Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಾವಿನ ಬಗ್ಗೆ ಯಮ ಧರ್ಮ ತಿಳಿಸಿದ ರಹಸ್ಯ ಯಾವುದು?
ಗೌತಮ ಬುದ್ಧನ ಒಂದು ಕಥೆಯಲ್ಲಿ ಸಾವಿಲ್ಲದ ಮನೆಯಿಂದ ಒಂದು ಹಿಡಿ ಸಾಸಿವೆ ತೆಗೆದುಕೊಂಡು ಬರಲು ತಿಳಿಸಿದಾಗ ಅವನ ಶಿಷ್ಯರಿಗೆ ಒಂದೂ ಮನೆ ಸಿಗಲಿಲ್ಲವಂತೆ. ಅಂದರೆ ಸಾವಿಲ್ಲದ ಮನೆಯೇ ಇಲ್ಲವೆಂದಾಯ್ತು. ಜಗತ್ತಿನ ಪ್ರತಿಯೊಂದು ಜೀವಿಗೂ ಒಂದು ಆಯಸ್ಸಿದೆ. ಕೆಲವು ಅಲ್ಪಾಯುಷಿಗಳಾದರೆ ಕಡಲಾಮೆಯಂತಹವು ಶತವರ್ಷಗಳಿಗೂ ಹೆಚ್ಚು ಕಾಲ ಜೀವಿಸುತ್ತವೆ. ಸಾವು ಯಾರನ್ನೂ ಕೇಳಿ ಬರುವುದಿಲ್ಲ, ಯಾರ ಆಯಸ್ಸೂ ಇಷ್ಟೇ ಎಂದು ಯಾರಿಗೂ ಗೊತ್ತಿಲ್ಲ.
ಒಂದು ವೇಳೆ ಗೊತ್ತಿದ್ದರೆ ಅದು ಸಾವಿನ ಅಧಿಪತಿಯಾದ ಯಮಧರ್ಮನಿಗೆ ಮಾತ್ರ. ಲೋಕದಲ್ಲಿ ಎಷ್ಟೇ ಗಳಿಸಿದರೂ ಸಾವನ್ನು ಎದುರಿಸಿ ಉಳಿಯಲು ಯಾರಿಂದಲೂ ಸಾಧ್ಯವಿಲ್ಲ. ದೊರೆಗೂ ಭಿಕಾರಿಗೂ ಸಾವು ಸರಿಸಮಾನ. ಸಾವಿನ ಬಗ್ಗೆ ಎಲ್ಲಾ ಧರ್ಮಗಳಲ್ಲಿಯೂ ವಿವಿಧ ರೀತಿಯ ವಿವರಣೆಗಳಿವೆ. ಸಾವಿನ ನಂತರದ ಬದುಕಿಗೆ ಹಾಗೂ ಆತ್ಮ ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ಆವರಿಸಿಕೊಳ್ಳುವ ವಿಷಯವನ್ನು ಹಲವು ಧರ್ಮಗಳಲ್ಲಿ ವಿವರಣೆ ಸಿಗುತ್ತದೆ. ಸಾವಿನ ಬಗ್ಗೆ ಹಾಗೂ ಸಾವಿನ ಬಳಿಕದ ಜೀವನದ ಬಗ್ಗೆ ಕುತೂಹಲವುಳ್ಳವರಿಗೆ ಬೋಲ್ಡ್ ಸ್ಕೈ ಹಲವು ಮಾಹಿತಿಗಳನ್ನು ಇಲ್ಲಿ ನೀಡುತ್ತಿದೆ.
ಸಾವಿನ ಅಧಿಪತಿಯಾದ ಯಮಧರ್ಮರಾಯ ಹಾಗೂ ನಚಿಕೇತನೆಂಬ ಹುಡುಗನ ನಡುವೆ ನಡೆದ ಸಂವಾದದಲ್ಲಿ ಯಮಧರ್ಮ ಸಾವಿನ ಕುರಿತು ಹಲವು ಸಂಗತಿಗಳನ್ನು ತಿಳಿಸಿದ್ದುದು ಪುರಾಣಗಳಲ್ಲಿ ದಾಖಲಾಗಿದೆ. ಈ ಸಂಗತಿಗಳಲ್ಲಿ ಪ್ರಮುಖವಾದುದನ್ನು ಇಲ್ಲಿ ವಿವರಿಸಲಾಗಿದೆ.

