Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೃಷ್ಣ ಜನ್ಮಾಷ್ಟಮಿ 2023: ಶ್ರೀ ಕೃಷ್ಣನ ಪವರ್‌ಫುಲ್ ಮಂತ್ರಗಳಿವು
ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6ರಂದು ಆಚರಿಸಲಾಗುವುದು. ಶ್ರೀ ಕೃಷ್ಣ ಜನಿಸಿದ ದಿನಾಂಕವನ್ನು ಜನ್ಮಾಷ್ಟಮಿ ಎಂದು ಆಚರಿಸಲಾಗುವುದು. ಶ್ರೀ ವಿಷ್ಣುವಿನ 9ನೇ ಅವತಾರವೇ ಶ್ರೀಕೃಷ್ಣ ಎಂದು ಹೇಳಲಾಗುವುದು. ಶ್ರೀ ಕೃಷ್ಣ ಭಕ್ತಿಯಿಂದ ಪೂಜಿಸಿದರೆ ಬದುಕಿನಲ್ಲಿರುವ ಎಲ್ಲಾ ಗೊಂದಲಗಳು ದೂರಾಗುವುದು. ಶ್ರೀಕೃಷ್ಣನ ಜನ್ಮಾಷ್ಟಮಿಯಂದು ಶ್ರೀ ವಿಷ್ಣುವಿನ ಆರಾಧನೆ ಮಾಡುವಾಗ ಈ ಪವರ್‌ಫುಲ್ ಮಂತ್ರಗಳನ್ನು ಪಠಿಸಿ. ಇದರಿಂದ ನಿಮಗೆ ಎಲ್ಲಾ ರೀತಿಯಲ್ಲೂ ಒಳಿತಾಗಲಿದೆ.

ಕೃಷ್ಣ ಮೂಲ ಮಂತ್ರ
ಓಂ ಕೃಷ್ಣಾಯ ಮಂತ್ರ
ಈ ಮಂತ್ರವನ್ನು ಯಾವುದೇ ಸಮಯದಲ್ಲಿ ಬೇಕಾದರೂ ಪಠಿಸಬಹುದು.
ಹರೇ ಕೃಷ್ಣ ಮಹಾ ಮಂತ್ರ
ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ
ಈ ಮಂತ್ರವನ್ನು ಮಹಾಮಂತ್ರ ಎಂದು ಕರೆಯಲಾಗುವುದು. ಈ ಮಂತ್ರವನ್ನು ಪ್ರತಿದಿನ ಪಠಿಸಿ.
ಕೃಷ್ಣ ಗಾಯತ್ರಿ ಮಂತ್ರ
|| ಓಂ ದೇವಕಿ ನಂದನಾಯ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ಕೃಷ್ಣಃ ಪ್ರಚೋದಯಾತ್ ||
|| ಓಂ ದೇವಕಿನಂದನಾಯ ವಿದ್ಮಿಹೇ ವಾಸುದೇವಾಯ ಧೀಮಹಿ |
ತನ್ನೋ: ಕೃಷ್ಣಃ ಪ್ರಚೋದಯಾತ್ ||
ಈ ಮಂತ್ರವನ್ನು ಪಠಿಸುವುದರಿಂದ ಮನಸ್ಸಿನಲ್ಲಿ ಧೈರ್ಯ ಹೆಚ್ಚಾಗುವುದು. ಅಲ್ಲದ ಎಬದುಕಿನಲ್ಲಿರುವ ಕಷ್ಟಗಳು ದೂರಾಗುವುದು ಎಂದು ನಂಬಲಾಗುವುದು.
ಯಶಸ್ವಿಗೆ ಶ್ರೀ ಕೃಷ್ಣ ಮಂತ್ರ
ಓಂ ಶ್ರೀ ಕೃಷ್ಣ ಶರಣಂ ನಮಃ
ಈ ಮಂತ್ರವನ್ನು ಪಠಿಸುವುದರಿಂದ ಯಶಸ್ಸು ಸಿಗಲಿದೆ.
ಹಣದ ಸ್ಥಿತಿಗತಿ ಉತ್ತಮವಾಗಲು
ಕ್ಲೀಂ ಗ್ಲೈಂ ಕ್ಲೀಂ ಶ್ಯಾಮಲಾಂಗಾಯ ನಮಃ
ಪ್ರೇಮ ವಿವಾಹವಾಗಲು ಬಯಸಿದರೆ
ಓಂ ನಮೋ ಭಾಗ್ವತೇ ಶ್ರೀ ಗೋವಿಂದಾಯೇ
ಓಂ
ಕ್ಲೀಂ ಕೃಷ್ಣಾಯ ಗೋಪಿಜಾನ್ ವಲ್ಲಾಬಾಯ್ ಸ್ವಾಹಾ
ಕೃಷ್ಣ ಭಕ್ತಿ ಮಂತ್ರ
ಜೈ ಶ್ರೀ ಕೃಷ್ಣ ಚೈತನ್ಯ ಪ್ರಭು ನಿತ್ಯಾನಂದ ಶ್ರೀ ಅದ್ವೈತ ಗದಾಧರ ಶ್ರೀವಾಸದಿ ಗೌರ ಭಕ್ತ ವೃಂದ
ಕೃಷ್ಣ ಕ್ಲೀಂ ಮಂತ್ರ
ಓಂ ಕ್ಲೀಂ ಕೃಷ್ಣಾಯ ನಮಃ
ಕೃಷ್ಣ ಮಂತ್ರವನ್ನು ಪಠಿಸುವುದರಿಂದ ದೊರೆಯುವ ಪ್ರಯೋಜನಗಳು
* ಆತ್ಮವಿಶ್ವಾಸ ಹೆಚ್ಚಾಗುವುದು
* ಭಯ ದೂರಾಗುವುದು, ಗೊಂದಲ ದೂರಾಗುವುದು
* ಜ್ಞಾನವನ್ನು ಹೆಚ್ಚಿಸುತ್ತದೆ
* ಕಾಯಿಲೆಯನ್ನು ಗುಣಪಡಿಸುತ್ತದೆ
* ಯಶಸ್ಸು ಸಿಗಲಿದೆ
* ಖುಷಿ ಸಿಗಲಿದೆ, ಮಾನಸಿಕ ನೆಮ್ಮದಿ ಸಿಗಲಿದೆ
* ಪಾಪಕರ್ಮಗಳಿಂದ ಮುಕ್ತಿ ಸಿಗಲಿದೆ
* ನಿಮ್ಮ ಇಷ್ಟಾರ್ಥಗಳು ನೆರವೇರುವುದು
ಕೃಷ್ಣ ಮಂತ್ರ
* ಕೃಷ್ಣ ಮಂತ್ರ ಪಠಿಸುವಾಗ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳಿ
* ಹಳದಿ ಬಣ್ಣದ ಬಟ್ಟೆ ಧರಿಸಿ
* ಶ್ರೀ ಕೃಷ್ಣನಿಗೆ ತುಪ್ಪದ ದೀಪ ಹಚ್ಚಿ ಆರಾಧಿಸಿ



Click it and Unblock the Notifications
