Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆದಿ ಪುರುಷ ಫಿಲ್ಮಂಗೆ ವೀಕ್ಷಿಸಲು ಇಂದು ಸೀಟ್ ಹನುಮಂತನಿಗೆ ರಿಸರ್ವ್ಡ್!, ಇದರ ಹಿಂದಿರುವ ಧಾರ್ಮಿಕ ಮಹತ್ವವೇನು?
ಆದಿ ಪುರುಷ ಸಿನಿಮಾ ಜನವರಿ 16ಕ್ಕೆ ತೆರೆಗೆ ಬರಲು ಸಕಲ ಸಿದ್ಧತೆ ನಡೆಸಿದೆ, ವಿಶೇಷ ಏನಪ್ಪಾ ಎಂದರೆ ಅದು ಪ್ರದರ್ಶನವಾಗುತ್ತಿರುವ ಪ್ರತಿಯೊಂದು ಥಿಯೇಟರಿನಲ್ಲಿ ಹನುಮಂತನಿಗಾಗಿ ಒಂದು ಸೀಟ್ ಕಾಯ್ದಿರಿಸಲಾಗಿದೆ!
ಆದಿಪುರುಷ ಸ್ಕ್ರೀನಿಂಗ್ ವೇಳೆ ಒಂದು ಸೀಟ್ ಹನುಮಂತನಿಗೆ ಇಟ್ಟಿರುವುದಾಗಿ ಸಿನಿತಂಡ ತಿಳಿಸಿದೆ. ಎಲ್ಲಿ ರಾಮನ ಇರುತ್ತಾನೋ ಅಲ್ಲಿ ರಾಮನ ಭಕ್ತ ಹನುಮಂತ ಇದ್ದೇ ಇರುತ್ತಾನೆ. ಆದ್ದರಿಂದ ಶ್ರೀ ರಾಮನ ಕಥಾವಸ್ತು ಒಳಗೊಂಡಿರುವ ಆದಿಪುರುಷ ಸಿನಿಮಾ ಪ್ರದರ್ಶನದ ವೇಳೆ ಶ್ರೀಹನುಮಂತನಿಗೆ ಒಂದು ಸೀಟ್ ಇಡಲಾಗಿದೆ. ಶ್ರೀ ಹನುಮಂತನ ಜೊತೆ ಪ್ರೇಕ್ಷಕರು ಆದಿಪುರುಷ ಸಿನಿಮಾ ನೋಡುವ ಅವಕಾಶ ಒದಗಿ ಬಂದಿದೆ.

ಶ್ರೀರಾಮ ಪರಮ ಭಕ್ತ ಹನುಮಂತನನ್ನು ರಾಮ ಮೊದಲ ಬಾರಿ ಭೇಟಿ ಮಾಡಿದ್ದು ಯಾವಾಗ?
ಸೀತಾಪರಣವಾದಾಗ ಶ್ರೀರಾಮ ಸೀತಾ ಮಾತೆಯನ್ನು ಹುಡುಕುತ್ತಾ ಬರುವಾಗ ಅಲ್ಲಿ ಸುಗ್ರೀವ, ವಾಲಿ ರಾಜ್ಯಕ್ಕಾಗಿ ಜಗಳವಾಡುತ್ತಿದ್ದರು. ಸುಗ್ರೀವ ಅಣ್ಣನಿಗೆ ಹೆದರಿ ಋಷ್ಯಮುಖ ಪರ್ವತದಲ್ಲಿ ಅವಿತು ಕುಳಿತುಕೊಂಡಿದ್ದ, ಅದೇ ಬೆಟ್ಟದಲ್ಲಿ ಹನುಮಂತ ಇದ್ದ. ಅಲ್ಲಿ ರಾಮ ಬಂದಿದ್ದನ್ನು ನೋಡಿದ ಸುಗ್ರೀವ ಅಣ್ಣ ವಾಲಿ ನನ್ನನ್ನು ಕೊಲ್ಲಲು ಕಳುಹಿಸಿರಬಹುದು ಎಂದು ಭಾವಿಸಿ ಅವರ್ಯಾರು ಎಂದು ವಿಚಾರಿಸಲು ಹನುಮಂತನಿಗೆ ಹೇಳುತ್ತಾನೆ. ಆಗ ಹನುಮಂತ ಬ್ರಹ್ಮಚಾರಿಯ ರೂಪದಲ್ಲಿ ಬಂದು ಯಾರೂ ಎಂದು ಕೇಳಿದಾಗ ರಾಮ-ಲಕ್ಷಣರು ತಾವು ಬಂದಿರುವ ಉದ್ದೇಶದ ಬಗ್ಗೆ ಹೇಳುತ್ತಾರೆ. ನಂತರ ಹನುಮಂತ ಸೀತಾಮಾತೆಯನ್ನು ಮರಳಿ ಶ್ರೀರಾಮನ ಬಳಿ ತಲುಪಿಸುವಲ್ಲಿ ಎಷ್ಟು ಪ್ರಮುಖ ಪಾತ್ರವಹಿಸಿದ ಎಂಬುವುದು ರಾಮಾಯಣದ ಕತೆ ಗೊತ್ತಿರುವ ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿ. ಹನುಮಂತನ ಶ್ರೀರಾಮನ ಎಷ್ಟು ದೊಡ್ಡ ಭಕ್ತ ಎಂಬುವುದಕ್ಕೆ ಸಾಕ್ಷಿ ಹನುಮಂತ ತನ್ನ ಎದೆ ಬಗೆದಾಗ ಅಲ್ಲಿ ಶ್ರೀರಾಮ-ಲಕ್ಷ್ಮಣ, ಸೀತಾ ಮಾತೆಯ ರೂಪವಿತ್ತು ಎಂದು ಪುರಾಣದಲ್ಲಿ ಹೇಳಲಾಗಿದೆ.
