Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೊನೆಯ ಶ್ರಾವಣ ಶುಕ್ರವಾರ: ಲಕ್ಷ್ಮಿ ಪೂಜೆಯಲ್ಲಿ ಈ ಪರಿಹಾರ ಮಾಡಿದರೆ ಆರ್ಥಿಕ ಸಂಕಷ್ಟ ದೂರಾಗುವುದು
ಸೆಪ್ಟೆಂಬರ್ 15 ಶುಕ್ರವಾರ ಅದರಲ್ಲೂ ಕೊನೆಯ ಶ್ರಾವಣ ಶುಕ್ರವಾರ. ಶುಕ್ರವಾರ ಲಕ್ಷ್ಮಿಯನ್ನು ಆರಾಧನೆ ಮಾಡಿದರೆ ಸಂಪತ್ತು ವೃದ್ಧಿಸುವುದು ಎಂದು ಹೇಳಲಾಗಿದೆ. ಇಂದು ಸಂಜೆ ನೀವು ಲಕ್ಷ್ಮಿ ಪೂಜೆ ಮಾಡುವಾಗ ನಿಮ್ಮ ಇಷ್ಟಾರ್ಥಗಳು ನೆರವೇರಲು, ವ್ಯಾಪಾರದಲ್ಲಿ ಪ್ರಗತಿ ಸಾಧಿಸಲು, ಆರ್ಥಿಕ ಸಂಕಷ್ಟದಿಂದ ಹೊರಬರಲು ಈ ಪರಿಹಾರ ಮಾಡಿ.

* ನಿಮ್ಮ ವ್ಯಾಪಾರ ಲಾಸ್‌ನಲ್ಲಿ ನಡೆಯುತ್ತಿದ್ದರೆ
| ಓಂ ಹ್ರೀಂ ಶ್ರೀಂ ಲಕ್ಷ್ಮೀಭ್ಯೋ ನಮಃ || ಮಂತ್ರವನ್ನು 21 ಬಾರಿ ಪಠಿಸಿ. ಬಿಳಿ ಬಟ್ಟೆಯಲ್ಲಿ ಶ್ರೀಗಂಧವನ್ನುಇಟ್ಟು ಅದನ್ನು ನೀವು ಕೆಲಸ ಮಾಡುವ ಜಾಗದಲ್ಲಿ ಇಟ್ಟಿರಿ, ಇದರಿಂದ ನಿಮ್ಮ ವ್ಯಾಪಾರವು ಹೆಚ್ಚಾಗುತ್ತದೆ, ಅಂಗಡಿ ವ್ಯಾಪಾರ ಚುರುಕಾಗುತ್ತದೆ ಎಂದು ಜ್ಯೋತಿಷ್ಯ ಪರಿಹಾರದಲ್ಲಿ ಹೇಳಲಾಗಿದೆ.
* ಲಕ್ಷ್ಮಿಗೆ ತುಪ್ಪದ ದೀಪವನ್ನು ಹಚ್ಚಿ
ನೀವು ಲಕ್ಷ್ಮಿಗೆ ತುಪ್ಪದ ದೀಪವನ್ನು ಹಚ್ಚಿ ಅವರು ಆರಾಧಿಸಿ. ತುಪ್ಪದ ದೀಪ ಹಚ್ಚುವಾಗ ನಿಮ್ಮ ಮನಸ್ಸಿನ ಬೇಡಿಕೆಗಳನ್ನು ಅವಳ ಬಳಿ ಹೇಳಿಕೊಳ್ಳುತ್ತಾ ಆರ್ಥಿಕ ಸಂಕಷ್ಟದಿಂದ ಪಾರು ಮಾಡು ಎಂದು ಕೇಳಿಕೊಳ್ಳಿ.
ಲಕ್ಷ್ಮಿಗೆ ಕೆಂಪು ಹೂಗಳನ್ನು ಅರ್ಪಿಸಿ
ಕೆಂಪು ಹೂವುಗಳೆಂದರೆ ಲಕ್ಷ್ಮಿಗೆ ತುಂಬಾನೇ ಇಷ್ಟ. ಲಕ್ಷ್ಮಿಗೆ ತಾವರೆ ಹೂಗಳನ್ನು ಅರ್ಪಿಸಬೇಕು. ನೀವು ದಾಸವಾಳದ ಹೂಗಳನ್ನು ಕೂಡ ನೀವು ಅರ್ಪಿಸಬಹುದು.
