Latest Updates
-
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ
ಕಷ್ಟಗಳಿಂದ ಮುಕ್ತಿ ಪಡೆಯಲು ಗುರುವಾರ ವಿಷ್ಣುವಿನ ಪೂಜೆ ಮಾಡಿ

ಹರಿಯುವ ನೀರಿನಂತೆ ಇರುವ ಜೀವನದಲ್ಲಿ ಕಷ್ಟಗಳೆಂಬ ತೊಡರು ಬಂದಾಗ ಜೀವನ ಅಲ್ಲೋಲ ಕಲ್ಲೋಲವಾಗುತ್ತದೆ. ಮನುಷ್ಯನ ಜೀವನದಲ್ಲಿ ಕಷ್ಟ ಬರುವುದು ಸಹಜವೇ ಆದರೆ ಅದನ್ನು ಎದುರಿಸುವ ಸಾಮರ್ಥ್ಯ ಮತ್ತು ತಾಕತ್ತನ್ನು ನಾವು ಭಗವಂತನಿಂದ ಪಡೆದುಕೊಳ್ಳಬೇಕು. ಇದಕ್ಕಾಗಿ ಭಗವಂತನನ್ನು ಪ್ರಾರ್ಥಿಸುವುದು ಮತ್ತು ಅನವರತ ಅವರನ್ನು ಪೂಜಿಸುವುದನ್ನು ನಾವು ಮಾಡಬೇಕಾಗುತ್ತದೆ.
ಇಂದಿನ ಲೇಖನದಲ್ಲಿ ಭಗವಂತನನ್ನು ನೆನೆದು ಕಷ್ಟಗಳೆಂಬ ಕಾರ್ಮೋಡವನ್ನು ಕರಗಿಸುವ ಕೆಲವೊಂದು ಸಲಹೆಗಳೊಂದಿಗೆ ನಾವು ಬಂದಿದ್ದು ಇದರಿಂದ ನೀವು ಶಕ್ತಿ ಪಡೆದುಕೊಳ್ಳುವುದು ಖಂಡಿತ. ಭಗವಂತ ನಿಮ್ಮೊಡನೆ ಇದ್ದಾರೆ ಎಂದಾದಲ್ಲಿ ಅಸಾಧ್ಯ ಕಷ್ಟವೆಂಬುದು ಯಾವುದೂ ಇಲ್ಲ ಎಂದಾಗಿದೆ. ಅವರ ಆಶಿರ್ವಾದದಿಂದ ಕಷ್ಟವನ್ನು ನಿರಾಯಾಸವಾಗಿ ಪಾರು ಮಾಡಬಹುದಾಗಿದೆ. ಪುರಾಣದಲ್ಲಿರುವ ಕಥೆಯನ್ನು ನಾವು ನೋಡಿದಾಗ ಪ್ರಹ್ಲಾದನನ್ನು ಶ್ರೀ ಹರಿಯು ಬೆಂಕಿಯಿಂದ, ಹಾವುಗಳಿಂದ, ವಿಷದಿಂದ ಸಂರಕ್ಷಿಸುತ್ತಾರೆ
ಆತನ ಕೃಪೆಯಿಂದಲೇ ಮೀರಾದೇವಿಯು ವಿಷದಿಂದ ರಕ್ಷಣೆಯನ್ನು ಪಡೆದುಕೊಳ್ಳುತ್ತಾರೆ ಇದು ಕೆಲವೊಂದು ಉದಾಹರಣೆಗಳಾಗಿದ್ದು ಇದರಿಂದ ತಿಳಿದು ಬರುವ ಅಂಶವೆಂದರೆ ಭಗವಂತನನ್ನು ನೆನೆದರೆ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತವೆ ಎಂದಾಗಿದೆ. ಹುಟ್ಟಿಸಿದ ದೇವರು ಹುಲ್ಲು ತಿನ್ನಿಸುವುದಿಲ್ಲ ಎಂಬ ಮಾತಿನಂತೆಯೇ ಸುಪ್ರೀಮ್ ಪವರ್ ಎಂದೇ ಕರೆಯಿಸಿಕೊಳ್ಳುವ ಭಗವಂತ ತನ್ನ ಮಗು ಕಷ್ಟದಿಂದ ಬಳಲುವುದನ್ನು ಖಂಡಿತ ಸಹಿಸಲಾರರು.
ಜೀವನದಲ್ಲಿ ಹತಾಶೆಯನ್ನು ಪಡೆದುಕೊಂಡವರ ಬದುಕಿನಲ್ಲಿ ದೇವರು ತಮ್ಮ ಮಾಯಾಜಾಲವನ್ನು ತೋರಿಸುತ್ತಾರೆ. ಅವರನ್ನು ಕೈಹಿಡಿದು ಮೇಲಕ್ಕೆ ಎಬ್ಬಿಸುತ್ತಾರೆ. ಪ್ರತಿಯೊಂದನ್ನು ಬದಲಾಯಿಸುವ ಶಕ್ತಿ ಸಾಮರ್ಥ್ಯ ಅವರಿಗಿದೆ. ದೇವರಲ್ಲಿ ನಂಬಿಕೆಯನ್ನಿಟ್ಟು ಅವರನ್ನು ಭಕ್ತಿಯಿಂದ ಪೂಜಿಸಿ. ಇದರಿಂದ ನಿಮ್ಮ ಗುರಿಯನ್ನು ಮುಟ್ಟಲು ದೇವರು ಸಹಾಯ ಮಾಡುತ್ತಾರೆ. ಅದರಂತೆಯೇ ಸಕಲವನ್ನೂ ನಿಮ್ಮ ಜೀವನದಲ್ಲಿ ಪಡೆದುಕೊಳ್ಳುತ್ತೀರಿ ಕೂಡ. ದೇವರನ್ನು ಭಕ್ತಿಯಿಂದ ನೆನೆಯಲು ಗುರುವಾರ ಪ್ರಶಸ್ತವಾಗಿದೆ. ಈ ದಿನದಂದು ಭಗವಾನ್ ವಿಷ್ಣುವು ತನ್ನ ಭಕ್ತರನ್ನು ಸಲಹುತ್ತಾರೆ ಎಂದಾಗಿದೆ. ಅವರು ರಕ್ಷಕನಾಗಿದ್ದು, ಪೋಷಕರಾಗಿದ್ದಾರೆ. ಈ ದಿನ ವಿಷ್ಣುವನ್ನು ನೆನೆದರೆ ಭಗವಂತ ಯಾವ ರೀತಿಯ ಕಷ್ಟಗಳನ್ನು ದೂರ ಮಾಡುತ್ತಾರೆ ಎಂಬುದನ್ನು ನೋಡೋಣ....

