Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಫೆ.4ಕ್ಕೆ ಗಣೇಶ ಜಯಂತಿ: ಮನೆಯಲ್ಲಿ ಯಾವ ಬಗೆಯ ಗಣೇಶನ ಪೂಜಿಸಬೇಕು?
ಫೆಬ್ರವರಿ 4ಕ್ಕೆ ಗಣೇಶ ಜಯಂತಿಯನ್ನು ಆಚರಿಸಲಾಗುತ್ತಿದೆ. ಮಾಘ ಮಾಸದ ಶುಕ್ಲ ಪಕ್ಷದಂದು ಗಣೇಶ ಜನಿಸಿದ ಎಂದು ಪೌರಾಣಿಕ ಕತೆ ಹೇಳುತ್ತದೆ.

ಮಾಘಿ ಗಣಪತಿ, ಮಾಘ ಶುಕ್ಲ ಚತುರ್ಥಿ, ವರದ ಚತುರ್ಥಿ ಹೀಗೆ ಗಣೇಶ ಜಯಂತಿಯನ್ನು ಹಲವು ನಾಮಗಳಿಂದ ಆಚರಿಸಲಾಗುವುದು. ಗಣೇಶ ಜಯಂತಿಯ ದಿನದಂದು ಭಕ್ತರು ಉಪವಾಸವಿದ್ದು ಗಣೇಶನ ಮಂತ್ರಗಳನ್ನು ಹೇಳುತ್ತಾ ಪೂಜೆ ಸಲ್ಲಿಸುತ್ತಾರೆ. ಗಣೇಶನ ಆರಾಧನೆ ಮಾಡಿದರೆ ಇಷ್ಟಾರ್ಥಗಳು ನೆರವಾಗುವುದು.

ಗಣೇಶ ಜಯಂತಿ 2022: ತಿಥಿ ಹಾಗೂ ಪೂಜೆಗೆ ಮುಹೂರ್ತ ಸಮಯ
ದಿನಾಂಕ: ಫೆಬ್ರವರಿ4
ಗಣೇಶ ಪೂಜೆಗೆ ಮಹೂರ್ತ: ಬೆಳಗ್ಗೆ 11:44ರಿಂದ ಮಧ್ಯಾಹ್ನ 12:01ರವರೆಗೆ
ಚತುರ್ಥಿ ತಿಥಿ ಪ್ರಾರಂಭ: ಫೆಬ್ರವರಿ 4 ಬೆಳಗ್ಗೆ 04:38ಕ್ಕೆ
ಚತುರ್ಥಿ ತಿಥಿ ಮುಕ್ತಾಯ: ಫೆಬ್ರವರಿ 5 ಮುಂಜಾನೆ 03:47ಕ್ಕೆ

ಮನೆಯಲ್ಲಿ ಯಾವ ಬಗೆಯ ಗಣೇಶನ ಪೂಜಿಸಬೇಕು?
ಗಣೇಶನ ಆರಾಧನೆ ಮಾಡುವುದರಿಂದ ಅವನು ಬದುಕಿನಲ್ಲಿ ಎದುರಾಗುವ ಎಲ್ಲಾ ವಿಘ್ನಗಳನ್ನು ಓಡಿಸುತ್ತಾನೆ ಎಂಬುವುದನ್ನು ಭಕ್ತರು ಬಲವಾಗಿ ನಂಬುತ್ತಾರೆ. ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ ಮಾಡುವ ಮುನ್ನ ಗಣೇಶನಿಗೆ ಪೂಜೆ ಸಲ್ಲಿಕೆಯಾಗಲೇಬೇಕು. ಗಣೇಶನ ಪೂಜಿಸಿದರೆ ಎಲ್ಲಾ ವಿಘ್ನಗಳು ನಿವಾರಣೆಯಾಗುವುದು, ಸಂಕಲ್ಪ ನೆರವಾಗುವುದು. ಜನರು ಹಲವಾರು ಬಗೆಯ ಗಣೇಶನ ಮೂರ್ತಿಗಳನ್ನು ಪೂಜಿಸುತ್ತಾರೆ. ಮನೆಯಲ್ಲಿ ಪೂಜೆಗೆ ಯಾವ ಗಣೇಶನ ಇಟ್ಟು ಪೂಜಿಸುವುದು ಒಳ್ಳೆಯದು ಎಂದು ನೋಡುವುದಾದರೆ

