Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ದೀಪಾವಳಿ 2021: ಬೆಳಕಿನ ಹಬ್ಬದ ರಾತ್ರಿ ಈ ಐದು ವಿಷಯಗಳು ಕಣ್ಣಿಗೆ ಬಿದ್ದರೆ ಅದೃಷ್ಟವಂತೆ!
ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಹಬ್ಬವೇ ದೀಪಾವಳಿ. ಈ ದಿನದಂದು, ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆಕೆಯ ಅನುಗ್ರಹ
ದೊರೆಯುವುದು ಎಂಬ ನಂಬಿಕೆಯಿದೆ. ಅದೇ ರೀತಿ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಆಚರಿಸುವ ದೀಪಾವಳಿಯ ಹಬ್ಬದಂದು, ಕೆಲವು ಪ್ರಾಣಿ-ಪಕ್ಷಿಗಳನ್ನು ನೋಡಿದರೆ, ಮಂಗಳಕರ ಎಂಬ ನಂಬಿಕೆ ಶಕುನಶಾಸ್ತ್ರದಲ್ಲಿದೆ.
ಶಕುನ ಶಾಸ್ತ್ರದ ಪ್ರಕಾರ, ದೀಪಾವಳಿಯ ರಾತ್ರಿ ಈ ಕೆಳಗಿರುವ ಪ್ರಾಣಿ ಪಕ್ಷಿಯನ್ನು ನೋಡಿದರೆ, ಅದು ಲಕ್ಷ್ಮಿ ದೇವಿಯ ಆಗಮನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾದರೆ, ದೀಪಾವಳಿಯ ರಾತ್ರಿ ನೋಡಲು ಮಂಗಳಕರವೆಂದು ಪರಿಗಣಿಸಲಾದ ಪ್ರಾಣಿ- ಪಕ್ಷಿಗಳು ಯಾವುವು ಎಂಬುದನ್ನು ತಿಳಿಯೋಣ.
ದೀಪಾವಳಿಯ ರಾತ್ರಿ ನೋಡಲು ಮಂಗಳಕರವೆಂದು ಪರಿಗಣಿಸಲಾದ ಪ್ರಾಣಿ- ಪಕ್ಷಿಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಗೂಬೆ:
ಎಲ್ಲರಿಗೂ ತಿಳಿದಿರುವಂತೆ, ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನ. ಶಕುನ ಶಾಸ್ತ್ರದ ಪ್ರಕಾರ, ದೀಪಾವಳಿಯ ರಾತ್ರಿ ಗೂಬೆಯನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ದೀಪಾವಳಿಯ ರಾತ್ರಿ ಗೂಬೆ ಕಾಣಿಸಿಕೊಂಡರೆ ಅಥವಾ ನಿಮ್ಮ ಕಣ್ಣಿಗೆ ಬಿದ್ದರೆ, ಲಕ್ಷ್ಮಿ ದೇವಿಯು ವರ್ಷವಿಡೀ ಮನೆಯಲ್ಲಿರುತ್ತಾಳೆ ಎಂಬ ನಂಬಿಕೆಯಿದೆ.

ಬೆಕ್ಕು:
ಸಾಮಾನ್ಯ ದಿನಗಳಲ್ಲಿ ಶುಭಕೆಲಸಗಳಿಗೆ ಹೊರಟಾಗ ಬೆಕ್ಕನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ, ಆದರೆ ಶಕುನ ಶಾಸ್ತ್ರದ ಪ್ರಕಾರ, ದೀಪಾವಳಿಯ ರಾತ್ರಿ ಬೆಕ್ಕನ್ನು ನೋಡುವುದು ಲಕ್ಷ್ಮಿ ದೇವಿಯ ಆಗಮನದ ಸೂಚಕವಾಗಿದೆ. ನಿಮ್ಮ ಮನೆಯ ಸುತ್ತಲೂ ಬೆಕ್ಕನ್ನು ಕಂಡರೆ ಮನೆಯಲ್ಲಿ ಸಂತೋಷ ನೆಲೆಸಿರುತ್ತದೆ ಎಂಬ ನಂಬಿಕೆ ಧಾರ್ಮಿಕ ವರ್ಗದಲ್ಲಿದೆ.

