Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ದಸರಾ 2023: ವಿಜಯದಶಮಿಯಂದು ಇವುಗಳನ್ನು ನೋಡಿದರೆ ಅದೃಷ್ಟ
ಅಕ್ಟೋಬರ್ 24ರಂದು ವಿಜಯದಶಮಿಯನ್ನು ಸಡಗರದಿಂದ ಆಚರಿಸಲಾಗುತ್ತಿದೆ. ದುಷ್ಟಶಕ್ತಿಯ ವಿರುದ್ಧ ಸಾರಿದ ಜಯದ ಆಚರಣೆಯೇ ವಿಜಯದಶಮಿ. ದುರ್ಗಾ ದೇವಿ ಮಹಿಷಾಸುರ ಎಂಬ ಅಸುರನನ್ನು ಹತ್ಯೆ ಮಾಡಿದ ದಿನವೇ ವಿಜಯದಶಮಿ. ಪೌರಾಣಿಕ ಕತೆಯ ಪ್ರಕಾರ ರಾಮ ರಾವಣನನ್ನು ಕೊಂದ ದಿನವನ್ನು ವಿಜಯದಶಮಿಯೆಂದು ಆಚರಿಸಲಾಗುವುದು.

ವಿಜಯದಶಮಿಯಂದು ಕೆಲವು ವಸ್ತುಗಳನ್ನು ನೋಡುವುದರಿಂದ ಅಥವಾ ಕೆಲ ಕಾರ್ಯ ಮಾಡುವುದರಿಂದ ಅದೃಷ್ಟ ಒಲಿಯಲಿದೆ ಎಂದು ನಂಬಲಾಗುವುದು. ಅವುಗಳೇನು ಎಂದು ನೋಡೋಣ ಬನ್ನಿ:

ನೀರಿನಲ್ಲಿ ಮೀನು ನೋಡಿದರೆ
ವಿಜಯದಶಮಿಯಂದು ನೀರಿನಲ್ಲಿ ಮೀನು ನೋಡಿದರೆ ಶುಭವೆಂದು ಪರಿಗಣಿಸಲಾಗಿದೆ. ಇದರಿಂದ ಜೀವನದಲ್ಲಿರುವ ಎಲ್ಲಾ ಕಷ್ಟಗಳು ದೂರಾಗುವುದು ಎಂಬ ನಂಬಿಕೆ ಇದೆ.

ನೀಲಕಂಠ ಪಕ್ಷಿಯನ್ನು ನೋಡುವುದು
ದಸರಾ ಹಬ್ಬದಂದು ನೀಲಕಂಠ ಪಕ್ಷಿಯನ್ನು ನೋಡಿದರೆ ತುಂಬಾನೇ ಶುಭ ಎಂದು ಪರಿಗಣಿಸಲಾಗಿದೆ. ನಂಬಿಕೆಗಳ ಪ್ರಕಾರ ಇದನ್ನು ನೋಡಿದವರ ಅದೃಷ್ಟ ಹೆಚ್ಚುವುದು ಅಲ್ಲದೆ ಜೀವನದಲ್ಲಿ ಏಳಿಗೆ ಉಂಟಾಗುವುದು.

ರಾಮ ಅಥವಾ ಶಿವನ ದೇವಾಲಯಕ್ಕೆ ಹೋಗುವುದು
ದಸರಾ ಹಬ್ಬದಂದು ರಾಮ ಅಥವಾ ಶಿವನ ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆಯುವುದರಿಂದ ಶುಭ ಉಂಟಾಗುವುದು. ಈ ದಿನ ರಾಮ ಹಾಗೂ ಶಿವನ ಆರಾಧನೆ ಮಾಡಬೇಕು.

ಹನುಮಂತನಿಗೆ ಪಾನ್ ಇಡುವುದು
ದಸರಾ ಹಬ್ಬದಂದು ರಾಮನ ಮಾತ್ರವಲ್ಲ ರಾಮನ ಭಕ್ತ ಹನುಮಂತನನ್ನು ಕೂಡ ಪೂಜಿಸಬೇಕು. ಹನುಮಂತನಿಗೆ ಪಾನ್ ಅರ್ಪಿಸುವುದರಿಂದ ಶುಭ ಉಂಟಾಗುವುದು. ಪಾನ್ ಪ್ರೀತಿ ಹಾಗೂ ಗೌರವ, ವಿಜಯದ ಸಂಕೇತವಾಗಿದೆ.



Click it and Unblock the Notifications
