Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫೆಂಗ್ ಶೂಯಿ ಪ್ರಕಾರ ಯಾವ ಬಣ್ಣದ 'ಪರ್ಸ್' ಅದೃಷ್ಟ ತರಬಲ್ಲದು?
ನಮ್ಮಲ್ಲಿ ಹೆಚ್ಚಿನವರು ನಿತ್ಯದ ಖರ್ಚಿಗೆ ಅಗತ್ಯವಾದ ಹಣವನ್ನು ಜೇಬಿನ ಬದಲಾಗಿ ಪರ್ಸಿನಲ್ಲಿಟ್ಟುಕೊಳ್ಳುತ್ತಾರೆ. ಪರ್ಸು ಸದಾ ತುಂಬಿರುವುದು ಸಮೃದ್ಧತೆಯ ಲಕ್ಷಣವಾಗಿದ್ದು ಜೀವನದಲ್ಲಿ ಎದುರಾಗುವ ತೊಂದರೆಗಳನ್ನು ಸುಲಭವಾಗಿ ಎದುರಿಸಬಹುದು.
ಈ ಪರ್ಸ್ ತುಂಬಿಕೊಂಡಿರುವುದೂ ಒಂದು ಅದೃಷ್ಟಕರ ಚಿಹ್ನೆಯಾಗಿದ್ದು ಚೀನೀಯರು ಫೆಂಗ್ ಶೂಯಿ ವಿಧಾನದ ಮೂಲಕ ಸದಾ ಸಮೃದ್ಧಿ ಇರುವಂತೆ ನೋಡಿಕೊಳ್ಳುತ್ತಾರೆ.
ಫೆಂಗ್ ಶೂಯಿ ವಿಧಾನದ ಪ್ರಕಾರ ನಮ್ಮ ದೇಹದಲ್ಲಿ ಹಲವು ರೀತಿಯ ಶಕ್ತಿಗಳು ಪ್ರವಹಿಸುತ್ತಿದ್ದು ಇವುಗಳು ತರಂಗಗಳ ರೂಪದಲ್ಲಿರುತ್ತವೆ. ನಮ್ಮ ಜೊತೆ ಇರುವ ವಸ್ತುಗಳು ಈ ತರಂಗಗಳನ್ನು ಬದಲಿಸುವ ಶಕ್ತಿ ಹೊಂದಿವೆ. ವಿಶೇಷವಾಗಿ ಲೋಹದ ವಸ್ತುಗಳು ಅಂದರೆ ಆಭರಣ, ಉಂಗುರ ಇತ್ಯಾದಿ. ಪರ್ಸ್‌ನಲ್ಲಿ ಇವುಗಳನ್ನೂ ಇಟ್ಟುಕೊಳ್ಳಿ, ಅದೃಷ್ಟವೇ ಬದಲಾಗುವುದು!
ಇದರೊಂದಿಗೆ ಹಣದ ಪರ್ಸು ಸಹಾ ಈ ತರಂಗಗಳನ್ನು ಬದಲಿಸಬಲ್ಲುದು. ಈ ಪರ್ಸಿನ ಬಣ್ಣ ಮುಖ್ಯವಾಗಿ ತರಂಗಗಳ ದಿಕ್ಕನ್ನು ಬದಲಿಸಬಲ್ಲ ಶಕ್ತಿ ಹೊಂದಿದೆ. ವಿಶೇಷವಾಗಿ ಈ ವ್ಯತ್ಯಾಸ ಪರ್ಸಿನಲ್ಲಿರುವ ಹಣದ ಪ್ರಮಾಣವನ್ನೂ ಬದಲಿಸಬಲ್ಲುದು.
ಫೆಂಗ್ ಶುಯಿ ಪ್ರಕಾರ ಪ್ರತಿಯೊಬ್ಬರಲ್ಲಿಯೂ ಐದು ವಿಧದ ಶಕ್ತಿಪ್ರವಾಹಗಳಿರುತ್ತವೆ. ಭೂಮಿ (ಅಯಸ್ಕಾಂತ), ನೀರು, ಬೆಂಕಿ, ಲೋಹ ಮತ್ತು ಕಾಷ್ಠ. ಇವು ಅವರವರ ಜನ್ಮದಿನಾಂಕವನ್ನು ಅನುಸರಿಸಿ ಹೆಚ್ಚುಕಡಿಮೆಯಾಗಿರುತ್ತದೆ. ಇವುಗಳ ಬಗ್ಗೆ ಕೊಂಚ ಅರಿತರೆ ನಿಮಗೆ ಯಾವ ಬಣ್ಣ ಸೂಕ್ತ ಎಂದು ತಿಳಿಯಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದೇವೆ ಮುಂದೆ ಓದಿ....