ಗೃಹ ದೋಷ
ಗುರುವಾರದಂದು ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ಉತ್ತಮ ಅದೃಷ್ಟ ಒಳ್ಳೆಯ ಆರೋಗ್ಯ ಮತ್ತು ಧನ ಲಾಭ ಉಂಟಾಗುತ್ತದೆ. ನಕ್ಷತ್ರಗಳ ಸ್ಥಿತಿಗತಿಯಿಂದ ಗೃಹದೋಷದಂತಹ ಸಮಸ್ಯೆ ಕಾಡುತ್ತದೆ. ಗುರುವಾರದಂದು ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ಗೃಹದೋಷ ನಿವಾರಣೆಯಾಗುತ್ತದೆ.

ಗೃಹ ದೋಷಬ್ರಹ್ಮ ಮುಹೂರ್ತದಲ್ಲಿ ಏಳುವುದು
ಸೂರ್ಯೋದಯಕ್ಕಿಂತ ಮುನ್ನ ಏಳುವುದು ಸೂಕ್ತವೆಂದು ಪುರಾಣದಲ್ಲಿ ಹೇಳಲಾಗಿದೆ. ರಾತ್ರಿ ಕಳೆದು ಬೆಳಗಾಗುವ ಮುನ್ನದ ಸಮಯವನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗಿದೆ. ಇದನ್ನು ತುಂಬಾ ಪ್ರಶಸ್ತ ಕಾಲವೆಂದು ಕರೆಯಲಾಗಿದೆ. ಈ ಸಮಯದಲ್ಲಿ ವಾತಾವರಣದಲ್ಲಿ ಧನಾತ್ಮಕ ಶಕ್ತಿ ಅಡಗಿರುತ್ತದೆ. ದೇವರೊಂದಿಗೆ ಈ ಶಕ್ತಿಗಳು ಸಂಯೋಜನೆಗೊಂಡು ಸಾತ್ವಿಕ ಶಕ್ತಿ ಮೂಡುತ್ತದೆ. ಮನದಲ್ಲಿರುವ ಎಲ್ಲಾ ರೀತಿಯ ಋಣಾತ್ಮಕ ಅಂಶಗಳನ್ನು ಇದು ದೂರಮಾಡುತ್ತದೆ. ಇದು ಆಧ್ಯಾತ್ಮಿಕ ಶಕ್ತಿಯನ್ನು ಮುನಷ್ಯರಲ್ಲಿ ತುಂಬುತ್ತದೆ. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮವಾಗಿದ್ದು ಅವರಿಗೆ ಸರಿಯಾದ ಮಾರ್ಗದರ್ಶನವನ್ನು ನೀಡುತ್ತವೆ. ದೇವರೊಂದಿಗೆ ಸಹಯೋಗಗೊಳ್ಳಲು ಇದು ಪ್ರಶಸ್ತ ಸಮಯವಾಗಿದೆ. ಆದ್ದರಿಂದ ಬ್ರಹ್ಮ ಮುಹೂರ್ತದಲ್ಲಿ ನೀವು ಎದ್ದು ದೇವರನ್ನು ನೆನೆಯುವುದು ಉತ್ತಮವಾಗಿದೆ.

