Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಪ್ರಧಾನಿ ಜೊತೆಗೆ ಶಮಿಯ ಫೋಟೋ ವೈರಲ್: ದೇಶ ಭಕ್ತನಿಗೆ ಸಿಕ್ಕ ಗೌರವ ಅಂದ ಭಾರತೀಯರು
ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಎಡವಿದರೆ ಬದುಕು ಏನಾಗುತ್ತದೆ ಎಂಬುವುದಕ್ಕೆ ಬಹು ದೊಡ್ಡ ಉದಾಹರಣೆ ಶಮಿ. ಶಮಿಯನ್ನು ಹೀರೋ ಅನ್ನಬೇಕಾ, ದುರಂತ ನಾಯಕ ಎನ್ನಬೇಕಾ ಎಂದು ಹೇಳುವುದಕ್ಕೆ ಕಷ್ಟವಾಗುತ್ತೆ, ಏಕೆಂದರೆ ಅದೆರಡೂ ಆಗಿದ್ದಾರೆ ಶಮಿ. ತಪ್ಪೇ ಮಾಡದೇ ಪಿತೂರಿಗೆ ಒಳಗಾಗಿ ಪಟ್ಟ ಅವಮಾನವಿದೆಯೆಲ್ಲಾ ಅದನ್ನು ಬೇರೆ ಯಾರಾದರೂ ಅನುಭವಿಸಿದ್ದರೆ ಬಹುಶಃ ಅವರಿಗೆ ಶಮಿಯಂತೆ ಮತ್ತೆ ಎದ್ದು ನಿಲ್ಲಲು, ಕಳೆದ ಕೊಂಡ ನಂಬಿಕೆಯನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಾಗುತ್ತಿತ್ತಾ? ಡೌಟ್...

ಎಲ್ಲಕ್ಕಿಂತ ಅವರ ಮೇಲೆ ಬಂದ ಅಪವಾದನೆ ದೇಶದ್ರೋಹದ್ದು. ಒಬ್ಬ ಭಾರತದ ತಂಡದ ಕ್ರಿಕೆಟಿಗನ ಮೇಲೆ ಇಂಥ ಅಪವಾದ ಬಂದಾಗ ಅವನ ವೃತ್ತಿ ಬದುಕೇ ಸರ್ವನಾಶವಾಗುತ್ತೆ, ಕ್ರಿಕೆಟ್ ಎಂಬ ಆಟದಲ್ಲಿ ಭಾರತೀಯರಿಗೆ ಇರುವ ಸೆಂಟಿಮೆಂಟೇ ಬೇರೆ, ಅದನ್ನು ಆಟವಾಗಿಷ್ಟೇ ನೋಡುವುದಿಲ್ಲ, ದೇಶದ ಪ್ರತಿಷ್ಠೆ ಎಂಬುವುದಾಗಿ ನೋಡುತ್ತಾರೆ, ಅದಕ್ಕೆ ಸಾಕ್ಷಿ ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆಯುವಾಗ ಜನರು ತೋರಿಸುವ ಪ್ರತಿಕ್ರಿಯೆ, ಅಂಥದ್ದರಲ್ಲಿ ಭಾರತ ತಂಡದ ಆಟಗಾರ ದೇಶ ದ್ರೋಹ ಮಾಡುತ್ತಿದ್ದಾನೆ ಎಂಬ ಆರೋಪ ಬಂದಾಗ, ಅದರಲ್ಲೂ ಆ ಆಟಗಾರನ ಪತ್ನಿಯೇ ಹೀಗೆ ಅಪಾದನೆ ಮಾಡುವಾಗ ಜನರು ಆತನನ್ನು ನಂಬುತ್ತಾರೆಯೇ? ಶಮಿ ಬದುಕಿಗೆ ದೊಡ್ಡ ಹೊಡೆತ ಬಿದ್ದದ್ದು ಹೀಗೆ...
ವೈಯಕ್ತಿಕ ಬದುಕಿನಲ್ಲಿ ಎಲ್ಲವೂ ಸರಿಯಿಲ್ಲದಿದ್ದಾಗ ಆ ಹೊಡೆತದ ಜೊತೆಗೆ ವೃತ್ತಿ ಬದುಕಿನಲ್ಲಿ ದೊಡ್ಡ ಹೊಡೆತವೇ ಎದುರಾಯ್ತು. ಶಮಿಯ ವೃತ್ತಿ ಬದುಕು ಅಷ್ಟೇ ಎಂದೆ ಎಲ್ಲರೂ ಭಾವಿಸಿದ್ದರು, ಆದರೆ ಶಮಿ ಕಂಬ್ಯಾಕ್ ಮಾಡಿದ ರೀತಿ ಇದೆಯೆಲ್ಲಾ ನಮ್ಮಲ್ಲಿ ಸತ್ಯ ಇದ್ದರೆ ಸತ್ಯಕ್ಕೆ ಎಂದಿಗೂ ಜಯ ಸಿಗುತ್ತೆ ಎಂಬುವುದಕ್ಕೆ ಉದಾಹರಣೆ ಶಮಿ.
