Latest Updates
-
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ -
ಮಳೆಗಾಲದಲ್ಲೂ ಬಾಡದ ಹೂವುಗಳು: ಶ್ರಾವಣ ಸೋಮವಾರದ ಪೂಜೆಗೆ ಸುಲಭ ಮತ್ತು ಪರಿಸರ ಸ್ನೇಹಿ ಅಲಂಕಾರ ಐಡಿಯಾಗಳು -
ಕಾಮಿಕಾ ಏಕಾದಶಿ 2026: ಉಪವಾಸದ ವೇಳೆ ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ, ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ -
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ! -
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ
ಹನುಮದೇವರ ಅನುಗ್ರಹ ಪಡೆಯಲು ಮಂಗಳವಾರ ಉಪವಾಸ ಅನುಸರಿಸಿ
ಹನುಮಂತ, ಬಜರಂಗಬಲಿ, ಅಂಜನಿ ಪುತ್ರ, ಮಾರುತಿ ಎಂಬ ಹೆಸರುಗಳಿಂದ ಕರೆಯಲ್ಪಡುವ ಹನುಮದೇವರಿಗೆ ಮೀಸಲಾದ ದಿನವೆಂದರೆ ಮಂಗಳವಾರ. ದುಷ್ಟರನ್ನು ನಿವಾರಿಸುವ ದೇವರು ಎಂದೂ ಆತನನ್ನು ಕರೆಯಲಾಗುತ್ತದೆ.
ಹನುಮದೇವರ ಅನುಗ್ರಹವನ್ನು ಪಡೆಯಲು ಭಕ್ತರು ಮಂಗಳವಾರದಂದು ಉಪವಾಸ ಆಚರಿಸುತ್ತಾರೆ. ಈ ಉಪವಾಸದ ಅವಧಿ ಸೂರ್ಯೋದಯ ದಿಂದ ಸೂರ್ಯಾಸ್ತದವರೆಗೆ ಇರುತ್ತದೆ. ಸೂರ್ಯೋದಯಕ್ಕೂ ಮುನ್ನ ಎದ್ದು ತಣ್ಣೀರಿನಲ್ಲಿ ಮಿಂದು ಗಣೇಶನನ್ನು ಪೂಜಿಸಿದ ಬಳಿಕ ಹನುಮದೇವರನ್ನೂ ಪೂಜಿಸಬೇಕು. ಈ ದಿನದಂದು ಕೆಂಪು ಬಣ್ಣದ ದಿರಿಸನ್ನು ತೊಡಬೇಕು ಹಾಗೂ ದಿನದ ಎಲ್ಲಾ ಪೂಜೆಗಳಲ್ಲಿ ದೇವರಿಗೆ ಕೆಂಪು ಹೂವುಗಳನ್ನು ಅರ್ಪಿಸಬೇಕು.

ಈ ದಿನದ ಅವಧಿಯಲ್ಲಿ ಆದಷ್ಟೂ ಮಟ್ಟಿಗೆ ಹನುಮಾನ್ ಚಾಲೀಸಾ ಹಾಗೂ ಮಂಗಲ್ವಾರ್ ವ್ರತ್ ಕಥಾ ವನ್ನು ಪಠಿಸಬೇಕು. ಜೊತೆಗೇ ಸಂಕಟಮೋಚನ ಹನುಮಾನ್ ಅಷ್ಠಕ್ ಸಹಾ ಓದಬೇಕು .ಸಂಜೆಯ ಹೊತ್ತಿನಲ್ಲಿ ಹನುಮದೇವರನ್ನು ಪೂಜಿಸಿದ ಬಳಿಕ ಒಂದು ಹೊತ್ತಿನ ಆಹಾರವನ್ನು ಸೇವಿಸಬಹುದು. ಆದರೆ ಈ ಆಹಾರದಲ್ಲಿ ಕೇವಲ ಬೆಲ್ಲ ಹಾಗೂ ಗೋದಿ ಇರಬೇಕು, ಯಾವುದೇ ಕಾರಣಕ್ಕೂ ಇದರಲ್ಲಿ ಉಪ್ಪು ಇರಬಾರದು.
ಈ ಉಪವಾಸವನ್ನು ಅನುಸರಿಸುವ ಉದ್ದೇಶಗಳಲ್ಲಿ ಪ್ರಮುಖವಾಗಿ ಶಕ್ತಿಯನ್ನು ಪಡೆಯಲು, ವಿರೋಧಿಗಳ ವಿರುದ್ದ ಜಯ ಸಾಧಿಸಲು, ದಾವೆಗಳಲ್ಲಿ ಜಯಗಳಿಸಲು, ಆರೋಗ್ಯ ಉತ್ತಮಗೊಳ್ಳಲು, ದುಷ್ಟಶಕ್ತಿಯ ಹೆದರಿಕೆಯನ್ನು ಹೋಗಲಾಡಿಸಲು ಹಾಗೂ ಮಂಗಳ ಗ್ರಹದ ಅವಗಾಹನೆಯ ದುಷ್ಪರಿಣಾಮಗಳಿಂದ ರಕ್ಷಣೆ ಪಡೆಯುವುದಾಗಿವೆ. ವಾಸ್ತವವಾಗಿ, ಮಂಗಳ ಗ್ರಹದ ಹೆಸರಿನಿಂದಲೇ ಮಂಗಳವಾರದ ಹೆಸರು ಬಂದಿದ್ದು ಈ ದಿನ ಆಚರಿಸಲ್ಪಡುವ ಉಪವಾಸಕ್ಕೆ ಮಂಗಲ್ವಾರ್ ವ್ರತ್ ಎಂದು ಕರೆಯುತ್ತಾರೆ. ಎರಡನೆಯದಾಗಿ, ಪುತ್ರನನ್ನು ಪಡೆಯುವ ಅಭೀಷ್ಠೆಯುಳ್ಳ ದಂಪತಿಗಳು ಜೊತೆಯಾಗಿ ಈ ಉಪವಾಸವನ್ನು ಆಚರಿಸಬೇಕು.
