Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಎಂಬಿಎ ಓದಲು ಸಾಲ ಮಾಡಿ ಕಷ್ಟ ಪಟ್ಟಿದ್ದ..! ₹95,000 ಕೋಟಿ ಮೌಲ್ಯದ ಕಂಪನಿ ಕಟ್ಟಿದ
ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಲಕ್ಷಾಂತರ ಮಂದಿ ಮಹಾನಗರಗಳತ್ತ ಬರುತ್ತಾರೆ. ಆದರೆ ಕೆಲವರು ಕಷ್ಟಪಟ್ಟು ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಇನ್ನೂ ಕೆಲವರು ಈ ದಾರಿಯಲ್ಲಿ ಎಡುವುತ್ತಾರೆ. ಇಲ್ಲಿ ಗೆದ್ದವರಿಗಿಂತ ಸೋತವರ ಸಂಖ್ಯೆ ಹೆಚ್ಚಾಗಿರುತ್ತದೆ. ಜೊತೆಗೆ ಸೋತವರು ಜೀವದಲ್ಲಿ ಪಾಠ ಕಲಿತಿರುತ್ತಾರೆ. ಎಲ್ಲಿ ತಪ್ಪಾಗಿದೆ ಎಂದು ಅರಿಯುತ್ತಾರೆ.
ಇನ್ನು ಐಐಟಿ, ಎಂಬಿಎ ಮಾಡಿ ತಮ್ಮದೆ ಸ್ವಂತ ಉದ್ಯಮ ಕಟ್ಟುವ ಕನಸು ಇಟ್ಟುಕೊಂಡವರ ಸಂಖ್ಯೆ ಏನು ಕಡಿಮೆಯಿಲ್ಲ. ಐಟಿ ವಲಯದಲ್ಲಿ ಇಂದಿಗೂ ಸಹ ಲಕ್ಷ ಲಕ್ಷ ಮಂದಿ ಇದೇ ಕನಸು ಇಟ್ಟುಕೊಂಡು ದೊಡ್ಡ ದೊಡ್ಡ ನಗರಗಳತ್ತ ಬರುತ್ತಾರೆ. ಹೀಗೆ ಬಂದವರಲ್ಲಿ ಕೆಲವರು ಯಾರು ಮಾಡಿರದ ಸಾಧನೆ ಮಾಡುತ್ತಾರೆ. ಈ ಸಾಧನೆ ಮಾಡಿದವರ ಸಾಲಿನಲ್ಲಿಂದು ಗಿರೀಶ್ ಮಾತೃಭೂತಮ್ ಸಜಹ ಒಬ್ಬರು.

ಹಾಗಾದರೆ ನಾವಿಂದು ಯಾರು ಈ ಗಿರೀಶ್ ಮಾತೃಭೂತಮ್, ಯಾವ ಕಂಪನಿ ಕಟ್ಟಿದ್ದಾರೆ, ಅವರ ಜೀವನ ಕಥೆ ಏನು.? ಎಂಬೆಲ್ಲಾ ಕುರಿತು ತಿಳಿದುಕೊಳ್ಳೋಣ.
ಮಾತೃಭೂತಂ ಮಧ್ಯಮ ವರ್ಗದ ತಮಿಳುನಾಡಿನ ಕುಟುಂಬದಲ್ಲಿ ಬೆಳೆದರು ಮತ್ತು ಹಲವಾರು ಕಷ್ಟಗಳನ್ನು ಅನುಭವಿಸಿದರು. ಗಿರೀಶ್ ಅವರ ಪ್ರಯಾಣವು ಸುಲಭವಾಗದಿದ್ದರೂ, ಅವರ ಪ್ರಯಾಣ ಬೇರೆಯವರಿಗೆ ಸ್ಫೂರ್ತಿಯಾಗುವಂತಿದೆ. ಅವರ ಕಷ್ಟದ ದಿನಗಳು ಆರಂಭಗೊಂಡಿದ್ದೇ ಎಂಬಿಎ ಕಲಿಯುವ ವೇಳೆ. ಹಣವಿಲ್ಲದೆ ಮನೆಯಿಂದ, ಸ್ನೇಹಿತರ ಬಳಿ ಅವರು ಹಣ ಪಡೆಯುತ್ತಿದ್ದರು.
ಆದರೆ ಹೇಳಿದಂತೆ, ಕಠಿಣ ಪರಿಶ್ರಮವು ಫಲ ನೀಡುತ್ತದೆ ಎಂಬುದಕ್ಕೆ ಗಿರೀಶ್ ಉದಾಹರಣೆ. ಅವರೀಗ ಸುಮಾರು 95,000 ಕೋಟಿ ಮೌಲ್ಯದ ವ್ಯವಹಾರದ ಕಂಪನಿ ಹೊಂದಿದ್ದಾರೆ. ಹೌದು ನಿಮಗೂ ಇದು ಅಚ್ಚರಿ ಎನಿಸಬಹುದು. ಗಿರೀಶ್ ಈಗ ಫ್ರೆಶ್‌ವರ್ಕ್ ಎಂಬ ಸಾಫ್ಟ್‌ವೇರ್ ಕಂಪನಿ ಕಟ್ಟಿದ್ದು, 95 ಸಾವಿರ ಕೋಟಿ ಮೌಲ್ಯ ಹೊಂದಿದೆ.
