Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಭಾರತದ ಚುನಾವಣೆಯಲ್ಲಿ ಕಾಣಸಿಗುವ 7 ಆಸಕ್ತಿಕರ ಸಂಗತಿಗಳಿವು
ಭಾರತ ಪ್ರಜಾಪ್ರಭುತ್ವ ದೇಶ ಇಲ್ಲಿ ಪ್ರಜೆಗಳೇ ಪ್ರಭುಗಳು. 1950 ಜನವರಿ 26ರಂದು ಭಾರತ ದೇಶವು ಸಂವಿಧಾನವನ್ನು ಸ್ವೀಕರಿಸಿದ ಬಳಿಕ ಜನರನ್ನು ಆಳುವ ನಾಯಕರ ಆಯ್ಕೆ ಮತದಾನದ ಮೂಲಕ ನಡೆಯುತ್ತದೆ. ಈ ನಾಯಕರ ಆಯ್ಕೆಗೆ ಮತದಾನವನ್ನು ಬಿಟ್ಟು ಬೇರೆ ಯಾವುದೇ ಮಾನದಂಡಗಳು ಇಲ್ಲ. ಅವರ ಕುಟುಂಬವಾಗಲಿ ಅವರ ಶಿಕ್ಷಣವಾಗಲಿ ಅವರ ಸಾಮಾಜಿಕ ಸ್ಥಾನಮಾನಗಳಾಗಲಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡುವುದಿಲ್ಲ.
ಭಾರತದ ಸಂವಿಧಾನ ರಚನೆಗೆ ಮೂರು ವರ್ಷ ತೆಗೆದುಕೊಂಡ ಬಳಿಕವೂ ಮೊದಲ ಡ್ರಾಫ್ಟ್ ನಲ್ಲೆ ಸುಮಾರು 2,000 ತಿದ್ದುಪಡಿಗಳನ್ನು ಮಾಡಲಾಗಿತ್ತು. ಇಷ್ಟೊಂದು ತಿದ್ದುಪಡಿ ಮಾಡಿದ ಬಳಿಕ ಸಂವಿಧಾನವನ್ನು ಸ್ವೀಕರಿಸಲಾಗಿತ್ತು ಎನ್ನುವುದೇ ಭಾರತದ ವೈವಿಧ್ಯತೆಯನ್ನು ತೋರಿಸುತ್ತದೆ.

ಸಂವಿಧಾನ ಅಸ್ತಿತ್ವಕ್ಕೆ ಬಂದ ಮೇಲೆ 1951-52 ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಗಳು ನಡೆದರೆ ಈಗ 20204ಗಳಲ್ಲಿ ನಡೆಯಲಿರುವುದು 18ನೇ ಸಾರ್ವತ್ರಿಕ ಚುನಾವಣೆಗಳಾಗಿದೆ. ಹಾಗಾದರೆ ಇಷ್ಟು ದೊಡ್ಡ ವೈವಿಧ್ಯಮಯ ಹಾಗೂ ವಿಸ್ತಾರವಾದ ಭಾರತ ದೇಶದ ಚುನಾವಣೆಗಳು ನೀರಸ ಆಗಿರುತ್ತವೆಯೇ ಅಥವಾ ಅಲ್ಲಿಯೂ ಸಾರಸ್ಯಕರವಾದ ಮಾಹಿತಿಗಳು ಇವೆಯೇ ? ಖಂಡಿತ ಇವೆ. ಅಂತಹ ಕೆಲವು ವಿಷಯಗಳು ಇಲ್ಲಿವೆ:
1. ಒಂದೇ ಮತಕ್ಕೆ ಒಂದು ಮತಗಟ್ಟೆ:
ಗುಜರಾತಿನ ಗಿರ್ ನ ಅರಣ್ಯ ಪ್ರದೇಶದಲ್ಲಿ ಭಾರತದ ಚುನಾವಣಾ ಆಯೋಗ ಮತದಾನ ಕೇಂದ್ರವನ್ನು ನಿರ್ಮಿಸುತ್ತಿತ್ತು. ಇಲ್ಲಿ ಬರುತ್ತಿದ್ದ ಮತದಾರ ಕೇವಲ ಒಬ್ಬರೇ ಒಬ್ಬರು. ಮಹಾಂತ್ ಭಾರತ್ ದಾಸ್ ದರ್ಶನ್ ದಾ 2. ಯಾವ ಅಭ್ಯರ್ಥಿಯೂ ಸರಿಯಾದ ಅಭ್ಯರ್ಥಿಯಲ್ಲ - ನೋಟಾ (ನನ್ ಆಫ್ ದಿ ಅಬೊವ್) ಸ್ ಎನ್ನುವ ವ್ಯಕ್ತಿ ಮಾತ್ರ ಆ ಪ್ರದೇಶದಲ್ಲಿ ಮತದಾರರಾಗಿದ್ದು ಭಾರತದ ಚುನಾವಣಾ ಆಯೋಗ ಸುಮಾರು ಎರಡು ದಶಕಗಳ ಕಾಲ ಕೇವಲ ಒಂದೇ ಮತಕ್ಕಾಗಿ ಒಂದು ಮತಗಟ್ಟೆಯನ್ನು ಸ್ಥಾಪಿಸುತ್ತಿತ್ತು.
