Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ರಾಮನಿಗಾಗಿ ಮೋದಿ ಕಠಿಣ ವ್ರತಾಚರಣೆ: ಏಳನೀರು ಕುಡಿದು ನೆಲದ ಮೇಲೆ ಮಲಗುವ ಪ್ರಧಾನಿ..!
ಜನವರಿ 22 ರಂದು ನಡೆಯಲಿರುವ ಅಯೋಧ್ಯೆ ರಾಮ ಮಂದಿರದ ಶಂಕುಸ್ಥಾಪನೆ ಕಣ್ತುಂಬಿಕೊಳ್ಳಲು ಇಡೀ ಭಕ್ತ ಸಾಗರ ತುದಿಗಾಲಲ್ಲಿ ನಿಂತಿದೆ. ಈಗಾಗಲೇ ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ರಾಮ ಲಲ್ಲಾನ ಮೂರ್ತಿ ರಾಮಮಂದಿರ ಸೇರಿದೆ. ಜ.22ರ ಪ್ರಾಣ ಪ್ರತಿಷ್ಠಾಪನೆ ಹಂತದ ಕೊನೆಯ ದಿನದಂದು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಈ ಭವ್ಯ ಮಂದಿರ ಲೋಕಾರ್ಪಣೆಯಾಗಲಿದೆ.
ಈ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಮೊದಲು ಪ್ರಧಾನಿ ನರೇಂದ್ರ ಮೋದಿ ಕಠಿಣ ವ್ರತ ಆಚರಿಸುವುದಾಗಿ ತಿಳಿಸಿದ್ದರು. ಸುಮಾರು 11 ದಿನಗಳ ಕಾಲ ಉಪವಾಸ ಹಾಗೂ ಕಠಿಣ ವ್ರತಾಚರಣೆ ಮಾಡುವುದಾಗಿ ತಿಳಿಸಿದ್ದರು. ಈ ಕುರಿತು ಜ.12ರಂದು ನಾಸಿಕ್‌ನ ಪಂಚವಟಿಯಲ್ಲಿ 11 ದಿನಗಳ 'ಅನುಷ್ಠಾನ ವ್ರತ' ಆರಂಭಿಸಿದ್ದರು.

11-ದಿನಗಳ ಕಠಿಣ ವ್ರತ ಆರಂಭಿಸಿರುವ ಅವರು, "ಸಾತ್ವಿಕ" ಆಹಾರ ಸೇವಿಸುತ್ತಿದ್ದು, ದಿನಕ್ಕೆ ಒಂದು ಹೊತ್ತು ಮಾತ್ರ ಈ ಆಹಾರ ಸೇವಿಸುತ್ತಿದ್ದಾರಂತೆ. ಈರುಳ್ಳಿ, ಬೆಳ್ಳುಳ್ಳಿ ಮತ್ತು ಇತರ ವಸ್ತುಗಳನ್ನು ನಿರ್ಬಂಧಿಸಿದ್ದಾರಂತೆ.
ಎಳನೀರು, ಚಾಪೆ ಮೇಲೆ ನಿದ್ರೆ
ಪ್ರಧಾನಿಯವರು ಕೇವಲ ಒಂದು ಹೊದಿಕೆಯೊಂದಿಗೆ ನೆಲದ ಮೇಲೆ ಮಲಗುತ್ತಿದ್ದಾರಂತೆ. ಜೊತೆಗೆ ರಾತ್ರಿ ವೇಳೆ ಏಳನೀರು ಮಾತ್ರ ಕುಡಿಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜನವರಿ 12 ರಿಂದ ದೇವಾಲಯದ ಮಹಾಮಸ್ತಕಾಭಿಷೇಕದ ವಿಧಿವಿಧಾನಗಳು ಆರಂಭಗೊಂಡಿವೆ. ಜನವರಿ 22 ರಂದು ಪ್ರಧಾನಿ ಮೋದಿ ಅವರು "ಪ್ರಾಣ ಪ್ರತಿಷ್ಠಾ"ಕ್ಕೆ ಪೂಜೆ ನೆರವೇರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಅರ್ಚಕರ ತಂಡವು ಪ್ರಾಣ ಪ್ರತಿಷ್ಠೆಯ ಮುಖ್ಯ ವಿಧಿಗಳನ್ನು ನಡೆಸಲಿದೆ.
ದೇವಾಲಯದ ಟ್ರಸ್ಟ್‌ನಿಂದ ವಿಶೇಷವಾಗಿ ಆಹ್ವಾನಿಸಲ್ಪಟ್ಟ ದೇಶ ಮತ್ತು ವಿದೇಶಗಳಿಂದ 11,000 ಅತಿಥಿಗಳು ಮಹಾಮಸ್ತಕಾಭಿಷೇಕಕ್ಕೆ ಸಾಕ್ಷಿಯಾಗಲಿದ್ದಾರೆ. ಇದೇ ದಿನ ಕೇಂದ್ರ ಸರ್ಕಾರ ತನ್ನ ಎಲ್ಲಾ ಕಚೇರಿಗಳನ್ನು ಅರ್ಧ ದಿನ ಮುಚ್ಚುವುದಾಗಿ ಘೋಷಿಸಿದೆ.
ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ, ದೇಶದಾದ್ಯಂತ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ನಡೆಸುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದರು. ಈ ಮನವಿ ಹಿನ್ನೆಲೆ ದೇಶದ ವಿವಿಧ ದೇವಾಲಯಗಳನ್ನು ರಾಜಕೀಯ ನಾಯಕರು ಖುದ್ದು ಶುಚಿಗೊಳಿಸಿದ್ದರು. ಸದ್ಯ ಪ್ರಧಾನಿ ಮೋದಿ ಪಂಚವಟಿಯಲ್ಲಿ ತಮ್ಮ ವ್ರತಾಚರಣೆ ಮುಂದುವರೆಸಿದ್ದಾರೆ.
ರಾಮಮಂದಿರ ಉದ್ಘಾಟನೆ ಕ್ಷಣಕ್ಕೆ ಯಾರಿಗೆಲ್ಲಾ ಆಹ್ವಾನ ನೀಡಲಾಗಿದೆ?
ರಾಷ್ಟ್ರಪತಿ ದ್ರೌಪದಿ ಮುರ್ಮು
ಉಪರಾಷ್ಟ್ರಪತಿ ಜಗದೀಪ್ ಧನಕರ್
ಪ್ರಧಾನಿ ನರೇಂದ್ರ ಮೋದಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್
ಮಹಂತ್ ನೃತ್ಯ ಗೋಪಾಲ್ ದಾಸ್, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
BAPS ಸ್ವಾಮಿನಾರಾಯಣ ಸಂಸ್ಥಾ
ಎಲ್ ಕೆ ಅಡ್ವಾಣಿ
ಮುರಳಿ ಮನೋಹರ ಜೋಶಿ
ಅಖಿಲೇಶ್ ಯಾದವ್
ಮಲ್ಲಿಕಾರ್ಜುನ ಖರ್ಗೆ (ಆಹ್ವಾನ ನಿರಾಕರಿಸಲಾಗಿದೆ)
ಸೋನಿಯಾ ಗಾಂಧಿ (ಆಹ್ವಾನ ನಿರಾಕರಿಸಲಾಗಿದೆ)
ಅಧೀರ್ ರಂಜನ್ ಚೌಧರಿ (ಆಹ್ವಾನ ನಿರಾಕರಿಸಲಾಗಿದೆ)
ಮನಮೋಹನ್ ಸಿಂಗ್
ಗೌತಮ್
ಕೈಗಾರಿಕೋದ್ಯಮಿಗಳಿಗೆ ಆಹ್ವಾನ
ಅದಾನಿ
ರತನ್ ಟಾಟಾ
ಮುಕೇಶ್ ಅಂಬಾನಿ
ಕುಮಾರ್ ಮಂಗಳಂ ಬಿರ್ಲಾ
ಎನ್ ಚಂದ್ರಶೇಖರನ್
ಅನಿಲ್ ಅಗರ್ವಾಲ್
ಎನ್ ಆರ್ ನಾರಾಯಣ ಮೂರ್ತಿ
ಚಲನಚಿತ್ರದ ಸೆಲೆಬ್ರೆಟಿಗಳು
ಮೋಹನ್ ಲಾಲ್
ರಜನಿಕಾಂತ್
ಅಮಿತಾಬ್ ಬಚ್ಚನ್
ಅನುಪಮ್ ಖೇರ್
ಮಾಧುರಿ ದೀಕ್ಷಿತ್
ಚಿರಂಜೀವಿ
ಸಂಜಯ್ ಲೀಲಾ ಬನ್ಸಾಲಿ
ಅಕ್ಷಯ್ ಕುಮಾರ್
ಧನುಷ್
ರಣದೀಪ್ ಹೂಡಾ
ರಣಬೀರ್ ಕಪೂರ್
ಕಂಗನಾ ರಣಾವತ್
ರಿಷಬ್ ಶೆಟ್ಟಿ
ಮಧುರ್ ಭಂಡಾರ್ಕರ್
ಅಜಯ್ ದೇವಗನ್
ಜಾಕಿ ಶ್ರಾಫ್
ಟೈಗರ್ ಶ್ರಾಫ್
ಯಶ್
ಪ್ರಭಾಸ್
ಆಯುಷ್ಮಾನ್ ಖುರಾನಾ
ಆಲಿಯಾ ಭಟ್
ಸನ್ನಿ ಡಿಯೋಲ್
ಕ್ರೀಡಾ ಪಟುಗಳು
ಸಚಿನ್ ತೆಂಡೂಲ್ಕರ್
ವಿರಾಟ್ ಕೊಹ್ಲಿ
ಎಂಎಸ್ ಧೋನಿ
ದೀಪಿಕಾ ಕುಮಾರಿ



Click it and Unblock the Notifications

