Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಮ ಮಂದಿರ: ಅಯೋಧ್ಯೆಯಲ್ಲಿ ಇಂದಿನಿಂದ 7 ದಿನ ಈ ಪ್ರಮುಖ ಧಾರ್ಮಿಕ ಕಾರ್ಯಗಳು ನಡೆಯಲಿದೆ
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಇನ್ನು ಕೆಲವು ದಿನಗಳಷ್ಟೇ ಬಾಕಿಯಿದೆ. ಪ್ರಾಣಪ್ರತಿಷ್ಠಾಪನೆ ಕಾರ್ಯಗಳು ಇಂದಿನಿಂದ ಅಂದರೆ ಜನವರಿ 15ರಿಂದ ಶುರುವಾಗಿದೆ. ಜನವರಿ 21ರವರೆಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಈ 7 ದಿನಗಳು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು ಹೀಗಿವೆ:

ಜನವರಿ 16ರಂದು ಪ್ರಾಯಶ್ಚಿತ್ತ ಮತ್ತು ಕರ್ಮಕುಟಿ ಪೂಜೆ'
ಈ ದಿನದಿಂದ ಮಹಾಮಸ್ತಕಾಭಿಷೇಕದ ಪೂಜಾ ಕಾರ್ಯಗಳು ಶುರುವಾಗಿದೆ. ಈ ದಿನ ಪ್ರಾಯಶ್ಚಿತ್ತ ಕಾರ್ಯಕ್ರಮ ನಡೆಯುವುದು, ಅಲ್ಲದೆ ಸರಯೂ ನದಿಯ ದಡದಲ್ಲಿ ದಶವಿಧ, ವಿಷ್ಣು ಪೂಜೆ ನಡೆಯಲಿದೆ.
ಜನವರಿ 17: ರಾಮನ ಮೂರ್ತಿಯ ಪರಿಸರ ಪ್ರವೇಶ
ರಾಮಲಲ್ಲಾ ಮೂರ್ತಿಯನ್ನು ಹೊತ್ತು ಮೆರವಣಿಗೆ ನಡೆಯಲಿದೆ. ಕಲಶದಲ್ಲಿ ಸರಯೂ ನದಿಯ ನೀರನ್ನು ತುಂಬಿ ಆ ಕಲಶವನ್ನು ಹೊತ್ತ ಭಕ್ತರು ರಾಮಜನ್ಮ ಭೂಮಿಗೆ ತಲುಪಲಿದ್ದಾರೆ.
ಜನವರಿ 18ರಂದು ಗಣೇಶನ ಪೂಜೆ
ಜನವರಿ 18ರಂದು ಶ್ರೀ ಗಣೇಶನಿಗೆ ಪೂಜೆಯನ್ನು ಸಲ್ಲಿಸಲಾಗುವುದು. ನಂತರ ವರುಣ ಪೂಜೆ, ವಾಸ್ತು ಪೂಜೆ ಕೂಡ ನಡೆಯಲಿದೆ.
ಜನವರಿ 19
ಈ ದಿನದಂದು ಪವಿತ್ರ ಅಗ್ನಿಯನ್ನು ಬೆಳಗಿಸಲಾಗುವುದು. ನವಗ್ರಹ ಪೂಜೆ ನಡೆಯಲಿದೆ, ಈ ದಿನ ಹವನ ಕಾರ್ಯಗಳು ನಡೆಯಲಿದೆ.
ಜನವರಿ 20ರಂದು ವಾಸ್ತು ಶಾಂತಿ
ಈ ದಿನ ಅಯೋಧ್ಯೆ ರಾಮ ಮಂದಿರವನ್ನು ಸರಾಯು ನದಿ ನೀರಿನಿಂದ ಸ್ವಚ್ಛಗೊಳಿಸಿ, ವಾಸ್ತು ಶಾಂತಿ ಪೂಜೆ ಮಾಡಲಾಗುವುದು, ಈ ದಿನ ಅನ್ನಾಧಿವಾಸ್ ಆಚರಣೆ ನಡೆಯಲಿದೆ.
ಜನವರಿ 21
ರಾಮಲಲ್ಲಾ ವಿಗ್ರಹವನ್ನು ವಿವಿಧ ಪವಿತ್ರ ನದಿಗಳಿಂದ ತಂದ ನೀರಿನಿಂದ ಅಭಿಷೇಕ ಮಾಡಲಾಗುವುದು.
ಜನವರಿ 22
ಜನವರಿ 22ರಂದು ಪ್ರಾಣಪ್ರತಿಷ್ಠಾಪನೆ ನಡೆಯಲಿದೆ.
* ಜನವರಿ 18ಕ್ಕೆ ಗರ್ಭಗುಡಿಯಲ್ಲಿ ರಾಮನ ವಿಗ್ರಹವನ್ನು ಇರಿಸಲಾಗುವುದು.
