Dhanu Sankranti 2022: ಧನು ಸಂಕ್ರಾಂತಿ ದಿನ, ಮುಹೂರ್ತ ಹಾಗೂ ಆಚರಣೆಯ ವಿಧಾನ

ವರ್ಷದ ಪ್ರತಿ ತಿಂಗಳು, ಸೂರ್ಯ ದೇವರು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಇದನ್ನು ಗೋಚಾರ ಅಥವಾ ಸಂಕ್ರಾಂತಿ ಎನ್ನುತ್ತಾರೆ. ಸೂರ್ಯನು ಧನು ರಾಶಿಗೆ ಪ್ರವೇಶಿಸುವ ಶುಭ ಸಮಯವನ್ನು "ಧನು ಸಂಕ್ರಾಂತಿ" ಎಂದು ಕರೆಯಲಾಗುತ್ತದೆ. ಈ ದಿನದಿಂದ ಕರ್ಮಗಳು ಪ್ರಾರಂಭವಾಗುತ್ತವೆ. ಅಧ್ದರಿಂದ ಧನು ಸಂಕ್ರಾತಿಯ ಸಮಯದಲ್ಲಿ ಯಾವುದೇ ಶುಭ ಕಾರ್ಯಕ್ರಮಗಳನ್ನು ಮಾಡುವುದಿಲ್ಲ, ಒಂದು ತಿಂಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ.

123

ಏನಿದು ಧನು ಸಂಕ್ರಾಂತಿ? 2022ರಲ್ಲಿ ಧನು ಸಂಕ್ರಾಂತಿ ಮುಹೂರ್ತ ಯಾವಾಗಿನಿಂದ ಆರಂಭವಾಗುತ್ತದೆ?, ಧನು ಸಂಕ್ರಾಂತಿ ಆಚರಣೆ ಹೇಗೆ ಮುಂದೆ ನೋಡೋಣ:

ಧನು ಸಂಕ್ರಾಂತಿಯ ಮುಹೂರ್ತ

ಧನು ಸಂಕ್ರಾಂತಿಯ ಮುಹೂರ್ತ

ಧನು ಸಂಕ್ರಾಂತಿಯ ಆರಂಭವಾಗುವ ಮುಹೂರ್ತ: 2022 ಡಿಸೆಂಬರ್ 16 ಬೆಳಗ್ಗೆ 10:02ಕ್ಕೆ

ಸೂರ್ಯೋದಯ: 2022 ಡಿಸೆಂಬರ್ 16 ಬೆಳಗ್ಗೆ 7:05ಕ್ಕೆ

ಸೂರ್ಯಾಸ್ತ: 2022 ಡಿಸೆಂಬರ್ 16 ಸಂಜೆ 5:39ಕ್ಕೆ

ಪುಣ್ಯ ಕಾಲ ಮುಹೂರ್ತ: 2022 ಡಿಸೆಂಬರ್ 16, ಬೆಳಗ್ಗೆ 10:02 ರಿಂದ ಡಿಸೆಂಬರ್ 16 ಸಂಜೆ 5:39 ರವರೆಗೆ

ಮಹಾ ಪುಣ್ಯ ಕಾಲ ಮುಹೂರ್ತ: ಡಿಸೆಂಬರ್ 16, ಬೆಳಗ್ಗೆ 10:02 ರಿಂದ ಡಿಸೆಂಬರ್ 16 ಬೆಳಗ್ಗೆ 10:26 ರವರೆಗೆ

ಯಾವ ದೇವತೆಯನ್ನು ಪೂಜಿಸಲಾಗುತ್ತದೆ?

ಯಾವ ದೇವತೆಯನ್ನು ಪೂಜಿಸಲಾಗುತ್ತದೆ?

* ಧಾರ್ಮಿಕ ಗ್ರಂಥಗಳ ಪ್ರಕಾರ, ಧನು ಸಂಕ್ರಾಂತಿಯಂದು ಭಗವಾನ್ ಸೂರ್ಯನನ್ನು ಪೂಜಿಸಲು ವಿಶೇಷ ಪ್ರಾಮುಖ್ಯತೆ ಇದೆ. ಈ ದಿನ ಸೂರ್ಯ ದೇವರನ್ನು ಪೂಜಿಸುವುದರಿಂದ ಪಾಪಗಳಿಂದ ಮುಕ್ತಿ ದೊರೆಯುತ್ತದೆ.