ಐಐಟಿ ಸೇರಲು ಹಣವಿರಲಿಲ್ಲ
ಮಾತೃಭೂತಂ ತಮಿಳುನಾಡಿನ ತಿರುಚ್ಚಿ ಪಟ್ಟಣದಲ್ಲಿ ಜನಿಸಿದರು ಮತ್ತು ಅವರ ಆರಂಭಿಕ ಜೀವನದಲ್ಲಿ ಕಷ್ಟಗಳನ್ನು ಎದುರಿಸಿದರು. ಗಿರೀಶ್ ಅವರ ತಂದೆ ಜನಸಾಮಾನ್ಯರಿಗಾಗಿ ದುಡಿಯುತ್ತಿದ್ದರು. ಗಿರೀಶ್ ಶಾಲೆಯಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದ. ಅವರು ಐಐಟಿಗೆ ಬರಲು ಸಾಧ್ಯವಾಗಲಿಲ್ಲ. ಅವರು ತಮ್ಮ ಇಂಜಿನಿಯರಿಂಗ್ ಅನ್ನು ತಮ್ಮ ಊರಿನ ಸಮೀಪದಲ್ಲಿರುವ ಷಣ್ಮುಘ ಆರ್ಟ್ಸ್, ಸೈನ್ಸ್, ಟೆಕ್ನಾಲಜಿ & ರಿಸರ್ಚ್ ಅಕಾಡೆಮಿಯಿಂದ ಪೂರ್ಣಗೊಳಿಸಿದರು. ನಂತರ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಮುಗಿಸಿದರು.
1992 ರಲ್ಲಿ, ಅವರು ತಮ್ಮ ಎಂಜಿನಿಯರಿಂಗ್ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ MBA ವ್ಯಾಸಂಗ ಮಾಡಿದರು. ಅವರ ಮನೆಯಲ್ಲಿ ಆರ್ಥಿಕವಾಗಿ ಕಷ್ಟವಿದ್ದರೂ ಅವರು ತಮ್ಮ ಶಿಕ್ಷಣವನ್ನು ಮುಂದುವರಿಸಲು ತಮ್ಮ ತಂದೆಯ ಬಳಿ ಹಣ ಕೇಳಿ ಪಡೆಯುತ್ತಿದ್ದರು. ಅವರ ತಂದೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕಾರಣ ಸಂಬಂಧಿಕರೊಬ್ಬರ ಬಳಿ ಸಾಲ ಮಾಡಿದ್ದರು.
ಆದರೆ ಅವರಿಗೆ ಅಮೆರಿಕದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಹೆಚ್‌ಸಿಎಲ್ ಕಂಪನಿ ಸೇರಿ ಹಲವು ಕಂಪನಿಯಲ್ಲಿ ಕೆಲಸ ಮಾಡಿದ ಅನುಭವಿತ್ತು. 2010ರಲ್ಲಿ, ಅವರು ಮತ್ತು ಅವರ ಸ್ನೇಹಿತ ಶಾನ್ ಕೃಷ್ಣಸಾಮಿ ಅವರು ಚೆನ್ನೈನಲ್ಲಿ ಫ್ರೆಶ್‌ವರ್ಕ್ಸ್ ಕಂಪನಿ ಅನ್ನು ಸ್ಥಾಪಿಸಿದರು.
2011ರಲ್ಲಿ, ಫ್ರೆಶ್‌ವರ್ಕ್ಸ್ ತನ್ನ ಆರಂಭಿಕ ಹೂಡಿಕೆಯಾಗಿ $1 ಮಿಲಿಯನ್ ಫಂಡಿಂಗ್ ಪಡೆದಿತ್ತು. ಈ ಆರಂಭಕ್ಕೆ ಕಾದಿದ್ದ ಕಂಪನಿ ಬಳಿಕ ಹೆಮ್ಮರವಾಗಿ ಬೆಳೆಯಿತು. ಇಬ್ಬರು ಒಂದೊಳ್ಳೆ ತಂಡ ಕಟ್ಟಿದರು. ಗಿರೀಶ್ ಕಂಪನಿಯನ್ನೇ ಮನೆಯಾಗಿಸಿ ದಿನದ ಬಹುಪಾಲು ಸಮಯ ಕಂಪನಿಯಲ್ಲಿ ಕಳೆದರು. ಇದಾದ ಬಳಿಕ ಫ್ರೆಶವರ್ಕ್ ವಿದೇಶಿ ಕಂಪನಿಗಳಿಗೂ ಸವಾಲು ಹಾಕುವ ರೀತಿ ಬೆಳೆಯಿತು. ತಮ್ಮ ಕೆಲಸದಿಂದ ಹೆಸರಾಗಿ ಈಗ 95,000 ಕೋಟಿ ಮೌಲ್ಯದ ದೃಹತ್ ಕಂಪನಿಯಾಗಿ ಬೆಳೆದಿದೆ.



Click it and Unblock the Notifications