Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭೌಮ ಪ್ರದೋಷ ವ್ರತ 2023 : ಶುಭ ಮುಹೂರ್ತ, ಆಚರಣಾ ವಿಧಿ ಹೇಗಿರಬೇಕು?
ಹಿಂದೂ ಧರ್ಮದಲ್ಲಿ ಆ ಮಹಾದೇವನನ್ನು ಮೆಚ್ಚಿಸಲು ಅನೇಕ ಉಪವಾಸಗಳು ಮತ್ತು ಹಬ್ಬಗಳನ್ನು ಆಚರಿಸಲಾಗುತ್ತದೆ. ಅವುಗಳಲ್ಲಿ ಪ್ರದೋಷ ವ್ರತಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಪ್ರತಿ ತಿಂಗಳ ಕೃಷ್ಣ ಮತ್ತು ಶುಕ್ಲ ಪಕ್ಷದ ತ್ರಯೋದಶಿಯಂದು ಪ್ರದೋಷ ಉಪವಾಸವನ್ನು ಆಚರಿಸುವ ಸಂಪ್ರದಾಯವಿದೆ. ಈ ಉಪವಾಸದ ಸಮಯದಲ್ಲಿ ಸಂಜೆ ಶಿವನನ್ನು ಪೂಜಿಸೋದ್ರಿಂದ ನಮ್ಮೆಲ್ಲಾ ಕೆಲಸಗಳು ಮತ್ತು ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ.

ಈಗ ಭಾದ್ರಪದ ಮಾಸ ಶುರುವಾಗುದ್ದು, ಈ ಭಾದ್ರಪದ ಮಾಸದ ಮೊದಲ ಪ್ರದೋಷ ಉಪವಾಸವು ಭೌಮ ಪ್ರದೋಷ ಉಪವಾಸವಾಗಿರುತ್ತದೆ. ಆದ್ದರಿಂದ ಇದರ ಪ್ರಾಮುಖ್ಯತೆಯು ಮತ್ತಷ್ಟು ಹೆಚ್ಚಾಗಿದೆ. ಅಷ್ಟಕ್ಕೂ ಭಾದ್ರಪದ ಮಾಸದ ಮೊದಲ ಪ್ರದೋಷ ಉಪವಾಸ ಯಾವಾಗ? ಶುಭ ಮುಹೂರ್ತ ಹಾಗೂ ಅದರ ಪ್ರಾಮುಖ್ಯತೆಗಳನ್ನು ತಿಳಿದುಕೊಳ್ಳೋಣ.
ಭೌಮ ಪ್ರದೋಷ ವ್ರತ 2023 ದಿನಾಂಕ :
ಭಾದ್ರಪದ ಮಾಸದ ಮೊದಲ ಪ್ರದೋಷ ಉಪವಾಸವನ್ನು ಸೆಪ್ಟೆಂಬರ್ 12, ಮಂಗಳವಾರದಂದು ಆಚರಣೆ ಮಾಡಲಾಗುತ್ತದೆ. ಮಂಗಳವಾರ ಆಗಿರುವುದರಿಂದ ಇದನ್ನು ಭೌಮ ಪ್ರದೋಷ ವ್ರತ ಎಂದು ಕರೆಯಲಾಗುವುದು. ಧರ್ಮಗ್ರಂಥಗಳಲ್ಲಿ ಸೋಮ, ಶನಿ ಮತ್ತು ಭೌಮ ಪ್ರದೋಷ ಉಪವಾಸಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಭೌಮ ಪ್ರದೋಷ ಉಪವಾಸದ ಸಮಯದಲ್ಲಿ ಶಿವನನ್ನು ಪೂಜಿಸುವುದರಿಂದ ಹನುಮಂತನ ಆಶೀರ್ವಾದವೂ ಸಿಗುತ್ತದೆ ಎಂಬ ನಂಬಿಕೆಯಿದೆ.