ವಿಶ್ವಕಪ್‌ನಲ್ಲಿ ತಮ್ಮ ಆಟದ ಮೂಲಕ ಮೊಹಮ್ಮದ್ ಶಮಿ ತಕ್ಕ ಉತ್ತರ ನೀಡುವ ಮೂಲಕ ಭಾರತೀಯರ ಹೃದಯದಲ್ಲಿ ಭದ್ರ ಸ್ಥಾನ ಪಡೆದಿದ್ದಾರೆ.
ಯಾವ ಹುಸಿ ಅಪಾದನೆಯೂ ಶಮಿಯನ್ನು ಬಾಧಿಸಲ್ಲ ಎಂಬುವುದಕ್ಕೆ ಸಾಕ್ಷಿ ಈ ಫೋಟೋ
ಭಾನುವಾರ ವಿಶ್ವಕಪ್ ಮ್ಯಾಚ್‌ನಲ್ಲಿ ಭಾರತ ಸೋತರೂ ಆಟಗಾರರು ಭಾರತೀಯರ ಮನ ಗೆದ್ದಿದ್ದಾರೆ. ತಂಡ ಸೋತು ಬೇಸರದಿಂದಿದ್ದಾಗ ದೇಶದ ಪ್ರಧಾನಿ ಮೋದಿಯವರೇ ಬಂದು ತಂಡವನ್ನು ಸಂತೈಸಿದ್ದಾರೆ. ಶಮಿಯವರನ್ನು ಸಂತೈಸುತ್ತಿರುವ ಫೋಟೋವನ್ನು ಶಮಿಯವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ 'Unfortunately yesterday was not our day. I would like to thank all Indians for supporting our team and me throughout the tournament. Thankful to PM @narendramodi for specially coming to the dressing room and raising our spirits. We will bounce back!'(ದುರಾದೃಷ್ಟಾವಶಾತ್ ನೆನ್ನೆಯ ದಿನ ನಮ್ಮದಾಗಿರಲಿಲ್ಲ, ಟೀಂ ಅನ್ನು ಸಪೋರ್ಟ್ ಮಾಡಿದ ಎಲ್ಲಾ ಭಾರತೀಯರಿಗೆ ಧನ್ಯವಾದಗಳು , ಡ್ರೆಸ್ಸಿಂಗ್ ರೂಮ್‌ಗೆ ಬಂದು ನಮ್ಮನ್ನು ನಮ್ಮನ್ನು ಹುರಿದುಂಬಿಸಿದ್ದಕ್ಕೆ ಥ್ಯಾಂಕ್ಯೂ ನರೇಂದ್ರಮೋದಿ ) ಎಂದು ಬರೆದು ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಫೋಟೋ ವೈರಲ್ ಆಗಿದೆ.
Unfortunately yesterday was not our day. I would like to thank all Indians for supporting our team and me throughout the tournament. Thankful to PM @narendramodi for specially coming to the dressing room and raising our spirits. We will bounce back! pic.twitter.com/Aev27mzni5
— 𝕸𝖔𝖍𝖆𝖒𝖒𝖆𝖉 𝖘𝖍𝖆𝖒𝖎 (@MdShami11) November 20, 2023
ಈ ಫೋಟೋ ತುಂಬಾನೇ ಸ್ಪೆಷಲ್
ಶಮಿಯವರಿಗೆ ದೇಶ ದ್ರೋಹದ ಪಟ್ಟ ಬಂದಾಗ ಆ ಮನಸ್ಸು ಎಷ್ಟು ನೋವು ಪಟ್ಟಿರಬೇಡ, ದೇಶಕ್ಕಾಗಿ ಆಡಿ ಈ ರೀತಿ ಅನಿಸಿಕೊಂಡಾಗ ಸತ್ತೇ ಬಿಡಬೇಕೆನಿಸುವುದು, ಅವರು ಆತ್ಮಹತ್ಯೆಯ ಪ್ರಯತ್ನ ಕೂಡ ಮಾಡಿದ್ದರು. ದೇಶದ್ರೋಹ ಮಾಡುವುದಿರಲಿ ಅಂಥದ್ದೊಂದು ಚಿಕ್ಕ ಆಲೋಚನೆ ಬಂದರೂ ಸತ್ತೇ ಬಿಡುತ್ತೇನೆ ಎಂದಿದ್ದರು ಶಮಿ, ಆದರೆ ಈಗ ಅವರ ಮೇಲೆ ಯಾರೇ ಸುಳ್ಳು ಆರೋಪ ಹೊರೆಸಿದರೂ ಅದನ್ನು ಕೇಳಲು ಯಾರೂ ಸಿದ್ಧರಿಲ್ಲ, ದೇಶದ ಪ್ರಧಾನಿಯೇ ಈ ಆಟಗಾರನ ಬಿಗಿದಪ್ಪಿ ಸಮಧಾನ ಪಡಿಸಿದ ಶಮಿಗೆ ಇನ್ಯಾರ ಸರ್ಟಿಫಿಕೇಟ್ ಬೇಕು.... ಆದ್ದರಿಂದಲೇ ಈ ಫೋಟೋ ಇಂದು ವೈರಲ್ ಆಗಿದೆ.