ಕಪ್ಪು
ಕಂದು ಬಣ್ಣದ ಬಳಿಕ ಅತಿ ಹೆಚ್ಚಾಗಿ ಬಳಸಲ್ಪಡುವ ಬಣ್ಣವೆಂದರೆ ಕಪ್ಪು. ಸಾಮಾನ್ಯವಾಗಿ ಕಪ್ಪು ಬಣ್ಣದ ಪರ್ಸು ಹೆಚ್ಚಿನ ಎಲ್ಲಾ ಬಣ್ಣದ ಬಟ್ಟೆಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ.

ಕಪ್ಪು ಬಣ್ಣದ ಪರ್ಸ್
ಬೆಂಕಿ, ಭೂಮಿ ಮತ್ತು ಲೋಹದ ಶಕ್ತಿಪ್ರವಾಹ ಇರುವವರು ಕಪ್ಪು ಬಣ್ಣವನ್ನು ಆಯ್ದುಕೊಳ್ಳಬಾರದು. ಆದರೆ ನೀರು ಅಥವಾ ಕಾಷ್ಠದ ಶಕ್ತಿಪ್ರವಾಹದ ವ್ಯಕ್ತಿಗಳು ಕಪ್ಪು ಬಣ್ಣದ ಪರ್ಸ್ ಹೊಂದುವುದು ಉತ್ತಮ.

ಕೆಂಪು ಬಣ್ಣದ ಪರ್ಸ್
ಕೆಂಪು ಬಣ್ಣ ಬೆಂಕಿ ಶಕ್ತಿಪ್ರವಾಹದ ವ್ಯಕ್ತಿಗಳಿಗೆ ಹೆಚ್ಚು ಸೂಕ್ತವಾಗಿದೆ. ಆದರೆ ಪರ್ಸುಗಳು ಈ ಬಣ್ಣದಲ್ಲಿ ಸಿಗುವುದು ಅತ್ಯಂತ ದುರ್ಲಭ.

ಕೆಂಪು ಬಣ್ಣದ ಪರ್ಸ್
ಆದರೆ ಬೆಂಕಿ ಶಕ್ತಿಪ್ರವಾಹದ ವ್ಯಕ್ತಿಗಳು ಈ ಬಣ್ಣದ ಪರ್ಸನ್ನು ಹೊಂದಿದ್ದರೆ ಹೆಚ್ಚು ಫಲ ಕಂಡುಬರುತ್ತದೆ. ಉಳಿದವರಿಗೆ ಈ ಬಣ್ಣ ಸಲ್ಲದು.

ನೀಲಿ ಬಣ್ಣದ ಪರ್ಸ್
ನೀಲಿ ಬಣ್ಣ ಸಮೃದ್ಧತೆಯ ಸಂಕೇತವಾಗಿದೆ. ನೀಲಿ ಬಣ್ಣ ನೀರಿನ ಶಕ್ತಿಪ್ರವಾಹ ಇರುವವರಿಗೆ ಹೆಚ್ಚು ಸೂಕ್ತವಾಗಿದ್ದು ಸದಾ ಸಮೃದ್ಧತೆ ತುಂಬಿರಲು ನೆರವಾಗುತ್ತದೆ.

ನೀಲಿ ಬಣ್ಣದ ಪರ್ಸ್
ಆದರೆ ಲೋಹ ಮತ್ತು ಬೆಂಕಿಯ ಶಕ್ತಿಪ್ರವಾಹ ಇರುವ ವ್ಯಕ್ತಿಗಳು ಈ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಕೂಡದು.

ಕಂದು
ಪರ್ಸ್‌ಗಳಲ್ಲಿ ಅತಿ ಹೆಚ್ಚಾಗಿ ಬಳಸಲ್ಪಡುವ ಬಣ್ಣವೆಂದರೆ ಕಂದು. ಫೆಂಗ್ ಶುಯಿ ಪ್ರಕಾರ ಈ ಬಣ್ಣ ಭೂಮಿ ಎಂಬ ಶಕ್ತಿಯನ್ನು ಪ್ರಮುಖವಾಗಿ ಪಡೆದ ವ್ಯಕ್ತಿಗಳಿಗೆ ಈ ಬಣ್ಣದ ಪರ್ಸ್ ಸೂಕ್ತವಾಗಿದೆ. ನೀರು ಮತ್ತು ಬೆಂಕಿಯ ಶಕ್ತಿ ಪಡೆದಿರುವವರು ಈ ಬಣ್ಣವನ್ನು ಆಯ್ಕೆ ಮಾಡದಿರುವುದೇ ಉತ್ತಮ.



Click it and Unblock the Notifications
