Latest Updates
-
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ!
ದೀಪಾವಳಿ 2021: ಲಕ್ಷ್ಮಿ ಪೂಜೆ ಯಾವಾಗ? ಅದಕ್ಕಿರುವ ಶುಭ ಮುಹೂರ್ತ ಯಾವುದು?
ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಜನರು ಹಬ್ಬದ ಸಂಭ್ರಮದಲ್ಲಿ ಮುಳುಗಲು ಸಜ್ಜಾಗುತ್ತಿದ್ದಾರೆ. ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುವ ದೀಪವಾಳಿ ಸಂಭ್ರಮ ನವೆಂಬರ್ 3ರ ನರಕ ಚತುರ್ದಶಿಯಂದು ಆರಂಭವಾಗಿ, ನವೆಂಬರ್ 4 ಲಕ್ಷ್ಮಿ ಪೂಜೆ ಹಾಗೂ ನವೆಂಬರ್ 5ಕ್ಕೆ ಬಲಿಪಾಡ್ಯಮಿ ಮೂಲಕ ಅಂತ್ಯಗೊಳ್ಳಲಿದೆ. ಇನ್ನು ಕೆಲವೆಡೆ ಗೋವರ್ಧನ ಪೂಜೆ, ಭಾಯ್ ದೂಜ್ ವರೆಗೂ ಮುಂದುವರೆಯುವುದು.
ದೀಪಾವಳಿ ವೇಳೆ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದ್ದು, ಮನೆ ಹಾಗೂ ವ್ಯಾಪಾರದಲ್ಲಿ ಪ್ರಗತಿ, ಏಳಿಗೆಗಾಗಿ ಹೆಚ್ಚಿನವರು ಲಕ್ಷ್ಮಿ ಪೂಜೆ ಸಲ್ಲಿಸುತ್ತಾರೆ. ಹಾಗಾದರೆ, ಈ ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತ ಯಾವುದು? ಇದರ ಮಹತ್ವವೇನು? ಎಲ್ಲವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ದೀಪಾವಳಿಯ ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತ, ಪೂಜಾವಿಧಾನ ಹಾಗೂ ಮಹತ್ವವನ್ನು ಈ ಕೆಳಗೆ ನೀಡಲಾಗಿದೆ:

ಲಕ್ಷ್ಮಿ ಪೂಜೆಗೆ ಶುಭ ಸಮಯ:
ಈ ದಿನ ಸಮುದ್ರ ಮಂಥನದಿಂದ ಲಕ್ಷ್ಮಿ ದೇವಿಯು ಈ ದಿನ ಜನಿಸಿದಳು ಎಂಬ ನಂಬಿಕೆ ಕೂಡ ಇದೆ. ನಂತರ, ದೇವಿಯು ವಿಷ್ಣುವನ್ನು ಮದುವೆಯಾದಳು. ಪೂಜೆಗೆ ಶುಭಮುಹೂರ್ತ ಹೀಗಿದೆ:
ಅಮವಾಸ್ಯೆ ತಿಥಿ ಪ್ರಾರಂಭ: 4ನೇ ನವೆಂಬರ್ 2021 ರಂದು ಬೆಳಿಗ್ಗೆ 06:03 ರಿಂದ
ಅಮಾವಾಸ್ಯೆ ತಿಥಿ ಅಂತ್ಯ: 5 ನೇ ನವೆಂಬರ್ 2021 ರಂದು ಬೆಳಿಗ್ಗೆ 02:44 ರವರೆಗೆ

ಪಂಚಾಂಗದ ಪ್ರಕಾರ, ದೀಪಾವಳಿ ಲಕ್ಷ್ಮಿ ಪೂಜೆಯನ್ನು ಮಾಡಲು ಅತ್ಯಂತ ಮಂಗಳಕರ ಸಮಯವೆಂದರೆ ಸೂರ್ಯಾಸ್ತದ ನಂತರದ ಸಮಯ ಅಂದರೆ 'ಪ್ರದೋಷ' ಕಾಲ. ಈ ಪ್ರದೋಷ ಕಾಲ ಹೀಗಿದೆ:
ದಿನಾಂಕ: ನವೆಂಬರ್ 4, 2021
ಸಮಯ: ಸಂಜೆ 06:09 ರಿಂದ 08:20 ರವರೆಗೆ
ಪ್ರದೋಷ ಕಾಲ: ಸಂಜೆ 05:34ರಿಂದ 08:10ರವರೆಗೆ
ವೃಷಭ ಕಾಲ: ಸಂಜೆ 06:10ರಿಂದ 08:06ರವರೆಗೆ