ವಿಷ್ಣುವಿಗೆ ಪ್ರಾರ್ಥನೆಯನ್ನು ಸಲ್ಲಿಸುವುದು
ವಿಷ್ಣುವಿನ ಫೋಟೋದ ಮುಂದೆ ತುಪ್ಪದ ದೀಪವನ್ನು ಹಚ್ಚಿ ಮತ್ತು ಭಕ್ತಿಯಿಂದ ಅವರಲ್ಲಿ ಪ್ರಾರ್ಥಿಸಿಕೊಳ್ಳಿ. ಭಗವಂತನು ಮಹಾನ್ ಶಕ್ತಿಯಾಗಿದ್ದು ನಿಮ್ಮೆಲ್ಲಾ ದುಃಖವನ್ನು ನೀಗಿಸುವ ಶಕ್ತಿಯನ್ನು ಅವರು ಹೊಂದಿದ್ದಾರೆ. ವಿಷ್ಣುವ ಸಹಸ್ರನಾಮವನ್ನು ನೀವು ಪಠಿಸಬಹುದಾಗಿದೆ. ಪಠಿಸಿದ ನಂತರ ದೇವರಿಗೆ ಭಕ್ತಿಯಿಂದ ಪೂಜೆಯನ್ನು ಮಾಡಿ ತಿಲಕವನ್ನು ಹಚ್ಚಿ.

ಹಿರಿಯರನ್ನು ಗೌರವಿಸುವುದು
ಗುರುವಾರದಂದು ಹಳದಿ ಬಣ್ಣದ ದಿರಿಸುಗಳನ್ನು ಧರಿಸುವುದು ಉತ್ತಮವೆಂದು ಹೇಳಲಾಗಿದೆ. ನಿಮ್ಮ ಹಿರಿಯರಿಗೆ ಹಳದಿ ಬಣ್ಣದ ದಿರಿಸುಗಳನ್ನು ನೀವು ಕೊಡುಗೆಯಾಗಿ ನೀಡಬಹುದಾಗಿದೆ. ಗುರುವಾರವೆಂದು ಈ ದಿನವನ್ನು ಕರೆಯಲಾಗುತ್ತದೆ. ಹಿರಿಯನ್ನು ಈ ದಿನ ಗೌರವಿಸುವುದು ಉತ್ತಮವಾಗಿದೆ. ಅವರ ಕಾಲುಗಳನ್ನು ಸ್ಪರ್ಶಿಸಿ ಅವರಿಂದ ಆಶೀರ್ವಾದವನ್ನು ಪಡೆದುಕೊಳ್ಳಿ. ಅವರು ಆಶೀರ್ವದಿಸುವುದರಿಂದ ನಮ್ಮಲ್ಲಿ ಧನಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ ಎಂದಾಗಿದೆ. ದಿನವೂ ಅವರ ಚರಣಗಳನ್ನು ಸ್ಪರ್ಶಿಸಿ ಆಶೀರ್ವಾದವನ್ನು ಪಡೆದುಕೊಳ್ಳುವುದು ಉತ್ತಮವಾಗಿದೆ.

