Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ಬಾಲಚಂದ್ರ ಸಂಕಷ್ಟ ಚತುರ್ಥಿಯ ದಿನಾಂಕ, ಸಮಯ, ಮುಹೂರ್ತ, ಆಚರಣೆಯ ವಿಧಾನ ಮತ್ತು ಮಹತ್ವವೇನು?
ಬಾಲಚಂದ್ರ ಸಂಕಷ್ಟ ಚತುರ್ಥಿಯನ್ನು ದೇಶದೆಲ್ಲೆಡೆ ಶ್ರದ್ಧ ಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. ಆ ದಿನ ವಿನಾಯಕನನ್ನು ನೆನೆದರೆ ಇಷ್ಟಾರ್ಥಗಳೆಲ್ಲಾ ಸಿದ್ಧಿಸುತ್ತದೆ ಎಂಬ ನಂಬಿಕೆಯಿದೆ.

ಬಾಲಚಂದ್ರ ಸಂಕಷ್ಟ ಚತುರ್ಥಿಯನ್ನು ಯಾವಾಗ ಆಚರಣೆ ಮಾಡಲಾಗುತ್ತದೆ. ಶುಭ ಮುಹೂರ್ತ ಯಾವುದು? ಅದರ ಮಹತ್ವವೇನು? ಆಚರಣೆ ಮಾಡುವ ವಿಧಾನ ಹೇಗೆ ಎಂಬುವುದನ್ನು ಹೇಳ್ತೀವಿ.
ಈ ಬಾರಿ ಮಾರ್ಚ್11ರ ಶನಿವಾರದಂದು ಬಾಲಚಂದ್ರ ಸಂಕಷ್ಟ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ದಿನ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಗಣಪನನ್ನು ನಾವು ಸಂಕಷ್ಟ ಹರ ಎಂದು ಕರೆಯುತ್ತೇವೆ. ಅದೇ ರೀತಿ ಈ ದಿನ ವಿನಾಯಕನಿಗೆ ಕಟ್ಟುನಿಟ್ಟಿನ ವೃತ ಕೈಗೊಂಡರೆ ಸಂಕಷ್ಟಗಳೆಲ್ಲಾ ಪರಿಹಾರವಾಗಲಿದೆ ಎಂಬ ನಂಬಿಕೆಯಿದೆ.
ಬಾಲಚಂದ್ರ ಸಂಕಷ್ಟ ಚತುರ್ಥಿಯ ಸಮಯ ಮತ್ತು ಮುಹೂರ್ತ
ಬಾಲಚಂದ್ರ ಸಂಕಷ್ಟ ಚತುರ್ಥಿ ದಿನಾಂಕ - ಮಾರ್ಚ್ 11 ರ ಶನಿವಾರ , 2023
ಚತುರ್ಥಿ ತಿಥಿ ಆರಂಭ - ಮಾರ್ಚ್ 10ರ ರಾತ್ರಿ 09:42ಕ್ಕೆ
ಚುತುರ್ಥಿ ತಿಥಿ ಮುಕ್ತಾಯ - ಮಾರ್ಚ್ 11ರ ರಾತ್ರಿ 10:05ಕ್ಕೆ
ಬಾಲಚಂದ್ರ ಸಂಕಷ್ಟ ಚತುರ್ಥಿಯ ಮಹತ್ವವೇನು?
ಪ್ರತಿ ತಿಂಗಳು ಗಣೇಶನನ್ನು ಬೇರೆ ಬೇರೆ ಹೆಸರುಗಳಿಂದ ಸ್ತುತಿಸುತ್ತೇವೆ. ಸಾಮಾನ್ಯವಾಗಿ ಬಾಲಚಂದ್ರ ಸಂಕಷ್ಟ ಚತುರ್ಥಿಯನ್ನು ಕೃಷ್ಣಪಕ್ಷದಂದು ಆಚರಣೆ ಮಾಡಲಾಗುತ್ತದೆ. ಇದನ್ನು ಚಂದ್ರನನ್ನು ಕ್ಷಿಣಿಸುತ್ತಿರುವ ಹಂತ ಎಂದು ಕರೆಯಲಾಗುತ್ತದೆ. ಅಂದರೆ ಪೂರ್ಣ ಚಂದ್ರ ಕಾಣಿಸಿಕೊಂಡ ನಾಲ್ಕು ದಿನದ ನಂತರದ ದಿನದಂದು ಬಾಲಚಂದ್ರ ಸಂಕಷ್ಟ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತದೆ.