ಇಲಿ:
ಸಾಮಾನ್ಯವಾಗಿ ಮನೆಯಲ್ಲಿ ಇಲಿ ಇರುವುದು ಕೆಟ್ಟದೆಂದು ಪರಿಗಣಿಸಲಾಗಿದೆ. ಆದರೆ ದೀಪಾವಳಿಯ ರಾತ್ರಿ ಮನೆಯೊಳಗೆ ಇಲಿ ಕಂಡರೆ ಅದೃಷ್ಟ ಖುಲಾಯಿಸುತ್ತದೆ ಎಂದು ಶಕುನ ಶಾಸ್ತ್ರ ಹೇಳುತ್ತದೆ. ಮನೆಯಲ್ಲಿ ಇಲಿ ನೋಡುವುದರಿಂದ ಮನೆಯ ಆರ್ಥಿಕ ಅಡಚಣೆಗಳು ದೂರವಾಗುತ್ತವೆ ಮತ್ತು ಕುಟುಂಬದ ಎಲ್ಲಾ ಕೆಟ್ಟ ದಿನಗಳು ಅಂತ್ಯವಾಗುತ್ತವೆಯಂತೆ.

ಹಸು:
ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಹಸುವನ್ನು ಪವಿತ್ರವೆಂದು ಭಾವಿಸಿ ಪೂಜಿಸಲಾಗುತ್ತದೆ. ದೀಪಾವಳಿಯ ರಾತ್ರಿ ಹಸು ಕಾಣಿಸಿಕೊಂಡರೆ, ದೇವಿ ಲಕ್ಷ್ಮಿ ಕುಟುಂಬಕ್ಕೆ ಪ್ರೀತಿಯನ್ನು ಸುರಿಸುತ್ತಾಳೆ ಎಂದರ್ಥ. ಹಸುವನ್ನು ನೋಡುವುದರಿಂದ ಕುಟುಂಬ ಸದಸ್ಯರಲ್ಲಿ ವಾತ್ಸಲ್ಯ ಹೆಚ್ಚುತ್ತದೆ ಮತ್ತು ಐಕ್ಯವು ಬಲಗೊಳ್ಳುತ್ತದೆ. ಇದರಿಂದ ಕುಟುಂಬ ಜೀವನ ಸಂತಸಮಯವಾಗಿರುತ್ತದೆ.

ಹಲ್ಲಿ:
ಇದು ಮನೆಗಳಲ್ಲಿ ಹೆಚ್ಚಾಗಿ ಕಾಣುವ ಜೀವಿ. ಸೊಳ್ಳೆ, ನೊಣಗಳಂತಹ ಸಣ್ಣ ಜೀವಿಗಳನ್ನು ತಿಂದು ಮನೆಯನ್ನು ಶುಚಿಗೊಳಿಸುತ್ತಾ ಹೋಗುವ ಈ ಜೀವಿಯಿಂದ ನಮಗೆ ಹಾನಿಯಾಗದಿದ್ದರೂ ಸಾಮಾನ್ಯವಾಗಿ ಜನರೂ ಅದಕ್ಕೆ ಹೆದರುತ್ತಾರೆ. ಶಕುನ ಶಾಸ್ತ್ರದ ಪ್ರಕಾರ, ದೀಪಾವಳಿಯ ರಾತ್ರಿ ಮನೆಯಲ್ಲಿ ಹಲ್ಲಿಯನ್ನು ನೋಡಿದರೆ, ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಬರಲಿದೆ ಎಂದರ್ಥ.



Click it and Unblock the Notifications
