Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
Puneeth Rajkumar Birthday : ಅಪ್ಪುವಿನ ಬಲು ಅಪರೂಪದ ಫೋಟೋಗಳಿವು
ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಈಗಾಗಲೇ ಎರಡು ವರ್ಷಗಳು ಆಗುತ್ತಾ ಬಂತು. ಆದರೆ ಅಪ್ಪುರನ್ನು ಕಳೆದುಕೊಂಡ ನೋವನ್ನು ಇಂದಿಗೂ ಮರೆಯೋದಕ್ಕೆ ಸಾಧ್ಯವಾಗ್ತಿಲ್ಲ.
ಇಂದಿಗೂ ಅಪ್ಪು ನಮ್ಮೊಂದಿಗೆ ಇದ್ದಾರೆ ಅನ್ನೋ ಭಾವನೆಯಿದೆ. ಮಾರ್ಚ್ 17ರಂದು ಪುನೀತ್ 48 ನೇ ಹುಟ್ಟು ಹಬ್ಬವನ್ನು ರಾಜ್ಯದಾದ್ಯಂತ ಆಚರಿಸಲಾಗ್ತಿದೆ.

ಅಭಿಮಾನಿಗಳಿಗೆ ಅಪ್ಪುವನ್ನು ಕಳೆದುಕೊಂಡ ನೋವಿದ್ದರೂ ಕೂಡ ಈ ದಿನ ಪವರ್ ಸ್ಟಾರ್ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ನಮಗೆಲ್ಲಾ ಗೊತ್ತಿರೋ ಹಾಗೆ ಪುನೀತ್ ರಾಜ್ ಕುಮಾರ್ ಮಹಾನ್ ಕಲಾವಿದರ ಕುಟುಂಬದಲ್ಲಿ ಬೆಳೆದು ಬಂದವರು. ಹೀಗಾಗಿ ಚಿಕ್ಕಂದಿನಿಂದಾನೇ ಪುನೀತ್ ಆಗಿನ ಕಾಲದ ಹಿರಿಯ ಹಾಗೂ ಖ್ಯಾತ ನಟರೊಂದಿಗೆ ಒಡನಾಟವನ್ನು ಇಟ್ಟುಕೊಂಡಿದ್ದರು.
ಇವತ್ತು ಪುನೀತ್ ರಾಜ್‌ಕುಮಾರ್ ಹುಟ್ಟು ಹಬ್ಬ. ಬಾಲ ನಟನಾಗಿಯೂ ಕೂಡ ಪುನೀತ್ ಜನರ ಮನೆ ಮನ ಗೆದ್ದಿದ್ದರು. ಹೀಗಾಗಿ ಅಪ್ಪು ಬಾಲ್ಯವನ್ನು ಮತ್ತೆ ನೆನಪು ಮಾಡಿಕೊಳ್ಳೋಣ. ಅಪ್ಪು ಬದುಕಿದ್ದಾಗ ಅವರ ಬಾಲ್ಯದ ಅನೇಕ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರು. ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಆಗಿನ ಕಾಲದ ಹಿರಿಯ ನಟರೊಂದಿಗೆ ತೆಗೆದ ಫೋಟೋಗಳನ್ನು ಪೋಸ್ಟ್ ಮಾಡಿದ್ರು. ಅವುಗಳಲ್ಲಿ ಕೆಲವೊಂದು ಎವರಗ್ರೀನ್ ಫೋಟೋಗಳನ್ನು ನೋಡೋಣ.
ಸಾಹಸಸಿಂಹನ ಜೊತೆಗೆ ಪುಟ್ಟ ಅಪ್ಪು
ವಿಷ್ಣುವರ್ಧನ್ ಅವರ 70ನೇ ಹುಟ್ಟು ಹಬ್ಬಕ್ಕೆ ಅಪ್ಪು ಅವರು ವಿಷ್ಣುವರ್ಧನ್ ಜೊತೆಗಿರುವ ಫೋಟೋವನ್ನು ಇನ್ಸ್‌ಟಾಗ್ರಾಂ ಶೇರ್ ಮಾಡೊಕೊಂಡಿದ್ರು. ಎಪ್ಪತ್ತನೇ ಹುಟ್ಟುಹಬ್ಬದಂದು ವಿಷ್ಣು ಸಾರ್ ನೆನಪು ಎಂದು ಕ್ಯಾಪ್ಷನ್ ಕೊಟ್ಟಿದ್ರು.