ಗುರುವಾರದಂದು ಹಣವನ್ನು ನೀಡುವುದು
ಈ ದಿನ ವ್ಯಕ್ತಿಯು ಹಣವನ್ನು ನೀಡಿದಲ್ಲಿ ಗುರುವು ಆತನನ್ನು ದುರ್ಬಲನನ್ನಾಗಿ ಮಾಡುತ್ತಾರೆ ಎಂದು. ಹಣದ ಕೊರತೆಯನ್ನು ಅವರು ಅನುಭವಿಸಬೇಕಾಗುತ್ತದೆ. ಈ ದಿನ ಯಾರಿಗೂ ಹಣವನ್ನು ನೀಡದೇ ಇರುವುದು ಒಳ್ಳೆಯದು.

ಬಾಳೆ ಗಿಡದ ಅಡಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು
ಈ ದಿನದಂದು ಬಾಳೆಯ ಅಡಿಯಲ್ಲಿ ವಿಷ್ಣುವಿಗೆ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಕಡಲೆಬೇಳೆ ಹಿಟ್ಟಿನಿಂದ ತಯಾರಿಸಿದ ಉಪ್ಪಿಲ್ಲದ ಆಹಾರವನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿ. ಬೃಹಸ್ಪತಿಯನ್ನು ಕೂಡ ಈ ದಿನ ನೀವು ಪೂಜಿಸಬಹುದಾಗಿದೆ. ಸಿಹಿಯನ್ನು ಹಂಚುವುದು ಉತ್ತಮವಾಗಿದೆ.

ಈ ದಿನ ಉಪವಾಸವನ್ನು ಮಾಡುವುದು
ವಿಷ್ಣುವಿನ ಅನುಗ್ರಹವನ್ನು ಪಡೆದುಕೊಳ್ಳಲು ಈ ದಿನ ಉಪವಾಸ ಮಾಡುವುದು ಉತ್ತಮವಾಗಿದೆ. ಈ ದಿನ ಉಪ್ಪಿಲ್ಲದ ಆಹಾರವನ್ನು ಭಕ್ತರು ಸೇವಿಸಬೇಕು. ಬಡವರಿಗೆ ಆವಶ್ಯಕ ವಸ್ತುಗಳನ್ನು ದಾನ ಮಾಡುವುದು ಉತ್ತಮವಾಗಿದೆ. ಇದರಿಂದ ವಿಷ್ಣುವಿನ ಅನುಗ್ರಹವನ್ನು ಅವರು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಈ ರೀತಿ ಸರಳ ಕ್ರಮದಲ್ಲಿ ಭಕ್ತರು ವಿಷ್ಣುವಿನ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು. ಇದಲ್ಲದೆ ಬೇರೆ ಬೇರೆ ವಿಧಾನಗಳಲ್ಲಿ ಕೂಡ ವಿಷ್ಣುವನ್ನು ಪೂಜಿಸಿ ದೇವರ ಅನುಗ್ರಹವನ್ನು ಪಡೆದುಕೊಳ್ಳಬಹುದಾಗಿದೆ. ಭಕ್ತಿಯಿಂದ ವಿಷ್ಣುವನ್ನು ಪೂಜಿಸುವುದು ಮುಖ್ಯವಾಗಿದ್ದು ಇದರಿಂದ ದೇವರ ವರವನ್ನು ಪಡೆದುಕೊಳ್ಳಬಹುದು.

ವಿಷ್ಣುವಿನ ಪೂಜೆ
ಹಿಂದೂ ಭಕ್ತರು ಗುರುವಾರದಂದು ವಿಶೇಷವಾಗಿ ಅನುಸರಿಸುವ ವಿಧಿ ವಿಧಾನವಾಗಿದೆ. ಲಕ್ಷ್ಮೀ ದೇವಿಯನ್ನು ಮನೆಗೆ ಕರೆತರಲು ವಿಷ್ಣು ಮಂತ್ರವನ್ನು ಪಠಿಸುತ್ತಾರೆ. ಅದರಲ್ಲೂ ವಿಷ್ಣುವಿನ ಭಕ್ತರು ಈ ದಿನದಂದು ಹಳದಿ ವಸ್ತ್ರಗಳನ್ನು ಧರಿಸಿ ಹಳದಿ ಹೂವುಗಳನ್ನು ದೇವರಿಗೆ ಸಮರ್ಪಿಸುತ್ತಾರೆ. ಈ ದಿನದಂದು ವ್ರತವನ್ನು ಕೈಗೊಳ್ಳುವವರು ಗಜ್ಜರಿ ಮತ್ತು ತುಪ್ಪವನ್ನು ಬಳಸಿದ ವ್ರತಾಹಾರವನ್ನು ಸೇವಿಸುತ್ತಾರೆ. ಈ ದಿನದಂದು ವ್ರತವನ್ನು ಕೈಗೊಂಡವರು, ಧನ, ಕೀರ್ತಿ ಮತ್ತು ಯಶಸ್ಸನ್ನು ಪಡೆದುಕೊಳ್ಳುತ್ತಾರೆ.

