Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Aditya L 1: ಚಂದ್ರನ ಬಳಿಕ ಸೂರ್ಯನ ಅಧ್ಯಯನಕ್ಕೆ ಹೊರಟ ಇಸ್ರೋ, ಮುಹೂರ್ತ ಫಿಕ್ಸ್
ಭಾರತ ಚಂದ್ರ ಲೋಕದ ದಕ್ಷಿಣ ಧ್ರುವಕ್ಕೆ ಹೋದ ಮೊಟ್ಟ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ ಈ ಸಾಧನೆ ಇಡೀ ವಿಶ್ವದ ಗಮನ ಸೆಳೆದಿತ್ತು. ಏಳೂವರೆ ದಶಕದ ಹಿಂದೆ ಭಾರತ ಹೇಗಿತ್ತು, ಆದರೆ ಈಗ ಚಂದ್ರ ಲೋಕಕ್ಕೆ ಹೋಗುವಷ್ಟು ಬೆಳೆದಿದ್ದೇವೆ ಎಂಬುವುದೇ ಖುಷಿಯ ಹಾಗೂ ಹೆಮ್ಮೆಯ ವಿಚಾರ. ನಮ್ಮ ಇಸ್ರೋ ವಿಜ್ಞಾನಿಗಳು ಚಂದ್ರಲೋಕಕ್ಕೆ ತಲುಪಿದ ಮೇಲೆ ಈಗ ಸೂರ್ಯ ಲೋಕಕ್ಕೆ ಹೋಗಿ ಸಂಶೋಧನೆ ಮಾಡುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದು ಅದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಈ ಮಿಷನ್‌ಗೆ ಆದಿತ್ಯ L 1 ಎಂದು ಹೆಸರಿಡಲಾಗಿದೆ.

ಆದಿತ್ಯ L 1
ಭಾರತ ಇದೇ ಮೊದಲ ಬಾರಿಗೆ ಸೂರ್ಯನ ಅಧ್ಯಯನಕ್ಕೆ ಮುಂದಾಗಿದೆ. ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರವಿರುವ ಸೂರ್ಯನ ಸಮೀಪ ಹೋಗಿ ಸೌರಲೋಕದ ಕುರಿತು ಮತ್ತಷ್ಟು ಅಧ್ಯಯನ ಮಾಡಲು ಹೆಜ್ಜೆ ಇಟ್ಟಿದೆ.
ಆದಿತ್ಯ -L1 ಮಿಷನ್‌ನ ಉದ್ದೇಶಗಳು
* ಸೂರ್ಯನ ಹೊರವಲಯವನ್ನು ಅಧ್ಯಯನ ಮಾಡುವುದು(chromosphere and corona
* ಅಲ್ಲಿಯ ಉಷ್ಣಾಂಶ, ಸೂರ್ಯ ಕಿರಣಗಳು ಇವುಗಳ ಕುರಿತು ಅಧ್ಯಯನ ಮಾಡಲಾಗುವುದು
* ಅಲ್ಲಿಯ ಉಷ್ಣಾಂಶದ ಪ್ರಕೃಯೆ ಹೇಗಿರಲಿದೆ ಎಂಬುವುದರ ಬಗ್ಗೆ ಅಧ್ಯಯನ ಮಾಡಲಾಗುವುದು.
* ಸೂರ್ಯನ ವಾತಾವರಣ ಹೇಗಿರಲಿದೆ ಎಂಬುವುದರ ಕುರಿತು ಅಧ್ಯಯನ ನಡೆಸಲಾಗುವುದು.
ಸೌರ ಮಿಷನ್ ಯಾವಾಗ ಪ್ರಾರಂಭ?
ಇಸ್ರೋ ಸೌರ ಮಿಷನ್ ಆದಿತ್ಯ -L1 ಅನ್ನು ಸೆಪ್ಟೆಂಬರ್ 2, 2023ರಂದು ಶ್ರೀಹರಿಕೂಟದಿಂದ ಉಡಾವಣೆ ಮಾಡಲಿದೆ ಎಂದು ಹೇಳಿದೆ. ಆದಿತ್ಯ L1 5 ವರ್ಷಗಳ ಕಾಲ ಸೌರ ಮಂಡಲವನ್ನು ಅಧ್ಯಯನ ಮಾಡಲಿದೆ. ಇಷ್ಟು ಮಾತ್ರವಲ್ಲ ಭಾರತ ಶುಕ್ರ ಗ್ರಹಕ್ಕೂ ಹೋಗುವ ಯೋಜನೆಯನ್ನು ರೂಪಿಸುತ್ತಿದೆ.
ಚಂದ್ರ ಲೋಕದಲ್ಲಿ ಈಗಾಗಲೇ ಪ್ರಗ್ಯಾನ್ ತನ್ನ ಕಾರ್ಯ ಆರಂಭಿಸಿದೆ, ನಾಸಾ ಈ ಜಗತ್ತಿಗೆ ತಿಳಿಸಿದಕ್ಕಿಂತೂ ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿಯಲು ಸಾಧ್ಯವಾಗುತ್ತಿದೆ. ಇದೀಗ ಉರಿಯುತ್ತಿರುವ ಸೂರ್ಯನ ಬಳಿ ಹೋಗುವ ಸಾಹಸ ಮಾಡಿದೆ.
🚀PSLV-C57/🛰️Aditya-L1 Mission:
— ISRO (@isro) August 28, 2023
The launch of Aditya-L1,
the first space-based Indian observatory to study the Sun ☀️, is scheduled for
🗓️September 2, 2023, at
🕛11:50 Hrs. IST from Sriharikota.
Citizens are invited to witness the launch from the Launch View Gallery at… pic.twitter.com/bjhM5mZNrx
ಸೂರ್ಯ ಸ್ವಲ್ಪ ತನ್ನ ಉರಿ ಕಿರಣಗಳನ್ನು ಬೀರಿದರೆ ನಮಗೆ ಸೆಕೆ ಸಹಿಸಲು ಸಾಧ್ಯವಾಗುವುದಿಲ್ಲ. ಭೂಮಿಯಿಂದ 1.5 ಮಿಲಿಯನ್ ದೂರದಲ್ಲಿರುವ ಸೂರ್ಯನ ಶಾಖವೇ ಸಹಿಸಲು ಅಸಾಧ್ಯವಾಗುವುದು, ಅದೇ ಸೂರ್ಯನ ಸಮೀಪ ಏನಾದರೂ ಹೋದರೆ ಆ ವಸ್ತುಗಳು ಆ ಉಷ್ಣಾಂಶ ಕರಗಿ ಬಿಡುತ್ತದೆ ಅಂಥದ್ದರಲ್ಲಿ ನಮ್ಮ ವಿಜ್ಞಾನಿಗಳು ಆದಿತ್ಯ L1 ಮಿಷನ್ ಮೂಲಕ ಸೂರ್ಯನ ಸಮೀಪ ಹೋಗಲು ನಮ್ಮಿಂದ ಸಾಧ್ಯವಾಗುವುದು ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುವುದನ್ನು ನೋಡುವಾಗ ಭಾರತದ ವೈಜ್ಞಾನಿಕ ಮುಂದುವರೆದಿರುವ ರೀತಿಯನ್ನು ನೋಡಿ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುತ್ತಿದ್ದಾನೆ, ನಮ್ಮ ಇಸ್ರೋದ ಸಾಧನೆ ನಾಸಾವನ್ನು ಮೀರಿಸುವಂತೆ ಬೆಳೆಯಲಿ ಎಂಬುವುದೇ ನಮ್ಮ ಹಾರೈಕೆ.



Click it and Unblock the Notifications