Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನಾಗರ ಪಂಚಮಿಯಂದು ಬಂದಿದೆ ತುಂಬಾ ಶುಭ ಯೋಗ, ಈ ಹೊತ್ತಿನಲ್ಲಿ ಪೂಜೆ ಮಾಡಿದರೆ ತುಂಬಾ ಒಳ್ಳೆಯದು
ನಾಗರ ಪಂಚಮಿಯಿಂದ ಹಬ್ಬಗಳ ಸಡಗರ ಶುರುವಾಗುವುದು, ನಾಗರ ಪಂಚಮಿಯನ್ನ ಶ್ರಾವಣ ಮಾಸದ ಶುಕ್ಲಪಕ್ಷದಂದು ಆಚರಿಸಲಾಗುವುದು. ಈ ದಿನ ನಾಗದೇವನಿಗೆ ಪೂಜೆಯನ್ನು ಮಾಡಿ ನಮಗೇನೂ ತೊಂದರೆ ಮಾಡದಿರಪ್ಪಾ ಎಮದು ಬೇಡಲಾಗುವುದು. ನಾಗನ ಮೂರ್ತಿಗಳಿಗೆ ಪೂಜೆ ಮಾಡುವುದರಿಂದ ಸಂತಾನ ಭಾಗ್ಯ ದೊರೆಯುವುದು.

ಸಂಸಾರದಲ್ಲಿ ಸಂತೋಷ, ನೆಮ್ಮದಿ ಲಭಿಸುವುದು ಎಂದು ಹೇಳಲಾಗುವುದು. ಈ ವರ್ಷ ನಾಗರ ಪಂಚಮಿ ಆಗಸ್ಟ್ 21ಕ್ಕೆ ಬಂದಿದ್ದು ಈ ದಿನ ತುಂಬಾನೇ ಶುಭ ಯೋಗವಿದೆ. ಆದ್ದರಿಂದ ಈ ಶುಭಯೋಗದಲ್ಲಿ ಪೂಜೆ ಮಾಡಿದರೆ ತುಂಬಾನೇ ಒಳ್ಳೆಯದು.
ಜಾತಕದಲ್ಲಿ ರಾಹು-ಕೇತು ದೋಷವಿದ್ದರೆ ಇದರಿಂದ ನಾಗದೋಷ ಉಂಟಾಗುವುದು, ಇದರಿಂದಾಗಿ ಆ ವ್ಯಕ್ತಿ ತುಂಬಾನೇ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ವೃತ್ತಿ ಜೀವನದಲ್ಲಿ, ವೈವಾಹಿಕ ಜೀವನದಲ್ಲಿ ಹಲವು ಸವಾಲುಗಳು ಎದುರಾಗುವುದು. ಈ ಸಮಸ್ಯೆಗಳ ನಿವಾರಣೆಗೆ ನಾಗರ ಪಂಚಮಿಯಿಂದ ಪರಿಹಾರ ಮಾಡಿದರೆ ಒಳ್ಳೆಯದು.
ನಾಗರ ಪಂಚಮಿ ಶುಭ ದಿನಾಂಕ
ನಾಗರ ಪಂಚಮಿ ತಿಥಿ ಪ್ರಾರಂಭ - ಆಗಸ್ಟ್ 20 ರಾತ್ರಿ 12:21ಕ್ಕೆ
ಪಂಚಮಿ ತಿಥಿ ಮುಕ್ತಾಯ - ಆಗಸ್ಟ್ 22, ಮಂಗಳವಾರ, ಮಧ್ಯಾಹ್ನ 02:00 ರವರೆಗೆ
ಪೂಜೆ ಮುಹೂರ್ತ - 05.33 ರಿಂದ 08.30 ರವರೆಗೆ
ತುಂಬಾ ಶುಭ ಯೋಗದಲ್ಲಿ ಬಂದಿದೆ ನಾಗರಪಂಚಮಿ
ಈ ವರ್ಷ ತುಂಬಾನೇ ಶುಭ ಯೋಗವಾಗಿರುವ ಶಿವ ಯೋಗದಲ್ಲಿ ಬಂದಿದೆ ನಾಗರ ಪಂಚಮಿ. ಇದನ್ನು ತುಂಬಾನೇ ದೈವಿಕವಾದ ಯೋಗ ಎಂದು ಪರಿಗಣಿಸಲಾಗಿದೆ.