2. ಯಾವ ಅಭ್ಯರ್ಥಿಯೂ ಸರಿಯಾದ ಅಭ್ಯರ್ಥಿಯಲ್ಲ - ನೋಟಾ (ನನ್ ಆಫ್ ದಿ ಅಬೊವ್)
ಒಂದು ಮತ ಕ್ಷೇತ್ರದ ಅಭ್ಯರ್ಥಿಗಳಲ್ಲಿ ಯಾವ ಅಭ್ಯರ್ಥಿಯೂ ಸರಿಯಾದ ಅಭ್ಯರ್ಥಿ ಅಲ್ಲ ಎಂದು ಮತದಾರನಿಗೆ ಅನಿಸಿದ ಪಕ್ಷದಲ್ಲಿ ನನ್ನ ಮತ ಯಾರಿಗೂ ಇಲ್ಲ ಎನ್ನುವ ಸೂಚನೆಯೊಂದಿಗೆ ನೋಟಾ ಎಂಬ ಆಯ್ಕೆಯನ್ನು ಭಾರತದ ಎಲೆಕ್ಷನ್ ಕಮಿಷನ್ 2009ರಲ್ಲಿ ಆರಂಭಿಸಿತ್ತು. 2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ಚಲಾವಣೆಯಾದ ನೋಟಾ ಮತಗಳ ಸಂಖ್ಯೆ 60 ಲಕ್ಷ ಆಗಿತ್ತು. ಅಂದರೆ 60 ಲಕ್ಷ ಜನರಿಗೆ ಯಾವೊಬ್ಬ ಅಭ್ಯರ್ಥಿಯು ಸೂಕ್ತ ಅಭ್ಯರ್ಥಿ ಅಲ್ಲ ಎಂದು ಅನ್ನಿಸಿತು.
3. ತೃತೀಯ ಲಿಂಗಿಗಳಿಗೆ ಮತದಾನದ ಹಕ್ಕು
ತೃತೀಯ ಲಿಂಗಿಗಳನ್ನು ಭಾರತದ ಡೆಮಾಕ್ರಸಿಯಲ್ಲಿ ಶಾಮೀಲು ಮಾಡಬೇಕು ಎಂದು ಎಲೆಕ್ಷನ್ ಕಮಿಷನ್ 1994 ರಿಂದ ಕೆಲಸ ಮಾಡುತ್ತಿದ್ದು 2014ರ ಮತದಾನದಲ್ಲಿ 814 ಮಿಲಿಯನ್ ಜನರು ಮತದಾನದ ಹಕ್ಕನ್ನು ಪಡೆದಿದ್ದರೆ ಅದರಲ್ಲಿ 28,314 ಮತದಾರರು ತೃತೀಯ ಲಿಂಗಿಗಳಾಗಿದ್ದರು.
4. ಮತದಾರರ ಸಂಖ್ಯೆ
ಈ ಬಾರಿಯ ಅಂದರೆ 20204ರ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರತದಲ್ಲಿ ಮತದಾನದ ಹಕ್ಕನ್ನು ಪಡೆದ ಮತದಾರರ ಸಂಖ್ಯೆ ಎಷ್ಟು ಗೊತ್ತೇ? ಮತದಾರರ ಸಂಖ್ಯೆ ಸುಮಾರು 99 ಕೋಟಿ ಆಗಿದೆ. ಇದು ಎಷ್ಟು ಜನರು ಅಂದರೆ ಯುರೋಪ್ ಮತ್ತು ಬ್ರೆಜಿಲ್ ಎರಡೂ ದೇಶಗಳ ಜನಸಂಖ್ಯೆಗೆ ಸಮಾನವಾಗಿದೆ.
5. ಮತದಾನಕ್ಕೆ ಬೇಕಾಗುವ ಅಧಿಕಾರಿಗಳು ಎಷ್ಟು?
