Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಇಂಥವರಿಗೆ ತೊಂದರೆ ನೀಡಿದರೆ ಶನಿದೇವನಿಗೆ ತುಂಬಾ ಕೋಪ ಬರುತ್ತದೆ
ಶನಿದೇವನ ದಿನ ಶನಿವಾರ. ಈ ದಿನ ಶನಿಮಹಾತ್ಮನನ್ನು ಪೂಜಿಸಿದರೆ ವಿಶೇಷ ಫಲ ಸಿಗುತ್ತದೆ, ಆತನ ಮಂತ್ರಗಳನ್ನು ಪಠಿಸುವವರ ಮನೆಯಲ್ಲಿ ಸದಾ ಸಮೃದ್ಧಿ ಇರುತ್ತದೆ ಎಂಬುದು ನಂಬಿಕೆ. ಶನಿದೇವನನ್ನು ಮೆಚ್ಚಿಸಲು ಹಲವು ಕ್ರಮಗಳಲ್ಲಿ ಪೂಜಿಸಬಹುದು. ಹಾಗೆಯೇ ಬಹಳ ಶಿಸ್ತನ್ನು ಬಯಸುವ ಶನಿದೇವನಿಗೆ ಕೆಲವು ಕೆಲಸಗಳನ್ನು ಮಾಡಿದರೆ ಬಹಳ ಕೋಪ ಬರುತ್ತದೆ.

ಶನಿದೇವನಿಗೆ ಭಕ್ತರು ಇಂಥಾ ತಪ್ಪುಗಳನ್ನು ಮಾಡಿದರೆ ಬಹಳ ಬೇಗ ಅವನ ಕೆಟ್ಟ ಕಣ್ಣಿಗೆ ಗುರಿಯಾಗುವರು. ಯಾವೆಲ್ಲಾ ತಪ್ಪುಗಳು ಮುಂದೆ ನೋಡೋಣ:

ಬಡವರನ್ನು ನೋಯಿಸಬೇಡಿ
ಒಬ್ಬ ವ್ಯಕ್ತಿಯು ಬಡವರಿಗೆ ಕಿರುಕುಳ ನೀಡಿದರೆ ಅಥವಾ ನಿರ್ಗತಿಕರನ್ನು ಅವಮಾನಿಸಿದರೆ ಶನಿದೇವನು ಅವನ ಮೇಲೆ ಕೋಪಗೊಳ್ಳಬಹುದು.
ಯಾವುದೇ ಕೂಲಿ, ಭಿಕ್ಷುಕ ಅಥವಾ ನಿರ್ಗತಿಕರನ್ನು ಹಿಂಸಿಸಿದರೆ ಶನಿದೇವನು ತಕ್ಷಣವೇ ಕೋಪಗೊಳ್ಳುತ್ತಾನೆ. ಮತ್ತೊಂದೆಡೆ, ಬಡವರನ್ನು ಗೌರವಿಸುವ ಮತ್ತು ಅಗತ್ಯವಿರುವವರಿಗೆ ದಾನ ಮಾಡುವ ಜನರ ಮೇಲೆ ಶನಿಯು ವಿಶೇಷ ಅನುಗ್ರಹ ಹೊಂದಿದ್ದಾನೆ.

ಮನೆಯ ಸಹಾಯಕರಿಗೆ ತೊಂದರೆ ಕೊಡಬೇಡಿ
ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡುವವರನ್ನು ಸೇವಕರೆಂದು ಪರಿಗಣಿಸಿ ಅನುಚಿತವಾಗಿ ವರ್ತಿಸುತ್ತಾರೆ. ಆದರೆ ನೀವು ಅವರಿಗೆ ತೊಂದರೆ ನೀಡಿದರೆ, ಅದು ನಿಮ್ಮ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಮತ್ತು ಶನಿದೇವನು ನಿಮ್ಮ ಮೇಲೆ ಕೋಪಗೊಳ್ಳುತ್ತಾನೆ. ಕೆಲಸ ಮಾಡುವವರನ್ನು ಎಂದಿಗೂ ಬೆದರಿಸಬೇಡಿ ಹಾಗೂ ನಿಂದಿಸಬೇಡಿ. ಒಬ್ಬ ವ್ಯಕ್ತಿಯಾಗಿ ಸದಾ ಗೌರವಿಸಿ.

ಕಪ್ಪು ನಾಯಿಯನ್ನು ನೋಯಿಸಬೇಡಿ
ಕಪ್ಪು ನಾಯಿ ಶನಿ ದೇವನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ನೀವು ಎಂದಾದರೂ ಕಪ್ಪು ನಾಯಿಗೆ ಹಾನಿ, ನೋವು ಮಾಡಿದರೆ, ಅದು ನಿಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಇಂಥಾ ಕೃತ್ಯದಿಂದ ಶನಿದೇವರು ನಿಮ್ಮ ಮೇಲೆ ಕೋಪಗೊಳ್ಳಬಹುದು ಎಂದು ನಂಬಲಾಗಿದೆ.

ಮಕ್ಕಳನ್ನು ನೋಯಿಸಬೇಡಿ
ಚಿಕ್ಕ ಮಕ್ಕಳನ್ನು ದೇವರ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಯಾರಾದರೂ ಮಕ್ಕಳನ್ನು ಯಾವುದೇ ಕಾರಣವಿಲ್ಲದೆ ಹಿಂಸಿಸಿದರೆ ಅವರ ಜೀವನದಲ್ಲಿ ತೊಂದರೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಮಕ್ಕಳಿಗೆ ತೊಂದರೆ ನೀಡಿದರೆ ಶನಿದೇವನೂ ನಿಮ್ಮ ಮೇಲೆ ಕೋಪಗೊಳ್ಳಬಹುದು, ಇದರಿಂದ ನೀವು ಮಾಡಿದ ಕೆಲಸವೂ ಹಾಳಾಗಬಹುದು ಮತ್ತು ಮನೆಯಲ್ಲಿ ಸಮಸ್ಯೆಗಳು ಬರಲು ಪ್ರಾರಂಭಿಸುತ್ತವೆ.



Click it and Unblock the Notifications