ಭಗವಾನ್ ಗಣೇಶನನ್ನು ವಿದ್ಯೆ, ಬುದ್ಧಿ, ಸಮೃದ್ಧಿಗಾಗಿ ಪೂಜಿಸಲಾಗುತ್ತದೆ. ಅದ್ರಲ್ಲೂ ಈ ದಿನ ಬಹಳ ಶ್ರೇಷ್ಠವಾದ ದಿನವಾಗಿದ್ದು, ಈ ದಿನ ಬೇಡಿಕೊಂಡರೆ ಸಕಲ ಇಷ್ಟಾರ್ಥಗಳೆಲ್ಲಾ ನೆರವೇರಲಿದ್ಯಂತೆ. ಭಕ್ತಾಧಿಗಳು ಯಾವುದಾದರೂ ಸಂಕಷ್ಟಗಳನ್ನು ಎದರಿಸುತ್ತಿದ್ದರೆ ಅಥವಾ ಭವಿಷ್ಯದಲ್ಲಿ ಆಗಲಿರುವ ಒಳ್ಳೆಯ ಕೆಲಸಕ್ಕೆ ವಿಘ್ನ ಎದುರಾಗಬಾರದೆಂದರೆ ಈ ದಿನ ಗಣೇಶನಿಗೆ ವ್ರತ ಸೇವೆಯನ್ನು ಸಲ್ಲಿಸಬಹುದು. ಈ ಸಂದರ್ಭದಲ್ಲಿ ಅಕ್ಕಿ, ಗೋಧಿ, ಏಕದಳ ಧಾನ್ಯಗಳನ್ನು ಸೇವಿಸುವಂತಿಲ್ಲ. ವ್ರತ ಆಹಾರವನ್ನು ಮಾತ್ರ ಸೇವಿಸಬಹುದು.
ಇನ್ನೂ ಈ ದಿನ ಭಕ್ತಾಧಿಗಳು ಓಂ ಬಾಲಚಂದ್ರಯ ನಮಃ ಎಂಬ ಮಂತ್ರವನ್ನು 108 ಬಾರಿ ಪಠಣೆ ಮಾಡಬೇಕು. ಇದರಿಂದ ಒಳ್ಳೆಯದಾಗುತ್ತದೆ. ಇದರ ಜೊತೆಗೆ ಬೆಳಗ್ಗೆ ಹಾಗೂ ಸಂಜೆ ಚಂದ್ರ ಉದಯವಾಗುವ ಮೊದಲು ಗಣೇಶ ಅಥರ್ವಶೀರ್ಷ ಸ್ತೂತ್ರವನ್ನು ಕೇಳಿದರೆ ಇನ್ನೂ ಒಳೆಯದು.
ಪೂಜಾ ವಿಧಾನ ಹೇಗಿರಬೇಕು?
* ಭಕ್ತಾಧಿಗಳು ಬೆಳಗ್ಗಿನ ಜಾವ ಬೇಗನೆ ಎದ್ದು ಪವಿತ್ರ ಸ್ನಾನ ಮಾಡಬೇಕು
* ಶುದ್ಧ ಮನಸ್ಸಿನಿಂದ ಉಪವಾಸ ಮಾಡುವ ಸಂಕಲ್ಪ ಕೈಗೊಳ್ಳಿ
* ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ದೇಸಿ ತುಪ್ಪದಿಂದ ದೀಪ ಹಚ್ಚಿ
* ಇನ್ನೂ ಗಣೇಶ ಮೂರ್ತಿಯನ್ನು ಹಳದಿ ಬಣ್ಣದ ಹೂವುಗಳಿಂದ ಅಲಂಕರಿಸಿ, ಹಳದಿ ತಿಲವಿಟ್ಟು, ಮೊದಕ, ಹಣ್ಣು ಹಂಪಲು ಸೇರಿದಂತೆ ಗಣೇಶನಿಗೆ ಪ್ರೀಯವಾದ ವಸ್ತುಗಳನ್ನು ಇಡಿ.
* ಗಣೇಶನಿಗೆ ಇಷ್ಟವಾದ ಗರಿಕೆ ಹುಲ್ಲನ್ನು ಕೂಡ ಪೂಜೆಗೆ ಇಡಿ
* ಸಂಜೆಯ ವೇಳೆ ಉಪವಾಸ ಮುರಿಯುವ ಮೊದಲು ಗಣೇಶನ ವ್ರತ ಕಥೆಯನ್ನು ಓದಿ, ಮಂತ್ರಗಳನ್ನು ಪಠಿಸಿ ನಂತರ ಉಪವಾಸ ಮುರಿಯಿರಿ.
* ಮುಖ್ಯವಾದ ವಿಚಾರ ನಕ್ಷತ್ರಗಳನ್ನು ನೋಡಿದ ನಂತರವೇ ಉಪವಾಸ ಮುರಿಯಬೇಕು.
ಮಂತ್ರಗಳು :
* ಓಂ ಗಣ್ ಗಣಪತಾಯೇ ನಮಃ
* ಓಂ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಾ ನಿರ್ವಿಘ್ನಮ್ ಕುರುಮೇದೇವಾ ಸರ್ವ ಕಾರ್ಯೇಶು ಸರ್ವಧಾ
ಬಾಲಚಂದ್ರ ಸಂಕಷ್ಟ ಚತುರ್ಥಿಯ ದಿನ ಗಣೇಶನನ್ನು ಶ್ರದ್ಧಾ ಭಕ್ತಿಯಿಂದ ನೆನೆದರೆ ಖಂಡಿತ ವಿನಾಯಕ ಒಲಿಯುತ್ತಾನೆ. ನಮ್ಮ ಇಷ್ಟಾರ್ಥಗಳೆಲ್ಲಾ ನೆರವೇರುತ್ತದೆ.



Click it and Unblock the Notifications


