Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಜೂನ್ ತಿಂಗಳಿನಲ್ಲಿ ಹುಟ್ಟಿದ ಮಕ್ಕಳಲ್ಲಿ ಈ ಗುಣಗಳಿರುತ್ತದೆ!
ಹುಟ್ಟಿದ ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ವಿಶೇಷ ಗುಣ ಇದ್ದೇ ಇರುತ್ತದೆ. ಎಲ್ಲಾ ಮಕ್ಕಳು ಒಂದೇ ರೀತಿ ಇರೋದಿಲ್ಲ. ಅದ್ರಲ್ಲೂ ಯಾರೆಲ್ಲಾ ಜೂನ್ ತಿಂಗಳಿನಲ್ಲಿ ಹುಟ್ಟಿರುತ್ತಾರೆ. ಅವರು ತುಂಬಾನೇ ಸ್ಪೆಷಲ್ ಆಗಿರುತ್ತಾರಂತೆ. ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಹುಟ್ಟಿದವರು ಮಿಥುನ ಮತ್ತು ಕರ್ಕಾಟಕ ರಾಶಿಗೆ ಸೇರಿದವರಾಗಿರುತ್ತಾರೆ.
ಮೇ 21 ರಿಂದ ಜೂನ್ 20 ರವರೆಗೆ ಹುಟ್ಟಿದವರು ಮಿಥುನ ರಾಶಿಗೆ ಸೇರುತ್ತಾರೆ. ಇನ್ನೂ ಜೂನ್ 21 ರಿಂದ ಜುಲೈ 22 ರ ಮಧ್ಯದಲ್ಲಿ ಹುಟ್ಟಿದವರು ಕರ್ಕಾಟಕ ರಾಶಿಗೆ ಸೇರುತ್ತಾರೆ. ಅಷ್ಟಕ್ಕೂ ಜೂನ್ ತಿಂಗಳಿನಲ್ಲಿ ಹುಟ್ಟಿದ ಮಕ್ಕಳಲ್ಲಿ ಏನೆಲ್ಲಾ ವಿಶೇಷ ಗುಣಗಳು ಇರುತ್ತೆ ಅನ್ನೋದನ್ನು ತಿಳಿದುಕೊಳ್ಳೋಣ.

1. ಮಕ್ಕಳು ತುಂಬಾನೇ ಆರೋಗ್ಯವಾಗಿರುತ್ತಾರೆ
ಜೂನ್ ತಿಂಗಳಿನಲ್ಲಿ ಹುಟ್ಟಿದ ಮಕ್ಕಳು ತುಂಬಾನೇ ಆಕ್ಟೀವ್ ಆಗಿರುತ್ತಾರಂತೆ. ಹೇಳಬೇಕಂದ್ರೆ ಅವರ ವಯಸ್ಸಿಗಿಂತಲೂ ಅವರು ಹೈಪರ್ ಆಕ್ಟೀವ್ ಆಗಿರುತ್ತಾರೆ. ಹೇಳಿದ ಮಾತನ್ನು ಕೇಳದ ತುಂಟ ಮಕ್ಕಳಾಗಿರುತ್ತಾರೆ. ಇನ್ನೂ ಇವರು ತುಂಬಾನೇ ಆರೋಗ್ಯವಾಗಿದ್ದು, ಇವರಿಗೆ ಯಾವುದೇ ರೀತಿ ಆರೋಗ್ಯ ಸಮಸ್ಯೆ ಇರೋದಿಲ್ಲ. ಇನ್ನೂ ಬೇರೆ ಮಕ್ಕಳಿಗೆ ಹೋಲಿಸಿದ್ರೆ ಇವರ ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ.
