Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dhanteras 2022: ಧನತ್ರಯೋದಶಿ ದಿನ ಈ ವಸ್ತುಗಳನ್ನು ದಾನ ಮಾಡುವುದು ಸಂಪತ್ತನ್ನು ಆಹ್ವಾನಿಸಿದಂತೆ
ದೀಪಾವಳಿ ಹಬ್ಬದ ಐದು ದಿನಗಳ ಸಂಭ್ರಮಕ್ಕೆ ನಾಂದಿ ಹಾಡುವ ಮೊದಲ ದಿನವೇ ದನತ್ರಯೋದಶಿ. ಈ ಹಬ್ಬದ ಮಹತ್ವವೇ ಈ ದಿನ ಚಿನ್ನ ಸೇರಿದಂತೆ ಕೆಲವು ವಸ್ತುಗಳನ್ನು ಖರೀದಿಸಿದರೆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ, ಸಂಪತ್ತು, ಸಮೃದ್ಧಿ ನಮ್ಮದಾಗುತ್ತದೆ ಎನ್ನಲಾಗುತ್ತದೆ.
ಈ ವರ್ಷ 2022ರಲ್ಲಿ ಧನ್‌ತೆರೇಸ್ ಅಕ್ಟೋಬರ್ 23 ರಂದು ಭಾನುವಾರ ಆಚರಿಸಲಾಗುತ್ತದೆ. ಈ ದಿನ ಭಗವಾನ್ ಧನ್ವಂತರಿ ಮತ್ತು ಕುಬೇರರನ್ನು ಪೂಜಿಸಲಾಗುತ್ತದೆ. ಧನ್‌ತೆರೇಸ್ ಹಬ್ಬದ ದಿನ ಚಿನ್ನ, ಪಾತ್ರೆ, ಗೋಮತಿ ಚಕ್ರ, ಪೊರಕೆ ಸೇರಿದಂತೆ ಕೆಲವು ವಸ್ತುಗಳನ್ನು ಖರೀದಿಸುವುದು ಮನೆಗೆ ಸಂಪತ್ತನ್ನು ಸ್ವಾಗತಿಸಿದಂತೆ ಎಂದು ನಂಬಲಾಗಿದೆ. ಹಾಗೆಯೇ ಈ ಶುಭ ದಿನ ಕೆಲವು ವಸ್ತುಗಳನ್ನು ದಾನ ಮಾಡುವುದು ಸಹ ಅಷ್ಟೇ ಶ್ರೇಷ್ಠತೆ ಹಾಗೂ ಇದನ್ನು ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಬರುವುದಿಲ್ಲ ಎಂಬ ನಂಬಿಕೆ ಇದೆ.
ಧನ್‌ತೆರೇಸ್ ದಿನದಂದು ಯಾವ್ಯಾವ ವಸ್ತುಗಳನ್ನು ದಾನ ಮಾಡುವುದರಿಂದ ಮನೆಗೆ ಶುಭ ಹಾಗೂ ಆಹಾರ ಧಾನ್ಯಗಳ ಕೊರತೆಯಾಗುವುದಿಲ್ಲ ಮುಂದೆ ನೋಡೊಣ:

ತೆಂಗಿನ ಕಾಯಿ
ತೆಂಗಿನಕಾಯಿಯನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಇದನ್ನು ಧನ್‌ತೆರೇಸ್ ದಿನದಂದು ದಾನ ಮಾಡಬಹುದು.

ಸಿಹಿ ಖಾದ್ಯಗಳು
ಧನ್‌ತೆರೇಸ್ ಸಂದರ್ಭದಲ್ಲಿ ಕುಟುಂಬದವರಿಗೆ, ಸ್ನೇಹಿತರಿಗೆ ಸಿಹಿತಿಂಡಿಗಳನ್ನು ದಾನ ಮಾಡುವುದು ಮನೆಗೆ ಶುಭವನ್ನು ತರುತ್ತದೆ.

ಬಟ್ಟೆ
ಅಗತ್ಯವಿರುವವರಿಗೆ ಬಟ್ಟೆಗಳನ್ನು ನೀಡುವ ಮೂಲಕ ನೀವು ಅವರ ದೀಪಾವಳಿಯನ್ನು ಬೆಳಗಿಸಬಹುದು. ಲಕ್ಷ್ಮಿ ದೇವಿಯು ಬಡವರಿಗೆ ಒಳ್ಳೆಯದನ್ನು ಮಾಡುವ ಮೂಲಕ ಸಂತೋಷಪಡುತ್ತಾಳೆ. ಆದ್ದರಿಂದ, ನೀವು ಬಯಸಿದರೆ ದೀಪಾವಳಿಯ ಮೊದಲ ದಿನ ಧನ್‌ತೆರೇಸ್ ಹಬ್ಬದಂದು ಬಟ್ಟೆಗಳನ್ನು ದಾನ ಮಾಡಬಹುದು.

ಬಡವರಿಗೆ ಅನ್ನದಾನ ಮಾಡಿ
ಧನ್‌ತೆರೇಸ್ ದಿನದಂದು ಬಡವರಿಗೆ ಅನ್ನದಾನ ಮಾಡಿ. ಅಲ್ಲದೆ, ಊಟ ಮಾಡಿದ ನಂತರ ಅವರಿಗೆ ದಕ್ಷಿಣೆಯನ್ನು ನೀಡಿ ಅವರು ಸಂತೃಪ್ತರಾದರೆ ನಿಮಗೆ ಶುಭ ಉಂಟಾಗುತ್ತದೆ.

ಧಂತೇರಸ್ ದಿನದಂದು ಈ ವಸ್ತುಗಳನ್ನು ಖರೀದಿಸುವುದು ಮಂಗಳಕರ
ಶ್ರೀಯಂತ್ರ, ಬೆಳ್ಳಿ ಅಥವಾ ಹಿತ್ತಾಳೆ ಪಾತ್ರೆಗಳು, ಚಿನ್ನ ಮತ್ತು ಬೆಳ್ಳಿ, ಲಕ್ಷ್ಮಿ ಮತ್ತು ಗಣೇಶ ಚಿತ್ರಗಳಿರುವ ನಾಣ್ಯಗಳು, ಪಾತ್ರೆಗಳು, ಪೊರಕೆಗಳು, ಬೆಳ್ಳಿ ಪಾತ್ರೆಗಳನ್ನು ಖರೀದಿಸುವುದು ಸಂಪತ್ತಿನ ಸಂಕೇತವಾಗಿದೆ.

ಧಂತೇರಸ್ ಪೂಜೆಯ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸಿ
* ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತಯೇ:
* ಅಮೃತ ಕಲಶ ಹಸ್ತಯ ಸರ್ವಭಯ ವಿನಾಶ, ಸರ್ವ ರೋಗ ನಿವಾರಣಾ
ತ್ರಿಲೋಕಪಥಯ ತ್ರಿಲೋಕನಾಥಾಯ ಶ್ರೀ ಮಹಾವಿಷ್ಣು ಸ್ವರೂಪ
ಶ್ರೀ ಧನ್ವಂತರಿ ಸ್ವರೂಪ ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ನಮಃ॥



Click it and Unblock the Notifications