Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೆಪ್ಟೆಂಬರ್‌ನಲ್ಲಿ ಜನಿಸಿದ ಮಕ್ಕಳಲ್ಲಿರುವ ಸ್ಪೆಷಲ್ ಗುಣಗಳಿವು!
ಈ ಜಗತ್ತಿನಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯ ಗುಣ ಬೇರೆ ಬೇರೆ ಆಗಿರುತ್ತದೆ. ಒಬ್ಬ ವ್ಯಕ್ತಿ ಇರೋ ಹಾಗೆ ಮತ್ತೊಬ್ಬ ವ್ಯಕ್ತಿ ಇರೋದಿಲ್ಲ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಕೂಡ ಒಂದೇ ರೀತಿ ಇರೋದಿಲ್ಲ. ಆದರೆ ಒಂದೇ ರಾಶಿಯಲ್ಲಿ ಹುಟ್ಟಿದ ವ್ಯಕ್ತಿತ್ವಗಳು ಕೊಂಚ ಹೋಲಿಕೆ ಆಗುತ್ತದೆ.

ಅದೇ ರೀತಿ ಸೆಪ್ಟೆಂಬರ್ ನಲ್ಲಿ ಹುಟ್ಟಿದ ಮಕ್ಕಳು ತುಂಬಾನೇ ವಿಭಿನ್ನ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರಲ್ಲಿರುವ ಉತ್ತಮ ಗುಣಗಳು ಯಾವುದು? ಜೊತೆಗೆ ನಕಾರಾತ್ಮಕ ಗುಣಗಳು ಯಾವುದು ಅನ್ನೋದನ್ನು ತಿಳಿಯೋಣ.
ಸೆಪ್ಟೆಂಬರ್ ನಲ್ಲಿ ಹುಟ್ಟಿದವರ ಧನಾತ್ಮಕ ಗುಣಗಳು ಯಾವುದು?
1. ಸೆಪ್ಟೆಂಬರ್ ನಲ್ಲಿ ಜನಿಸಿದವರು ತಮ್ಮ ಸ್ನೇಹಿತರು ಮತ್ತು ಕುಟುಂಬದವರ ಮುಂದೆ ಎಂದಿಗೂ ಕೆಟ್ಟದಾಗಿ ವರ್ತಿಸುವುದಿಲ್ಲ. ಮತ್ತು ಅವರು ತುಂಬಾ ಸಭ್ಯ ವ್ಯಕ್ತಿಗಳಾಗಿರ್ತಾರೆ. ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಎಂದಿಗೂ ಅಸಭ್ಯವಾಗಿ ಮಾತನಾಡುವುದಿಲ್ಲ.
2. ಇವರು ಯಾವಾಗಲೂ ತಮ್ಮ ಕೆಲಸವನ್ನು ಪರಿಪೂರ್ಣತೆಯಿಂದ ಮಾಡುತ್ತಾರೆ. ಮತ್ತು ಕೆಲಸ ಮುಗಿಯುವವರೆಗೆ ಅವರು ಯಾವಾಗಲೂ ತಮ್ಮ ಕೆಲಸಕ್ಕೆ ಅಂಟಿಕೊಳ್ಳುತ್ತಾರೆ. ಮತ್ತು ತಮ್ಮ ಕೆಲಸವನ್ನು ಪರಿಪೂರ್ಣತೆಯಿಂದ ಮಾಡಬೇಕೆದು ಬಯಸುತ್ತಾರೆ.
3. ಈ ಸೆಪ್ಟೆಂಬರ್ ತಿಂಗಳಿನಲ್ಲಿ ಜನಿಸಿದವರು ಬಹುರ್ಮುಖಿಗಳಾಗಿರ್ತಾರೆ. ಇವರು ಯಾವಾಗಲೂ ತಮ್ಮ ಭಾವನೆಗಳನ್ನು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತಾರೆ.
4. ಇವರು ಕಷ್ಟಪಟ್ಟು ದುಡಿಯುವ ವ್ಯಕ್ತಿಗಳು. ಮತ್ತು ಯಾವಾಗಲೂ ತಮ್ಮ ಜೀವನದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡುತ್ತಾರೆ. ಮತ್ತು ಕಠಿಣ ಪರಿಶ್ರಮದಿಂದ ಅದನ್ನು ಸಾಧಿಸುತ್ತಾರೆ. ಇವರು ಪಟ್ಟ ಶ್ರಮಕ್ಕೆ ತಕ್ಕುದಾದ ಯಶಸ್ಸನ್ನು ಸಾಧಿಸುತ್ತಾರೆ.
