Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಈ ವರ್ಷ ನಾಗರ ಪಂಚಮಿ ಯಾವಾಗ? ಸರ್ಪದೋಷಕ್ಕೆ ಪರಿಹಾರವೇನು?
ನಾಗ ಪಂಚಮಿ ಅಥವಾ ನಾಗರ ಪಂಚಮಿ ಎಲ್ಲಾ ಹಬ್ಬಗಳಿಗೆ ಮುನ್ನಡಿಯಾಗಿ ಬರುತ್ತದೆ, ಅದಾದ ಬಳಿಕ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ನಾಗರ ಪಂಚಮಿಯನ್ನು ಆಚರಿಸಲಾಗುವುದು. ಈ ಬಾರಿ ನಾಗರ ಪಂಚಮಿ ಹಬ್ಬವನ್ನು ಆಗಸ್ಟ್ 21ರಂದು ಆಚರಿಸಲಾಗುವುದು. ಈ ಬಾರಿ ನಾಗರ ಪಂಚಮಿಯನ್ನು ಆಗಸ್ಟ್ 21ರಂದು ಆಚರಿಸಲಾಗುವುದು.

ನಾಗರಪಂಚಮಿ ತಿಥಿ ಮತ್ತು ಶುಭ ಸಮಯ
ಆಗಸ್ಟ್ 21 ರಂದು ಶುಕ್ಲ ಪಕ್ಷದ ಪಂಚಮಿ ತಿಥಿ ಆಗಸ್ಟ್ 20 ರಂದು 12:23 ಕ್ಕೆ ಪಂಚಮಿ ತಿಥಿ ಇರುತ್ತದೆ. ಈ ದಿನಾಂಕವು 21 ರಂದು ರಾತ್ರಿ 2:01 ಕ್ಕೆ ಕೊನೆಗೊಳ್ಳುತ್ತದೆ.
ನಾಗಪಂಚಮಿಯ ಮಹತ್ವ
ಇದರ ಮಹತ್ವವನ್ನು ಕುರಿತ ಒಂದು ಕತೆಯಿದೆ. ಮಹಾಭಾರತದಲ್ಲಿ ಈ ಕುರಿತ ಒಂದು ಉಪಕಥೆಯಿದೆ, ರಾಜ ಜನಮೇಜಯ ಇಡೀ ನಾಗಾ ಜನಾಂಗವನ್ನು ನಾಶಮಾಡಲು ಯಾಗವನ್ನು ನಡೆಸುತ್ತಾನೆ. ಜನಮೇಜಯನ ಪಿತೃ ತಕ್ಷಕ ಸರ್ಪದ ಕಡಿತದಿಂದಾಗಿ ಸಾವನ್ನಪ್ಪಿರುತ್ತಾನೆ, ಇದಕ್ಕೆ ಪ್ರತೀಕಾರ ತೀರಿಸಲು ಇಡೀ ನಾಗ ಸಂಕುಲವನ್ನು ನಾಶ ಮಾಡಲು ಮುಂದಾಗುತ್ತಾನೆ. ಆಗ ಋಷಿ ಆಸ್ತಿಕನು ಜನಮಜೆಯ ಯಾಗವನ್ನು ತಡೆಯಲು ಯತ್ನಿಸುತ್ತಾರೆ, ಅದರಲ್ಲಿ ಯಶಸ್ವಿಯಾಗುತ್ತಾರೆ. ಈ ದಿನವನ್ನು ನಾಗರ ಪಂಚಮಿಯೆಂದು ಆಚರಿಸಲಾಗುವುದು ಎಂದು ಹೇಳಲಾಗುವುದು. ಗರುಡ ಪುರಾಣದ ಪ್ರಕಾರ, ನಾಗ ಪಂಚಮಿಯಂದು ಹಾವುಗಳನ್ನು ಪೂಜಿಸುವುದು ಭಕ್ತನಿಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ.
ನಾಗರ ಪಂಚಮಿಯಂದು ಭೂ ತಾಯಿಗೆ ನೋವುಂಟು ಮಾಡುವುದಿಲ್ಲ
ನಾಗರ ಪಂಚಮಿಯಂದು ಭೂಮಿಯನ್ನು ಅಗೆಯುವುದಿಲ್ಲ, ಈ ದಿನ ನಾಗರ ಕಲ್ಲು ಅಥವಾ ಹುತ್ತಕ್ಕೆ ಹಾಲೆರೆದು ಪೂಜೆಯನ್ನು ಮಾಡುತ್ತಾರೆ. (ಹುತ್ತಗಳಿಗೆ ಹಾಲೆರೆಯದಂತೆ ಉರಗ ತಜ್ಞರು ಸಲಹೆ ನೀಡುತ್ತಾರೆ). ಈ ಹಬ್ಬವನ್ನು ದೇಶದ ಎಲ್ಲೆಡೆ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಆಚರಿಸಲಾಗುವುದು.
ನಾಗ ಪ್ರತಿಷ್ಠಾಪನೆ
ಕೆಲವರು ಈ ದಿನ ನಾಗವನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡುತ್ತಾರೆ. ಇದು ಹೆಂಗಳೆಯರ ಹಬ್ಬವಾಗಿದೆ, ವಿವಾಹಿತರು ಹಾವಿಗೆ ಹಾಲೆರೆದರೆ ಸೌಭಾಗ್ಯ ಹೆಚ್ಚುವುದು, ಅವಾಹಿತರು ಹಾವಿಗೆ ಹಾಲೆರೆದರೆ ವಿವಾಹ ಭಾಗ್ಯ ಕೂಡಿ ಬರಲಿದೆ ಎಂಬ ನಂಬಿಕೆ ಇದೆ.
ನಾಗರ ಪಂಚಮಿಯ ಆಚರಣೆ ವಿಧಾನ
* ನಾಗರಪಂಚಮಿಯ ದಿನದಂದು ಉಪವಾಸ ಮಾಡಲಾಗುವುದು. ನಾಗರ ಪಂಚಮಿ ಆಚರಣೆ ಮಾಡುವುದರಿಂದ ಸರ್ಪದೋಷದಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆಯಿದೆ.
* ಈ ದಿನ ನಾಗ ದೇವತೆಗಳಿಗೆ ಪೂಜೆಯನ್ನು ಸಲ್ಲಿಸಲಾಗುವುದು.
* ಜಾತಕದಲ್ಲಿ ರಾಹು ಮತ್ತು ಕೇತುಗಳ ದೋಷವಿದ್ದರೆ ಆ ದೋಷ ನಿವಾರಣೆಗೆ ನಾಗರ ಪಂಚಮಿಯಂದು ನಾಗರ ಮೂರ್ತಿಗಳನ್ನು ಪೂಜಿಸಬೇಕು ಎಂದು ಹೇಳಲಾಗುವುದು.
* ಈ ದಿನ, ಶಿವಲಿಂಗಕ್ಕೆ ಹಿತ್ತಾಳೆಯ ಪಾತ್ರೆಯಿಂದ ಮಾತ್ರ ಹಾಲು, ನೀರನ್ನು ಅರ್ಪಿಸಿ.



Click it and Unblock the Notifications