ಲಕ್ಷ್ಮಿ ಪೂಜೆಯ ಆಚರಣೆಗಳು:
- ನಿಮ್ಮ ಪೂಜೆಯ ಸ್ಥಳದಲ್ಲಿ ಚೌಕಿಯ ರೀತಿ ಮಾಡಿಕೊಳ್ಳಿ. ಅದರ ಮೇಲೆ ಕೆಂಪು ಬಟ್ಟೆಯನ್ನು ಹರಡಿ.
- ಲಕ್ಷ್ಮಿ, ಸರಸ್ವತಿ ಮತ್ತು ಗಣೇಶನ ಫೋಟೋ/ವಿಗ್ರಹವನ್ನು ಇರಿಸಿ. ಭಗವಾನ್ ವಿಷ್ಣು, ಕುಬೇರ ಮತ್ತು ಇಂದ್ರನಿಗೆ ಲಕ್ಷ್ಮಿ ದೇವಿಯ ಮುಂದೆ 3 ಅಕ್ಕಿಯನ್ನು ಇರಿಸಿ.
- ಪೂಜೆಯನ್ನು ಪ್ರಾರಂಭಿಸಲು ದೀಪವನ್ನು ಬೆಳಗಿಸಿ. ಈ ದೀಪವನ್ನು ರಾತ್ರಿಯಿಡೀ ಬೆಳಗಿಸಬೇಕು.
- ಲಕ್ಷ್ಮಿ ಪೂಜೆಯ ಸಮಯದಲ್ಲಿ ಎಲ್ಲಾ ಅಡೆತಡೆಗಳನ್ನು ಹೋಗಲಾಡಿಸಲು ಗಣಪತಿಯನ್ನು ಆಹ್ವಾನಿಸಿ. ಗಣೇಶನ ಹಣೆಯ ಮೇಲೆ ತಿಲಕ ಮತ್ತು ಅಕ್ಷತೆಯನ್ನು ಹಚ್ಚಿ. ಗಣೇಶನಿಗೆ ಪರಿಮಳ, ಹೂವು, ಧೂಪ, ಸಿಹಿತಿಂಡಿಗಳು (ನೈವೇದ್ಯ) ಮತ್ತು ಮಣ್ಣಿನ ದೀಪವನ್ನು ಅರ್ಪಿಸಿ.
- ಈಗ ಲಕ್ಷ್ಮಿ ಪೂಜೆಯನ್ನು ಪ್ರಾರಂಭಿಸಿ. ಲಕ್ಷ್ಮಿ ದೇವಿಯ ಹಣೆಯ ಮೇಲೆ ಕುಂಕುಮ ಮತ್ತು ಅಕ್ಕಿಯ ತಿಲಕವನ್ನು ಹಚ್ಚಿ. ಲಕ್ಷ್ಮಿ ದೇವಿಗೆ ಪರಿಮಳ, ಹೂವುಗಳು, ಧೂಪ, ಸಿಹಿತಿಂಡಿಗಳು ಮತ್ತು ಮಣ್ಣಿನ ದೀಪವನ್ನು ಅರ್ಪಿಸಿ.
- ಈಗ ಕೊತ್ತಂಬರಿ ಬೀಜ, ಹತ್ತಿ ಬೀಜ, ಒಣ ಅರಿಶಿನ, ಬೆಳ್ಳಿ ನಾಣ್ಯ, ಕರೆನ್ಸಿ ನೋಟುಗಳು, ಸುಪಾರಿ ಮತ್ತು ಕಮಲದ ಹೂವಿನ ಬೀಜವನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ.
- ಲಕ್ಷ್ಮಿ ದೇವಿಯ ಜೊತೆಗೆ ಬರಲು ವಿಷ್ಣುವನ್ನು, ಸಂಪತ್ತನ್ನು ನೀಡುವಂತೆ ಕುಬೇರನನ್ನು, ಜೊತೆಗೆ ಜೀವನ ಪಥದಲ್ಲಿ ದೈವಿಕ ಜ್ಞಾನ ಮತ್ತು ಮಾರ್ಗದರ್ಶನವನ್ನು ಪಡೆಯಲು ಸರಸ್ವತಿಯನ್ನು ಪ್ರಾರ್ಥಿಸಿ. ಅವರೆಲ್ಲರಿಗೂ ಪರಿಮಳ, ಹೂವು, ಧೂಪ, ಸಿಹಿತಿಂಡಿಗಳು, ಹಣ್ಣುಗಳು ಮತ್ತು ಮಣ್ಣಿನ ದೀಪವನ್ನು ಅರ್ಪಿಸಿ.
- ಈಗ ಫೋಟೋದಲ್ಲಿರುವ ಆನೆಗಳ ಪೂಜೆಯನ್ನು ಮಾಡಿ. ಲಕ್ಷ್ಮಿ ದೇವಿಯ ಆನೆಗಳಿಗೆ ಒಂದು ಜೋಡಿ ಕಬ್ಬನ್ನು ಅರ್ಪಿಸಿ.
- ಲಕ್ಷ್ಮಿ ಆರತಿ ಮಾಡುವ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಿ .
- ಲಕ್ಷ್ಮಿಯ ಮಂತ್ರ ಜಪವನ್ನು ಮಾಡಲು ಬಯಸುವುದಾರೆ, ಸರಳ ಮತ್ತು ಅತ್ಯಂತ ಶಕ್ತಿಶಾಲಿ ಮಂತ್ರವೆಂದರೆ "ಶ್ರೀಮ್ ಸ್ವಾಹಾ". ಈ ಮಂತ್ರವನ್ನು ಕನಿಷ್ಠ 108 ಬಾರಿ ಪಠಿಸಿ.