ಆರತಿ ಮಾಡುವಾಗ ಇವುಗಳನ್ನು ಹಾಕಿ
ನೀವು ಲಕ್ಷ್ಮಿಗೆ ಆರತಿ ಮಾಡುವಾಗ ನೀವು 4 ಕರ್ಪೂರ ಹಾಕಿ ಅದರಲ್ಲಿ 2 ಲವಂಗ ಹಾಕಿ ಮಾತೆ ಲಕ್ಷ್ಮಿಗೆ ಆರತಿ ಮಾಡಿ. ಹೀಗೆ ಮಾಡುವುದರಿಂದ ಆರ್ಥಿಕವಾಗಿ ಸಮೃದ್ಧಿ ಹೆಚ್ಚುವುದು.
ಈ ದಿನ ಹೀಗೆ ಮಾಡಿ
ಈ ದಿನ ಲಕ್ಷ್ಮಿಗೆ ಖೀರ್ ಅನ್ನು ಅರ್ಪಿಸಿ , ನಂತರ ಆ ಖೀರ್ ಅನ್ನು ಚಿಕ್ಕ ಹೆಣ್ಣು ಮಕ್ಕಳಿಗೆ ನೀಡಿ. ನೀವು ಇದನ್ನು ಈ ಶುಕ್ರವಾರದಿಂದ ಪ್ರಾರಂಭಿಸಿ 21 ಶುಕ್ರವಾರದವರೆಗೆ ಮಾಡಬಹುದು.
ಲಕ್ಷ್ಮಿಯ ಆರಾಧನೆ ಹೇಗೆ ಮಾಡಬೇಕು?
* ನೀವು ಲಕ್ಷ್ಮಿ ಮೂರ್ತಿ ಅಥವಾ ಫೋಟೊವನ್ನು ಇಟ್ಟು ಅಲಂಕರಿಸಿ
* ದೇವಿಗೆ ಆಭರಣಗಳನ್ನು ಅರ್ಪಿಸಿ
* ನೀರು ತುಂಬಿದ ಕಳಸವನ್ನು ಇಡಿ
* ನಂತರ ಕಣ್ಣುಗಳನ್ನು ಮುಚ್ಚಿ ಲಕ್ಷ್ಮಿಯ ಧ್ಯಾನ ಮಾಡಿ, ಲಕ್ಷ್ಮಿ ಮಂತ್ರಗಳನ್ನು ಹೇಳಿ
* ನಂತರ ಆರತಿ ಬೆಳಗಿ ಪೂಜೆಯನ್ನು ಪೂರ್ಣಗೊಳಿಸಿ.
ಶುಕ್ರವಾರ ಈ ಕಾರ್ಯಗಳನ್ನು ಮಾಡಬೇಡಿ
* ಶಾಸ್ತ್ರದ ಪ್ರಕಾರ ಶುಕ್ರವಾರದಂದು ಹಣದ ವ್ಯವಹಾರ ಮಾಡಬಾರದು ಎಂದು ಹೇಳಲಾಗುವುದು.
* ಶುಕ್ರವಾರದಂದು ಯಾವುದೇ ಅಡುಗೆ ವಸ್ತುಗಳನ್ನು ಖರೀದಿಸಬಾರದು, ಶುಕ್ರವಾರದ ಪೂಜೆಯ ಸಮಯದಲ್ಲಿ ಏನನ್ನೂ ಖರೀದಿಸುವುದನ್ನು ನಿಷೇಧಿಸಲಾಗಿದೆ.
* ಈ ದಿನ ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬಾರದು, ಈ ಕೆಲಸಗಳನ್ನು ಮಾಡಿದರೆ ನಷ್ಟವನ್ನು ಎದುರಿಸಬೇಕಾಗಬಹುದು ಎಂಬ ನಂಬಿಕೆಯಿದೆ.
* ಶುಕ್ರವಾರ ಸಕ್ಕರೆಯನ್ನು ಸಾಲ ಪಡೆಯಬೇಡಿ.
ಈ ವಸ್ತುಗಳನ್ನು ಖರೀದಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು
ಶುಕ್ರವಾರದಂದು ಸಂಗೀತ, ಅಲಂಕಾರ, ಸೌಂದರ್ಯ ಮತ್ತು ಕಲೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದು ಶುಭ. ಈ ವಸ್ತುಗಳನ್ನು ಮನೆಗೆ ತಂದರೆ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುವುದು.



Click it and Unblock the Notifications