2. ಈ ಮಕ್ಕಳ ಸಂವಹನ ಉತ್ತಮವಾಗಿರುತ್ತದೆ
ಜೂನ್ ತಿಂಗಳಿನಲ್ಲಿ ಹುಟ್ಟಿದವರು ಇತರ ಮಕ್ಕಳಿಗೆ ಹೋಲಿಸಿದ್ರೆ ಇವರು ತುಂಬಾನೇ ವಿಭಿನ್ನವಾಗಿರುತ್ತದೆ. ಇವರಲ್ಲಿ ಉತ್ತಮ ಸಂವಹನ ಕೌಶಲ್ಯವಿರುತ್ತದೆ. ಇವರು ಎಲ್ಲಿ ಹೋದರೂ ತಮ್ಮ ಮಾತಿನಿಂದಲೇ ಗುರುತಿಸಿಕೊಳ್ಳುತ್ತಾರೆ. ಯಾರೊಂದಿಗೆ ಬೇಕಾದರೂ ಸುಲಭವಾಗಿ ಮಾತನಾಡುವ ಕಲೆ ಇವರಿಗಿದೆ. ಇವರ ಮಾತೇ ಒಂದು ರೀತಿ ಆಯುಧ ಇದ್ದ ಹಾಗೆ. ಎಲ್ಲಿ ಹೋದರೂ ಬದುಕುವ ಕಲೆ ಇವರಿಗೆ ಗೊತ್ತಿದೆ.
3. ಕರುಣಾಮಯಿಗಳು ಇವರು
ಜೂನ್ ತಿಂಗಳಿನಲ್ಲಿ ಹುಟ್ಟಿದವರು ಕರುಣಾಮಯಿಗಳು. ಇತರರ ಭಾವನೆಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದನೆ ನೀಡುತ್ತಾರೆ. ಬೇರೆಯವರು ಇವರಿಗೆ ಎಷ್ಟೇ ನೋವು ಮಾಡಿರಲಿ ಆದರೆ ಇವರಲ್ಲಿ ಕ್ಷಮೆ ಕೇಳಿದ ತಕ್ಷಣ ಇವರು ಕರಗುತ್ತಾರೆ. ಬೇರೆಯವರ ತಪ್ಪನ್ನು ಮನ್ನಿಸುವ ದೊಡ್ಡ ಗುಣ ಇವರಲ್ಲಿದೆ. ಇವರ ಕೋಪ ಒಂದು ಕ್ಷಣ ಮಾತ್ರ. ಆನಂತರ ಅದನ್ನೆಲ್ಲಾ ಮರೆತು ಬಿಡುತ್ತಾರೆ. ಈ ತಿಂಗಳಿನಲ್ಲಿ ಹುಟ್ಟಿದವರು ಉದಾರ ಮತ್ತು ಸಹಾನುಭೂತಿಯುಳ್ಳವರು. ಇನ್ನೂ ಇವರು ಪ್ರಾಮಾಣಿಕರೂ ಹೌದು. ಜೊತೆಗೆ ಬೇರೆಯವರ ಮೇಲೆ ಕರುಣೆ ತೋರುತ್ತಾರೆ.
4. ಇವರು ಶ್ರಮಜೀವಿಗಳು
ಜೂನ್ ತಿಂಗಳಿನಲ್ಲಿ ಜನಿಸಿದವರು ಯಾವಾಗಲೂ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿರುತ್ತಾರೆ. ಇವರು ಓದಿನಲ್ಲಿ ಮಾತ್ರವಲ್ಲದೇ ಇತರ ಎಲ್ಲಾ ಚಟುವಟಿಕೆಯಲ್ಲಿ ಮೊದಲಿನ ಸಾಲಿನಲ್ಲಿ ನಿಂತಿರುತ್ತಾರೆ. ಏಕೆಂದರೆ ಅವರು ಇತರರಿಗಿಂತ ಹೆಚ್ಚು ಪ್ರಾಮಾಣಿಕರು ಮತ್ತು ತುಂಬಾನೇ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇನ್ನೂ ಪ್ರತಿಯೊಂದು ಹೋಮ್ ವರ್ಕ್ ಗಳನ್ನು ತಪ್ಪದೇ ಪೂರ್ಣಗೊಳಿಸುತ್ತಾರೆ. ಇವತ್ತಿನ ಕೆಲಸವನ್ನು ಇವತ್ತೇ ಮಾಡಿ ಮುಗಿಸುತ್ತಾರೆ. ನಾಳೆಗೆ ಅದನ್ನು ಮುಂದೂಡೋದಿಲ್ಲ. ಇನ್ನೂ ಉತ್ತಮ ಸಮಯಪ್ರಜ್ಞೆ ಇವರಿಗಿದೆ.