* ಜನವರಿ 22ಕ್ಕೆ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಜನವರಿ 22ರಂದು ಮಧ್ಯಾಹ್ನ 1 ಗಂಟೆಯ ಒಳಗಾಗಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಗಳು ಪೂರ್ಣವಾಗಲಿದೆ.
* ಜನವರಿ 23ರಿಂದ ಜನರ ದರ್ಶನಕ್ಕೆ ಈ ದೇವಾಲಯ ಮುಕ್ತವಾಗಲಿದೆ. ಪ್ರತಿನಿತ್ಯ ಲಕ್ಷಾಂತರ ಭಕ್ತರು ಬಂದು ಶ್ರೀರಾಮ ದರ್ಶನ ಪಡೆಯಲಿದ್ದಾರೆ.ಪ್ರಾಣ ಪ್ರತಿಷ್ಟಾಪನೆಯ ಮಹತ್ವ
ಪ್ರಾಣ ಪ್ರತಿಷ್ಠಾಪನೆ ಮಾಡದಿದ್ದರೆ ಅದೊಂದು ಮೂರ್ತಿ ಅದು ದೇವರ ವಿಗ್ರಹವಾಗುವುದು ಪ್ರಾಣ ಪ್ರತಿಷ್ಠಾಪನೆಯ ಬಳಿಕವಷ್ಟೇ. ಪ್ರಾಣ ಪ್ರತಿಷ್ಠೆಯ ಮೂಲಕ, ವಿಗ್ರಹವನ್ನು ಜೀವಶಕ್ತಿಯನ್ನು ತುಂಬುವ ಮೂಲಕ ದೇವತೆಯಾಗಿ ಪರಿವರ್ತಿಸಲಾಗುತ್ತದೆ. ಇದರ ನಂತರ ಆ ಮೂರ್ತಿ ಪೂಜೆಗೆ ಅರ್ಹವಾಗುತ್ತದೆ. ಪ್ರಾಣ ಪ್ರತಿಷ್ಠೆಯ ನಂತರ, ವಿಗ್ರಹ ರೂಪದಲ್ಲಿ ಇರುವ ದೇವರನ್ನು ಪೂಜಾ ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುವುದು, ಮಂತ್ರಗಳನ್ನು ಪಠಿಸಲಾಗುವುದು. ಪ್ರಾಣ ಪ್ರತಿಷ್ಠಾಪನೆಯ ಮೂಲಕ ಆ ಮೂರ್ತಿ ದೈವಿಕ ಶಕ್ತಿಯನ್ನು ಪಡೆಯಲಿದೆ. ದೇವರ ಸ್ವರೂಪವಾಗಿ ನಾವು ಅದನ್ನು ಕಾಣಲಾರಂಭಿಸುತ್ತೇವೆ.
ಪ್ರಾಣ ಪ್ರತಿಷ್ಠಾಪನೆ ಶುಭ ಸಮಯ
ಶ್ರೀರಾಮ ಪ್ರಾಣಪ್ರತಿಷ್ಠಾಪನೆ 84 ಸೆಕೆಂಡ್‌ಗಳಲ್ಲಿ ನಡೆಯಲಿದ್ದು, ಈ 84 ಸೆಕೆಂಡ್‌ಗಳು ತುಂಬಾನೇ ವಿಶೇಷವಾಗಿದೆ. ಪ್ರಾಣ ಪ್ರತಿಷ್ಠಾಪನೆಗೆ ಇರುವ ಸಮಯ 84 ಸೆಕೆಂಡ್ ಅಷ್ಟೇ, ಅಂದರೆ ಒಂದು ನಿಮಿಷ 24 ಸೆಕೆಂಡ್ ಅಷ್ಟೇ, ಈ 84 ಸೆಕೆಂಡ್ ಅತ್ಯಂತ ಶುಭದಿನ ಎಂದು ಹೇಳಲಾಗುವುದು.
ಶ್ರೀರಾಮನ ಜನನ ಸಮಯ
ನೆ ಹಿಂದೂ ಪೌರಾಣಿಕ ಕತೆಯ ಪ್ರಕಾರ ಶ್ರೀರಾಮನು ಅಭಿಜಿತ್ ಮುಹೂರ್ತದಲ್ಲಿ ಜನಿಸಿದ ಎಂದು ನಂಬಲಾಗಿದೆ. ಜನವರಿ 22ರ 12.30ರ ಸಮಯ ಅಭಿಜಿತ್ ಮುಹೂರ್ತವಾಗಿದೆ. ಅಭಿಜಿತ್ ಮುಹೂರ್ತವು ಬೆಳಗ್ಗೆ 11:51 ರಿಂದ ಮಧ್ಯಾಹ್ನ 12:33 ರವರೆಗೆ ಇರಲಿದೆ. ಇದು ಕೂಡ ಜನವರಿ 22ರಂದೇ ಪ್ರಾಣ ಪ್ರತಿಷ್ಠಾಪನೆ ಮಾಡಲು ಪ್ರಮುಖ ಕಾರಣವಾಗಿದೆ.



Click it and Unblock the Notifications


