Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ದೇವಶಯನಿ ಏಕಾದಶಿಯಂದು ನಿಮ್ಮ ಸಮಸ್ಯೆ ನಿವಾರಣೆಗೆ ಈ ಪರಿಹಾರ ಮಾಡಿ
ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ದೇವಶಯನಿ ಅಥವಾ ಹರಿಶಯನಿ ಏಕಾದಶಿ ಎಂದು ಕರೆಯಲಾಗುವುದು. ಈ ವರ್ಷ ದೇವಶಯನಿ ಏಕಾದಶಿಯನ್ನು ಜೂನ್ 29ರಂದು ಆಚರಿಸಲಾಗುವುದು. ಯಾರು ದೇವಶಯನಿ ಏಕಾದಶಯನ್ನು ಆಚರಿಸುತ್ತಾರೋ ಅವರ ಇಷ್ಟಾರ್ಥಗಳು ನೆರವೇರಲಿದೆ. ದೇವಶಯನಿ ಏಕಾದಶಿ ಬಳಿಕ ವಿಷ್ಣು ಯೋಗ ನಿದ್ರೆಗೆ ಜಾರುತ್ತಾರೆ.
ದೇವಶಯನಿ ಏಕಾದಶಿಯಂದು ಶ್ರೀ ಹರಿ ವಿಷ್ಣುವನ್ನು ಪೂಜಿಸುವುದರಿಂದ ಒಳಿತಾಗಲಿದೆ. ದೇವಶಯನಿ ಏಕಾದಶಿಯಂದು ಕೆಲವು ಪರಿಹಾರ ಮಾಡಿದರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಈ ದಿನ ಯಾರು ಯಾವ ಪರಿಹಾರ ಮಾಡಿದರೆ ಒಳ್ಳೆಯದು ನೋಡೋಣ ಬನ್ನಿ:

ಸಂಪತ್ತು ವೃದ್ದಿಗೆ
ಮನೆಯಲ್ಲಿ ಸಂಪತ್ತು ವೃದ್ಧಿಗೆ ಏಕಾದಶಿಯಂದು ದಕ್ಷಿಣಾವರ್ತಿ ಶಂಖದಿಂದ ವಿಷ್ಣುವಿಗೆ ಜಲಾಭಿಷೇಕ ಮಾಡಿ. ಈ ದಿನ ಶ್ರೀ ವಿಷ್ಣು ಹಾಗೂ ಲಕ್ಷ್ಮಿ ದೇವಿಯನ್ನು ಆರಾಧನೆ ಮಾಡಿ. ಇದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಲಿದೆ.
ವೈವಾಹಿಕ ಜೀವನದಲ್ಲಿ ಸಂತೋಷಕ್ಕಾಗಿ
ವೈವಾಹಿಕ ಜೀವನದಲ್ಲಿರುವ ಸಮಸ್ಯೆ ಪರಿಹಾರವಾಗಲು ಈ ದಿನ ಕೆಲವು ಪರಿಹಾರ ಮಾಡಿದರೆ ಒಳ್ಳೆಯದು. ದೇವಶಯನಿ ಏಕಾದಶಿಯ ದಿನ ಸ್ನಾನ ಇತ್ಯಾದಿಗಳ ನಂತರ ಮಡಿ ಬಟ್ಟೆ ಧರಿಸಿ ತುಳಸಿ ಗಿಡವನ್ನು ಪೂಜಿಸಬೇಕು. ಉತ್ತಮ ದಾಂಪತ್ಯ ಜೀವನಕ್ಕಾಗಿ ತುಳಸಿಯನ್ನು ಪ್ರಾರ್ಥಿಸಿ. ಹೀಗೆ ಮಾಡುವುದರಿಂದ ದಾಂಪತ್ಯ ಜೀವನದಲ್ಲಿರುವ ಸಮಸ್ಯೆ ಬಗೆಹರಿದು ಸಂಸಾರದಲ್ಲಿ ಮಾಧುರ್ಯ ಹೆಚ್ಚಾಗುವುದು.
ಆರ್ಥಿಕ ಸಮಸ್ಯೆ ಬಗೆಹರಿಯಲು ಈ ಪರಿಹಾರ ಮಾಡಿ
ದೇವಶಯನಿ ಏಕಾದಶಿಯ ದಿನದಂದು ಪೂಜೆಯ ಸಮಯದಲ್ಲಿ, ಶ್ರೀ ಹರಿ ವಿಷ್ಣುವಿನ ಫೋಟೋದ ಬಳಿ ಒಂದು ರೂಪಾಯಿ ನಾಣ್ಯವನ್ನು ಇರಿಸಿ. ನಂತರ ಪೂಜೆಯ ನಂತರ ಈ ನಾಣ್ಯವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಕಪಾಟಿನಿನಲ್ಲಿ ಇಡಿ. ಹೀಗೆ ಮಾಡುವುದರಿಂದ ಶ್ರೀ ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯ ಆಶೀರ್ವಾದವು ನಿಮ್ಮ ಮೇಲೆ ಇರಲಿದೆ, ಇದರಿಂದ ಆರ್ಥಿಕ ಸಂಕಷ್ಟ ದೂರಾಗುವುದು.
ಜೀವನದಲ್ಲಿ ಸಮಸ್ಯೆಗಳಿದ್ದರೆ
ಉದ್ಯೋಗದಲ್ಲಿ ಸಮಸ್ಯೆ, ವ್ಯವಹಾರ ಕೈಗೂಡುತ್ತಿಲ್ಲ, ಮಾಡಿದ ಕಾರ್ಯಗಳು ಅಪೂರ್ಣವಾಗಿದೆ ಈ ರೀತಿ ಇರುವಾಗ ದೇವಶಯನಿ ಏಕಾದಶಿಯ ದಿನದಂದು ಪೂಜೆಯ ಸಮಯದಲ್ಲಿ, ವಿಷ್ಣುವಿಗೆ ಕೇಸರಿ ಹಾಲಿನಿಂದ ಅಭಿಷೇಕ ಮಾಡಿ. ಹೀಗೆ ಮಾಡುವುದರಿಂದ ಎಲ್ಲ ಪಾಪಗಳಿಂದ ಮುಕ್ತಿ ಸಿಗುತ್ತದೆ. ಇದರೊಂದಿಗೆ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ಮದುವೆ ವಿಳಂಬವಾಗಿದ್ದರೆ
ಕೆಲವರಿಗೆ ಮದುವೆ ವಿಳಂಬವಾಗಿರುತ್ತದೆ ಅಂಥವರು ಬೇಗನೆ ಕಂಕಣ ಬಲ ಕೂಡಿ ಬರಲು ಶ್ರೀ ವಿಷ್ಣು-ಲಕ್ಷ್ಮಿಯನ್ನು ಆರಾಧನೆ ಮಾಡುವುದು ಒಳ್ಳೆಯದು. ದೇವಶಯನಿ ಏಕಾದಶಿಯ ದಿನ ಸ್ನಾನದ ನಂತರ ವಿಷ್ಣುವಿಗೆ ನಮಸ್ಕರಿಸಿ ಆಸನವನ್ನು ಹಾಕಿ ಕುಳಿತುಕೊಳ್ಳಿ. ನಂತರ ವಿಷ್ಣುವಿನ ಮಂತ್ರ 'ಓಂ ನಮೋ ಭಗವತೇ ನಾರಾಯಣಾಯ'. 11 ಬಾರಿ ಜಪಿಸಿ.



Click it and Unblock the Notifications
