Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪ್ರಿಯಾಂಕಾ ಚೋಪ್ರಾ ಯಶಸ್ಸಿಗೆ ತಾಯಿ ಮಧು ಚೋಪ್ರಾ ಹೇಳಿಕೊಟ್ಟ ಜೀವನ ಪಾಠಗಳೇ ಕಾರಣ!
ನಟಿ ಪ್ರಿಯಾಂಕಾ ಚೋಪ್ರಾ ಇಂದು ವಿಶ್ವದಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಿಸ್ ವಲ್ಡ್ ಪಟ್ಟವನ್ನು ಗಿಟ್ಟಿಸಿಕೊಂಡ ಪ್ರಿಯಾಂಕಾ ಚೋಪ್ರಾ ಆ ನಂತರ ತಿರುಗಿ ನೋಡಿಯೇ ಇಲ್ಲ. ನೇರವಾಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಪ್ರಿಯಾಂಕಾ ಯಾವುದೇ ರೀತಿ ಸಿನಿಮಾ ಹಿನ್ನಲೆ ಇಲ್ಲದಿದ್ದರೂ ಕೂಡ ಬಾಲಿವುಡ್ ನಲ್ಲಿ ಗಟ್ಟಿಯಾಗಿ ನೆಲೆ ನಿಲ್ಲುತ್ತಾರೆ. ಅಲ್ಲದೇ, ಸಾಕಷ್ಟು ಹೆಸರು ಗಳಿಸ್ತಾರೆ.
ಇನ್ನೂ ಬಾಲಿವುಡ್ ಗೆ ತಮ್ಮ ಜರ್ನಿಯನ್ನು ನಿಲ್ಲಿಸದ ಪಿಸಿ ಹಾಲಿವುಡ್ ಗೂ ಹಾರ್ತಾರೆ. ಮೊದ ಮೊದಲು ಹಾಲಿವುಡ್ ನಲ್ಲೂ ನೆಲೆ ನಿಲ್ಲೋದು ಪ್ರಿಯಾಂಕಾಗೆ ಕಷ್ಟ ಆದ್ರೂ ಕೂಡ ಕೊಂಚ ವರುಷಗಳ ಬಳಿಕ ಹಾಲಿವುಡ್ ನಲ್ಲೂ ದೊಡ್ಡ ಹೆಸರು ಗಳಿಸ್ತಾರೆ. ಇಂಗ್ಲಿಷ್ ಹಾಡುಗಾರ್ತಿಯಾಗಿಯೂ ಗುರುತಿಸಿಕೊಳ್ಳುತ್ತಾರೆ. ಇದಾದ ಬಳಿಕ ಅಮೆರಿಕಾದ ಖ್ಯಾತ ಸಂಗೀತಗಾರನ ಪ್ರೇಮದಲ್ಲಿ ಬಿದ್ದ ಪ್ರಿಯಾಂಕಾ ಅವರನ್ನೇ ಮದುವೆಯಾಗಿ ಸದ್ಯ ಅಮೆರಿಕಾದಲ್ಲಿ ಸೆಟಲ್ ಆಗಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರ ಈ ಸುದೀರ್ಘ ಯಶಸ್ಸಿನ ಪಯಣ ಸುಗಮವಾಗಿ ಇರಲಿಲ್ಲ. ಕಲ್ಲು-ಮುಳ್ಳಿನ ಹಾದಿಯನ್ನು ತುಳಿಕೊಂಡೇ ಯಶಸ್ಸನ್ನು ಕಂಡವರು ಪ್ರಿಯಾಂಕಾ ಚೋಪ್ರಾ. ಅಷ್ಟಕ್ಕು ಪಿಸಿ ಯಶಸ್ವಿ ಮಹಿಳೆಯಾಗೋದಕ್ಕೆ ಬೇರ್ಯಾರು ಕಾರಣವಲ್ಲ ಅವರ ತಾಯಿ ಮಧು ಚೋಪ್ರಾ. ಹಾಗಾದ್ರೆ ಪ್ರಿಯಾಂಕಾ ಯಶಸ್ಸಿಗೆ ಮಧುಚೋಪ್ರಾ ಹೇಳಿಕೊಟ್ಟ ಜೀವನ ಪಾಠಗಳು ಯಾವುದು ಅನ್ನೋದನ್ನು ತಿಳಿಯೋಣ.
ನಿನ್ನ ಮೌಲ್ಯವನ್ನು ನೀನು ಅರ್ಥ ಮಾಡಿಕೊಳ್ಳು!
