Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
ವಾಸ್ತು ಶಾಸ್ತ್ರ: ಮನೆಯ ಸುತ್ತ-ಮುತ್ತ ಅಲೋವೆರಾ ಗಿಡ ನೆಟ್ಟರೆ ಇಷ್ಟೆಲ್ಲಾ ಲಾಭಗಳಿದ್ಯಾ?
ಅಲೋವೆರಾದಲ್ಲಿ ಅನೇಕ ಔಷಧೀಯ ಗುಣಗಳಿದೆ. ಅದೇ ಗುಣಗಳನ್ನು ವಾಸ್ತು ಶಾಸ್ತ್ರದಲ್ಲಿ ವಿವರಿಸಲಾಗಿದೆ. ಅಲೋವೆರಾ ನಿಮ್ಮ ಆರೋಗ್ಯ ಮತ್ತು ತ್ವಚೆಗೆ ಮಾತ್ರ ಪ್ರಯೋಜನಕಾರಿಯಲ್ಲ. ಅದರ ವಿಶೇಷ ಪ್ರಾಮುಖ್ಯತೆ ಏನು ಅನ್ನೋದನ್ನು ವಾಸ್ತು ಶಾಸ್ತ್ರದಲ್ಲಿಯೂ ಹೇಳಲಾಗಿದೆ.

ಅಲೋವೆರಾವು ವ್ಯಕ್ತಿಯ ಪ್ರಗತಿಯಲ್ಲಿ ಬರುವ ಅಡೆತಡೆಗಳನ್ನು ನಿವಾರಿಸುತ್ತದೆ. ಇಂದು ನಾವು ಅಲೋವೆರಾಗೆ ಸಂಬಂಧಿಸಿದ ಕೆಲವು ಸುಲಭ ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ. ಇದರಿಂದ ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಗಳು ಆಗಲಿದೆ.
ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ!
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಲೋವೆರಾ ಗಿಡವನ್ನು ನೆಡುವುದು ತುಂಬಾನೇ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಇದನ್ನು ಬೆಳೆಸುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತಂತೆ. ಇನ್ನೂ ಇದನ್ನು ಪಶ್ಚಿಮ ದಿಕ್ಕಿನಲ್ಲಿ ನೆಡುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಪ್ರಗತಿಯ ದಾರಿ ತೆರೆದುಕೊಳ್ಳುತ್ತಂತೆ.
ಪ್ರೀತಿಯ ಜೀವನದಲ್ಲಿನ ಸಮಸ್ಯೆಗಳಿಗೆ ಅಲೋವೆರಾ ಪರಿಹಾರ!
ಯಾರಿಗಾದರೂ ಪ್ರೇಮ ಜೀವನದಲ್ಲಿ ಸಮಸ್ಯೆಗಳಿದ್ದರೆ ಆ ವ್ಯಕ್ತಿಯು ತನ್ನ ಮನೆಯ ಪೂರ್ವ ದಿಕ್ಕಿನಲ್ಲಿ ಅಲೋವೆರಾ ಗಿಡವನ್ನು ನೆಡಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಪ್ರೀತಿ ಹೆಚ್ಚುತ್ತದೆ. ಮತ್ತು ಬಡ್ತಿಯ ಅವಕಾಶಗಳು ಕೂಡ ಹೆಚ್ಚಾಗುತ್ತಂತೆ.
ಆರ್ಥಿಕ ಸಮಸ್ಯೆಗಳಿಗೆ ಅಲೋವೆರಾ ಪರಿಹಾರ!
ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಸಮಸ್ಯೆಗಳಿದ್ದರೆ ಅವರು ತಮ್ಮ ಮನೆಯ ಉದ್ಯಾನ ಅಥವಾ ಬಾಲ್ಕನಿಯಲ್ಲಿ ಅಲೋವೆರಾ ಗಿಡವನ್ನು ನೆಡಬೇಕು. ಇದನ್ನು ಯಾವುದೇ ಕಾರಣಕ್ಕೂ ಮನೆಯೊಳಗೆ ಇಟ್ಟುಕೊಳ್ಳಬಾರದು. ಮನೆಯಲ್ಲಿ ಇದನ್ನು ಮನೆಯ ಹೊರಾಂಗಣದಲ್ಲಿ ನಡೆವುದರಿಂದ ನಕಾರಾತ್ಮಕತೆ ದೂರವಾಗುತ್ತದೆ. ಮತ್ತು ಮನಸ್ಸು ವಿಚಲಿತವಾಗಿದ್ದರೆ ಅದು ಶಾಂತವಾಗುತ್ತದೆ. ಹಾಗೂ ನಿಮ್ಮೆಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ.
ಅಲೋವೆರಾವನ್ನು ಯಾವ ದಿಕ್ಕಿನಲ್ಲಿ ನೆಡಬಾರದು!
ಅಲೋವೆರಾ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಅದು ಫಲಕಾರಿಯಾಗುತ್ತದೆ. ವಾಸ್ತು ಪ್ರಕಾರ ಅಲೋವೆರಾ ಗಿಡವನ್ನು ವಾಯುವ್ಯ ದಿಕ್ಕಿನಲ್ಲಿ ನೆಡಬಾರದು. ಒಂದು ವೇಳೆ ವಾಯುವ್ಯ ದಿಕ್ಕಿನಲ್ಲಿ ಅಲೊವೆರಾ ಗುಡವನ್ನು ನೆಟ್ಟರೆ ನೀವು ಅಶುಭ ಫಲಿತಾಂಶಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ. ಜೀವನದಲ್ಲಿ ಎಲ್ಲಾ ರೀತಿಯ ಕೆಟ್ಟ ಘಟನೆಗಳು ಸಂಭವಿಸಲಿದೆ.



Click it and Unblock the Notifications