ಶ್ರೀರಾಮನ ಪೂಜೆಯಲ್ಲಿ ಹನುಮಂತನಿಗೆ ಪ್ರಮಯಖ ಸ್ಥಾನ
ಯಾರು ಶ್ರೀರಾಮನ ಪೂಜೆ ಮಾಡುತ್ತಾರೋ ಆ ಪೂಜೆಯ ಸಂಪೂರ್ಣ ಫಲ ದೊರೆಯಬೇಕೆಂದರೆ ಹನುಮಂತನಿಗೂ ಪೂಜೆ ಸಲ್ಲಿಸಬೇಕು, ಆಗ ಮಾತ್ರ ಶ್ರೀರಾಮ ಸಂತುಷ್ಟನಾಗುತ್ತಾನೆ. ಶ್ರೀರಾಮನ ಕೃಪೆ ನಮ್ಮ ಮೇಲಿರುತ್ತದೆ. ಆದ್ದರಿಂದ ಶ್ರೀ ರಾಮನಿಗೆ ಪೂಜೆ ಮಾಡುವಾಗ ಕಡ್ಡಾಯವಾಗಿ ಹನುಮಂತನಿಗೂ ಪೂಜೆ ಸಲ್ಲಿಸಲಾಗುವುದು.
ಶ್ರೀರಾಮನ ಪರಮಭಕ್ತನ ಕೃಪೆಯಿಂದ ಸಕಲ ಕಷ್ಟಗಳು ದೂರಾಗುವುದು
ಜನರು ಕಷ್ಟದಿಂದ ಹೊರಬರಲು ಹನುಮಾನ್‌ನ ಮೊರೆ ಹೋಗುತ್ತಾರೆ. ಯಾರು ಭಕ್ತಿಯಿಂದ ಹನುಮಾನ್ನ ಆರಾಧಿಸುತ್ತಾರೋ ಅವರೆಲ್ಲಾ ತೊಂದರೆಯನ್ನು ಹನುಮಾನ್ ಹೋಗಲಾಡಿಸುತ್ತಾನೆ ಎಂಬುವುದು ಆಂಜನೇಯನನ್ನು ನಂಬಿದವರ ಅಚಲ ನಂಬಿಕೆ.
ಕಷ್ಟ ನಿವಾರಣೆಗೆ ಶ್ರೀರಾಮನ ಮಂತ್ರಗಳನ್ನು ಪಠಿಸಿ ನಂತರ ಹನುಮಾನ್ ಮಂತ್ರ ಪಠಿಸಿ
ಓಂ ಜಾನಕೀ ವಲ್ಲಭಾಯ ಸ್ವಾಹಾ
ಓಂ ನಮೋ ಭಗವತೇ ರಾಮಚಂದ್ರಾಯ
ಓಂ ರಾಮಾಯ ಧನುಷ್ಪಾಣಯೇ ಸ್ವಾಹಾಃ
ಶ್ರೀರಾಮ ಶರಣಂ ಮಮ
ರಂ ರಾಮಾಯ ನಮಃ
ಓಂ ರಾಮಚಂದ್ರಾಯ ನಮಃ
ಓಂ ರಾಮಭದ್ರಾಯ ನಮಃ
ಶ್ರೀರಾಮ ಜಯ ರಾಮ, ಜಯ - ಜಯ ರಾಮ
ಓಂ ದಶರಥಾಯ ವಿದ್ಮಹೇ , ಸೀತಾ ವಲ್ಲಭಾಯ ಧೀಮಹಿ, ತನ್ನೋ ಶ್ರೀರಾಮಃಪ್ರಚೋದಯಾತ್||
ರಾಮ ರಾಮೇತಿ, ರಮೇ ರಾಮೇ ಮನೋರಮೇ| ಸಹಸ್ರನಾಮ ತತ್ತುಲ್ಯಂ, ರಾಮನಾಮ ವರಾನನೇ||
ಹನುಮಾನ್‌ನ ಶ್ರೀರಕ್ಷೆಗೆ ಈ ಮಂತ್ರ ಪವರ್‌ಫುಲ್
ಓಂ ಹನುಮತೇ ನಮಃ: ಇದರಿಂದ ಅಡೆತಡೆಗಳನ್ನು ಎದುರಿಸುವ ಸಾಮರ್ಥ್ಯ ಆ ಭಗವಂತ ನೀಡುತ್ತಾನೆ.
ಹನುಮಾನ್ ಬೀಜ ಮಂತ್ರ
ಓಂ ಐಂ ಭ್ರೀಂ ಹನುಮತೇ
ಶ್ರೀ ರಾಮ ದೂತಾಯ ನಮಃ
ಹನುಮಮಂತನ ಪರಮಭಕ್ತನನ್ನು ಈ ಮೂಲಕ ಪ್ರಾರ್ಥಿಸುತ್ತೇವೆ ಎಂಬುವುದೇ ಇದರ್ಥ.
ಹನುಮಾನ್ ಗಾಯತ್ರಿ ಮಂತ್ರ
ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ ।
ತನ್ನೋ ಹನುಮತ್ ಪ್ರಚೋದಯಾತ್॥
ಎಲ್ಲಾ ರೀತಿಯ ಅಪಾಯದಿಂದ ಶ್ರೀಹನುಮಂತ ರಕ್ಷಣೆ ನೀಡುತ್ತಾನೆ ಎಂಬುವುದಾಗಿದೆ.
ಯಶಸ್ವಿಗೆ ಆಂಜನೇಯ ಮಂತ್ರ
ಓಂ ಶ್ರೀ ವಜ್ರದೇಹಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೇ



Click it and Unblock the Notifications