ಪ್ರಿಯಾಂಕಾ ತಾಯಿ ಮಧು ಚೋಪ್ರಾ ಯಾವಾಗಲೂ ತನ್ನ ಮನಗಳಿಗೆ ನಿನ್ನ ಮೌಲ್ಯ ಎಷ್ಟು ಎಂಬುವುದನ್ನು ಮೊದಲು ನೀನು ಅರ್ಥ ಮಾಡಿಕೊಳ್ಳು ಅಂತ ಹೇಳುತ್ತಿದ್ದರಂತೆ. ನಿನ್ನನ್ನು ನೀನು ಪೈಸೆ ಎಂದು ಪರಿಗಣಿಸಿದರೆ ಜಗತ್ತು ಕೂಡ ನಿನ್ನನ್ನು ಅದೇ ರೀತಿ ಪರಿಗಣಿಸುತ್ತದೆ. ಹೀಗಾಗಿ ನಿನ್ನನ್ನು ನೀನು ರೂಪಾಯಿ ಅಂದುಕೊಂಡಾಗ ಈ ಜಗತ್ತು ಕೂಡ ನಿನಗೆ ಅಷ್ಟೇ ಮರ್ಯಾದಿ ನೀಡುತ್ತದೆ.
ಒತ್ತಡದ ಹೇರೋ ಬದಲಾಗಿ ಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು!
ಹೆಚ್ಚಿನ ಪೋಷಕರು ತಮ್ಮ ಮಕ್ಕಳ ಮೇಲೆ ಸಾಮಾನ್ಯವಾಗಿ ಒತ್ತಡವನ್ನು ಹೇರುತ್ತಾರೆ. ಆದರೆ ಮಧು ಚೋಪ್ರಾ ಎಂದಿಗೂ ಮಗಳಿಗೆ ಒತ್ತಡ ಹೇರಿಲ್ಲವಂತೆ. ವೃತ್ತಿ ಜೀವನದಲ್ಲಿ "ಮಾಡು ಇಲ್ಲವೇ ಮಡಿ" ಎಂಬ ಭಾವನೆ ಇರಬಾರದು. ಇಲ್ಲಿ ಯಶಸ್ಸು ಸಿಗದಿದ್ದರೆ ಏನಂತೆ ವಾಪಾಸ್ಸ್ ಬಂದು ಹೊರಗಡೆ ಎಷ್ಟೋ ಕೆಲಸಗಳು ಇದ್ದಾವೆ ಅದಕ್ಕಾಗಿ ಪ್ರಯತ್ನ ಮಾಡು ಅಂತ ತಾಯಿ ಹೇಳಿದ್ದರಂತೆ.
ಆರ್ಥಿಕವಾಗಿ ಸ್ವತಂತ್ರಳಾಗುವುದು ಮುಖ್ಯ!
ಪ್ರಿಯಾಂಕಾ ಚೋಪ್ರಾ ತನ್ನ ಪ್ರತಿಯೊಂದು ಸಂದರ್ಶನಗಳಲ್ಲಿ ಮಹಿಳಾ ಸ್ವಾತಂತ್ರದ ಬಗ್ಗೆ ಮಾತನಾಡುತ್ತಾರೆ. ಅವರ ತಾಯಿ ಕೂಡ ಅವರಿಗೆ ಇದನ್ನೇ ಹೇಳಿಕೊಟ್ಟಿದ್ದರಂತೆ. ನೀನು ಮೊದಲು ಆರ್ಥಿಕವಾಗಿ ಸ್ವಾತಂತ್ರಳಾಗಬೇಕು. ಯಾರ ಮೇಲೆಯೂ ಅವಲಂಬಿತಳಾಗಬಾರದು. ನೀವು ಆರ್ಥಿಕವಾಗಿ ಸಬಲಳಾಗಿದ್ರೆ ನಿನಗೆ ಬೇಕಾದ ಹಾಗೇ ನಿನ್ನ ಜೀವನ ನಡೆಸಬಹುದು ಎಂದು ಹೇಳಿದ್ದರಂತೆ.
ಮಧು ಚೋಪ್ರಾ ಮಕ್ಕಳಿಗೆ 3 ಮುಖ್ಯ ಪಾಠಗಳನ್ನು ಹೇಳಿದ್ದರಂತೆ!