* ಈ ಯೋಗದಲ್ಲಿ ಪೂಜೆ ಮಾಡಿಸಿದರೆ ಯಶಸ್ಸು ದೊರೆಯುವುದು
* ವೃತ್ತಿ ಜೀವನದಲ್ಲಿ ಬೆಳವಣಿಗೆ ಕಾಣುತ್ತಾರೆ
* 5ನೇ ಮನೆಯಲ್ಲಿ ಸೂರ್ಯ, 9ನೇ ಮನೆಯಲ್ಲಿ ಗುರು, 10ನೇ ಮನೆಯಲ್ಲಿ ಶನಿ ಇದ್ದಾಗ ಶಿವಯೋಗ ಉಂಟಾಗುವುದು.
ಶಿವಯೋಗದ ಪೂಜೆಯ ಫಲ
* ಶಿವ ಯೋಗದಲ್ಲಿ ಪೂಜೆ ಮಾಡಿದರೆ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ತುಂಬಾ ಒಳ್ಳೆಯದು.
* ವೃತ್ತಿ ಬದುಕಿನಲ್ಲಿ ಬೆಳವಣಿಗೆಗೆ ಸಹಕಾರಿ
* ಜೀವನದಲ್ಲಿರುವ ಸವಾಲು ದೂರಾಗುವುದು
ನಾಗರ ಪಂಚಮಿಯಂದು ಶುಭ ಯೋಗದಲ್ಲಿ ರುದ್ರಾಭಿಷೇಕ ಮಾಡಿ
ನಾಗರ ಪಂಚಮಿಯಂದು ಮಂಗಳಕರ ಯೋಗ ಸೃಷ್ಟಿಯಾಗುವುದರಿಂದ ನೀವು ಈ ದಿನ ರುದ್ರಾಭಿಷೇಕ ಮಾಡಿಸಿ.
ರುದ್ರಾಭಿಷೇಕ ಮಾಡುವಾಗ "ಓಂ ಭುಜಂಗೇಶಾಯ ವಿದ್ಮಹೇ, ಸರ್ಪರಾಜಾಯ ಧೀಮಹಿ, ತನ್ನೋ ನಾಗ: ಪ್ರಚೋದಯಾತ್." ಮಂತ್ರವನ್ನು ಪಠಿಸಿ.
ಶಾಸ್ತ್ರಗಳ ಪ್ರಕಾರ, ಕಾಲಸರ್ಪ ದೋಷದ ಪೂಜೆಯಲ್ಲಿ ಶುದ್ಧ ಹಸುವಿನ ತುಪ್ಪ, ಹೂವುಗಳು, ಶ್ರೀಗಂಧ, ಧೂಪ, ವೀಳ್ಯದೆಲೆ, ಹಲಸು, ಧಾತುರ, ವೀಳ್ಯದೆಲೆ, ಅಡಿಕೆ, ಕರ್ಪೂರ ಇತ್ಯಾದಿಗಳನ್ನು ಬಳಸಲಾಗುತ್ತದೆ. ಇಷ್ಟಾರ್ಥಗಳ ನೆರವೇರಿಕೆಗಾಗಿ ನೀವು ರುದ್ರಾಭಿಷೇಕಕ್ಕೆ ಕಬ್ಬಿನ ರಸ, ಹಾಲು, ಮೊಸರು, ಜೇನುತುಪ್ಪ ಇವುಗಳನ್ನು ಬಳಸಿ ಅಭಿಷೇಕ ಮಾಡಿ.
ನಾಗ ಪಂಚಮಿ ಪರಿಹಾರ
ನಾಗರ ಪಂಚಮಿಯಂದು ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ ಶಿವಲಿಂಗಕ್ಕೆ ನೀರು, ಹಾಲು, ಮೊಸರು, ಜೇನುತುಪ್ಪ, ತುಪ್ಪ, ಸಕ್ಕರೆಯನ್ನು ಅರ್ಪಿಸಿ. ಹಾಗೆಯೇ ಮಹಾಮೃತ್ಯುಂಜಯ ಮಂತ್ರವನ್ನು 108 ಬಾರಿ ಜಪಿಸಿ. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ಅಡೆತಡೆಗಳು ದೂರಾಗುವುದು, ರಾಹು ಕೇತುವಿನ ಕೆಟ್ಟ ದೋಷದಿಂದ ಮುಕ್ತಿ ಪಡೆಯಬಹುದು.



Click it and Unblock the Notifications
