Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ನವೆಂಬರ್ 17ರಿಂದ ಶಬರಿಮಲೆ ಅಯ್ಯಪ್ಪ ಮಂಡಲಕಾಲ : ಸ್ವಾಮಿಯೇ ಶರಣಂ ಅಯ್ಯಪ್ಪ
ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಅಯ್ಯಪ್ಪ ಭಕ್ತರು ಕಠಿಣ ವ್ರತ ನಿಯಮಗಳನ್ನು ಪಾಲಿಸಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಹೋಗಿ ದರ್ಶನ ಪಡೆದು ಬರುತ್ತಾರೆ. 914 ಅಡಿ ಎತ್ತರದದ ಬೆಟ್ಟದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಬರಿಗಾಲಿನಲ್ಲಿ ಹೋಗಿ ದೇವರ ದರ್ಶನ ಪಡೆದು ಬರುತ್ತಾರೆ. ಮಂಡಲಕಾಲದಲ್ಲಿ ಈ ದೇವಾಲಯದ ಬಾಗಿಲು ತೆರೆಯಲಾಗುವುದು.
ಮಂಡಲಕಾಲದಿಂದ ಇಲ್ಲಿಗೆ ಅಯ್ಯಪ್ಪ ಭಕ್ತರು ಬರಲಾರಂಭಿಸುತ್ತಾರೆ. ವೃಶ್ಚಿಕ ಮಾಸದ ಮೊದಲ ದಿನದಂದು ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ದರ್ಶನಕ್ಕೆ ತೆರೆಯಲಾಗುವುದು, ಧನು ಮಾಸದ 11ನೇ ದಿನದವರೆಗೆ ಈ ದೇವಾಲಯದ ಬಾಗಿಲು ತೆರೆದಿರುತ್ತದೆ. 41 ದಿನಗಳ ಕಠಿಣ ವ್ರತ ನಿಯಮವನ್ನು ಪಾಲಿಸಿ ಮಕರವಿಳಕ್ಕು ದರ್ಶನ ಪಡೆಯಲು ಇಲ್ಲಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಶಬರಿಮಲ ಮಂಡಲ ಕಾಲ ಪ್ರಾರಂಭ
ನವೆಂಬರ್ 17, ಶುಕ್ರವಾರದಮದು ಮಂಡಲ ಕಾಲ ಪ್ರಾರಂಭವಾಗುವುದು
ಮಂಡಲ ಪೂಜೆ ಡಿಸೆಂಬರ್ 27
ಜನವರಿ 14ಕ್ಕೆ ಮಕರವಿಳ್ಳಕ್ಕು
ಮಂಡಲ ಕಾಲದಲ್ಲಿ ಪಾಲಿಸಬೇಕಾದ ವ್ರತ ನಿಯಮಗಳು
* ಮಂಡಲ ಕಾಲ ಪ್ರಾರಂಭವಾಗುವ ಮೊದಲೇ ಭಕ್ತರು ವ್ರತ ನಿಯಮಗಳನ್ನು ಪಾಲಿಸುತ್ತಾರೆ. ಈ ಅವಧಿಯಲ್ಲಿ ಸಾತ್ವಿಕ ಆಹಾರಗಳನ್ನು ಮಾತ್ರ ಸೇವಿಸುತ್ತಾರೆ. ಮದ್ಯ, ಬೀಡಿ ಇಂಥ ಯಾವುದೇ ಕೆಟ್ಟ ಚಟಗಳನ್ನು ಮಾಡಬಾರದು. ಮನಸ್ಸಿನಲ್ಲಿ ಕೆಟ್ಟದ್ದನ್ನು ಯೋಚಿಸಬಾರದು, ಕಾಲುಗಳಿಗೆ ಚಪ್ಪಲಿ ಧರಿಸಬಾರದು, ಸ್ತ್ರೀ ಸಂಪರ್ಕ ಮಾಡಬಾರದು, ಹೀಗೆ ಸಂಪೂರ್ಣ ಕಠಿಣ ವ್ರತ ನಿಯಮಗಳನ್ನು ಪಾಲಿಸಬೇಕು.
* ಶಬರಿಮಲೆ ದೇವಾಲಯಕ್ಕೆ ಹೋಗುವ ಭಕ್ತರು ಕಪ್ಪು, ನೀಲಿ ಅಥವಾ ಖಾವಿ ಬಟ್ಟೆಯನ್ನು ಧರಿಸಲಾಗುವುದು. ಗುರು ಸ್ವಾಮಿಗಳು ಮಾತ್ರ ಖಾವಿ ಬಟ್ಟೆಯನ್ನು ಧರಿಸುತ್ತಾರೆ.
