Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಜೈ ದುರ್ಗಾಮಾತೆಯ 10 ಕಲಾತ್ಮಕ ಚಿತ್ರ-ದರ್ಶನ
ನವರಾತ್ರಿ ಭಾರತೀಯರಿಗೆ ಸಡಗರ-ಸಂಭ್ರಮದ ಹಬ್ಬವಾಗಿದೆ. ಈ ಸಮಯದಲ್ಲಿ ದೇವಿ ದುರ್ಗಾಮಾತೆಯ ವಿಗ್ರಹಗಳನ್ನು ಇಟ್ಟು ಪೂಜೆ ಮಾಡಲಾಗುವುದು. ದುರ್ಗಾ ದೇವಿಯ ಗುಡಿಗಳಲ್ಲಿ ನವರಾತ್ರಿಯ ಸಮಯದಲ್ಲಿ ಪೂಜೆ ವಿಶೇಷಗಳು ಬಹಳ ವಿಜೃಂಭಣೆಯಿಂದ ನಡೆಯುತ್ತದೆ.
ದುರ್ಗಾದೇವಿಯನ್ನು ಮಹಿಷಾಸುರ ಎಂಬ ರಾಕ್ಷಸನನ್ನು ಕೊಂದ ಕಾರಣ ಮಹಿಷಾಸುರ ಮರ್ದಿನಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ನವರಾತ್ರಿ ಹಬ್ಬದ ಪೌರಣಿಕ ಕತೆ ಹೀಗಿದೆ. ಮಹಿಷಾಸುರ ಎಂಬ ರಾಕ್ಷಸನಿದ್ದ, ತುಂಬಾ ಕ್ರೂರಿಯಾಗಿದ್ದ ಈತ ದೇವತೆಗಳಿಗೆ ಕಷ್ಟಕೊಡುತ್ತಿದ್ದ. ಇವನ ಉಪಟಳ ಸಹಿಸಲಾಗದೆ ದೇವತೆಗಳು ವಿಷ್ಣುವಿನ ಮೊರೆಹೋಗುತ್ತಾರೆ.
ದೇವತೆಗಳ ಕಷ್ಟ ನೋಡಿದ ವಿಷ್ಣು, ಬ್ರಹ್ಮ ಮತ್ತು ಈಶ್ವರ ಒಂದು ತೀರ್ಮಾನಕ್ಕೆ ಬಂದು, ರಾಕ್ಷಸನ ಸಂಹಾರಕ್ಕಾಗಿ ಒಂದು ಸುಂದರವಾದ ಸ್ತ್ರೀಯನ್ನು ಸೃಷ್ಟಿ ಮಾಡುತ್ತಾರೆ. ಆ ದೇವತೆಗೆ 10 ಕೈಗಳು, ಅವುಗಳಲ್ಲಿ ಅಸ್ತ್ರಗಳನ್ನು ನೀಡಿ ಜಗತ್ತನ್ನು ಕಾಪಾಡುವ ಶಕ್ತಿಯನ್ನು ಅವಳಿಗೆ ನೀಡಿದರು. ಈ ದೇವತೆಯು ಮಹಿಷಾಸುರ ರಾಕ್ಷಸನ ಜೊತೆ 9 ದಿನಗಳ ಕಾಲ ಯುದ್ಧವನ್ನು ಮಾಡಿ ಕಂಟಕನಾಗಿದ್ದ ರಾಕ್ಷಸನನ್ನು ಕೊಂದು ಜಗತ್ತಿನ ಕಷ್ಟಗಳನ್ನು ನೀಗಿದಳು. ಜಗತ್ತಿನ ಕಷ್ಟವನ್ನು ದುರ್ಗಾಮಾತೆ ನಿವಾರಿಸುತ್ತಾಳೆ ಎಂಬ ಅಚಲ ನಂಬಿಕೆಯಿಂದ ಇಂದಿಗೂ ನವರಾತ್ರಿ ಸಮಯದಲ್ಲಿ ದುರ್ಗಾಮಾತೆಯನ್ನು ನಮ್ಮ ಕಷ್ಟವನ್ನು ನೀಗು ಎಂದು ಜನರು ಭಯ, ಭಕ್ತಿಯಿಂದ ಬೇಡಿಕೊಳ್ಳಲಾಗುವುದು.
ನವರಾತ್ರಿಯ ಸಮಯದಲ್ಲಿ ದುರ್ಗಾಮಾತೆಯ ಅನೇಕ ಮೂರ್ತಿಗಳನ್ನು ತಯಾರಿಸಲಾಗುವುದು. ಈ ಲೇಖನದಲ್ಲಿ ಕಲಾವಿದನ ಅದ್ಭುತ ಕಲೆಯಲ್ಲಿ ಮೂಡಿಬಂದ ಶಕ್ತಿ ದೇವತೆಯ ಬಗ್ಗೆ ಚಿತ್ರ ಮಾಹಿತಿ ನೀಡಿದ್ದೇವೆ ನೋಡಿ:

ಹುಣ್ಣಿಮೆಯ ಬೆಳಕಿನಲ್ಲಿ ದುರ್ಗಾಮಾತೆ
ದುರ್ಗಾ ಮಾತೆಯು ಮಹಿಷಾಸುರನನ್ನು ಹುಣ್ಣಮೆಯ ದಿನದಂದು ಕೊಂದಳು. ಆ ಪೌರಾಣಿಕ ಕತೆಯ ಹಿನ್ನಲೆಯಲ್ಲಿ ಕಲೆಗಾರ ಈ ಸುಂದರ ಮೂರ್ತಿಯನ್ನು ಮಾಡಿದ್ದಾನೆ.

