Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
57 ವರ್ಷಗಳ ಹಿಂದೆಯೇ 2024 ರಾಮ ಮಂದಿರದ ಉದ್ಘಾಟನೆ ಬಗ್ಗೆ ಸೂಚನೆ ನೀಡಿತ್ತೇ ನೇಪಾಳದ ಆ ಅಂಚೆ ಚೀಟಿ
ಅಯೋಧ್ಯೆಯಲ್ಲಿ ಜನವರಿ 22ಕ್ಕೆ ಪ್ರಾಣಪ್ರತಿಷ್ಠಾಪನೆ. ಕೋಟ್ಯಾಂತರ ರಾಮ ಭಕ್ತರ ಕನಸು ನನಸಾಗಲಿದೆ, ಜನವರಿ 16ರಿಂದ ಅಮೃತ ಮಹೋತ್ಸವ ಆಚರಣೆ ಶುರುವಾಗಿದೆ. ಆದರೆ 2024ರಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗುತ್ತದೆ ಎಂಬುವುದನ್ನು 1967ಯೇ ಹೇಳಲಾಗಿತ್ತೇ, ಅದರಲ್ಲೂ ನಮ್ಮ ದೇಶದಲ್ಲಿ ಅಲ್ಲ ನೇಪಾಳದಲ್ಲಿ ಈ ರೀತಿ ಭವಿಷ್ಯ ಹೇಳಲಾಗಿತ್ತೇ? ಎಂಬ ಪ್ರಶ್ನೆ ಮೂಡುವುದು, ಏಕೆಂದರೆ ಅಂಥದ್ದೊಂದು ಅಂಚೆ ಚೀಟಿ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.

ಭಾರತದಲ್ಲಿ ಶ್ರೀರಾಮ ಮಂದಿರದ ಕನಸು ನನಸಾಗುವುದು ಎಂಬ ಸೂಚನೆ ಸಿಕ್ಕಿದ್ದೇ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ, ಕೋರ್ಟ್‌ನಲ್ಲಿ ನಿರಂತರ ಹೋರಾಟದ ಬಳಿಕ ಅಯೋಧ್ಯೆ ಶ್ರೀರಾಮನ ನೆಲ ಎಂಬ ತೀರ್ಪು ಬಂತು, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಗಳು ಶುರುವಾಯಿತು, ಇದೀಗ ಜನವರಿ 22ರಕ್ಕೆ ರಾಮ ಮಂದಿರ ಲೋಕಾರ್ಪಣೆಯಾಗಲಿದೆ, ಶ್ರೀ ರಾಮ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ಶ್ರೀರಾಮ ಕಣ್ತುಂಬಿಕೊಳ್ಳುವ ಸೌಭಾಗ್ಯ ಶ್ರೀರಾಮ ಭಕ್ತರಿಗೆ ದೊರೆತಿದೆ.
57 ವರ್ಷಗಳ ಹಿಂದೆಯೇ 2024ರಲ್ಲಿ ರಾಮ ಮಂದಿರ ಉದ್ಘಾಟನೆಯ ಸೂಚನೆ
1967ರಲ್ಲಿ ನೇಪಾಳದಲ್ಲಿ ಅಂಚೆ ಚೀಟಿಯೊಂದು ಬಿಡುಗಡೆಯಾಗಿದೆ. ಅದರ ಫೋಟೋ ಇದೀಗ ಶ್ರೀರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ವೈರಲ್ ಆಗುತ್ತಿದೆ. ಇದು ನೇಪಾಳದಲ್ಲಿ ಬಿಡುಗಡೆಯಾದ ಅಂಚೆ ಚೀಟಿ. ಆ ಅಂಚೆಚೀಟಿಯ ವಿಶೇಷವೆಂದರೆ ಅದರಲ್ಲಿ ಶ್ರೀರಾಮ ಸೀತೆಯ ಚಿತ್ರವಿದೆ, ಅದರ ಕೆಳಗಡೆ ವಿ. ಎಸ್ ಸಂವತ್ಸರ 2024 ಎಂದು ಬರೆಯಲಾಗಿದೆ. ಈ ಅಂಚೆ ಚೀಟಿಯನ್ನು ಏಪ್ರಿಲ್ 18, 1967 ರಾಮ ನವಮಿಯಂದು ಬಿಡುಗಡೆ ಮಾಡಲಾಗಿದೆ.