* ಮಾಲೆ ಹಾಕಿರುವ ಸ್ವಾಮಿಗಳು ಕೂದಲು ಕತ್ತರಿಸುವುದು, ಉಗುರು ಕತ್ತರಿಸುವುದು ಮಾಡುವುದಿಲ್ಲ
* ರುದ್ರಾಕ್ಷ ಮಾಲೆಯನ್ನು ಧರಿಸಬೇಕು.
* ಈ ದೇವಾಲಯಕ್ಕೆ ಗಂಡಸರು ಮಾತ್ರ ಬರಬಹುದು, ಋತುಚಕ್ರದ ಪ್ರಾಯದ ಮಹೀಳೆಯರು ಬರುವಂತಿಲ್ಲ. 10 ವರ್ಷದೊಳಗಿನ ಹೆಣ್ಮಕ್ಕಳು, ಋತುಚಕ್ರ ಸಂಪೂರ್ಣ ನಿಂತ ಮಹಿಳೆಯರಷ್ಟೇ ಮಲೆಗೆ ಮಾಲೆ ಹಾಕಬೇಕು. ಅಯ್ಯಪ್ಪಸ್ವಾಮಿ ಬ್ರಹ್ಮಚಾರಿಯಾಗಿರುವುದರಿಂದ ಪ್ರಾಯದ ಹೆಣ್ಮಕ್ಕಳು, ಹೆಂಗಸರು ಈ ದೇವಾಲಯಕ್ಕೆ ಹೋಗುವಂತಿಲ್ಲ.
* ಮಂಡಲಕಾಲದಲ್ಲಿ ಕೇರಳದ ಗುರುವಾಯುರ್ ದೇವಾಲಯಕ್ಕೆ ಅಯ್ಯಪ್ಪ ಭಕ್ತರು ಭೇಟಿಕೊಡುತ್ತಾರೆ.
ಅಯ್ಯಪ್ಪಭಕ್ತರ ನೆರವಿಗೆ ಬಂದಿದೆ ಅಯ್ಯಪ್ಪ ಆ್ಯಪ್
ಪ್ರತಿವರ್ಷ ಬೆಟ್ಟಗುಡ್ಡಗಳನ್ನು ದಾಟಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಬರುತ್ತಾರೆ. ಈ ಬಾರಿ ಕೇರಳ ಅರಣ್ಯ ಇಲಾಖೆ ಅಯ್ಯಪ್ಪ ಆ್ಯಪ್ ಬಿಡುಗಡೆ ಮಾಡಿದ್ದು ಇದು 5 ಭಾಷೆಗಳಲ್ಲಿ ಲಭ್ಯವಿದೆ. ಈ ಅಯ್ಯಪ್ಪ ಆ್ಯಪ್ ಬೆಟ್ಟದ ಕುರಿತ ಮಾಹಿತಿ ನೀಡುತ್ತದೆ ಅಲ್ಲದೆ ಏನಾದರೂ ವೈದ್ಯಕೀಯ ತುರ್ತು ನೆರವು, ಪೊಲೀಸ್, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಇವರುಗಳ ಸಹಾಯವನ್ನು ಕೂಡ ಈ ಆ್ಯಪ್ ಬಳಸಿ ಪಡೆಯಬಹುದು. ಈ ಆ್ಯಪ್ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ತುಂಬಾ ನೆರವಾಗಲಿದೆ.