ಅತ್ಯುತ್ತಮ ಪರಿಣಾಮವನ್ನು ಪಡೆಯಲು ಈ ಉಪವಾಸವನ್ನು ಸತತ ಇಪ್ಪತ್ತೊಂದು ವಾರಗಳವರೆಗೆ ಅನುಸರಿಸಬೇಕು. ಅಲ್ಲದೇ ಜೀವದಲ್ಲಿ ಎದುರಾಗುವ ಅಡ್ಡಿಗಳನ್ನು ಎದುರಿಸಿ ಯಶಸ್ವಿಯಾಗಲು, ಶಕ್ತಿ ಗಳಿಸಲು, ಸಾಮರ್ಥ್ಯ ಹಾಗೂ ಪ್ರಭಾವಗಳನ್ನು ಪಡೆಯಲು ಈ ಉಪವಾಸದ ಅವಧಿಯಲ್ಲಿ ಹನುಮದೇವರ ಬೀಜಮಂತ್ರವನ್ನು ಪಠಿಸಬೇಕು.
ಓಂ ಈಂ ಭ್ರೀಂ ಹನುಮತೇ, ಶ್ರೀ ರಾಮದೂತಯೇ ನಮಃ
ಇದರೊಂದಿಗೆ ಇತರ ಮಂತ್ರಗಳನ್ನೂ ಜಪಿಸಬಹುದು:
"ಓಂ ಶ್ರೀ ಹನುಮತೇ ನಮಃ"
ಅಥವಾ
"ಹಂಗ್ ಪವನ್ ನಂದನಾಯೇ ಸ್ವಾಹಾ"
ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅತ್ಯುತ್ತಮ.
ಒಂದು ವೇಳೆ ಯಾವುದೋ ಖಾಯಿಲೆಗೆ ಒಳಗಾಗಿದ್ದರೆ ಅಥವಾ ದುಷ್ಟಶಕ್ತಿಗಳಿಂದ ವಿಮೋಚನೆ ಪಡೆಯಬೇಕಾಗಿದ್ದರೆ ಅಥವಾ ವಿಕ್ಷುಬ್ದತೆ ಎದುರಾಗಿದ್ದರೆ ಈ ಉಪವಾಸದ ಅವಧಿಯಲ್ಲಿ ಕೆಳಗಿನ ಹನುಮಾನ್ ಮಂತ್ರವನ್ನು 21000 ಬಾರಿ ಪಠಿಸಬೇಕು.
" ಓಂ ನಮೋ ಭಗವಾತೆ ಆಂಜನೇಯಾಯಃ ಮಹಾಬಲಾಯಃ ಸ್ವಾಹಾ"
ಈ ಮಂತ್ರವನ್ನು ನಿಯಮಿತವಾಗಿ ಪಠಿಸುತ್ತಿರುವ ವ್ಯಕ್ತಿಗಳಿಗೆ ಯಾವುದೇ ಬಗೆಯ ದುಷ್ಟಶಕ್ತಿ, ಆತ್ಮ ಅಥವಾ ದೆವ್ವಗಳ ಕಾಟ ಎದುರಾಗುವುದಿಲ್ಲ ಎಂದು ನಂಬಲಾಗಿದೆ. ಹಾಗೂ ಈ ವ್ಯಕ್ತಿಗಳು ಅವರ ವೈರಿಗಳಿಂದ ರಕ್ಷಣೆ ಪಡೆಯುತ್ತಾರೆ. ಅಲ್ಲದೇ ವಿಶೇಷವಾಗಿ ಮಕ್ಕಳಿಗೆ ಎದುರಾಗುವ ದುಃಸ್ವಪ್ನ ಹಾಗೂ ಭಯಬೀತರಾಗುವ ಯೋಚನೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ. ಅಲ್ಲದೇ ವಿಶೇಷವಾಗಿ ಸಾಡೆ ಸಾತಿ ಎಂಬ ಭೀಕರ ದುಷ್ಪರಿಣಾಮದಿಂದ ಎದುರಾಗುವ ತೊಂದರೆಗಳಿಂದ ಹೊರಬರಲು ನೆರವಾಗುತ್ತದೆ. ಒಂದು ವೇಳೆ ಹನುಮ ದೇವರನ್ನು ಭಕ್ತಿಯಿಂದ ಹಾಗೂ ಸ್ವಚ್ಛ ಹೃದಯದಿಂದ ಪ್ರಾರ್ಥಿಸಿದರೆ ತನ್ನ ಭಕ್ತನ ನೆರವಿಗೆ ಹನುಮದೇವರು ಖಂಡಿತಾ ಬರುತ್ತಾನೆ ಎಂದು ಭಕ್ತರು ನಂಬುತ್ತಾರೆ.



Click it and Unblock the Notifications

