Latest Updates
-
ಇಂಟರ್ಸೆಕ್ಸ್ ವ್ಯಕ್ತಿಗಳ ಕಾನೂನು ಗುರುತಿಗೆ ಸುಪ್ರೀಂ ಕೋರ್ಟ್ ಮಹತ್ವದ ನೋಟಿಸ್: ದಂಪತಿಗಳಿಗೆ ಸಿಗಲಿದೆ ಹೊಸ ಭರವಸೆ? -
ಕೇರಳದಲ್ಲಿ ಭಾರೀ ಮಳೆ: ನಿಮ್ಮ ಮನೆ ಮತ್ತು ಗಾರ್ಡನ್ ಸುರಕ್ಷಿತವಾಗಿಡಲು ಈ ಸರಳ ಟಿಪ್ಸ್ ಪಾಲಿಸಿ -
ಮಹಿಸಾಗರದ ಹಾಸ್ಟೆಲ್ನಲ್ಲಿ 147 ವಿದ್ಯಾರ್ಥಿನಿಯರಿಗೆ ಫುಡ್ ಪಾಯಿಸನಿಂಗ್: ಮಳೆಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಎಚ್ಚರವಿರಲಿ! -
ಇಂದಿನ ಪೆಟ್ರೋಲ್, ಡೀಸೆಲ್ ದರ: ವಾಹನ ಸವಾರರಿಗೆ ಗುಡ್ ನ್ಯೂಸ್, ಕರ್ನಾಟಕದಲ್ಲಿ ಬೆಲೆ ಎಷ್ಟಿದೆ ನೋಡಿ! -
ಮಳೆಗಾಲದ ಹಿಮಾಲಯ ಚಾರಣ: ಭೂಕುಸಿತ ಮತ್ತು ಗಾಯಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಜುಲೈ 17: ದಂಪತಿಗಳ ನಡುವಿನ ಮನಸ್ತಾಪ ದೂರವಾಗಿಸಲು ಈ ಸರಳ ಟಿಪ್ಸ್ ಪಾಲಿಸಿ! -
ದೆಹಲಿಯ ಸೆಖೆ ಮತ್ತು ಆರ್ದ್ರತೆ: ಕರೆಂಟ್ ಬಿಲ್ ಉಳಿಸಿ, ಮನೆಯನ್ನು ತಂಪಾಗಿರಿಸುವ ಸ್ಮಾರ್ಟ್ ಟಿಪ್ಸ್! -
ಬೆಲೆ ಏರಿಕೆಯ ಬಿಸಿ: ಟೊಮೆಟೊ, ಈರುಳ್ಳಿ ಇಲ್ಲದೆ ರುಚಿಕರ ಮತ್ತು ಪೌಷ್ಟಿಕ ಅಡುಗೆ ಮಾಡುವುದು ಹೇಗೆ? -
IND vs ENG ODI: ಇಂದಿನ ಹೈ-ವೋಲ್ಟೇಜ್ ಪಂದ್ಯದ ನೇರ ಪ್ರಸಾರ ಮತ್ತು ಕನ್ನಡ ಕಾಮೆಂಟರಿ ಮಿಸ್ ಮಾಡ್ಬೇಡಿ! -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಈ 7 ನಿಮಿಷದ ರೂಟೀನ್ ನಿಮ್ಮನ್ನು ರಕ್ಷಿಸುತ್ತದೆ!
