Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
2021ರ ನವೆಂಬರ್‌ನಲ್ಲಿ ವಿವಾಹಕ್ಕಿರುವ ಶುಭದಿನಾಂಕ ಹಾಗೂ ಮುಹೂರ್ತಗಳ ಪಟ್ಟಿ ಇಲ್ಲಿದೆ
ಮದುವೆಗೆ ದಿನಾಂಕ ನಿರ್ಧಾರ ಮಾಡುವಾಗ, ಶುಭ ಮುಹೂರ್ತಗಳು ತುಂಬಾ ಮುಖ್ಯ. ಅಶುಭ ಮುಹೂರ್ತದಲ್ಲಿ ವಿವಾಹವಾದರೆ, ಅದು ದಂಪತಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ಎಂಬ ನಂಬಿಕೆ ನಮ್ಮಲ್ಲಿದೆ. ಆದ್ದರಿಂ ಒಳ್ಳೆಯ ದಿನ ಹಾಗೂ ಮುಹೂರ್ತ ನೋಡಿ, ಮದುವೆ ಮಾಡಬೇಕಾಗುತ್ತದೆ. ನೀವೇನಾದರೂ, ಮುಂಬರುವ ಹಬ್ಬದ ತಿಂಗಳಾದ ನವೆಂಬರ್‌ನಲ್ಲಿ ಮದುವೆಯಾಗಲು ಉತ್ತಮ ದಿನಗಳನ್ನು ಹುಡುಕುತ್ತಿದ್ದರೆ, ಈ ಸ್ಟೋರಿ ನಿಮಗಾಗಿ.

2021ರ ನವೆಂಬರ್‌ನಲ್ಲಿ ವಿವಾಹಕ್ಕಿರುವ ಶುಭದಿನಾಂಕಗಳನ್ನು ಈ ಕೆಳಗೆ ನೀಡಲಾಗಿದೆ:
ಬೆಳಕಿನ ಹಬ್ಬ ದೀಪಾವಳಿ ಸಹಿತ ವಿವಿಧ ಹಬ್ಬಗಳಿರುವ ನವೆಂಬರ್‌ನಲ್ಲಿ ವಿವಾಹದಂತಹ ಶುಭಕಾರ್ಯಗಳನ್ನು ಮಾಡುವುದು ಉತ್ತಮ ಆಯ್ಕೆಯೇ. ಏಕೆಂದರೆ, ಸಾಲು-ಸಾಲು ರಜೆಗಳಿರುವ ಕಾರಣ, ವಿವಾಹ ಸಂಭ್ರಮದಲ್ಲಿ ಸಂತೋಷದಿಂದ ಪಾಲ್ಗೊಳ್ಳಬಹುದು. ಅದಕ್ಕಾಗಿ ಈ ಕೆಳಗೆ ನಾವು ನವೆಂಬರ್ 2021ರಲ್ಲಿ ವಿವಾಹಕ್ಕೆ ಇರುವ ಉತ್ತಮ ದಿನ ಹಾಗೂ ಶುಭಘಳಿಗೆಗಳನ್ನು ನೀಡಿದ್ದೇವೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ, ಈ ದಿನಗಳಲ್ಲಿ ಒಂದನ್ನು ಈಗಲೇ ಆಯ್ಕೆ ಮಾಡಿಕೊಂಡು, ಮದುವೆ ತಯಾರಿ ಆರಂಭಿಸಿಕೊಳ್ಳಿ.
ವಿವಾಹಕ್ಕೆ ನವೆಂಬರ್‌ನಲ್ಲಿರುವ ಶುಭ ದಿನಾಂಕಗಳು ಹಾಗೂ ಮುಹೂರ್ತಗಳು:
ನವೆಂಬರ್‌ನಲ್ಲಿ ಮದುವೆಗೆ ಒಟ್ಟು ಏಳು ಶುಭದಿನಾಂಕಗಳಿವೆ. ಅವುಗಳೆಂದರೆ,
15 ನವೆಂಬರ್, ಸೋಮವಾರ :ಬೆಳಿಗ್ಗೆ 6:39ರಿಂದ ಮರುದಿನ ಬೆಳಿಗ್ಗೆ 06:16ವರೆಗೆ ಶುಭಮುಹೂರ್ತ
16 ನವೆಂಬರ್, ಮಂಗಳವಾರ :ಬೆಳಿಗ್ಗೆ 06:16ರಿಂದ ಮಧ್ಯಾಹ್ನ 01:43ರವರೆಗೆ ಶುಭಮುಹೂರ್ತ
20 ನವೆಂಬರ್, ಶನಿವಾರ : ಬೆಳಿಗ್ಗೆ 06:20ರಿಂದ ಮರುದಿನ ಬೆಳಿಗ್ಗೆ 06:21ರವರೆಗೆ ಶುಭಮುಹೂರ್ತ
21 ನವೆಂಬರ್, ಭಾನುವಾರ : ಬೆಳಿಗ್ಗೆ 06:21ರಿಂದ ಮರುದಿನ ಬೆಳಿಗ್ಗೆ 06:21ರವರೆಗೆ ಶುಭಮುಹೂರ್ತ
28 ನವೆಂಬರ್, ಭಾನುವಾರ :ರಾತ್ರಿ 10:06ರಿಂದ ಮರುದಿನ ಬೆಳಿಗ್ಗೆ 06:25ರವರೆಗೆ ಶುಭಮುಹೂರ್ತ
29 ನವೆಂಬರ್, ಸೋಮವಾರ :ಬೆಳಿಗ್ಗೆ 06:25ರಿಂದ ಸಂಜೆ 04:57ವರೆಗೆ ಶುಭಮುಹೂರ್ತ
30 ನವೆಂಬರ್, ಮಂಗಳವಾರ :ಬೆಳಿಗ್ಗೆ 06:26ರಿಂದ ಸಂಜೆ 08:34ರವರೆಗೆ ಶುಭಮುಹೂರ್ತ



Click it and Unblock the Notifications