5. ಸೆಪ್ಟೆಂಬರ್ ನಲ್ಲಿ ಜನಿಸಿದವರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಉತ್ತಮ ಬಂಧಗಳನ್ನು ಹೊಂದಿರುತ್ತಾರೆ. ಇನ್ನೂ ಇವರು ಸ್ನೇಹಿತರು ಮತ್ತು ಕುಟುಂಬದೊಂದಿಗಿನ ಪ್ರೀತಿಯನ್ನು ಸಂಪಾದಿಸುತ್ತಾರೆ.
6. ಇವರಿಗೆ ಪುಸ್ತಕ ಓದುವ ಗೀಳಿರುತ್ತದೆ. ಪುಸ್ತಕದ ಮುಖಾಂತರ ಅಗಾಧ ಜ್ಞಾನವನ್ನು ಸಂಪಾದಿಸಲು ಇಷ್ಟ ಪಡುತ್ತಾರೆ. ಇನ್ನೂ ಪ್ರವಾಸಗಳಿಗೆ ಹೋಗೋದಂದ್ರೆ ಇವರಿಗೆ ತುಂಬಾನೇ ಇಷ್ಟ.
7. ಇವರು ಆಹಾರವನ್ನು ವ್ಯರ್ಥ ಮಾಡುವುದಿಲ್ಲ. ಏಕೆಂದರೆ ಇವರು ತಮ್ಮ ಜೀವನಕ್ಕೆ ಆಹಾರವು ನಿಜವಾಗಿಯೂ ಮುಖ್ಯವೆಂದು ಅವರು ನಂಬುತ್ತಾರೆ. ಆಹಾರಕ್ಕೆ ತುಂಬಾನೇ ಗೌರವ ನೀಡುತ್ತಾರೆ.
ಸೆಪ್ಟೆಂಬರ್ ನಲ್ಲಿ ಹುಟ್ಟಿದವರ ನಕಾರಾತ್ಮಕ ಗುಣಗಳು ಯಾವುದು?
1. ಸೆಪ್ಟೆಂಬರ್‌ನಲ್ಲಿ ಜನಿಸಿದವರು ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ಮತ್ತು ಅವರ ಈ ಸ್ವಭಾವದಿಂದಾಗಿ ಕೆಲವೊಮ್ಮೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
2. ಜ್ಯೋತಿಷಿಗಳ ಪ್ರಕಾರ ಸೆಪ್ಟೆಂಬರ್ ನಲ್ಲಿ ಹುಟ್ಟಿದವರು ಸುಲಭವಾಗಿ ಬೇಸರಗೊಳ್ಳುತ್ತಾರೆ. ಅವರು ಕೆಲಸದಲ್ಲಿ ಸಾಕಷ್ಟು ಸಕ್ರೀಯವಾಗಿ ಇರುತ್ತಾರೆ. ಮತ್ತು ಕಠಿಣ ಕೆಲಸ ಮಾಡುತ್ತಾರೆ. ಆದ್ದರಿಂದ ಅವರಿಗೆ ಬೇಸರವನ್ನು ಹೋಗಲಾಡಿಸಲು ಮತ್ತು ಅವರ ಜೀವನವನ್ನು ಆಸಕ್ತಿದಾಯಕವಾಗಿಸಲು ಯಾವಾಗಲೂ ಏನಾದರೂ ಅಗತ್ಯವಿರುತ್ತದೆ.
3. ಸೆಪ್ಟೆಂಬರ್ ನಲ್ಲಿ ಹುಟ್ಟಿದವರ ಸ್ವಭಾವವು ಸಹ ಸಾಕಷ್ಟು ಮೊಂಡುತನದಿಂದ ಕೂಡಿರುತ್ತದೆ. ಮತ್ತು ಅವರು ಯಾರೊಬ್ಬರ ಆದೇಶಗಳನ್ನು ಅಥವಾ ಸೂಚನೆಗಳನ್ನು ಅನುಸರಿಸಲು ಎಂದಿಗೂ ಇಷ್ಟ ಪಡೋದಿಲ್ಲ.
4. ಇವರು ಸಣ್ಣ ವಿಷಯಗಳಿಂದ ಸುಲಭವಾಗಿ ನಿರಾಶೆಗೊಳ್ಳುತ್ತಾರೆ. ಇವರು ಸ್ನೇಹಿತರು ಹಾಗೂ ಸಂಬಂಧಿಕರ ಮಾತುಗಳಿಂದ ಬೇಗನೇ ನೋವಿಗೊಳಗಾಗುತ್ತಾರೆ.
ಇದು ಸೆಪ್ಟೆಂಬರ್ ನಲ್ಲಿ ಹುಟ್ಟಿದವರ ಧನಾತ್ಮಕ ಮತ್ತು ಋಣಾತ್ಮಕ ಗುಣಗಳಾಗಿದೆ.



Click it and Unblock the Notifications