Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪರ್ಸ್‌ನಲ್ಲಿ ಇವುಗಳನ್ನೂ ಇಟ್ಟುಕೊಳ್ಳಿ, ಅದೃಷ್ಟವೇ ಬದಲಾಗುವುದು!
ನಾವು ಪರ್ಸ್ ನಲ್ಲಿ ಏನೇನು ಇಟ್ಟುಕೊಳ್ಳಬೇಕು ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಮುಂದೆ ಓದುತ್ತಾ ಅದೃಷ್ಟವನ್ನು ನಿಮ್ಮ ಪರ್ಸ್ ನೊಳಗೆ ಬರುವಂತೆ ಮಾಡಿ....
ಹಣ, ಫೋಟೋ, ನಾಣ್ಯಗಳು ಹೀಗೆ ಹಲವಾರು ರೀತಿಯ ವಸ್ತುಗಳು ನಮ್ಮ ಪರ್ಸ್ ನಲ್ಲಿ ಇರುತ್ತದೆ. ಇಷ್ಟು ಮಾತ್ರವಲ್ಲದೆ ನಮಗೆ ಬೇಕಾಗುವಂತಹ ಕೆಲವೊಂದು ಅಮೂಲ್ಯ ವಸ್ತುಗಳು ಇದರಲ್ಲಿ ಇರುತ್ತದೆ. ಆದರೆ ನಮಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ಉಂಟು ಮಾಡಬೇಕಾದರೆ ಏನು ಮಾಡಬೇಕು?
ಇದಕ್ಕಾಗಿ ನಾವು ಪರ್ಸ್ ನಲ್ಲಿ ಏನೇನು ಇಟ್ಟುಕೊಳ್ಳಬೇಕು ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಮುಂದೆ ಓದುತ್ತಾ ಅದೃಷ್ಟವನ್ನು ನಿಮ್ಮ ಪರ್ಸ್ ನೊಳಗೆ ಬರುವಂತೆ ಮಾಡಿ....

ಒಂದು ರೂಪಾಯಿ ನೋಟು
ಒಂದು ರೂಪಾಯಿ ಎರಡು ನೋಟು ಮತ್ತು 20 ರೂಪಾಯಿಯ ಒಂದು ನೋಟುಗಳನ್ನು ಬಿಳಿ ಪರ್ಸ್‌ನಲ್ಲಿ ಇಟ್ಟುಕೊಳ್ಳಿ. ಇದನ್ನು ಖರ್ಚು ಮಾಡಬೇಡಿ. ಸಾಧ್ಯವಾದರೆ ಬೆಳ್ಳಿಯ ಕಾಗದದಿಂದ ಇದನ್ನು ಸುತ್ತಿಕೊಳ್ಳಿ.

ಅಕ್ಕಿ
ಪರ್ಸ್‌ನಲ್ಲಿ ಸ್ವಲ್ಪ ಅಕ್ಕಿಯನ್ನು ಇಟ್ಟುಕೊಳ್ಳಿ. ದೇವಸ್ಥಾನಕ್ಕೆ ಹೋದಾಗ ಇದನ್ನು ಲಕ್ಷ್ಮೀ ದೇವರಿಗೆ ಸಮರ್ಪಣೆ ಮಾಡಿ.

ಅಶ್ವತ್ಥ ಮರದ ಎಲೆ
ಅಶ್ವತ್ಥ ಮರದ ಎಲೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ತೊಳೆದು ನಿಮ್ಮ ಪರ್ಸ್‌ನಲ್ಲಿ ಅದು ಚೂರು ಆಗದ ರೀತಿಯಲ್ಲಿಡಿ.

ಶ್ರೀ ಯಂತ್ರ
ಶ್ರೀಯಂತ್ರವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ನೀವು ಧನಾತ್ಮಕ ಮತ್ತು ಆರೋಗ್ಯವಾಗಿರುತ್ತೀರಿ. ಶ್ರೀಯಂತ್ರವು ನಿಮ್ಮಲ್ಲಿ ಧನಾತ್ಮಕತೆಯನ್ನು ಉಂಟುಮಾಡುವುದು.

ಭಗವಾನ್ ವಿಷ್ಣುವಿನ ಫೋಟೋವನ್ನು ಇಟ್ಟುಕೊಳ್ಳಿ
ಲಕ್ಷ್ಮೀ ದೇವರು ವಿಷ್ಣುವಿನ ಕಾಲುಗಳನ್ನು ಒತ್ತುವ ಫೋಟೊವನ್ನು ನಿಮ್ಮ ಪರ್ಸ್ ನಲ್ಲಿಡಿ. ಇದು ತುಂಬಾ ಪವಿತ್ರವೆಂದು ಭಾವಿಸಲಾಗಿದೆ.

ಅಂಡಾಕೃತಿಯ ಬಿಳಿಯ ಕಲ್ಲು
ಪರ್ಸ್ ನಲ್ಲಿ ಅಂಡಾಕೃತಿಯ ಬಿಳಿಯ ಕಲ್ಲನ್ನು ಇಡುವುದರಿಂದ ನೀವು ಧನಾತ್ಮಕ ಹಾಗೂ ಸಂತೋಷವಾಗಿರುತ್ತೀರಿ. ಬಿಳಿಯ ಕಲ್ಲು ನಿಮ್ಮ ಸುತ್ತ ಧನಾತ್ಮಕತೆಯನ್ನು ಉಂಟು ಮಾಡುವುದು.

ಗೋಮ್ತಿ ಚಕ್ರ
ಗೋಮ್ತಿ ಚಕ್ರವನ್ನು ಪರ್ಸ್ ನಲ್ಲಿ ಇಡುವುದರಿಂದ ಅದರ ಶಕ್ತಿಯು ನಿಮ್ಮನ್ನು ಆರ್ಥಿಕ ಹಾಗೂ ಮಾನಸಿಕವಾಗಿ ಸ್ಥಿರವಾಗಿಸುತ್ತದೆ.

ಸಣ್ಣ ತೆಂಗಿನಕಾಯಿ!
ಇದನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಮನೆಯಲ್ಲಿ ಯಾವಾಗಲಾದರೂ ಪೂಜೆ ಮಾಡುವಾಗ ಸಣ್ಣ ತೆಂಗಿನಕಾಯಿಯನ್ನು ಇಟ್ಟು ಅದನ್ನು ನಿಮ್ಮ ಬ್ಯಾಗ್‌ನಲ್ಲಿಡಿ. ಇದು ನಿಮ್ಮ ಕುಟುಂಬದಲ್ಲಿ ಧನಾತ್ಮಕತೆಯನ್ನು ಉಂಟು ಮಾಡುವುದು.



Click it and Unblock the Notifications