ಜನವರಿ 2022: ಹೊಸವರ್ಷದ ಮೊದಲ ತಿಂಗಳಲ್ಲಿ ವಿವಾಹಕ್ಕಿರುವ ಶುಭದಿನಾಂಕ ಹಾಗೂ ಮುಹೂರ್ತಗಳು
ಯಾವುದೇ ವಿವಾಹಕ್ಕಾದರೂ, ಶುಭ ದಿನಾಂಕ ಹಾಗೂ ಮುಹೂರ್ತ ತುಂಬಾ ಮುಖ್ಯ. ಗಂಡು-ಹೆಣ್ಣಿನ ಜಾತಕ ಕೂಡಿ ಬಂದು, ಉತ್ತಮ ದಿನದಲ್ಲಿ ವಿವಾಹದವಾದರೆ ಅವರ ದಾಂಪತ್ಯ ಜೀವನ ಸುಖಕರವಾಗಿರುದೆಂಬ ನಂಬಿಕೆ ಹೆಚ್ಚಿನವರದ್ದು. ಅದಕ್ಕಾಗಿಯೇ, ಮದುವೆ ನಿಶ್ಚಯ ಮಾಡಲು ಉತ್ತಮ ದಿನಾಂಕಗಳನ್ನು ಜ್ಯೋತಿಷ್ಯರ ಬಳಿ ಕೇಳಿ, ತಿಳಿದುಕೊಳ್ಳುವುದು ವಾಡಿಕೆ. ಆದ್ದರಿಂದ ನಾವಿಂದು, ಹೊಸವರ್ಷದಲ್ಲಿ ಅಂದರೆ, 2022ರ ಜನವರಿಯಲ್ಲಿ ವಿವಾಹಕ್ಕಿರುವ ಶುಭದಿನಾಂಕ ಹಾಗೂ ಮುಹೂರ್ತಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಜನವರಿ 2022 ರಲ್ಲಿ ಮದುವೆಗಿರುವ ಶುಭ ದಿನಾಂಕ ಹಾಗೂ ಮುಹೂರ್ತಗಳ ಪಟ್ಟಿ ಈ ಕೆಳಗಿದೆ:
ಯಾವುದೇ ಹಿಂದೂ ವಿವಾಹದಲ್ಲಿ ವಿವಾಹ ಮುಹೂರ್ತವು ವಿವಾಹದ ದಿನಾಂಕವನ್ನು ನಿರ್ಧರಿಸುವಲ್ಲಿ ಪ್ರಮುಖ ಅಂಶವಾಗಿದೆ. ಅಶುಭ ದಿನದಂದು ನಡೆಯುವ ವಿವಾಹಗಳು ದಂಪತಿಗಳಿಗೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ಮುಂಬರುವ ವರ್ಷದಲ್ಲಿ ನೀವು ಮದುವೆಯಾಗಲು ಯೋಚಿಸುತ್ತಿದ್ದರೆ,2022 ರಲ್ಲಿ ಶುಭ ವಿವಾಹ ದಿನಾಂಕಗಳನ್ನು ಈ ಕೆಳಗೆ ನೀಡಲಾಗಿದೆ. ಇವುಗಳಲ್ಲಿ ನಿಮಗೆ ಸೂಕ್ತವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಬಹುದು.
2022ರ ಜನವರಿಯಲ್ಲಿ ವಿವಾಹಕ್ಕಿರುವ ಶುಭದಿನ ಹಾಗೂ ಮುಹೂರ್ತಗಳು:
ಹೊಸವರ್ಷದ ಮೊದಲ ತಿಂಗಳಲ್ಲಿ ಮದುವೆಗೆ ಒಟ್ಟು ಐದು ಶುಭ ಮುಹೂರ್ತಗಳಿವೆ. ಅವುಗಳೆಂದರೆ,
ಜನವರಿ 15, 2022, ಶನಿವಾರ ಬೆಳಗ್ಗೆ 06:46ರಿಂದ ಮಧ್ಯಾಹ್ನ 02:34ರವರೆಗೆ
ಜನವರಿ 20, 2022, ಗುರುವಾರ ಮಧ್ಯಾಹ್ನ 02:44ರಿಂದ ಸಂಜೆ 08:31ರವರೆಗೆ
ಜನವರಿ 23, 2022, ಭಾನುವಾರ ಮಧ್ಯಾಹ್ನ 12:50ರಿಂದ ಬೆಳಗ್ಗೆ 06:46ರವರೆಗೆ
ಜನವರಿ 27, 2022, ಗುರುವಾರ ಬೆಳಗ್ಗೆ 08:51ರಿಂದ ಮಧ್ಯಾಹ್ನ 03:28ರವರೆಗೆ
ಜನವರಿ 29, 2022, ಶನಿವಾರ ಸಂಜೆ 06:03ರಿಂದ ಬೆಳಗ್ಗೆ 02:29ರವರೆಗೆ



Click it and Unblock the Notifications
