Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ನ.2ಕ್ಕೆ ಧನತ್ರಯೋದಶಿ: ಯಾವ ವಸ್ತು ಖರೀದಿಸಿದರೆ ಶುಭ, ಯಾವ ವಸ್ತು ಅಶುಭ? ಇಲ್ಲಿದೆ ಪಟ್ಟಿ
ಲಕ್ಷ್ಮಿ ಪೂಜೆಗೆ ಪ್ರಸಿದ್ಧಿಯಾದ ಧನ್‌ತೆರೇಸ್ ಅಥವಾ ಧನತ್ರಯೋದಶಿಯನ್ನು ಈ ವರ್ಷ ನವೆಂಬರ್ 2ರಂದು ಆಚರಣೆ ಮಾಡಲಾಗುತ್ತದೆ. ಇದು ಯಾವಾಗಲೂ ದೀಪಾವಳಿ ಸಂದರ್ಭದಲ್ಲಿ ಬರುವುದು. ಈ ದಿನ ಲಕ್ಷ್ಮಿಯನ್ನು ಪೂಜಿಸುವುದರಿಂದ ಸಂಪತ್ತು ವೃದ್ಧಿಯಾಗುವುದು ಎಂಬ ನಂಬಿಕೆಯಿದೆ. ಮುಖ್ಯವಾಗಿ ಇದು ಚಿನ್ನಕೊಳ್ಳಲು ಬಹಳ ಪ್ರಾಶಸ್ತ್ಯವಾದ ದಿನವಾಗಿದೆ.
ಆದರೆ, ಚಿನ್ನದ ಹೊರತಾಗಿ ಈ ದಿನ ಅದೃಷ್ಟಕ್ಕಾಗಿ ಯಾವ ವಸ್ತುಗಳನ್ನು ಖರೀದಿಸಬೇಕು? ಯಾವ ವಸ್ತುವನ್ನು ಖರೀದಿಸಬಾರದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ, ಪ್ರತಿಯೊಬ್ಬರಿಗೂ ಚಿನ್ನ ಖರೀದಿಸಲು ಸಾಧ್ಯವಿರುವುದಿಲ್ಲ. ಆದ್ದರಿಂದ ಅದನ್ನು ಈ ಲೇಖನದಲ್ಲಿ ನೋಡೋಣ.
ಧನತ್ರಯೋದಶಿಯಂದು ಯಾವ ವಸ್ತುವನ್ನು ಖರೀದಿಸಿದರೆ ಶುಭ, ಯಾವುದು ಅಶುಭ ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಧನತ್ರಯೋದಶಿಯಂದು ಅದೃಷ್ಟಕ್ಕಾಗಿ ಖರೀದಿಸಬಹುದಾದ ವಸ್ತುಗಳು ಹೀಗಿವೆ:

ಪಾತ್ರೆಗಳು:
ಧನತ್ರಯೋದಶಿ ದಿನದಂದು ಪಾತ್ರೆಗಳನ್ನು ಖರೀದಿಸುವುದು ವಾಡಿಕೆ ಆದರೆ, ಯಾವ ಪಾತ್ರೆಗಳನ್ನು ಖರೀದಿಸಬೇಕು ಎಂದು ಗೊಂದಲಕ್ಕೊಳಗಾಗುತ್ತಾರೆ. ಪಾತ್ರೆಗಳು ದೈನಂದಿನ ಜೀವನದ ಭಾಗವಾಗಿರುವುದರಿಂದ, ಬೆಳ್ಳಿ ಅಥವಾ ಹಿತ್ತಾಳೆ ಪಾತ್ರೆಗಳಿಗೆ ಖರೀದಿಸಬಹುದು ಏಕೆಂದರೆ ಇವುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಜೊತೆಗೆ ಪೂಜೆಯ ಸಮಯದಲ್ಲಿ ಬಳಸಬಹುದು.

ಪೊರಕೆ :
ಪೊರಕೆಯನ್ನು ಲಕ್ಷ್ಮಿ ದೇವಿಯ ವಾಸಸ್ಥಾನ ಎಂದು ನಂಬಿಕೆ ಇದೆ. ಇದು ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕಿ, ಸಕಾರಾತ್ಮಕತೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಪೊರಕೆ ಮನೆಯಿಂದ ಬಡತನ ಮತ್ತು ದುಃಖವನ್ನು ತೊಡೆದುಹಾಕಿ, ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆಯಿದೆ.

ಗೋಮತಿ ಚಕ್ರ:
ಗೋಮತಿ ಚಕ್ರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇವು ದ್ವಾರಕಾದ ಗೋಮತಿ ನದಿಯಲ್ಲಿ ಕಂಡುಬರುವ ಒಂದು ರೀತಿಯ ಬಸವನಹುಳ. ಗೋಮತಿ ಚಕ್ರವು ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಿಕೆಯಿದೆ.11 ಗೋಮತಿ ಚಕ್ರಗಳನ್ನು ಹಳದಿ ಬಟ್ಟೆಯಲ್ಲಿ ಹಾಕಿ, ಧನತ್ರಯೋದಶಿ ದಿನ ಲಾಕರ್‌ನಲ್ಲಿ ಇಡುವುದು ಶುಭ ಎಂದು ಹೇಳಲಾಗುತ್ತದೆ.