ನಚಿಕೇತನ ಮೂರು ವರಗಳು
ನಚಿಕೇತ ಯಮಧರ್ಮನನ್ನು ಭೇಟಿಯಾದಾಗ ಮೂರು ವರಗಳನ್ನು ಬೇಡಿದನಂತೆ. ಮೊದಲನೆಯದು ತಂದೆಯ ಪ್ರೀತಿ, ಎರಡನೆಯದು ಅಗ್ನಿ ವಿದ್ಯೆಯ ಬಗ್ಗೆ ಅರಿಯುವುದು ಹಾಗೂ ಮೂರನೆಯದು ಆತ್ಮಜ್ಞಾನ ಮತ್ತು ಸಾವಿನ ಬಗ್ಗೆ ಅರಿವು. ಯಮಧರ್ಮ ಮೊದಲ ಎರಡು ವರಗಳನ್ನು ದಯಪಾಲಿಸಲು ಒಪ್ಪಿದರೂ ಮೂರನೆಯ ವರವನ್ನು ನೀಡಲು ಹಿಂದೇಟು ಹಾಕಿದನಂತೆ. ಆದರೆ ತನಗೆ ಬೇಕೇ ಬೇಕು ಎಂದು ನಚಿಕೇತ ಹಠ ಹಿಡಿದುದರಿಂದ ಅನಿವಾರ್ಯವಾಗಿ ಸಾವಿನ ಬಗ್ಗೆ ಹಲವು ಮಾಹಿತಿಗಳನ್ನು ನೀಡಲೇ ಬೇಕಾಯಿತಂತೆ. ಆ ವಿವರಗಳು ಇಂತಿವೆ

ಓಂ ಕಾರ
ಯಮಧರ್ಮನ ಪ್ರಕಾರ ಓಂ ಎಂಬ ಪಠನ ಪರಮಾತ್ಮನ ಸ್ವರೂಪವಾಗಿದೆ. ಮಾನವನ ಹೃದಯದಲ್ಲಿ ಬ್ರಹ್ಮ ನೆಲೆಸಿದ್ದಾನೆ.

ಆತ್ಮಕ್ಕೆ ಸಾವಿಲ್ಲ
ದೇಹ ನಶ್ವರ, ಆತ್ಮ ಶಾಶ್ವತ. ಆತ್ಮಕ್ಕೆ ಸಾವಿಲ್ಲ. ದೇಹ ಅಳಿದ ಬಳಿಕ ಆತ್ಮ ಇನ್ನೊಂದು ಶರೀರವನ್ನು ಹುಡುಕಿಕೊಳ್ಳುತ್ತದೆ.

ಅಂತಿಮವಾಗಿ ಪಡೆಯುವ ಬ್ರಹ್ಮ ರೂಪ
ಹಲವು ಬಾರಿಯ ಹುಟ್ಟು ಸಾವಿನ ಬಳಿಕ ಆತ್ಮ ಕಡೆಗೆ ಮುಕ್ತಿ ಪಡೆದು ಪರಮಾತ್ಮನ ಅಂದರೆ ಬ್ರಹ್ಮನ ಸಾನಿಧ್ಯ ಪಡೆಯುತ್ತದೆ. ಈ ರೂಪಕ್ಕೆ ಬ್ರಹ್ಮ ರೂಪ ಎಂದು ಕರೆಯುತ್ತಾರೆ.

ನಾಸ್ತಿಕ ಆತ್ಮ ಶಾಂತಿಯನ್ನು ಹುಡುಕುತ್ತಿರುತ್ತದೆ
ದೇವರನ್ನು ನಂಬದ ನಾಸ್ತಿಕರಿಗೂ ಸಾವು ಬರುತ್ತದೆ. ಆದರೆ ಅವರ ಆತ್ಮಕ್ಕೆ ಶಾಂತಿ ದೊರಕಲಾರದೇ ಶಾಂತಿಯನ್ನು ಹುಡುಕುತ್ತಾ ಹಲವು ಜನ್ಮಗಳನ್ನು ಎತ್ತಬೇಕಾಗುತ್ತದೆ. ಆಸ್ತಿಕನಾಗಿ ಭಗವಂತನ ಇರುವಿಕೆಯನ್ನು ಅರಿಯುವವರೆಗೂ ಇದು ಮುಂದುವರೆಯುತ್ತದೆ.



Click it and Unblock the Notifications
