Latest Updates
-
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ
ಆಷಾಢ ಪ್ರಾರಂಭ ಯಾವಾಗ? ಈ ತಿಂಗಳಿನಲ್ಲಿ ಈ ಮಹತ್ವದ ದಿನಗಳು
Inspiration
oi-Reena TK
By Reena Tk
ಹಿಂದೂ ಕ್ಯಾಲೆಂಡರ್‌ನ 4ನೇ ತಿಂಗಳು ಆಷಾಢ ಮಾಸ. ಈ ತಿಂಗಳಿನಲ್ಲಿ ಕುಮಾರ ಷಷ್ಠಿ, ಶಮಿ ಗೌರಿ ವ್ರತ, ಭಾನು ಸಪ್ತಮಿ, ಚಾತುರ್ಮಾಸ ವ್ರತ, ಭೀಮನ ಅಮವಾಸ್ಯೆ ಹೀಗೆ ಪ್ರಮುಖ ಆಚರಣೆಗಳಿವೆ. 2023ರಲ್ಲಿ ಆಷಾಢ ಮಾಸ ಯಾವಾಗ? ಈ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬಗಳು, ಆಚರಣೆಗಳು ಇವುಗಳ ಮಹತ್ವದ ಬಗ್ಗೆ ಹೇಳಲಾಗಿದೆ ನೋಡಿ:
ಆಷಾಢ ಮಾಸ 2023
ಆಷಾಢ ಮಾಸ 2023ರಲ್ಲಿ ಜೂನ್ 19ರಿಂದ ಪ್ರಾರಂಭವಾಗಿ ಜುಲೈ 17ಕ್ಕೆ ಮುಕ್ತಾಯವಾಗಲಿದೆ. ಉತ್ತರ ಭಾರತದಲ್ಲಿ ಜೂನ್ 5ಕ್ಕೆ ಪ್ರಾರಂಭವಾಗುವುದು.

ಆಷಾಢ ಮಾಸದ ಮಹತ್ವ
- ಆಷಾಢ ಮಾಸ ದಕ್ಷಿಣಾಯನದಿಂದ ಪ್ರಾರಂಭವಾಗುವುದು. ಸೂರ್ಯ ದಕ್ಷಿಣಾಭಿಮುಖವಾಗಿ ಚಲಿಸುವುದು. ಉತ್ತರಾಯಣ ಪ್ರಾರಂಭವಾಗಿ 6 ತಿಂಗಳ ನಂತರ ದಕ್ಷಿಣಾಯನ ಪ್ರಾರಂಭವಾಗುವುದು.
- ಆಷಾಢ ಮಾಸದಿಂದ ಚಾತುರ್ಮಾಸ ಪ್ರಾರಂಭವಾಗುವುದು. ಇದು ಶಯನ ಏಕಾದಶಿಯಂದು ಚಾತುರ್ಮಾಸ ಪ್ರಾರಂಭವಾಗುವುದು.
- ಆಷಾಢ ಮಾಸದ ಶುಕ್ಲಪಕ್ಷದ 11ನೇ ದಿನ ಶಯನಿ/ಶಯನ ಏಕಾದಶಿ.
- ಆಷಾಢ ಶುರುವಾಯಿತು ಎಂದರೆ ಮಳೆಯ ಸಮಯ, ರೈತರು ಭತ್ತ, ಮತ್ತಿತರ ಬೆಳೆಗಳನ್ನು ಈ ಸಮಯದಲ್ಲಿ ಬೆಳೆಯುತ್ತಾರೆ.
- ಈ ತಿಂಗಳಿನಲ್ಲಿ ಮದುವೆ, ಗೃಹ ಪ್ರವೇಶ ಮುಂತಾದ ಶುಭ ಕಾರ್ಯಗಳನ್ನು ಮಾಡುವುದಿಲ್ಲ.
- ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದ ಗಂಡ-ಹೆಂಡತಿ ಜೊತೆಗೆ ಇರುವುದಿಲ್ಲ. ಈ ತಿಂಗಳಿನಲ್ಲಿ ನವ ವಿವಾಹಿತೆ ತನ್ನ ತವರು ಮನೆಗೆ ಹೋಗಿ ಆಷಾಢ ಮುಗಿದ ಬಳಿಕ ಗಂಡನ ಮನೆಗೆ ಮರಳುತ್ತಾಳೆ.
- ಈ ಅವಧಿಯಲ್ಲಿ ಮಹಿಳೆಯರು ಹಾಗೂ ಹೆಣ್ಮಕ್ಕಳ ಕೈ, ಕಾಲುಗಳಿಗೆ ಮೆಹಂದಿ ಹಚ್ಚಲಾಗುವುದು. ಮದರಂಗಿಯಲ್ಲಿ ಆ್ಯಂಟಿಬ್ಯಾಕ್ಟಿರಿಯಾ ಗುಣವಿದ್ದು ಇದು ತ್ವಚೆ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
- ಆಷಾಢ ಮಾಸದಲ್ಲಿ ಗುಪ್ತ ನವಮಿ ಆಚರಿಸಲಾಗುವುದು.
- ಆಷಾಢ ಮಾಸದ ಹುಣ್ಣಿಮೆಯೆಂದು ಗುರು ಪೂರ್ಣಿಮಾ ಆಚರಿಸಲಾಗುವುದು
- ಕರ್ನಾಟಕದ ಕೊಡಗಿನಲ್ಲಿ ಆಷಾಢ 18ನೇ ದಿನ ಆಟಿ ಸೊಪ್ಪಿನ ಪಾಯಸ ಮಾಡಲಾಗುವುದು. ತುಳು ನಾಡಿನಲ್ಲಿ ಆಟಿ ಮದ್ದು ಸೇವಿಸಲಾಗುವುದು. ಅಲ್ಲದೆ ಈ ಅವಧಿಯಲ್ಲಿ ಆಟಿ ಕಳಂಜ ಮುಂತಾದ ವಿಶೇಷ ಸಂಪ್ರದಾಯಗಳಿವೆ.
ಆಷಾಢ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬಗಳು
ಪ್ರದೋಷ ವ್ರತ ಜುಲೈ 1, ಜುಲೈ 14
ಏಕಾದಶಿ: ಜೂನ್ 29ಕ್ಕೆ ದೇವಾಶಯನಿ ಏಕಾದಶಿ
ಜುಲೈ 13ಕ್ಕೆ ಕಾಮಿಕಾ ಏಕಾದಶಿ
ಸಂಕಷ್ಠಿ ಚತುರ್ಥಿ
ಜುಲೈ 6
ಶುಕ್ಲಪಕ್ಷ, ಕೃಷ್ಣಪಕ್ಷ
ಆಷಾಢ ಮಾಸ ಶುಕ್ಲ ಪಕ್ಷ ಜೂನ್ 19ರಿಂದ ಜುಲೈ 3
ಆಷಾಢ ಮಾಸ ಕೃಷ್ಣ ಪಕ್ಷ ಜುಲೈ 4ರಿಂದ ಜುಲೈ 17ರವರೆಗೆ
ಜುಲೈ 2ಕ್ಕೆ ಗುರು ಪೂರ್ಣಿಮಾ
ಜುಲೈ 3ಕ್ಕೆ ಶಿರಡಿ ಉತ್ಸವ
ಆಷಾಢ ಅಮವಾಸ್ಯೆ ಜುಲೈ 18
ಭೀಮನ ಅಮವಾಸ್ಯೆ
Comments
English summary
Ashada 2023: Date, festival and significance In Kannada
Story first published: Monday, June 5, 2023, 15:38 [IST]
Other articles published on Jun 5, 2023



Click it and Unblock the Notifications

