift. Read on for more details.
X
Desktop Bottom Promotion