Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಕಾಮಿಕ ಏಕಾದಶಿ 2023: ಬಯಸಿದ್ದು ನೆರವೇರಲು ಈ ದಿನ ಏನು ಮಾಡಬೇಕು, ಏನು ಮಾಡಬಾರದು?
ಆಷಾಢ ಮಾಸದ ಕೊನೆಯ ಏಕಾದಶಿ ಕಾಮಿಕ ಏಕಾದಶಿ, ಅನೇಕ ಕಾರಣಗಳಿಂದ ಈ ಏಕಾದಶಿ ವ್ರತ ಮಹತ್ವವನ್ನು ಹೊಂದಿದೆ. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ, ಅದರಂತೆ ಯಾರು ಈ ಏಕಾದಶಿಯನ್ನು ಆಚರಣೆ ಮಾಡುತ್ತಾರೋ ಅವರ ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣವಾಗುವುದು ಎಂಬ ನಂಬಿಕೆ ಇದೆ.
ಇದೀಗ ಜುಲೈ 12 ಹಾಗೂ 13ರಂದು ಕಾಮಿಕ ಏಕಾದಶಿ ಆಚರಿಸಲಾಗುವುದು. ಕಾಮಿಕ ಏಕಾದಶಿ ಆಚರಣೆ ಮಾಡುವುದರಿಂದ ಅಶ್ವಮೇಧ ಯಾಗ ಮಾಡಿದಷ್ಟು ಫಲ ಸಿಗಲಿದೆ. ಈ ಏಕಾದಶಿ ಆಚರಣೆಯಿಂದ ಪಿತೃದೋಷ ನಿವಾರಣೆಯಾಗುವುದು, ಬ್ರಹ್ಮಹತ್ಯೆಯಂಥ ಮಹಾ ಮಾಪದಿಂದ ಮುಕ್ತರಾಗುತ್ತಾರೆ ಎಂದು ಹೇಳಲಾಗುವುದು.

ಕಾಮಿಕ ಏಕಾದಶಿ 2023ಪೂಜಾ ಸಮಯ
ಕಾಮಿಕ ಏಕಾದಶಿ ಜುಲೈ 12 ಸಂಜೆ 5:59ಕ್ಕೆ ಪ್ರಾರಂಭ
ಏಕಾದಶಿ ತಿಥಿ ಮುಕ್ತಾಯ
ಪೂಜೆಗೆ ಶುಭ ಮುಹೂರ್ತ ಜುಲೈ 13 ಬೆಳಗ್ಗೆ 5:32ರಿಂದ 07:16ರವರೆಗೆ ಮತ್ತೊಂದು ಶುಭ ಮುಹೂರ್ತ ಬೆಳಗ್ಗೆ 10:43ರಿಂದ ಮಧ್ಯಾಹ್ನ 03:45ರವರೆಗೆ
ಜುಲೈ 13 ಸಂಜೆ 06:24ರವರೆಗೆ ಏಕಾದಶಿ ಉಪವಾಸವನ್ನು ಜುಲೈ 13ರಂದು ಆಚರಿಸಲಾಗುವುದು.
ಪಾರಣ ಸಮಯ: ಜುಲೈ 14 ಬೆಳಗ್ಗೆ 05:32ರಿಂದ 08:18ರವರೆಗೆ
ಈ ಕಾಮಿಕ ಏಕಾದಶಿಯಂದು ಏಕಾದಶಿ ವ್ರತ ಮಾಡುವವರು ಪೂಜಾ ನಿಯಮಗಳನ್ನು ಪಾಲಿಸುವುದರಿಂದ ಜೊತೆ ಹೆಚ್ಚಿನ ಫಲ ಪಡೆಯಲು ಈ ದಿನ ಏನು ಮಾಡಬೇಕು, ಈ ದಿನ ಯಾವ ಕಾರ್ಯ ಮಾಡಲೇಬಾರದು ಎಂದು ನೋಡೋಣ ಬನ್ನಿ:
ಕಾಮಿಕ ಏಕಾದಶಿಯಂದು ಏನು ಮಾಡಬೇಕು?
* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ಹಳದಿ ಬಣ್ಣದ ವಸ್ತ್ರವಾಗಿದ್ದರೆ ಇನ್ನೂ ಒಳ್ಳೆಯದು.
* ನಂತರ ಸಂಕಲ್ಪ ಮಾಡಿ
* ಈ ದಿನ ಉಪವಾಸವಿದ್ದು ಕಾಮಿಕ ಏಕಾದಶಿ ವ್ರತ ಆಚರಿಸಿದರೆ ಒಳ್ಳೆಯದು.
* ಏಕಾದಶಿ ತಿಥಿ ಜುಲೈ 12ರಿಂದಲೇ ಪ್ರಾರಂಭವಾಗುವುದರಿಂದ ಈ ದಿನದಿಂದಲೇ ಈರುಳ್ಳಿ, ಬೆಳ್ಳುಳ್ಳಿ, ತಾಮಸ ಆಹಾರ ಸೇವಿಸಬಾರದು. ಈ ದಿನ ಅನ್ನ, ಗೋಧಿ, ಧಾನ್ಯಗಳನ್ನು ಸೇವಿಸಬಾರದು.
* ವ್ರತ ರೆಸಿಪಿ ಸೇವಿಸಬಹುದು
* ಈ ದಿನ ಓಂ ನಮೋ ಭಗವತೇ ವಾಸುದೇವಾಯ ಎಂದು ಪಠಿಸುತ್ತಲೇ ಇರಿ.
* ಈ ದಿನ ದಾನ-ಧರ್ಮಗಳನ್ನು ಮಾಡಿದರೆ ಒಳ್ಳೆಯದು.
* ನಿಮ್ಮ ಕೈಲಾದ ಸಹಾಯ ಮಾಡಿ.
ಏನು ಮಾಡಬಾರದು?
* ಯಾವುದೇ ಕೆಟ್ಟ ಕಾರ್ಯ ಮಾಡಬಾರದು
* ಸುಳ್ಳು ಹೇಳಬಾರದು
* ಮದ್ಯ, ಮಾಂಸ ಸೇವಿಸಬಾರದು
* ಸಂಜೆ ಹೊತ್ತಿನಲ್ಲಿ ಮಲಗಬಾರದು
* ಹಿರಿಯರನ್ನು ಅವಮಾನಿಸಬಾರದು
ಈ ದಿನ ಶ್ರೀ ವಿಷ್ಣುವಿನ ಈ ಮಂತ್ರ ಪಠಣೆ ಮಾಡಿ
ಓಂ ಭಗವತೇ ವಾಸುದೇವಾಯ ನಮಃ
ಓಂ ನಮೋ ನಾರಾಯಣಾಯ ನಮಃ
ಓಂ ನಾರಾಯಣಾಯ ವಿದ್ಮಹೇ
ವಾಸುದೇವಾಯ ಧೀಮಹೀ
ತನ್ನೋ ವಿಷ್ಣು ಪ್ರಚೋದಯಾತ್



Click it and Unblock the Notifications