ಶಮಿ ನೆಮ್ಮದಿ ಕಿತ್ತುಕೊಂಡ ಲವ್ ಮ್ಯಾರೇಜ್
ಶಮಿ ಬಡತನದಲ್ಲಿ ಹುಟ್ಟಿದ ಪ್ರತಿಭೆ, ಕ್ರಿಕೆಟ್ ಆಗಷ್ಟೇ ಗುರುತಿಸಿಕೊಳ್ಳುತ್ತಿದ್ದರು. ಆವಾಗ ಶಮಿಗೆ ಪರಿಚಯವಾದವರೇ ಹಸೀನ್ ಜಹಾನ್... ನೋಡಲು ಸುಂದರಿ, ಮಾಡಲ್ ಬೇರೆ... ಆಕೆಯ ಸೌಂದರ್ಯಕ್ಕೆ ಮರುಳಾದ ಶಮಿ ಪ್ರೀತಿಯಲ್ಲಿ ಬೀಳುತ್ತಾರೆ. ಈ ಜೋಡಿ ಮದುವೆ ಕೂಡ ಮಾಡಿಕೊಳ್ಳುತ್ತಾರೆ, ಇಬ್ಬರ ಪ್ರೀತಿಯ ಕುರುಹಾಗಿ ಮಗಳು ಕೂಡ ಇದ್ದಾಳೆ, ಇವರದ್ದು ಸುಂದರ ಕುಟುಂಬ ಎಂದು ಅಭಿಮಾನಿಗಳು ಭಾವಿಸಿದ್ದರು, ಆದರೆ ಅಷ್ಟರಲ್ಲಿಯೇ ಅವರ ಕುಟುಂಬದಲ್ಲಿ ಅಪಸ್ವರ ಎದ್ದಿತು.
ಪತ್ನಿಯಿಂದ ಅಪಾದನೆಗಳ ಸುರಿಮಳೆ
ಹಸೀನ್ ಜಹಾನ್ ಶಮಿ ಮೇಲೆ ಒಂದರ ಮೇಲೆ ಒಂದರಂತೆ ಅಪವಾದ ಹೇಳುತ್ತಾರೆ, ಅದನ್ನು ಈಗಲೂ ಹೇಳುತ್ತಿದ್ದಾರೆ, ಆದರೆ ಆವಾಗ ಇವರು ಹೇಳಿದ ಮಾತನ್ನು ಜನ ನಂಬಿದ್ದರು, ಆದರೆ ಈಗ ಅವರು ಹೇಳಿದ್ದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ, ಸುಮ್ಮನೆ ಶಮಿ ಮೇಲೆ ದೇಶ ದ್ರೋಹದ ಆರೋಪ ಹೊರೆಸಿದ್ದಾರೆ ಎಂಬುವುದು ಜನರಿಗೆ ಮನವರಿಕೆಯಾಗಿದೆ. ಆದರೆ ಆ ಸಮಯದಲ್ಲಿ ಎಲ್ಲರೂ ಈಕೆ ಹೇಳಿದ್ದೇ ಸರಿ ಎಂದು ನಂಬಿದ್ದರು, ಇದರ ಪ್ರಭಾವದಿಂದಾಗಿ ಶಮಿ ಎಂಬ ಅದ್ಭುತ ಆಟಗಾರ ಅನೇಕ ಸವಾಲುಗಳನ್ನು ಎದುರಿಸಬೇಕಾಯ್ತು, ಸಾಯುವ ನಿರ್ಧಾರ ಕೂಡ ಮಾಡಿದ್ದರು.
ಆದರೆ ಆಕೆ ನನ್ನ ಮೇಲೆ ಹೊರೆಸಿರುವ ಅಪಾದನೆಗಳು ಸುಳ್ಳು ಎಂಬುವುದನ್ನು ತಮ್ಮ ಆಟದ ವೈಖರಿ ಮೂಲಕ ತೋರಿಸಿಕೊಟ್ಟಿದ್ದಾರೆ, ಭಾರತೀಯರ ಪ್ರೀತಿಯ ಶಮಿಯಾಗಿದ್ದಾರೆ, ಅಲ್ಲದೆ ಅವರನ್ನು ಇಡೀ ಭಾರತ ನಂಬುತ್ತಿದೆ ಎಂಬುವುದಕ್ಕೆ ಸಾಕ್ಷಿ ಪ್ರಧಾನಿ ಮೋದಿ ಸಂತೈಸುತ್ತಿರುವ ಫೋಟೋ... ಇನ್ನಾದರೂ ಶಮಿ ಬದುಕಿನಲ್ಲಿ ಯಾವುದೇ ಕಷ್ಟಗಳು ಬಾರದಿರಲಿ ಎಂಬುವುದೇ ಅವರ ಅಭಿಮಾನಿಗಳ ಆಸೆಯಾಗಿದ.



Click it and Unblock the Notifications