ಶ್ವೇತಾರ್ಕ ಗಣಪತಿ-
ಆಕ ಗಿಡದ ಬೇರಿನಿಂದ ತಯಾರಿಸಿದ ಶ್ವೇತಾರ್ಕ ಗಣಪತಿಯನ್ನು ಪೂಜಿಸುವುದರಿಂದ ಯಾವುದೇ ರೀತಿಯ ವಾಮಾಚಾರ, ನೇತ್ರ ದೋಷ ಇತ್ಯಾದಿ ಭಯ ನಿವಾರಣೆಯಾಗುವುದು.

ಪರದ ಗಣೇಶ -
ಪಾದರಸದಿಂದ ಮಾಡಿದ ಗಣೇಶನ ಪೂಜೆಯನ್ನು ಸಹ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪರದ ಗಣೇಶನನ್ನು ಪೂಜಿಸುವುದರಿಂದ ಯಾವುದೇ ಅಡ್ಡಿಗಳಿರುವುದಿಲ್ಲ, ಜೀವನದಲ್ಲಿ ಸಂತೋಷ ಸಿಗುತ್ತದೆ ಎಂದು ನಂಬಲಾಗಿದೆ.

ಬೆಳ್ಳಿ ಗಣಪತಿ
ಶಾಸ್ತ್ರಗಳ ಪ್ರಕಾರ, ಬೆಳ್ಳಿಯಿಂದ ಮಾಡಿದ ಗಣಪತಿಯ ವಿಗ್ರಹವನ್ನು ಪೂಜಿಸುವುದರಿಂದ ಸಂಪತ್ತು, ಆಹಾರಕ್ಕೆ ಕೊರತೆ ಇರುವುದಿಲ್ಲ, ಮನೆಯಲ್ಲಿ ಸಂತೋಷಕ್ಕೆ ಕೊರತೆಯಿಲ್ಲ.

ಶ್ರೀಗಂಧದ ಗಣಪತಿ
ಶ್ರೀಗಂಧದ ಗಣಪತಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಪ್ರೀತಿ ಮತ್ತು ಸಾಮರಸ್ಯ ಇರುತ್ತದೆ.

ಹವಳದ ಗಣಪತಿ
ಸಿಂಧೂರ ಹವಳದಿಂದ ಮಾಡಿದ ಗಣೇಶನನ್ನು ಪೂಜಿಸುವುದರಿಂದ ಗೊತ್ತಿರುವ ಮತ್ತು ಅಪರಿಚಿತ ಶತ್ರುಗಳ ಭಯ ದೂರವಾಗುತ್ತದೆ ಎಂದು ನಂಬಲಾಗಿದೆ. ಅಲ್ಲದೆ ಗಣಪತಿಯ ಕೃಪೆಯಿಂದ ನಿರ್ಭೀತರಾಗಿ ಸುಖ ಜೀವನ ನಡೆಸಬಹುದು

ಪನ್ನದ ಗಣೇಶ
ಪಚ್ಚೆ ರತ್ನದಿಂದ ಮಾಡಿದ ಗಣಪತಿಯನ್ನು ಪೂಜಿಸುವುದರಿಂದ ಬುದ್ಧಿವಂತಿಕೆ ಮತ್ತು ವಿದ್ಯೆಯ ಆಶೀರ್ವಾದ ಸಿಗುತ್ತದೆ. ಅದೇ ಸಮಯದಲ್ಲಿ, ಪರೀಕ್ಷೆ ಮತ್ತು ಸ್ಪರ್ಧೆಯಲ್ಲಿ ಯಶಸ್ಸು ಸಿಗುವುದು.



Click it and Unblock the Notifications
