Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಾಗರ ಪಂಚಮಿಯಂದು ಕಾಳ ಸರ್ಪದೋಷ ನಿವಾರಣೆಗೆ ಪರಿಹಾರ
ಜ್ಯೋತಿಷ್ಯದ ಪ್ರಕಾರ ಹಾವು ರಾಹು-ಕೇತುವನ್ನು ಪ್ರತಿನಿಧಿಸುತ್ತದೆ. ಹಾವಿನ ತಲೆ ರಾಹು, ಬಾಲ ಕೇತುವನ್ನು ಪ್ರತಿನಿಧಿಸುತ್ತದೆ. ಉಳಿದ 7 ಗ್ರಹಗಳ ಮೇಲೆ ರಾಹು-ಕೇತು ಪ್ರಭಾವ ಬೀರುವುದು. ರಾಹು-ಕೇತು ದೋಷವಿರುವವರಲ್ಲಿ ಕಾಳಸರ್ಪ ದೋಷವಿರುತ್ತದೆ. ಕಾಳ ಸರ್ಪ ದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಕಾಳಸರ್ಪ ದೋಷವಿದ್ದರೆ ಕೆಲವೊಂದು ಸೂಚನೆಗಳು ದೊರೆಯುತ್ತದೆ, ಆ ಸೂಚನೆಗಳು ಕಂಡು ಬಂದರೆ ಕಾಳ ಸರ್ಪದೋಷವಿದೆ ಎಂದರ್ಥ:

ಕಾಳಸರ್ಪ ದೋಷದ ಸೂಚನೆಗಳು
* ಕಾಳ ಸರ್ಪ ದೋಷವಿದ್ದರೆ ತೀರಿ ಹೋದವರು ಕನಸ್ಸಿನಲ್ಲಿ ಬರುತ್ತದೆ. ಇತ್ತೀಚೆಗೆ ಯಾರಾದರೂ ತೀರಿ ಹೋಗಿದ್ದರೆ ಅವರು ಕನಸ್ಸಿನಲ್ಲಿ ಬರುತ್ತದೆ.
* ನಮ್ಮೆಲ್ಲಾ ಕೆಲಸಗಳು ಯಾವುದೋ ಕಾರಣದಿಂದಾಗಿ ಅಡೆತಡೆಯಾಗುತ್ತಿದೆಯೆಲ್ಲಾ ಎಂದನಿಸಲಾರಂಭಿಸುವುದು
* ತಮ್ಮದೇ ಮನೆಯ ಕನಸು ಬೀಳಬಹುದು'
* ಸಾಮಾಜಿಕವಾಗಿ ಇಮೇಜ್‌ಗೆ ಧಕ್ಕೆಯಾಗಬಹುದು
* ಕಾಳಸರ್ಪದೋಷವಿದ್ದರೆ ಸಂತಾನದೋಷ ಉಂಟಾಗುವುದು
* ಹಾವು, ಹಾವು ಕಚ್ಚಿದಂಥ ಕನಸು ಬೀಳುವುದು
ನಾಗರ ಪಂಚಮಿಯನ್ನು ಆಗಸ್ಟ್ 21ರಂದು ಆಚರಿಸಲಾಗುವುದು. ಈ ದಿನ ನಾಗದೇವತೆಯನ್ನು ಪೂಜಿಸಲಾಗುವುದು. ನಾಗನ ಆರಾಧನೆ ಮಾಡದರೆ ನಾಗದೋಷದಿಂದ ಪರಿಹಾರ ಸಿಗುವುದು ಎಂಬ ನಂಬಿಕೆ. ಈ ದಿನ ಕಾಳ ಸರ್ಪ ದೋಷಕ್ಕೆ ಈ ರೀತಿ ಆರಾಧನೆ ಮಾಡಿದರೆ ಒಳ್ಳೆಯದು
* ಈ ದಿನ ನಾಗಮೂರ್ತಿಯನ್ನು ಆರಾಧಿಸಲಾಗುವುದು.
* ನೀರು, ಹಾಲು, ಆಹಾರ, ಹಣ್ಣುಗಳನ್ನು ನಾಗನಿಗೆ ಅರ್ಪಿಸಿ
* ಶ್ರೀ ಕೃಷ್ಣನ ಆರಾಧಿಸಿ, 11 ತೆಂಗಿನಕಾಯಿಯನ್ನು ಹರಿಯುವ ನೀರಿನಲ್ಲಿ ಬಿಡಿ
* ರಾಹು ಬೀಜ ಮಂತ್ರವನ್ನು ಪಠಿಸಿ.