ಮಧು ಚೋಪ್ರಾ ಮಕ್ಕಳಿಗೆ ಮೂರು ಹಕ್ಕುಗಳ ಬಗ್ಗೆ ಚಿಕ್ಕಂದಿನಲ್ಲೇ ಪಾಠ ಮಾಡಿದ್ದರಂತೆ. ಪ್ರಿಯಾಂಕಾ ಹಾಗೂ ಅವರ ತಮ್ಮ ಸಿದ್ಧಾರ್ಥ್ ಚಿಕ್ಕದಿರಬೇಕಾದರೆ ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬೋ ಕೆಲಸವನ್ನು ತಾಯಿ ಮಾಡಿದ್ದರಂತೆ. ಮಧು ಚೋಪ್ರಾ ಮಕ್ಕಳಿಗೆ ಹೇಳಿ ಕೊಟ್ಟ ಆ ಮೂರು ಪಾಠಗಳು ಯಾವುದೆಂದರೆ ಮೊದಲನೇಯದ್ದು ಆಲೋಚನೆಯ ಹಕ್ಕು , ಎರಡನೇಯದ್ದು ಮುಕ್ತವಾಗಿ ಮಾತನಾಡುವ ಹಕ್ಕು, ಮೂರನೇಯದ್ದು ಅಭಿವ್ಯಕ್ತಿ ಸ್ವಾತಂತ್ರದ ಹಕ್ಕು.
ಹೀಗಾಗಿ ಚಿಕ್ಕ ವಯಸ್ಸಿನಲ್ಲಿ ಪ್ರಿಯಾಂಕಾ ಹಾಗೂ ಅವರ ತಮ್ಮ ಶಾಲೆಯಿಂದ ಬಂದ ತಕ್ಷಣ ಮೊದಲು ಶಾಲೆಯಲ್ಲಿ ಏನಾಯ್ತು ಅಂತ ಪೋಷಕರ ಬಳಿ ಹೇಳುತ್ತಿದ್ದರಂತೆ. ಆ ನಂತರ ಈ ಬಗ್ಗೆ ಚರ್ಚಿಸಿ ಮಕ್ಕಳಿಗೆ ಸರಿಯಾದ ದಾರಿಯಾಗಿ ಬಗ್ಗೆ ತಿಳಿಸಿಕೊಡುತ್ತಿದ್ದರಂತೆ. ಮಕ್ಕಳಲ್ಲಿ ವಿಶ್ವಾಸ ಯಾವಾಗ ಹೆಚ್ಚಿರುತ್ತದೆಯೋ ಆಗ ಅವರು ಯಾವ ವಿಚಾರದ ಬಗ್ಗೆ ಕೂಡ ಮಾತನಾಡೋದಕ್ಕೆ ಹೆದರಿಕೊಳ್ಳೋದಿಲ್ಲ ಎಂದು ಮಧು ಚೋಪ್ರಾ ಹೇಳಿದ್ದಾರೆ.
ಎಗ್ ಫ್ರೀಜಿಂಗ್ ( ಅಂಡಾಣು ಶೈತಲೀಕರಿಸುವುದು)
ಪ್ರಿಯಾಂಕಾ ಚೋಪ್ರಾ ಅವರು ಸರೋಗೆಸಿ ಮೂಲಕ ಮುದ್ದಾದ ಹೆಣ್ಣು ಮಗುವನ್ನು ಪಡೆದುಕೊಂಡಿದ್ದಾರೆ. ಆದರೆ ತಮ್ಮ 30 ನೇ ವಯಸ್ಸಿಗೆ ಪ್ರಿಯಾಂಕಾ ಚೋಪ್ರಾ ತಾಯಿಯ ಸಲಹೆಯಂತೆ ಎಗ್ ಫ್ರೀಸಿಂಗ್ ( ಅಂಡಾಣು ಶೈತಲೀಕರಿಸುವುದು) ಮಾಡಿಕೊಂಡಿದ್ದರಂತೆ. ಮಧು ಚೋಪ್ರಾ ಸ್ತ್ರೀ ರೋಗ ತಜ್ಷೆಯಾಗಿದ್ದು ಅವರು ಈ ಸಲಹೆ ನೀಡಿದ್ರಂತೆ. ಇದರಿಂದ ಪ್ರಿಯಾಂಕಾ ಅವರಿಗೆ ತಮ್ಮ ವೃತ್ತಿ ಜೀವನದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸೋದಕ್ಕೆ ಸಹಾಯವಾಯಿತಂತೆ.
ಒಟ್ಟಿನಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಪ್ರತಿಯೊಂದು ಹೆಜ್ಜೆಯಲ್ಲೂ ಅವರ ತಾಯಿ ಮಧು ಚೋಪ್ರಾ ಜೊತೆಯಾಗಿದ್ರು. ಪಿಸಿ ಇವತ್ತು ಇಷ್ಟೊಂದು ಯಶಸ್ಸನ್ನು ಗಳಿಸೋದಕ್ಕೆ ಅವರ ತಾಯಿ ಒಂದು ರೀತಿಯಲ್ಲಿ ಕಾರಣ ಅಂದ್ರೂ ತಪ್ಪಾಗೋದಿಲ್ಲ.



Click it and Unblock the Notifications