ನರ್ತನೆ ಮಾಡುತ್ತಿರುವ ದುರ್ಗಾ:
ಈ ಮೂರ್ತಿಗೆ ಚಿನ್ನದ ಬಣ್ಣವನ್ನು ಬಳಿಯಲಾಗಿದೆ. ಇದರಲ್ಲಿ ದೇವಿಯು ನತ್ಯವನ್ನು ಮಾಡುತ್ತಾ ಮಹಿಷಾಸುರನನ್ನು ಕೊಲ್ಲುವ ರೀತಿಯಲ್ಲಿದೆ . ಈ ಮೂರ್ತಿಯನ್ನು ನೋಡಿದರೆ ಎಂತವರಿಗೂ ಭಕ್ತಿ ಉಕ್ಕಿ ಬರುವಂತಿದೆ.

ನೈಸರ್ಗಿಕ ಚೆಲುವಿನಲ್ಲಿ ದುರ್ಗಾ ಮಾತೆ:
ಈ ಮೂರ್ತಿಯಲ್ಲಿ ದೇವಿ ನೈಸರ್ಗಿಕ ಸೌಂದರ್ಯದಿಂದ ಕಂಗೊಳಿಸುತ್ತಾಳೆ. ಮಣ್ಣಿನಿಂದ ತಯಾರಿಸಿದ ಈ ಮೂರ್ತಿಯ ಹೊಳಪು ನೋಡುವಾಗ ಇದನ್ನು ತಯಾರಿಸಿದ ಕಲೆಗಾರನ ಬಗ್ಗೆ ಮೆಚ್ಚುಗೆ ಉಂಟಾಗುತ್ತದೆ.

ಮಹಿಷಾಸುರ ಮರ್ದಿನಿ:
ಈ ಮೂರ್ತಿಯು ಮಹಿಷಾಸುರ ರಾಕ್ಷಸನನ್ನು ಕೊಲ್ಲಲು ಹೊರಟದಂತಿದೆ. ದುಷ್ಟ ಸಂಹಾರಕ್ಕೆ ಹೊರಟು ನಿಂತಿರುವ ದೇವಿಯು ಉಗ್ರ ಸ್ವರೂಪದಲ್ಲಿ ಕಾಣುತ್ತಾಳೆ.

ಶಾಂತ ಮೂರ್ತಿ ದುರ್ಗಾ:
ಇದರಲ್ಲಿ ದುರ್ಗಾ ದೇವಿಗೆ 22 ಕೈಗಳಿದ್ದು, ಕೈಗಳಲ್ಲಿ ಯಾವುದೇ ಅಸ್ತ್ರಗಳಲ್ಲಿದೆ ತುಂಬಾ ಶಾಂತ ಮೂರ್ತಿಯಾಗಿ ಕಾಣುತ್ತಾಳೆ.

ಮಾತೃ ಹೃದಯಿ ದುರ್ಗಾ:
ಇದರಲ್ಲಿ ದೇವಿಯ ಕೈಯಲ್ಲಿ ಬಾಲಕನಿದ್ದು, ಆ ಬಾಲಕನಿಗೆ ಆನೆ ತಲೆ ಇರುವುದರಿಂದ ಗಣೇಶನನ್ನು ಎತ್ತಿಕೊಂಡು ನಿಂತ ದೇವಿಯ ಮೂರ್ತಿ ಇದಾಗಿದೆ.

ಯುದ್ಧ ಮಾಡಲು ಅಣಿಯಾದ ದುರ್ಗಾ:
ಇದರಲ್ಲಿ ದುರ್ಗಾ ದೇವತೆಯೂ ಮಹಿಷಾಸುರನನ್ನು ಕೊಲ್ಲಲು ಅಣಿಯಾದಂತೆ ಇದೆ. ಸುತ್ತಲೂ ಗಣೇಶ, ವಿಶ್ವಕರ್ಮ, ಸರಸ್ವತಿ, ಲಕ್ಷ್ಮಿ ದೇವತೆಗಳಿದ್ದಾರೆ.

ಉಗ್ರ ಸ್ವರೂಪದಲ್ಲಿ ದುರ್ಗಾ:
ಇದು ದೇವಿಯ ಉಗ್ರ ಸ್ವರೂಪದ ಮೂರ್ತಿಯಾಗಿದೆ. ಇದರಲ್ಲಿ ದೇವಿಯ ಕೈಗಳಲ್ಲಿ ಅಸ್ತ್ರಗಳಿದ್ದು ದುಷ್ಟಾ ಸಂಹಾರಕ್ಕೆ ರೆಡಿಯಾದಂತೆ ಕಾಣುವುದು.

ಕರುಣಾಮಯಿ ದುರ್ಗಾ:
ಈ ಮೂರ್ತಿಯಲ್ಲಿ ದೇವಿಗೆ ಕೆಂಪು ಬಾರ್ಡರ್ ಇರುವ ಬಿಳಿ ಸೀರೆ ಧರಿಸಲಾಗಿದೆ. ಶಾಂತ ಸ್ವರೂಪದ ಈ ಮೂರ್ತಿಯಲ್ಲಿ ದುರ್ಗಾಮಾತೆ ತುಂಬಾ ಕರುಣಾಮಯಿಯಾಗಿ ಕಾಣುತ್ತಾಳೆ.

ಗುಡಿಯಲ್ಲಿರುವ ದುರ್ಗಾ:
ಈ ಮೂರ್ತಿಯು ದುಷ್ಟರ ಸಂಹಾರ ಮಾಡಿ ಜಗತ್ತಿಗೆ ಶಾಂತಿಯನ್ನು ನೀಡುವೆ ಎಂದು ಗುಡಿಗೆ ಬಂದ ಭಕ್ತರಿಗೆ ಅಭಯ ನೀಡುವಂತೆ ಇದೆ.



Click it and Unblock the Notifications