ರಾಹು ಬೀಜ ಮಂತ್ರ: ಓಂ ಭ್ರಂ ಭ್ರೂಂ ಸಃ ರಾಹವೇ ನಮಃ
ಈ ಮಂತ್ರವನ್ನು 108 ಬಾರಿ ಪಠಿಸಿ.
* ಮಹಾ ಮೃತ್ಯುಂಜಯ ಮಂತ್ರವನ್ನು 108 ಬಾರಿ ಪಠಿಸಿ
ಕಾಳಸರ್ಪ ದೋಷಕ್ಕೆ ಪರಿಹಾರ
* ಸರ್ಪ ಮಂತ್ರ , ಸರ್ಪ ಗಾಯತ್ರಿ ಮಂತ್ರ ಪಠಿಸಿ
* ಭೈರವ ದೇವನನ್ನು ಆರಾಧಿಸಿ
* ನಾಗರ ಪಂಚಮಿ ಸೋಮವಾರ ಬಂದಿದೆ, ಈ ದಿನ ನೀವು ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ.
* ಮಹಾ ಮೃತ್ಯುಂಜಯ ಮಂತ್ರ ಪಠಿಸಿ
* ಶಿವನಿಗೆ ಶ್ರೀಗಂಧವನ್ನು ಅರ್ಪಿಸಿ
* ಈ ದಿನ ಆಹಾರವನ್ನು ದಾನ ಮಾಡಿದರೆ ಒಳ್ಳೆಯದು
ಪ್ರತಿ ಶ್ರಾವಣ ಸೋಮವಾರ ಶಿವ ಲಿಂಗಕ್ಕೆ ತಪ್ಪದೆ ಜಲಾಭಿಷೇಕ ಮಾಡಿ.
ಮಂತ್ರ
ಓಂ ತ್ರ್ಯಯಂಬಕಂ ಯಜ್ಮಹೇ ಸುಗಂಧಿ ಪುಷ್ಠಿ ವರ್ಧನಂ
ಉರ್ವಾರುಕಮೀವ ಬಂಧನಾತ್ ಮೃತ್ಯುರೊರ್ಮುಕ್ಶಯ ಮಮ್ರಿತಾತ್
ಈ ಮಂತ್ರವನ್ನು 108 ಬಾರಿ ಪಠಿಸಬೇಕು. ಈ ಮಂತ್ರವನ್ನು ಪಠಿಸುವುದರಿಂದ ನಾಗದೋಷದಿಂದ ಪರಿಹಾರ ಸಿಗುವುದು ಮಾತ್ರವಲ್ಲ ಅಕಾಲಿಕ ಮರಣ ಭಯ ದೂರಾಗುವುದು.
ಈ ಮಂತ್ರವನ್ನು ದಿನದ ಯಾವುದೇ ಸಮಯದಲ್ಲಿ ಪಠಿಸಿ
ನೀವು ಈ ಮಂತ್ರವನ್ನು ದಿನದ ಯಾವುದೇ ಸಮಯದಲ್ಲಿ ಪಠಿಸಿ, ಸ್ನಾನದ ಬಳಿಕ ಈ ಮಂತ್ರವನ್ನು ಹೇಳುತ್ತಾ ದೇಹಕ್ಕೆ ವಿಭೂತಿ ಹಚ್ಚುವುದು ಒಳ್ಳೆಯದು.
ಮಂತ್ರ ಪಠಣೆ ವಿಧಾನ
ಈ ಮಂತ್ರವನ್ನು ಪಠಿಸುವಾಗ ಉಚ್ಛಾರಣೆ ದೋಷವಿರಬಹುದು. ಈ ಮಂತ್ರವನ್ನು ಪಠಿಸಲು ಒಂದೆಡೆ ಧ್ಯಾನಸ್ಥ ಸ್ಥಿತಿಯಲ್ಲಿ ಕೂತಿರಬೇಕು. ನಿಮ್ಮ ಮುಂದೆ ಒಂದು ಕಮಂಡಲದಲ್ಲಿ ನೀರನ್ನು ತುಂಬಿಡಿ, ನಿಮ್ಮ ಬಲ ಹಸ್ತದಿಂದ ಆ ಕಮಂಡಲವನ್ನು ಮುಚ್ಚಿ 108 ಬಾರಿ ಮಂತ್ರ ಫಠಣೆ ಮಾಡಬೇಕು, ನಂತರ ಆ ನೀರನ್ನು ಮನೆಯ ಒಳಗಡೆ ಪ್ರೋಕ್ಷಣೆ ಮಾಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದು, ಮನೆಗೆ ಶುಭಫಲ ಉಂಟಾಗುವುದು.



Click it and Unblock the Notifications