ಅಯ್ಯಪ್ಪ ಸ್ವಾಮಿ ಮಂತ್ರಗಳು
1. ಶ್ರೀ ಅಯ್ಯಪ್ಪ ಸ್ತೋತ್ರಂ
ಅರುಣೋದಯಸಂಕಾಶಂ ನೀಲಕುಂಡಲಧಾರಣಂ |
ನೀಲಾಂಬರಧರಂ ದೇವಂ ವಂದೇಹಂ ಬ್ರಹ್ಮನಂದನಮ್ || ೧ ||
ಚಾಪಬಾಣಂ ವಾಮಹಸ್ತೇ ಚಿನ್ಮುದ್ರಾಂ ದಕ್ಷಿಣಕರೇ |
ವಿಲಸತ್ಕುಂಡಲಧರಂ ವಂದೇಹಂ ವಿಷ್ಣುನಂದನಮ್ || ೨ ||
ವ್ಯಾಘ್ರಾರೂಢಂ ರಕ್ತನೇತ್ರಂ ಸ್ವರ್ಣಮಾಲಾವಿಭೂಷಣಂ |
ವೀರಾಪಟ್ಟಧರಂ ದೇವಂ ವಂದೇಹಂ ಶಂಭುನಂದನಮ್ || ೩ ||
ಕಿಂಕಿಣ್ಯೋಡ್ಯಾನ ಭೂತೇಶಂ ಪೂರ್ಣಚಂದ್ರನಿಭಾನನಂ |
ಕಿರಾತರೂಪ ಶಾಸ್ತಾರಂ ವಂದೇಹಂ ಪಾಂಡ್ಯನಂದನಮ್ || ೪ ||
ಭೂತಭೇತಾಳಸಂಸೇವ್ಯಂ ಕಾಂಚನಾದ್ರಿನಿವಾಸಿತಂ |
ಮಣಿಕಂಠಮಿತಿ ಖ್ಯಾತಂ ವಂದೇಹಂ ಶಕ್ತಿನಂದನಮ್ || ೫ ||
2. ಶ್ರೀ ಅಯ್ಯಪ್ಪ ಪಂಚರತ್ನಂ
ಲೋಕವೀರಂ ಮಹಾಪೂಜ್ಯಂ ಸರ್ವರಕ್ಷಾಕರಂ ವಿಭುಮ್ |
ಪಾರ್ವತೀ ಹೃದಯಾನಂದಂ ಶಾಸ್ತಾರಂ ಪ್ರಣಮಾಮ್ಯಹಮ್ || ೧ ||
ವಿಪ್ರಪೂಜ್ಯಂ ವಿಶ್ವವಂದ್ಯಂ ವಿಷ್ಣುಶಂಭೋಃ ಪ್ರಿಯಂ ಸುತಮ್ |
ಕ್ಷಿಪ್ರಪ್ರಸಾದನಿರತಂ ಶಾಸ್ತಾರಂ ಪ್ರಣಮಾಮ್ಯಹಮ್ || ೨ ||
ಮತ್ತಮಾತಂಗಗಮನಂ ಕಾರುಣ್ಯಾಮೃತಪೂರಿತಮ್ |
ಸರ್ವವಿಘ್ನಹರಂ ದೇವಂ ಶಾಸ್ತಾರಂ ಪ್ರಣಮಾಮ್ಯಹಮ್ || ೩ ||
ಅಸ್ಮತ್ಕುಲೇಶ್ವರಂ ದೇವಮಸ್ಮಚ್ಛತ್ರು ವಿನಾಶನಮ್ | ಅಸ್ಮದಿಷ್ಟಪ್ರದಾತಾರಂ ಶಾಸ್ತಾರಂ ಪ್ರಣಮಾಮ್ಯಹಮ್ || ೪ ||
ಪಾಂಡ್ಯೇಶವಂಶತಿಲಕಂ ಕೇರಲೇ ಕೇಲಿವಿಗ್ರಹಮ್ |
ಆರ್ತತ್ರಾಣಪರಂ ದೇವಂ ಶಾಸ್ತಾರಂ ಪ್ರಣಮಾಮ್ಯಹಮ್ || ೫ ||
ಪಂಚರತ್ನಾಖ್ಯಮೇತದ್ಯೋ ನಿತ್ಯಂ ಶುದ್ಧಃ ಪಠೇನ್ನರಃ
| ತಸ್ಯ ಪ್ರಸನ್ನೋ ಭಗವಾನ್ ಶಾಸ್ತಾ ವಸತಿ ಮಾನಸೇ ||
ಇತಿ ಶ್ರೀ ಅಯ್ಯಪ್ಪ ಪಂಚರತ್ನಂ ||
ಶ್ರೀ ಅಯ್ಯಪ್ಪ ಅಷ್ಟೋತ್ತರ
ಓಂ ಮಹಾಶಾಸ್ತ್ರೇ ನಮಃ |
ಓಂ ಮಹಾದೇವಾಯ ನಮಃ |
ಓಂ ಮಹಾದೇವಸುತಾಯ ನಮಃ |