* ಈ ದಿನ ಸೂರ್ಯ ದೇವರೊಂದಿಗೆ ಭಗವಾನ್ ವಿಷ್ಣು, ಜಗನ್ನಾಥ ಮತ್ತು ಶ್ರೀ ಕೃಷ್ಣನನ್ನು ಪೂಜಿಸುವುದು ವಿಶೇಷ ಶುಭ ಫಲಿತಾಂಶಗಳನ್ನು ನೀಡುತ್ತದೆ.

* ಧನು ಸಂಕ್ರಾತಿಯ ದಿನ ಪವಿತ್ರ ನದಿ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಇದು ಸಾಧ್ಯವಾಗದಿದ್ದರೆ, ಸ್ನಾನ ಮಾಡುವಾಗ ನೀರಿನಲ್ಲಿ ಗಂಗಾಜಲವನ್ನು ಬೆರೆಸಿ.

* ಸಂಕ್ರಾಂತಿಯ ದಿನದಂದು ಭಗವಾನ್ ವಿಷ್ಣುವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಅದಕ್ಕಾಗಿಯೇ ಈ ದಿನದಂದು, ವಿಷ್ಣುವಿಗೆ ಸುಗಂಧ, ಹೂವು, ಧೂಪ, ದೀಪಗಳು ಇತ್ಯಾದಿಗಳನ್ನು ಅರ್ಪಿಸಿ ಮತ್ತು ಶ್ರೀ ಹರಿಯ ಪೂಜೆಯಲ್ಲಿ ತುಳಸಿ ಎಲೆಗಳನ್ನು ತಪ್ಪದೆ ಬಳಸಿ.

* ಭಗವಾನ್ ವಿಷ್ಣುವನ್ನು ಆರಾಧಿಸಿದ ನಂತರ, ಲಕ್ಷ್ಮಿ, ಮಹಾದೇವ ಮತ್ತು ಬ್ರಹ್ಮ ದೇವಿಯನ್ನು ಪೂಜಿಸಿ ಆರತಿಯನ್ನು ಮಾಡಿ.

* ಈ ದಿನದಂದು ಭಗವಾನ್ ಸೂರ್ಯನಿಗೆ ಸಿಹಿ ಅನ್ನವನ್ನು ಅರ್ಪಿಸಿ ಮತ್ತು ನಂತರ ಅದನ್ನು ಕುಟುಂಬದ ಸದಸ್ಯರಿಗೆ ಪ್ರಸಾದವಾಗಿ ವಿತರಿಸಿ.

ಧನು ಸಂಕ್ರಾಂತಿ 2022: ಈ ದಿನದ ಆಚರಣೆಗಳು

ಧನು ಸಂಕ್ರಾಂತಿ 2022: ಈ ದಿನದ ಆಚರಣೆಗಳು

* ಧನು ಸಂಕ್ರಾಂತಿ ದಿನದಂದು, ಭಗವಾನ್ ಜಗನ್ನಾಥನನ್ನು ಭಾರತದ ಅನೇಕ ಭಾಗಗಳಲ್ಲಿ, ವಿಶೇಷವಾಗಿ ಒರಿಸ್ಸಾದಲ್ಲಿ ಪೂಜಿಸಲಾಗುತ್ತದೆ. ಭಕ್ತರು ಧನು ಯಾತ್ರೆಯ ಹಬ್ಬವನ್ನು ಪೌಷ ಮಾಸದ ಆರನೇ ದಿನದಿಂದ ಶುಕ್ಲ ಪಕ್ಷದಲ್ಲಿ ಪ್ರಾರಂಭಿಸುತ್ತಾರೆ ಮತ್ತು ಪೌಷಾ ಮಾಸದ ಪೂರ್ಣಿಮೆಯವರೆಗೆ ಅದನ್ನು ಮುಂದುವರೆಸುತ್ತಾರೆ.

* ಈ ದಿನವನ್ನು ದಾನ ನೀಡಲು ಮತ್ತು ಪೂರ್ವಜರ ಪೂಜೆಗಳನ್ನು ಮಾಡಲು ಮಂಗಳಕರವೆಂದು ಪರಿಗಣಿಸಲಾಗಿದೆ.

* ದಾನ ನೀಡುವುದರ ಹೊರತಾಗಿ ಸಂಕ್ರಮಣ ಜಪ, ಪವಿತ್ರ ನೀರಿನ ಸ್ನಾನ ಮತ್ತು ಪಿತೃ ತರ್ಪಣ ಮಾಡುವ ಆಚರಣೆಯೂ ಇದೆ.