ಬಿ. ಸರೋಜದೇವಿ ಜೊತೆಗೆ ಪುನೀತ್
ಪುನೀತ್ ಬಾಲ ನಟನಾಗಿ ಹಿರಿಯ ನಟಿ ಬಿ. ಸರೋಜ ದೇವಿಯ ಜೊತೆಗೆ ನಟಿಸಿದ್ರು. ಇದಾದ ಬಳಿಕ ಮತ್ತೆ ನಟ ಸಾರ್ವಭೌಮ ಸಿನಿಮಾದಲ್ಲಿ ಸರೋಜ ದೇವಿ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ರು. ಇನ್ನೂ ಸರೋಜ ದೇವಿಯ ಹುಟ್ಟು ಹಬ್ಬದ ಸಂದರ್ಭದಲ್ಲಿ ಹ್ಯಾಪಿ ಬರ್ತ್‌ಡೇ ಸರೋಜದೇವಿ ಆಂಟಿ ಎಂದು ಬರೆದು ಎರಡು ಫೋಟೋಗಳನ್ನು ಕೊಲಾಜ್ ಮಾಡಿ ಪೋಸ್ಟ್ ಮಾಡಿದ್ರು.
ಬಾಲಿವುಡ್ ನಟ ದಿಲೀಪ್ ಕುಮಾರ್ ಸಿಂಗ್ ಜೊತೆ ಪುನೀತ್
ಈ ಫೋಟೋದಲ್ಲಿ ಡಾ. ರಾಜ್ ಕುಮಾರ್ ಜೊತೆಗೆ ಬಾಲಿವುಡ್‌ನ ಟ್ರಾಜಿಡಿ ಕಿಂಗ್ ಎಂದೇ ಖ್ಯಾತರಾದ ದಿಲೀಪ್ ಕುಮಾರ್ ಜೊತೆಗೆ ಮಾಸ್ಟರ್ ಅಪ್ಪು ಇರೋದನ್ನು ಕಾಣಬಹುದಾಗಿದೆ. ಈ ಫೋಟೋದ ಕೆಳಗಡೆ ಅಮೂಲ್ಯವಾದ ಮರೆಯಲಾಗದ ಕ್ಷಣಗಳು ನಟ ದಿಲೀಪ್ ಕುಮಾರ್ ಜೊತೆಗೆ ಎಂಬ ಅಡಿಬರಹದೊಂದಿಗೆ ಅಪ್ಪು ಪೋಸ್ಟ್ ಮಾಡಿದ್ರು.
ಗೋಕಾಕ್ ಚಳವಳಿಯಲ್ಲಿ ಪುನೀತ್ ಭಾಗಿ
ಈ ಫೋಟೋ ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ತೆಗೆದ ಫೋಟೋವಾಗಿದ್ದು, ಇಲ್ಲಿ ಬಿಳಿ ಬಣ್ಣದ ಅಂಗಿ ಧರಿಸಿರುವ ಪುಟ್ಟ ಅಪ್ಪುವನ್ನು ಕಾಣಬಹುದು. ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ತೆಗೆದ ಫೋಟೋ ಸಿಕ್ಕಿತು. ಶಿವಣ್ಣ, ರಾಘಣ್ಣ, ಅಪ್ಪಾಜಿಯೊಂದಿಗೆ ನಾನು ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.
ಪುನೀತ್ ರಾಜ್ ಕುಮಾರ್‌ರಂತಹ ಅಪ್ಪಟ ಹೃದಯವಂತ ಈ ಭೂಮಿ ಮೇಲೆ ಮತ್ತೊಬ್ಬನಿಲ್ಲ. ನಮ್ಮ ಅಪ್ಪು ಮತ್ತೊಮ್ಮೆ ಹುಟ್ಟಿ ಬರಲಿ ಅನ್ನೋದೇ ಎಲ್ಲರ ಆಶಯ.



Click it and Unblock the Notifications