ಓಂ ಅವ್ಯಯಾಯ ನಮಃ |
ಓಂ ಲೋಕಕರ್ತ್ರೇ ನಮಃ |
ಓಂ ಲೋಕಭರ್ತ್ರೇ ನಮಃ |
ಓಂ ಲೋಕಹರ್ತ್ರೇ ನಮಃ | ಓಂ ಪರಾತ್ಪರಾಯ ನಮಃ
| ಓಂ ತ್ರಿಲೋಕರಕ್ಷಕಾಯ ನಮಃ |
ಓಂ ಧನ್ವಿನೇ ನಮಃ | ಓಂ ತಪಸ್ವಿನೇ ನಮಃ |
ಓಂ ಭೂತಸೈನಿಕಾಯ ನಮಃ | ಓಂ ಮಂತ್ರವೇದಿನೇ ನಮಃ |
ಓಂ ಮಹಾವೇದಿನೇ ನಮಃ | ಓಂ ಮಾರುತಾಯ ನಮಃ |
ಓಂ ಜಗದೀಶ್ವರಾಯ ನಮಃ | ಓಂ ಲೋಕಾಧ್ಯಕ್ಷಾಯ ನಮಃ |
ಓಂ ಅಗ್ರಗಣ್ಯಾಯ ನಮಃ |
ಓಂ ಶ್ರೀಮತೇ ನಮಃ |
ಓಂ ಅಪ್ರಮೇಯಪರಾಕ್ರಮಾಯ ನಮಃ |
ಓಂ ಸಿಂಹಾರೂಢಾಯ ನಮಃ |
ಓಂ ಗಜಾರೂಢಾಯ ನಮಃ |
ಓಂ ಹಯಾರೂಢಾಯ ನಮಃ |
ಓಂ ಮಹೇಶ್ವರಾಯ ನಮಃ |
ಓಂ ನಾನಾಶಾಸ್ತ್ರಧರಾಯ ನಮಃ |
ಓಂ ಅನಘಾಯ ನಮಃ |
ಓಂ ನಾನಾವಿದ್ಯಾ ವಿಶಾರದಾಯ ನಮಃ |
ಓಂ ನಾನಾರೂಪಧರಾಯ ನಮಃ |
ಓಂ ವೀರಾಯ ನಮಃ |
ಓಂ ನಾನಾಪ್ರಾಣಿನಿಷೇವಿತಾಯ ನಮಃ |
ಓಂ ಭೂತೇಶಾಯ ನಮಃ |
ಓಂ ಭೂತಿದಾಯ ನಮಃ |
ಓಂ ಭೃತ್ಯಾಯ ನಮಃ |
ಓಂ ಭುಜಂಗಾಭರಣೋಜ್ವಲಾಯ ನಮಃ |
ಓಂ ಇಕ್ಷುಧನ್ವಿನೇ ನಮಃ |
ಓಂ ಪುಷ್ಪಬಾಣಾಯ ನಮಃ |
ಓಂ ಮಹಾರೂಪಾಯ ನಮಃ |
ಓಂ ಮಹಾಪ್ರಭವೇ ನಮಃ |
ಓಂ ಮಾಯಾದೇವೀಸುತಾಯ ನಮಃ |
ಓಂ ಮಾನ್ಯಾಯ ನಮಃ |
ಓಂ ಮಹನೀಯಾಯ ನಮಃ |
ಓಂ ಮಹಾಗುಣಾಯ ನಮಃ |
ಓಂ ಮಹಾಶೈವಾಯ ನಮಃ |
ಓಂ ಮಹಾರುದ್ರಾಯ ನಮಃ |
ಓಂ ವೈಷ್ಣವಾಯ ನಮಃ |
ಓಂ ವಿಷ್ಣುಪೂಜಕಾಯ ನಮಃ |
ಓಂ ವಿಘ್ನೇಶಾಯ ನಮಃ |
ಓಂ ವೀರಭದ್ರೇಶಾಯ ನಮಃ |
ಓಂ ಭೈರವಾಯ ನಮಃ |
ಓಂ ಷಣ್ಮುಖಪ್ರಿಯಾಯ ನಮಃ |
ಓಂ ಮೇರುಶೃಂಗಸಮಾಸೀನಾಯ ನಮಃ |
ಓಂ ಮುನಿಸಂಘನಿಷೇವಿತಾಯ ನಮಃ |
ಓಂ ದೇವಾಯ ನಮಃ | ಓಂ ಭದ್ರಾಯ ನಮಃ |
ಓಂ ಜಗನ್ನಾಥಾಯ ನಮಃ |
ಓಂ ಗಣನಾಥಾಯ ನಾಮಃ |
ಓಂ ಗಣೇಶ್ವರಾಯ ನಮಃ |
ಓಂ ಮಹಾಯೋಗಿನೇ ನಮಃ |
ಓಂ ಮಹಾಮಾಯಿನೇ ನಮಃ |