* ಧನು ಸಂಕ್ರಾಂತಿಯ ದಿನ ಭಕ್ತರು, ವಿಶೇಷವಾಗಿ ಮಹಿಳೆಯರು ತಮ್ಮ ಜೀವನದಲ್ಲಿ ಸಂತೋಷ, ನೆಮ್ಮದಿ ಮತ್ತು ಅದೃಷ್ಟಕ್ಕಾಗಿ ಈ ದಿನದಂದು ಉಪವಾಸ ಮಾಡುತ್ತಾರೆ.

** ಧನು ಸಂಕ್ರಾಂತಿಯಂದು, ಬೆಳಿಗ್ಗೆ ಶುದ್ಧ ಸ್ನಾನದ ನಂತರ ತಾಮ್ರದ ಪಾತ್ರೆಯಲ್ಲಿ ಉದಯಿಸುವ ಸೂರ್ಯನಿಗೆ ಕೆಂಪು ಹೂವು ಮತ್ತು ಕುಂಕುಮ ಹಾಕಿದ ನೀರನ್ನು ಅರ್ಪಿಸಬೇಕು. ನೀರನ್ನು ಅರ್ಪಿಸುವಾಗ ಸೂರ್ಯನ ಮಂತ್ರಗಳನ್ನು ಪಠಿಸಬೇಕು.

ಸೂರ್ಯ ದೇವರ ಪ್ರಾರ್ಥನೆಗೆ ನೀವು ಪಠಿಸಬೇಕಾದ ಶಕ್ತಿಶಾಲಿ ಮಂತ್ರಗಳು

ಸೂರ್ಯ ದೇವರ ಪ್ರಾರ್ಥನೆಗೆ ನೀವು ಪಠಿಸಬೇಕಾದ ಶಕ್ತಿಶಾಲಿ ಮಂತ್ರಗಳು

1.ಓಂ ಅಶ್ವ ಧ್ವಜಯಾ ವಿಷ್ಮಾ ಪಾಶಾ ಹಸ್ತಾಯೆ ಧಿಮಾಹಿ ತನ್ನೋಹ್ ಸೂರ್ಯ ಪ್ರಚೋದಯಾತ್

ವಿವರಣೆ: ಕುದುರೆಯ ಧ್ವಜವನ್ನು ಹಿಡಿದುಕೊಂಡು ಮತ್ತು ಪಾಶವನ್ನು ಕೈಯಲ್ಲಿ ಹಿಡಿದಿರುವ ದೇವರು. ಸೂರ್ಯ ದೇವರು ನನ್ನ ಜಾಣ್ಮೆಯನ್ನು ಬೆಳಗಲಿ.

2.ಓಂ ಭಾಸ್ಕರಾಯೇ ವಿದ್ಮಯೆ ಮಹದಿಯುದಿಕಾರಯ ಧಿಮಾಹಿ ತನ್ನೋ ಆದಿತ್ಯ ಪ್ರಚೋದಯಾತ್

ವಿವರಣೆ: ಬೆಳಕಿನ ಏಕೈಕ ಮೂಲವಾಗಿರುವಂತಹ ಭಾಸ್ಕರ ದೇವರನ್ನು ನಾನು ಪ್ರಾರ್ಥಿಸುವೆನು. ಜಗತ್ತನ್ನು ಬೆಳಗುವವನ ಪ್ರಾರ್ಥಿಸುವೆನು. ಆದಿತ್ಯ ದೇವರು ನನ್ನ ಜಾಣ್ಮೆಯನ್ನು

3.ಓಂ ಆದಿತ್ಯ ವಿದ್ಮಯೆ ಸಹಸ್ರ ಕಿರಣಾಯೆ ಧಿಮಾಹಿ ತನ್ನೋ ಸೂರ್ಯ ಪ್ರಚೋದಯಾತ್

ವಿವರಣೆ: ನಾನು ಆದಿತ್ಯ ದೇವರನ್ನು ಪ್ರಾರ್ಥಿಸುವೆನು. ಸಹಸ್ರ ಕಿರಣಗಳನ್ನು ಹೊಂದಿರುವವರು. ಸೂರ್ಯ ದೇವರು ನನ್ನ ಜಾಣ್ಮೆಯನ್ನು ಬೆಳಗಲಿ.

