Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ರಕ್ಷಾ ಬಂಧನ 2023: ರಾಕಿ ಕಟ್ಟುವಾಗ ಅಪ್ಪಿ-ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!
ಭಾರತೀಯರಿಗೆ ರಕ್ಷಾ ಬಂಧನ ತುಂಬಾನೇ ಪವಿತ್ರವಾದ ಮತ್ತು ವಿಶೇಷವಾದ ಹಬ್ಬ. ಈ ದಿನ ತಂಗಿಯೂ ಅಣ್ಣನಿಗೆ ರಾಕಿ ಕಟ್ಟಿ ಆತನ ಆಶೀರ್ವಾದ ಪಡೆದರೆ, ಇತ್ತ ಅಣ್ಣನು ತಂಗಿಯನ್ನು ರಕ್ಷಣೆ ಮಾಡುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾನೆ.

ರಾಕಿ ಕಟ್ಟುವಾಗ ಶುಭ ಮುಹೂರ್ತ ನೋಡುವುದು ಹಾಗೂ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸೋದು ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ ಎಲ್ಲೂ ಕೂಡ ತಪ್ಪಾಗದಂತೆ ಜಾಗರೂಕತೆ ವಹಿಸಬೇಕು. ಅಷ್ಟಕ್ಕೂ ರಾಕಿ ಕಟ್ಟುವ ಸಂದರ್ಭದಲ್ಲಿ ಏನನ್ನು ಕಡ್ಡಾಯವಾಗಿ ಮಾಡಬೇಕು? ಹಾಗೂ ಯಾವ ತಪ್ಪುಗಳನ್ನು ಮಾಡಬಾರದು ಅನ್ನೋದನ್ನು ತಿಳಿಯೋಣ.
ರಾಕಿ ಕಟ್ಟುವಾಗ ಏನು ಮಾಡಬೇಕು?
* ಹೆಣ್ಣು ಮಕ್ಕಳು ಮುಂಜಾನೆ ಬೇಗನೆ ಎದ್ದು ಪೂಜಾ ಕಾರ್ಯದಲ್ಲಿ ತೊಡಗಿಕೊಳ್ಳಿ
* ಆರತಿ ತಟ್ಟೆಯನ್ನು ಸಿದ್ಧಪಡಿಸಿ. ಆರತಿ ತಟ್ಟೆಯಲ್ಲಿ ಕುಂಕುಮ, ಚಂದನ, ದೀಪ, ಸಿಹಿತಿಂಡಿ ಹಾಗೂ ರಾಕಿಯನ್ನು ರೆಡಿ ಮಾಡಿ ಇಟ್ಟುಕೊಳ್ಳಿ
* ಪೂರ್ವ ಅಥವಾ ಪಶ್ಚಿಮಕ್ಕೆ ಎದುರಾಗಿರುವ ಮರದ ಚೌಕಿಯ ಮೇಲೆ ಸಹೋದರನು ಕುಳಿತುಕೊಳ್ಳಬೇಕು
* ಸಹೋದರನ ಹಣೆಗೆ ತಿಲಕ ಹಚ್ಚಿ, ನಂತರ ರಾಕಿಯನ್ನು ಕಟ್ಟಿ ಆತನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ
* ಸಹೋದರನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಿರಿ
* ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ ಓಂ ಅಥವಾ ಸ್ವಸ್ತಿಕ್ ಚಿಹ್ಮೆ ಇರುವ ರಾಕಿಯನ್ನು ಆರಿಸಿಕೊಂಡರೆ ಇನ್ನೂ ಒಳ್ಳೆಯದು
* ಒಂದು ವೇಳೆ ನಿಮಗಿಂತ ನಿಮ್ಮ ಸಹೋದರ ಚಿಕ್ಕವನಾಗಿದ್ದರೆ ಆತ ನಿಮ್ಮ ಆಶೀರ್ವಾದ ಪಡೆಯಬೇಕು
* ನಂತರ ಇಬ್ಬರು ಪರಸ್ಪರ ಸಿಹಿತಿಂಡಿಯನ್ನು ತಿನ್ನಿಸಬೇಕು
* ನಂತರ ಸಹೋದರ ತನ್ನ ಸಹೋದರಿಗಾಗಿ ಏನಾದರೂ ಉಡುಗೊರೆ ನೀಡದರೆ ಒಳ್ಳೆಯದು
ರಾಕಿ ಕಟ್ಟುವಾಗ ಯಾವ ತಪ್ಪುಗಳು ಆಗಬಾರದು?
* ರಾಕಿಯ ಧಾರ ಕಟ್ಟುವ ಮೊದಲೇ ಮುರಿಯದಂತೆ ನೋಡಿಕೊಳ್ಳಿ. ಏಕೆಂದರೆ ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ
* ನಿಮ್ಮ ಉದ್ದೇಶ ಎಷ್ಟೇ ಒಳ್ಳೆಯದಾಗಿದ್ದರೂ ಕೂಡ ಸಹೋದರಿಗೆ ಹರಿತವಾದ ವಸ್ತುಗಳನ್ನು ಉಡುಗೊರೆಯಾಗಿ ನೀಡದಿರಿ
* ರಾಖಿ ಕಟ್ಟಲು ಭದ್ರ ಕಾಲ ಅಥವಾ ರಾಹುಕಾಲ ಅಶುಭ. ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ರಾಕಿ ಕಟ್ಟಬಾರದು
* ರಾಕಿ ಕಟ್ಟುವಾಗ ಸಂಪ್ರದಾಯಗಳನ್ನು ತಪ್ಪದೇ ಪಾಲಿಸಬೇಕು
* ಸಹೋದರನನ್ನು ಮರದ ಚೌಕಿಯ ಮೇಲೆ ಕುಳ್ಳಿರಿಸಿ ರಾಕಿ ಕಟ್ಟಿದರೆ ಒಳ್ಳೆಯದು
* ರಾಕಿಯ ದಿನ ಸಹೋದರ-ಸಹೋದರಿಯರು ಜಗಳವಾಡೋದನ್ನ ತಪ್ಪಿಸಿ
ರಕ್ಷಾ ಬಂಧನದ ದಿನ ಈ ವಿಚಾರದ ಬಗ್ಗೆ ಗಮನ ಹರಿಸಿ. ಯಾವುದೇ ತಪ್ಪುಗಳು ಆಗದಂತೆ ನೋಡಿಕೊಳ್ಳಿ.



Click it and Unblock the Notifications