ಬೇಳೆ ಕಾಳುಗಳ ಅರ್ಪಣೆ
ಹಿಂದೂ ಧರ್ಮದಲ್ಲಿ ವಿಷ್ಣು ಭಕ್ತರು ವಿಷ್ಣುವಿಗೆ ಬೇಳೆ ಕಾಳುಗಳನ್ನು ಅರ್ಪಿಸುತ್ತಾರೆ. ಇದರೊಂದಿಗೆ ಬೆಲ್ಲವನ್ನೂ ನೀವು ಮಿಶ್ರ ಮಾಡಿಕೊಳ್ಳಬಹುದು. ಬೇಳೆ ಮತ್ತು ಬೆಲ್ಲವು ಹಳದಿ ಬಣ್ಣದಲ್ಲಿರುವುದರಿಂದ ಗುರುವಾರದಂದು ವಿಷ್ಣುವನ್ನು ಸಂಪ್ರೀತಗೊಳಿಸಲು ನೀವು ಇದನ್ನು ದೇವರಿಗೆ ನೀಡಬಹುದು.

ಸತ್ಯನಾರಾಯಣ ಕಥೆ
ಸತ್ಯವೇ ದೇವರು ಎಂಬ ನಂಬಿಕೆಯ ಸಾಕಾರರೂಪವಾಗಿರುವ ಸತ್ಯ ನಾರಾಯಣನಿಗೆ ಸಲ್ಲಿಸುವ ಪೂಜೆಯೇ ಸತ್ಯನಾರಾಯಣ ಪೂಜೆ. ಹಿಂದೂಗಳು ವಿವಿಧ ದೇವರುಗಳಿಗೆ ಸಲ್ಲಿಸುವ ಪೂಜೆಗಳಲ್ಲಿ ಈ ಪೂಜೆ ಹೆಚ್ಚಿನ ಮಹತ್ವದ ಮತ್ತು ಹೆಚ್ಚಾಗಿ ಸಲ್ಲಿಸಲ್ಪಡುವ ಪೂಜೆಯಾಗಿದೆ. ಅನಾದಿಕಾಲದಿಂದಲೂ ಈ ಪೂಜೆಯನ್ನು ಸಲ್ಲಿಸಿದ ಭಕ್ತರಿಗೆ ದೇವರು ಹಲವು ರೀತಿಯ ಸೌಭಾಗ್ಯಗಳನ್ನು ಕರುಣಿಸಿ ಆಶೀರ್ವದಿಸಿದ್ದಾನೆ. ಈ ಪೂಜೆಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ನೆರವೇರಿಸಿದ ಭಕ್ತರ ಕಂಟಕಗಳು ನಿವಾರಣೆಯಾಗಿರುವುದನ್ನು ಕಂಡ ಬಳಿಕ ಈ ಪೂಜೆಯ ಮಹತ್ವವೇನೆಂದು ಅರಿವಾಗುತ್ತದೆ. ಅದರಲ್ಲೂ ಗುರುವಾರದಂದು ಪ್ರತಿಯೊಬ್ಬ ವಿಷ್ಣು ಭಕ್ತರೂ ದೇವರನ್ನು ಒಲಿಸಿಕೊಳ್ಳಲು ಸತ್ಯನಾರಾಯಣ ಕಥೆಯ ಪಾರಾಯಣವನ್ನು ಮಾಡುತ್ತಾರೆ.

ದಾನ
ಪ್ರತಿಯೊಂದು ಧರ್ಮದಲ್ಲಿ ಕೂಡ ದಾನಕ್ಕೆ ವಿಶೇಷ ಸ್ಥಾನವಿದೆ. ಬಡವರಿಗೆ ಮತ್ತು ಅಗತ್ಯವಿದ್ದವರಿಗೆ ಬೇಕಾದ ವಸ್ತುಗಳನ್ನು ದಾನ ಮಾಡಬೇಕು. ಆಹಾರ, ಹಣ



Click it and Unblock the Notifications