5. ಭವಿಷ್ಯ ಉತ್ತಮವಾಗಿರುತ್ತದೆ
ಜೂನ್ ತಿಂಗಳಿನಲ್ಲಿ ಹುಟ್ಟಿದವರು ಉತ್ತಮ ವಾಗ್ಮಿಗಳು. ಉತ್ತಮವಾಗಿ ಸಂವಹನ ನಡೆಸುವ ಕಲೆ ಇವರಲ್ಲಿದೆ. ಹೀಗಾಗಿ ಸಾರ್ವಜನಿಕ ಸಂಬಂಧಗಳನ್ನು ಒಳಗೊಂಡಿರುವ ವೃತ್ತಿ ಜೀವನವನ್ನು ಆಯ್ದುಕೊಳ್ಳಬಹುದು. ಯಾವುದೇ ಕ್ಷೇತ್ರದಲ್ಲಾದರೂ ಇವರು ತಮ್ಮದೇ ಆದ ಛಾಪು ಮೂಡಿಸುತ್ತಾರೆ. ಜೂನ್ ತಿಂಗಳಿನಲ್ಲಿ ಹುಟ್ಟಿದವರಿಗೆ ಬರವಣಿಗೆ ಮತ್ತು ಛಾಯಾಗ್ರಹಣದಲ್ಲಿ ಉತ್ತಮ ಭವಿಷ್ಯವಿದೆ. ಇದನ್ನು ಬಿಟ್ಟು ರಕ್ಷಣಾ ಕ್ಷೇತ್ರ, ಸೇಲ್ಸ್, ಅಥವಾ ಶಿಕ್ಷಣ ಕ್ಷೇತ್ರದಲ್ಲೂ ಕೆಲಸ ಮಾಡಬಹುದು. ಇದ್ರಲ್ಲೂ ಅವರು ಯಶಸ್ಸು ಪಡೆಯುತ್ತಾರೆ.
6. ಕೆಲಸ ನಿಧಾನ ಆದರೂ ಪರ್ಫೆಕ್ಟ್
ಜೂನ್ ತಿಂಗಳಿನಲ್ಲಿ ಹುಟ್ಟಿದವರನ್ನು ಪರಿಪೂರ್ಣರು ಅಂತ ಕರೆಯಬಹುದು. ಇವರು ನಿಧಾನವೇ ಪ್ರಧಾನ ಅನ್ನೋ ಪದ್ಧತಿಯನ್ನು ಅನುಸರಿಸುತ್ತಾರೆ. ಇವರು ಮಾಡೋ ಕೆಲಸ ತುಂಬಾನೇ ನಿಧಾನ ಆದ್ರೆ ಆ ಕೆಲಸವನ್ನು ತುಂಬಾನೇ ಶ್ರದ್ಧಾ ಭಕ್ತಿಯಿಂದ ಮಾಡಿ ಮುಗಿಸುತ್ತಾರೆ. ಇವರು ಮಾಡಿದ ಕೆಲಸದಲ್ಲಿ ತಪ್ಪು ಹುಡುಕುವ ಹಾಗೇ ಇಲ್ಲ. ಒಂದು ಸಲ ಕೆಲಸ ಮಾಡೋದಕ್ಕೆ ಶುರು ಮಾಡಿದ್ರೂ ಅಂದ್ರೆ ಅವರ ಸಂಪೂರ್ಣ ಗಮನ ಕೆಲಸದ ಮೇಲೆ ಇರುತ್ತೆ.
ಜೂನ್ ತಿಂಗಳಿನಲ್ಲಿ ಜನಿಸಿದವರಲ್ಲಿ ತುಂಬಾನೇ ಉತ್ತಮ ಗುಣಗಳಿದೆ. ಹೀಗಾಗಿ ಕೆಲವರು ನಿಮ್ಮ ಈ ಗುಣಗಳನ್ನು ದುರುಪಯೋಗ ಪಡಿಸಿಕೊಳ್ಳೋದಕ್ಕೆ ಯತ್ನಿಸುತ್ತಾರೆ. ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ಕೊಡಬೇಡಿ. ನಿಮ್ಮ ಜಾಗರೂಕತೆಯಲ್ಲಿ ನೀವಿದ್ದರೆ ಉತ್ತಮ.



Click it and Unblock the Notifications