ದೀಪಾವಳಿಯ ಮಹತ್ವ:
ದೀಪಾವಳಿಯು "ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನ" ಎಂಬುದನ್ನು ಸೂಚಿಸುತ್ತದೆ. 14 ವರ್ಷಗಳ ವನವಾಸದ ನಂತರ ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗಿದ ಸಂದರ್ಭವನ್ನು ದೀಪಾವಳಿ ಹಬ್ಬವಾಗಿ ಆಚರಿಸಲಾಗುತ್ತದೆ. ರಾಮನು ವನವಾಸದಿಂದ ಹಿಂದಿರುಗಿದಾಗ, ಅಯೋಧ್ಯೆಯ ಜನರು ತುಪ್ಪದ ದೀಪಗಳನ್ನು ಬೆಳಗಿಸುವ ಮೂಲಕ ಅಮವಾಸ್ಯೆಯ ಕತ್ತಲನ್ನು ದೂರಮಾಡಿದರು ಎಂದು ಹೇಳಲಾಗುತ್ತದೆ. ಅಂದಿನಿಂದ ಈ ದೀಪಾವಳಿ ಹಬ್ಬವನ್ನು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಅಷ್ಟೇ ಅಲ್ಲ, ದೀಪಾವಳಿಯಂದು ಗಣೇಶ ಮತ್ತು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ದೀಪಾವಳಿಯಂದು, ಲಕ್ಷ್ಮಿ ದೇವಿಯನ್ನು ಪೂಜಿಸಿದರೆ, ಆಕೆ ಪ್ರಸನ್ನಳಾಗಿ, ಸಂಪತ್ತನ್ನು ಸುರಿಸುತ್ತಾಳೆ ಎಂಬ ನಂಬಿಕೆಯಿದೆ. ಆದ್ದರಿಂದ ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದ್ದು, ಮನೆಮನೆಗಳಲ್ಲಿ, ಪ್ರತಿ ಅಂಗಡಿ-ಮುಂಗಟ್ಟುಗಳಲ್ಲೂ ಲಕ್ಷ್ಮಿ ಪೂಜೆ ಮಾಡುತ್ತಾರೆ.



Click it and Unblock the Notifications