ಚಿನ್ನ ಅಥವಾ ಬೆಳ್ಳಿಯ ಆಭರಣ:
ದೀಪಾವಳಿ ಸಮಯದಲ್ಲಿ ಶಾಪಿಂಗ್ ಮಾಡಲು ಆಭರಣಗಳು ಅತ್ಯಂತ ಆದ್ಯತೆಯ ವಸ್ತುವಾಗಿದೆ. ಆದರೆ, ಧನತ್ರಯೋದಶಿ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಸುವುದರಿಂದ ಅದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ಎಲೆಕ್ಟ್ರಾನಿಕ್ಸ್ ಅಥವಾ ಗ್ಯಾಜೆಟ್‌ಗಳು:
ರೆಫ್ರಿಜರೇಟರ್, ಓವನ್‌ಗಳು, ಮೊಬೈಲ್ ಫೋನ್‌ಗಳು ಅಥವಾ ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಲು ನೀವು ಕಾಯುತ್ತಿದ್ದರೆ, ಅನೇಕ ಅಂಗಡಿಗಳು ಮತ್ತು ಬ್ರಾಂಡ್‌ಗಳು ಈ ವಸ್ತುಗಳ ಮೇಲೆ ಭಾರಿ ರಿಯಾಯಿತಿಯನ್ನು ನೀಡುವುದರಿಂದ ಅದನ್ನು ಖರೀದಿಸಲು ಇದು ಉತ್ತಮ ಸಮಯ.

ಧನತ್ರಯೋದಶಿ ದಿನದಂದು ಖರೀದಿಸಬಾರದಂತಹ ವಸ್ತುಗಳು ಹೀಗಿವೆ:
- ಧನತ್ರಯೋದಶಿ ದಿನದಂದು ಅನೇಕ ಜನರು ಉಕ್ಕಿನ ಪಾತ್ರೆಗಳನ್ನು ಖರೀದಿಸುತ್ತಾರೆ. ಆದರೆ, ಉಕ್ಕು ಲೋಹವಲ್ಲ. ರಾಹು ಇದರ ಮೇಲೆ ಹೆಚ್ಚು ಪ್ರಭಾವ ಬೀರುವುದರಿಂದ ಅದನ್ನು ತಪ್ಪಿಸಬೇಕು. ನೈಸರ್ಗಿಕ ಲೋಹಗಳನ್ನು ಮಾತ್ರ ಖರೀದಿಸಬೇಕು.
- ಅಲ್ಯೂಮಿನಿಯಂನಿಂದ ಮಾಡಿದ ಯಾವುದೇ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಿ ಏಕೆಂದರೆ ಇದು ದುರಾದೃಷ್ಟದ ಸೂಚಕವೆಂದು ಪರಿಗಣಿಸಲಾಗಿದೆ.
- ಈ ದಿನ ಯಾವುದೇ ಹರಿತವಾದ ವಸ್ತುಗಳನ್ನು ಖರೀದಿಸುವುದು ಮಂಗಳಕರವಲ್ಲ, ಆದ್ದರಿಂದ ಚಾಕು, ಕತ್ತರಿ ಅಥವಾ ಯಾವುದೇ ಹರಿತವಾದ ಆಯುಧವನ್ನು ಖರೀದಿಸಬೇಡಿ.
- ಪ್ಲಾಸ್ಟಿಕ್‌ನಿಂದ ಮಾಡಿದ ವಸ್ತುಗಳನ್ನು ಖರೀದಿಸುವುದು ಬೇಡ, ಏಕೆಂದರೆ ಅವು ಯಾವುದೇ ಅದೃಷ್ಟವನ್ನು ತರುವುದಿಲ್ಲ.
- ಜ್ಯೋತಿಷಿಗಳ ಪ್ರಕಾರ ಕಪ್ಪು ಬಣ್ಣದ ಯಾವುದೇ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಿ. ಕಪ್ಪು ಅಶುಭದ ಸಂಕೇತ.
- ಈ ದಿನದಂದು ಎಣ್ಣೆ ಅಥವಾ ತುಪ್ಪದಂತಹ ವಸ್ತುಗಳನ್ನು ಖರೀದಿಸಲು ಹೋದರೆ, ಸ್ವಲ್ಪ ಜಾಗರೂಕರಾಗಿರಿ. ಅಂತಹ ವಿಷಯಗಳನ್ನು ಕಲಬೆರಕೆ ಮಾಡಬಹುದು ಮತ್ತು ಈ ದಿನ ಅಶುದ್ಧ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು.



Click it and Unblock the Notifications