ಭಾದ್ರಪದ ಭೌಮ ಪ್ರದೋಷ ವ್ರತ 2023 : ಶುಭ ಮುಹೂರ್ತ
ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯು 11 ಸೆಪ್ಟೆಂಬರ್ 2023 ರಂದು ರಾತ್ರಿ 11.52 ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 13, 2023 ರಂದು 02.21 ಕ್ಕೆ ಕೊನೆಗೊಳ್ಳುತ್ತದೆ.
ಪೂಜೆ ಮುಹೂರ್ತ - 06.30 pm - 08:49 pm
ಭೌಮ ಪ್ರದೋಷ ವ್ರತದ ಮಹತ್ವವೇನು?
ಗ್ರಂಥಗಳಲ್ಲಿ ಆಂಜನೇಯನನ್ನು ಶಿವನ ರುದ್ರಾವತಾರ ಎಂದು ವಿವರಿಸಲಾಗಿದೆ. ಈ ದಿನದಂದು ಶಿವನ ಜೊತೆಗೆ ಹನುಮಂತನನ್ನು ಪೂಜಿಸುವುದರಿಂದ ಎಲ್ಲಾ ತೊಂದರೆಗಳು ಕೊನೆಗೊಳ್ಳುತ್ತವೆ. ಕೆಲವೊಂದು ದೋಷ ಇರುವವರು ಭೌಮ ಪ್ರದೋಷ ವ್ರತವನ್ನು ಆಚರಿಸಬೇಕು. ಇದು ಮದುವೆ ಮತ್ತು ವೈವಾಹಿಕ ಜೀವನದಲ್ಲಿ ಬರುವ ಸಮಸ್ಯೆಗಳನ್ನು ನಾಶಪಡಿಸುತ್ತದೆ. ಭೌಮ ಪ್ರದೋಷ ಉಪವಾಸದ ಪರಿಣಾಮದಿಂದಾಗಿ ಒರ್ವ ವ್ಯಕ್ತಿಯು ದೈಹಿಕ ನೋವಿನಿಂದ ಮುಕ್ತನಾಗಬಹುದು.
ಭೌಮ ಪ್ರದೋಷ ವ್ರತದ ಪೂಜಾ ವಿಧಿ ಹೇಗಿರಬೇಕು?
ಮಂಗಳವಾರ ತ್ರಯೋದಶಿ ತಿಥಿಯಂದು ಶಿವನನ್ನು ಪೂಜಿಸುವುದರಿಂದ ರೋಗಗಳು ಮತ್ತು ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ. ಶಿವನ ಕೃಪೆಯಿಂದ ಕುಟುಂಬಕ್ಕೆ ಸುಖ, ಆರೋಗ್ಯ, ಆತ್ಮಸ್ಥೈರ್ಯ ವೃದ್ಧಿಯಾಗುತ್ತದೆ. ಮಂಗಳ ಶಾಂತಿಗಾಗಿ ಈ ಉಪವಾಸ ಬಹಳ ವಿಶೇಷ ಪಡೆದುಕೊಂಡಿದೆ.
ಭೌಮ ಪ್ರದೋಷ ವ್ರತ ಪೂಜಾ ವಿಧಿ ಹೇಗಿರಬೇಕು?
ಮಂಗಳವಾರ ತ್ರಯೋದಶಿ ತಿಥಿಯಂದು ಶಿವನನ್ನು ಪೂಜಿಸುವುದರಿಂದ ರೋಗಗಳು ಮತ್ತು ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಉಪವಾಸ ಕೈಗೊಳ್ಳಿ. ಸಂಜೆ ಮತ್ತೆ ಸ್ನಾನ ಮಾಡಿದ ನಂತರ ಶಿವನ ಪೂಜೆ ಮಾಡಿ. ಮಂಗಳವಾರದ ಪ್ರದೋಷ ಉಪವಾಸ ಮತ್ತು ಪೂಜೆಯು ಆಯುಷ್ಯವನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಎಂದು ನಂಬಲಾಗುತ್ತದೆ.



Click it and Unblock the Notifications