ಓಂ ಮಹಾಜ್ಞಾನಿನೇ ನಮಃ |
ಓಂ ಮಹಾಸ್ಥಿರಾಯ ನಮಃ |
ಓಂ ದೇವಶಾಸ್ತ್ರೇ ನಮಃ |
ಓಂ ಭೂತಶಾಸ್ತ್ರೇ ನಮಃ |
ಓಂ ಭೀಮಹಾಸಪರಾಕ್ರಮಾಯ ನಮಃ |
ಓಂ ನಾಗಹಾರಾಯ ನಮಃ |
ಓಂ ನಾಗಕೇಶಾಯ ನಮಃ |
ಓಂ ವ್ಯೋಮಕೇಶಾಯ ನಮಃ |
ಓಂ ಸನಾತನಾಯ ನಮಃ |
ಓಂ ಸಗುಣಾಯ ನಮಃ |
ಓಂ ನಿರ್ಗುಣಾಯ ನಮಃ |
ಓಂ ನಿತ್ಯಾಯ ನಮಃ |
ಓಂ ನಿತ್ಯತೃಪ್ತಾಯ ನಮಃ |
ಓಂ ನಿರಾಶ್ರಯಾಯ ನಮಃ |
ಓಂ ಲೋಕಾಶ್ರಯಾಯ ನಮಃ |
ಓಂ ಗಣಾಧೀಶಾಯ ನಮಃ |
ಓಂ ಚತುಃಷಷ್ಟಿಕಲಾಮಯಾಯ ನಮಃ |
ಓಂ ಋಗ್ಯಜುಃಸಾಮಾಥರ್ವಾತ್ಮನೇ ನಮಃ |
ಓಂ ಮಲ್ಲಕಾಸುರಭಂಜನಾಯ ನಮಃ |
ಓಂ ತ್ರಿಮೂರ್ತಯೇ ನಮಃ |
ಓಂ ದೈತ್ಯಮಥನಾಯ ನಮಃ |
ಓಂ ಪ್ರಕೃತಯೇ ನಮಃ |
ಓಂ ಪುರುಷೋತ್ತಮಾಯ ನಮಃ |
ಓಂ ಕಾಲಜ್ಞಾನಿನೇ ನಮಃ |
ಓಂ ಮಹಾಜ್ಞಾನಿನೇ ನಮಃ |
ಓಂ ಕಾಮದಾಯ ನಮಃ |
ಓಂ ಕಮಲೇಕ್ಷಣಾಯ ನಮಃ |
ಓಂ ಕಲ್ಪವೃಕ್ಷಾಯ ನಮಃ |
ಓಂ ಮಹಾವೃಕ್ಷಾಯ ನಮಃ |
ಓಂ ವಿದ್ಯಾವೃಕ್ಷಾಯ ನಮಃ |
ಓಂ ವಿಭೂತಿದಾಯ ನಮಃ |
ಓಂ ಸಂಸಾರತಾಪವಿಚ್ಛೇತ್ರೇ ನಮಃ |
ಓಂ ಪಶುಲೋಕಭಯಂಕರಾಯ ನಮಃ |
ಓಂ ರೋಗಹಂತ್ರೇ ನಮಃ |
ಓಂ ಪ್ರಾಣದಾತ್ರೇ ನಮಃ |
ಓಂ ಪರಗರ್ವವಿಭಂಜನಾಯ ನಮಃ |
ಓಂ ಸರ್ವಶಾಸ್ತ್ರಾರ್ಥ ತತ್ವಜ್ಞಾಯ ನಮಃ |
ಓಂ ನೀತಿಮತೇ ನಮಃ |
ಓಂ ಪಾಪಭಂಜನಾಯ ನಮಃ |
ಓಂ ಪುಷ್ಕಲಾಪೂರ್ಣಾಸಂಯುಕ್ತಾಯ ನಮಃ |
ಓಂ ಪರಮಾತ್ಮನೇ ನಮಃ |
ಓಂ ಸತಾಂಗತಯೇ ನಮಃ |
ಓಂ ಅನಂತಾದಿತ್ಯಸಂಕಾಶಾಯ ನಮಃ |
ಓಂ ಸುಬ್ರಹ್ಮಣ್ಯಾನುಜಾಯ ನಮಃ |
ಓಂ ಬಲಿನೇ ನಮಃ |
ಓಂ ಭಕ್ತಾನುಕಂಪಿನೇ ನಮಃ |
ಓಂ ದೇವೇಶಾಯ ನಮಃ |
ಓಂ ಭಗವತೇ ನಮಃ |
ಓಂ ಭಕ್ತವತ್ಸಲಾಯ ನಮಃ |
ಇತಿ ಶ್ರೀ ಅಯ್ಯಪ್ಪ ಅಷ್ಟೋಟ್ರಾಮ್ ಪರಿಪೂರ್ಣ ||



Click it and Unblock the Notifications