4.ನಮಃ ಸೂರ್ಯ ಶಾಂತಯ ಸರ್ವ ರೋಗ ನಿವಾರಣೆ ಆಯುರಾರೋಗ್ಯಂ ಐಶ್ವರ್ಯಂ ದೇಹಿ ದೇವಹ ಜಗತ್ಪತೇ

ವಿವರಣೆ: ಪ್ರೀತಿಯ ಸೂರ್ಯ ದೇವರೇ, ಎಲ್ಲಾ ರೀತಿಯ ರೋಗಗಳನ್ನು ನಿವಾರಣೆ ಮಾಡಿ, ಶಾಂತಿ, ದೀರ್ಘಾಯುಷ್ಯ, ಆರೋಗ್ಯ ಮತ್ತು ಸಂಪತ್ತು ಕರುಣಿಸಿ.

5.ಓಂ ನಮೋ ಶ್ರೀ ಸೂರ್ಯಾಯ ಸಹಸ್ರ ಕಿರಣಾಯ ಸಿಧಿ ಸಿದ್ಧ ಕರಾಯ ಮನ ವಂಚಿತ್ ಪುರಾಯ ಕಶ್ಮತಾಮ್ ಚುರಾಯಾಮ್ ಓಂ ಹ್ರೆಮ್ ಸೂರ್ಯ ನಮೋ ನಮಃ ವಿವರಣೆ: ಸಹಸ್ರ ಕಿರಣಗಳನ್ನು ಹೊಂದಿರುವ, ಯಶಸ್ಸು ತಂದುಕೊಡುವ, ನಮ್ಮ ಬೇಡಿಕೆಗಳನ್ನು ಈಡೇರಿಸುವ, ಸಂಕಷ್ಟಗಳನ್ನು ನಿವಾರಿಸುವ ಶ್ರೀ ಸೂರ್ಯ ದೇವರಿಗೆ ನಾನು ನಮಸ್ಕರಿಸುವೆನು. ಇಂತಹ ದೇವರಿಗೆ ನಾನು ಶಿರಭಾಗಿ ನಮಿಸುವೆನು.

ಧನು ಸಂಕ್ರಾಂತಿಯ ಮಹತ್ವ

ಧನು ಸಂಕ್ರಾಂತಿಯ ಮಹತ್ವ

ಸೂರ್ಯನು ತನ್ನ ರಾಶಿಯನ್ನು ಬದಲಿಸುವ ಸಮಯಕ್ಕೆ ಮಹತ್ವವಿದೆ. ಸೂರ್ಯನು ಒಂದು ತಿಂಗಳ ನಂತರ ರಾಶಿಯನ್ನು ಬದಲಿಸುತ್ತಾನೆ. ಧನು ರಾಶಿಗೆ ಸೂರ್ಯನು ಬರುವ ಅವಧಿಗೆ ಧನು ಸಂಕ್ರಮಣ ಎನ್ನುವರು. ಈ ದಿನದಿಂದ ಕರ್ಮಗಳು ಪ್ರಾರಂಭವಾಗುತ್ತವೆ. ಹಿಂದೂ ಪದ್ಧತಿಯ ಪ್ರಕಾರ ಧನು ಸಂಕ್ರಮಣ ಅವಧಿಯಲ್ಲಿ ಅಂದರೆ ಸೂರ್ಯನು ಧನುರಾಶಿಯಲ್ಲಿ ಇರುವ ಸಮಯದಲ್ಲಿ ಮದುವೆ, ಗೃಹ ಪ್ರವೇಶ, ನಾಮಕರಣ, ಉಪನಯನ, ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನು ನಿಷೇಧಿಸಲಾಗುತ್ತದೆ. ಕರ್ಮಗಳ ಅವಧಿಯನ್ನು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ.

ಮಾರ್ಗಶಿರ ಮತ್ತು ಪುಷ್ಯ ಮಾಸಗಳು ಸೂರ್ಯನಿಗೆ ಸಮರ್ಪಿತವಾದ ಮಾಸಗಳು. ಧನು ಸಂಕ್ರಾಂತಿಯು ಮಾರ್ಗಶಿರ ಮಾಸದಲ್ಲಿ ಬರುತ್ತದೆ. ಆದ್ದರಿಂದ ಧನು ಸಂಕ್ರಾಂತಿಯ ಸಮಯದಲ್ಲಿ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಶುಭಫಲ ಪ್ರಾಪ್ತಿಯಾಗುತ್ತದೆ.

English summary

Dhanu Sankranti 2022 Date, Time, Shubh Muhurat, Puja Vidhi, Rituals and Significance

Here we are discussing about Dhanu Sankranti 2022 Date, Time, Shubh Muhurat, Puja Vidhi, Rituals and Significance. Read more.
X
Desktop Bottom Promotion