ಆ ದಿನಾಂಕ ಗಮನ ಸೆಳೆದಿದೆ
ರಾಮ ನವಮಿಯಂದು ರಾಮ-ಸೀತೆಯ ಚಿತ್ರವಿರುವ ಅಂಚೆ ಚೀಟಿ ಬಿಡುಗಡೆಯಾದದ್ದು ವಿಶೇಷವಲ್ಲ, ಆದರೆ ಆ ದಿನಾಂಕ ಗಮನ ಸೆಳೆದಿದೆ. ಅದನ್ನು ನೋಡಿದಾಗ 2024ರಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದೆ ಎಂಬುವುದನ್ನು 57 ವರ್ಷಗಳ ಹಿಂದೆಯೇ ತಿಳಿದಿತ್ತೇ ಎಂಬ ಪ್ರಶ್ನೆ ಮೂಡುವಂತಿದೆ.
ಈ ಅಂಚೆ ಚೀಟಿಯ ವಿಶೇಷತೆಯೇನು?
ನೇಪಾಳ ಹಾಗೂ ಭಾರತದಲ್ಲಿ ಕೆಲವು ಕಡೆ ವಿಕ್ರಮ ಸಂವತ್ಸರ ಕ್ಯಾಲೆಂಡರ್ ಪಾಲಿಸಲಾಗುವುದು. ಈ ವಿಕ್ರಮ ಸಂವತ್ಸರ ಕ್ಯಾಲೆಂಡರ್ ಗ್ರೆಗೋರಿಯನ್ ಕ್ಯಾಲೆಂಡರ್‌ಗಿಂತ 57 ವರ್ಷ ಮುಂದಿದೆ. ಅದರಲ್ಲಿ ರಾಮನವಮಿ 2024 ಎಂಬುವುದಿದೆ. ಇದನ್ನು ಏಪ್ರಿಲ್ 18, 1967ರಲ್ಲಿ ಬಿಡುಗಡೆಗೊಳಿಸಲಾಗಿದೆ.
ಈ ಅಪರೂಪದ ಅಂಚೆ ಚೀಟಿ ನಿಮಗೆ ಅಮೆಜಾನ್‌ನಲ್ಲೂ ಸಿಗಲಿದೆ. ಲಖನೌದ ಅಶೋಕ್ ಕುಮಾರ್ ಎಂಬವವರು ತಮ್ಮ ʼದಿ ಲಿಟಲ್ ಮ್ಯೂಸಿಯಂʼನಲ್ಲಿ ಇದನ್ನು ಇರಿಸಿದ್ದಾರೆ. ಈ ಅಂಚೆಚೀಟಿಯನ್ನು ಅಪರೂಪ ಎಂದು ಕರೆಯಲಾಗುತ್ತಿದೆ. ಏಕೆಂದರೆ ಇದರ ಇತಿಹಾಸದಲ್ಲಿ ರಹಸ್ಯ ಅಡಗಿದೆ.1967ರಲ್ಲಿ ಬಿಡುಗಡೆಯಾದ ಈ ಅಂಚೆ ಚೀಟಿಯಲ್ಲಿ ಶ್ರೀರಾಮ ಹಾಗೂ ಸೀತೆಯಿದೆ, ಆವಾಗ ಇದೆರ ಬೆಲೆ 15 ಪೈಸೆ ಇತ್ತು.
ಕಾಕತಾಳೀಯ ಎಂಬಂತೆ 2024ರಲ್ಲಿಯೂ ಮಂದಿರ ಉದ್ಘಾಟನೆ
ವಿಕ್ರಮ ಸಂವತ್ಸರದ ಕ್ಯಾಲೆಂಡರ್‌ನ ಪ್ರಕಾರ ಮುದ್ರಿಸಲಾದ ಆ ಅಂಚೆ ಚೀಟಿಯಂತೆ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ 2024ರಲ್ಲಿಯೇ ರಾಮ ಮಂದಿರ ಉದ್ಗಾಟನೆ ನಡೆಯಲಿದೆ.



Click it and Unblock the Notifications