ಇಷ್ಟೆಲ್ಲ ಜನ ಮತದಾನ ನಡೆಸುತ್ತಿರಬೇಕಾದರೆ ಈ ಮತದಾನವು ಸಾಂಗವಾಗಿ ನಡೆಯುವಂತೆ ಮಾಡಲು ಬಳಕೆಯಾಗುವ ಸರ್ಕಾರಿ ಅಧಿಕಾರಿಗಳು ಗಳು ಮತ್ತು ಸೆಕ್ಯೂರಿಟಿ ಫೋರ್ಸ್ ಗಳು ಎಷ್ಟು ಇರಬಹುದು ಅಂದಾಜಿಸಿ. ಸುಮಾರು 50 ಲಕ್ಷದಷ್ಟು ಸರ್ಕಾರಿ ಅಧಿಕಾರಿಗಳು ಮತ್ತು ಸೆಕ್ಯೂರಿಟಿ ಒಫಿಷಿಯಲ್ಸ್ ಭಾರತದ ಚುನಾವಣೆಯನ್ನು ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ. ಇವರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ರಸ್ತೆ, ಟ್ರೈನು, ಹೆಲಿಕಾಪ್ಟರ್, ಬೋಟ್ ಮತ್ತು ಕೆಲವು ಪ್ರದೇಶಗಳಲ್ಲಿ ನಡೆದುಕೊಂಡು ಕೂಡ ಹೋಗಬೇಕಾಗುತ್ತದೆ.
6. ಇ.ವಿ.ಎಮ್ (ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್) ಮತದಾನ
ಈಗ ಮತದಾನ ಎಂದರೆ ಕೇವಲ ಹೋಗಿ ಬಟನ್ ಪ್ರೆಸ್ ಮಾಡಿ ಬರುವುದು. ಇದಕ್ಕೂ ಮೊದಲು ಮತದಾನ ಬ್ಯಾಲೆಟ್ ಪೇಪರ್ ಗಳಲ್ಲಿ ನಡೆಯುತ್ತಿತ್ತು. ಇ.ವಿ.ಎಂ. ಗಳ ಬಳಕೆ ಈಗ ಸಾಮಾನ್ಯ ಆಗಿದ್ದರೂ ಮೊದಲಬಾರಿ ಇ.ವಿ.ಎಂ. ಬಳಕೆಯದ್ದು ಯಾವಾಗ? 1982 ರಲ್ಲಿ ಕೇರಳದ ನಾರ್ತ್ ಪರವೂರ್ ಅಸೆಂಬ್ಲಿ ಮತಕ್ಷೇತ್ರದಲ್ಲಿ ಮೊದಲ ಬಾರಿ ಪ್ರಾಯೋಗಿಕವಾಗಿ ಇ.ವಿ.ಎಂ. ಅನ್ನು ಬಳಕೆ ಮಾಡಲಾಯಿತು. ಇದಾದ ಬಳಿಕ ರಾಜಸ್ಥಾನ, ಮಧ್ಯಪ್ರದೇಶ ಮತ್ತು ದೆಹಲಿಯ ಚುನಾವಣೆಗಳಲ್ಲಿ ಇದನ್ನು ಬಳಸಲಾಯಿತು. 2004ರಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಗಳಲ್ಲಿ ಇ.ವಿ.ಎಂ. ಗಳನ್ನು ಬಳಸಲಾಯಿತು.
7. ಒಂದೇ ಮತಗಟ್ಟೆಯಲ್ಲಿ 12 ಇ.ವಿ.ಎಮ್. ಗಳು !
2019 ರ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ತೆಲಂಗಾಣದ ನಿಝಾಮಾಬಾದ್ ಮತಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ 12 ಇ.ವಿ.ಎಮ್ ಗಳನ್ನು ಬಳಸಲಾಗಿತ್ತು. ಇ.ವಿ.ಎಮ್ ಗಳಲ್ಲಿ ತಾಂತ್ರಿಕ ದೋಷ ಇದ್ದ ಕಾರಣ ಹೀಗೆ ಮಾಡಲಾಯಿತು ಅಂದುಕೊಂಡಿದ್ದರೆ ಅದು ತಪ್ಪು. ನಿಝಾಮಾಬಾದ್ ಕ್ಷೇತ್ರದಲ್ಲಿ 189 ಅಭ್ಯರ್ಥಿಗಳು ಮತದಾನದಲ್ಲಿ ಸೆಣಸುತ್ತಿದ್ದರು. ಆ ಕಾರಣದಿಂದ ಎಲ್ಲಾ ಮತಗಟ್ಟೆಗಳಲ್ಲಿ 12 ಇ.ವಿ.ಎಮ್ ಗಳನ್ನು ಬಳಸಲಾಗಿತ್ತು.



Click it and Unblock the Notifications











